ಅoಪಾರು( ಜ,27): ದೇಶದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ದೇವಕ್ಕಾಗಿ ಸೈನಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕ ಶ್ರೀ ಮಂಜು ಮೊಗವೀರ ಅವರನ್ನು ಜೇಸಿಐ ಕುಂದಾಪುರದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಂಜು ಮೊಗವೀರ ಅವರು ಸೈನಿಕ ವೃತ್ತಿ ಮತ್ತು ಶ್ರೀಲಂಕಾ , ಕಾಶ್ಮೀರ ಗಡಿಗಳ ಸೇವೆಯ ಅನುಭವವನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಪೂರ್ವ ವಲಯಾಧಿಕಾರಿ ಜೇಸಿ ಅಶೋಕ್ ತೆಕ್ಕಟ್ಟೆ ಉಪಸ್ಥಿತರಿದ್ದು ಸೇನೆ ಮತ್ತು ಸೈನಿಕ ವೃತಿಯ ಬಗ್ಗೆ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೇಸಿ ಸುಧಾಕರ್ ಕಾಂಚನ್ ವಹಿಸಿದರು.ಜೇಸಿ ಕುಂದಾಪುರದ ಉಪಾಧ್ಯಕ್ಷರಾದ ಜೇಸಿ ಶಶಿಧರ್ ಶೆಟ್ಟಿ , ಕಾರ್ಯದರ್ಶಿ ಜೇಸಿ ರಾಕೇಶ್ ಶೆಟ್ಟಿ ವಂದಿಸಿದರು. ಜೇಸಿಐ ಕುಂದಾಪುರದ ಸರ್ವ ಸದಸ್ಯರು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.