ಮoಗಳೂರು(ಜೂ .16): ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್(ರಿ), ಮಂಗಳೂರು,ತಪಸ್ವಿ ಯೋಗ ಕೇಂದ್ರ, ಬಿಕರ್ನ ಕಟ್ಟೆ, ಮಂಗಳೂರು
ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಷನ್ (ರಿ), ಮಂಗಳೂರು. ಇದರ ಸಹಯೋಗದೊಂದಿಗೆಯೋಗ ವಿಜ್ಞಾನದ ಹರಿಕಾರ, ಭಾರತದ ಪ್ರಥಮ ಯೋಗ ಪ್ರೊಫೆಸರ್ ದಿ. ಡಾ. ಕೆ. ಕೃಷ್ಣ ಭಟ್ ಇವರ ಸ್ಮರಣಾರ್ಥ ಜೂನ್ 15 ರಂದು ಕೆನರಾ ಪ್ರೌಡ ಶಾಲೆ ಊರ್ವ ಮಂಗಳೂರಿನಲ್ಲಿ ನಡೆದ ತುಳುನಾಡ ಯೋಗ ಕುಮಾರ-2025 ತುಳುನಾಡ ಯೋಗ ಕುಮಾರಿ-2025 ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ಯಲ್ಲಿ 25 ರಿಂದ 35 ರ ಒಳಗಿನ ವಯೋಮಿತಿಯ ಯೋಗಾಸನ ಸ್ಪರ್ಧೆ ಯಲ್ಲಿ ಕುಂದಾಪುರದ ಯೋಗಪಟು ಸಂದೀಪ್ ಪೂಜಾರಿ ತ್ರಾಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈಗಾಗಲೇ ಅನೇಕ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಇವರು ತ್ರಾಸಿ ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿದ್ದಾರೆ.