ಬೈಂದೂರು (ಡಿ,17): ಯುವಜನತೆಯಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ ಹಾಗೂ ರಾಷ್ಟ್ರ ಸೇವಾ ಮನೋಭಾವ ಹೆಚ್ಚಿಸಲು ಹಾಗೂ ಉಡುಪಿ- ಕುಂದಾಪುರ ,ಬೈಂದೂರು ಭಾಗದ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎನ್ನುವ ಆಶಯದೊಂದಿಗೆ ಹುಟ್ಟಿಕೊಂಡ ನೇಶನ್ ಲವರ್ಸ್ ಬೈಂದೂರು ಇವರ ವತಿಯಿಂದ ಬೈಂದೂರು ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಸೇನಾ ಪಡೆಗಳಲ್ಲಿ ಉದ್ಯೋಗವಕಾಶದ ಕುರಿತು ಮಾಹಿತಿ ಕಾರ್ಯಾಗಾರವನ್ನು ಡಿಸೆಂಬರ್ 24 ರ ಶುಕ್ರವಾರ ಬೆಳಿಗ್ಗೆ ಗಂಟೆ 9-15ಕ್ಕೆ ಬೈಂದೂರಿನ ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಸೈನ್ಯಾಧಿಕಾರಿ ಮತ್ತು ಲೇಖಕರಾ ಶ್ರೀ ಚಂದ್ರಶೇಖರ ನಾವಡ ಬೈಂದೂರು ರವರು ಸೇನಾ ಪಡೆಗಳಲ್ಲಿನ ಉದ್ಯೋಗವಕಾಶದ ಕುರಿತುಯುವ ಸಮುದಾಯಕ್ಕೆ ಮಾಹಿತಿ ನೀಡಲಿದ್ದಾರೆ. ಸಂಪನ್ಮೂಲ ವ್ಯಕ್ತಿ ಯಾಗಿ ಪ್ರಸಿದ್ದ ತರಬೇತುದಾರ ಎಮ್. ಜೈಕಿಶನ್ ಭಟ್ ರವರು ” ನಿಮ್ಮನ್ನು ಮರುಶೋಧಿಸಿ” ಎನ್ನುವ ವಿಚಾರದ ಕುರಿತು ಯುವಕರಲ್ಲಿ ಸ್ಪೂರ್ತಿ ತುಂಬಲಿದ್ದಾರೆ.
ಹಾಗೆಯೇ ಕಾರ್ಯಕ್ರಮದಲ್ಲಿ ಇತ್ತೀಚೆಗೆ ತಮಿಳುನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ(CDS) ಜ.ಬಿಪಿನ್ ರಾವತ್ ದಂಪತಿ ಸೇರಿದಂತೆ, ಹುತಾತ್ಮರಾದ ಎಲ್ಲಾ
“ಹುತಾತ್ಮ ವೀರ ಯೋಧರಿಗೆ ಪುಷ್ಪ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಯುವಜನತೆಗೆ ಭದ್ರತಾ ಪಡೆಗಳ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಗಾರಕ್ಕೆ ಆಸಕ್ತ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.
ಸೂಚನೆ : * ಸೇನೆಯಲ್ಲಿ ಉದ್ಯೋಗ ಪಡೆಯುವ ಆಸಕ್ತರಿಗಾಗಿ ಮಾತ್ರ.
* ವರ್ಷದ ಮಿತಿ 25 ವರ್ಷದ ಒಳಗಿನ ಯುವಕ-ಯುವತಿಯರಿಗೆ ಮಾತ್ರ ಅವಕಾಶ *ನೊಂದಾಯಿಸಿಕೊಂಡ 200 ಜನರಿಗೆ ಮಾತ್ರ ಅವಕಾಶವಿರುತ್ತದೆ.
ಅವಕಾಶಕ್ಕಾಗಿ ಸಂಪರ್ಕಿಸಿ, ಹೆಸರು ನೊಂದಾಯಿಸಿಕೊಳ್ಳಿ
7760598393, 9149754946, 9538384853