ಕುಂದಾಪುರ (ಫೆ.6): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಆಂಗ್ಲ ಭಾಷಾ ವಿಷಯದ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ವಿಶ್ವಾಸ ಕಿರಣ ತರಗತಿಗಳನ್ನು ಕುಂದಾಪುರ ಸ.ಪ.ಪೂ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 101 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿದ್ದು, ಪ್ರತಿ ದಿನವೂ ಮೂರು ತಂಡಗಳನ್ನು ಮಾಡಿ ತರಗತಿಗಳನ್ನು ನಡೆಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಶ್ರೀ ರಾಮಕೃಷ್ಣ ಬಿ.ಜಿ ಯವರ ನಿರ್ದೇಶನದಂತೆ ತರಗತಿಗಳು ನಡೆದಿದ್ದು, ಸಂಸ್ಥೆಯ ಆಂಗ್ಲಭಾಷಾ ಉಪನ್ಯಾಸಕರಾದ ಶ್ರೀಮತಿ ಜ್ಯೋತ್ಸ್ನಾ ಪೈ, ಶ್ರೀಮತಿ ಗೀತಾ ಕುಂದರ್, ಶ್ರೀಮತಿ ಆಶಾ, ಶ್ರೀಮತಿ ರಕ್ಷಾ ಶೆಟ್ಟಿ ಹಾಗೂ ಶ್ರೀಮತಿ ದೀಪಾ ಚಂದ್ರ ,ಕುಮಾರಿ ಅರ್ಚನಾ ಹಾಗೂ ಶ್ರೀಮತಿ ಭಾಗ್ಯಲಕ್ಷ್ಮಿ ಯವರು ತರಗತಿಗಳನ್ನು ನಡೆಸಿಕೊಟ್ಟಿರುತ್ತಾರೆ ಎಂದು ಸಂಸ್ಥೆ ತಿಳಿಸಿದೆ.