ಹಾಲಾಡಿ(ಮಾ.27): ನಾಡೋಜ ಡಾ.ಜಿ.ಶಂಕರ್ ರವರ ಸಂಘಟನಾತ್ಮಕ ಚಿಂತನೆ ,ಮಾರ್ಗದರ್ಶನ, ಸಂಘನೆಯ ಕುರಿತಾದ ಅವರ ದೂರದರ್ಶಿತ್ವ ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದ್ದು ಹಾಗೂ ಸಮುದಾಯವನ್ನು ಒಗ್ಗೂಡಿಸುವಲ್ಲಿ ಯುವ ಸಂಘಟನೆಯ ಪಾತ್ರ ಮಹತ್ವವಾದುದ್ದು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ ಹೇಳಿದರು.
ಅವರು ಮಾ.26 ರಂದು ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್ ನ ತೆರೆದ ಸಭಾಂಗಣದಲ್ಲಿ ನಡೆದ ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಹಾಲಾಡಿ- ಶಂಕರನಾರಾಯಣ ಘಟಕದ ಮಹಾಸಭೆ ಹಾಗೂ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಹೇಳಿದರು.
ಜಿಲ್ಲಾ ಸಂಘಟೆನೆಯ ಸಲಹಾ ಸಮಿತಿಯ ಸದಸ್ಯ ರಘುರಾಮ್ ಹುಣ್ಸೆಮಕ್ಕಿ ಸ್ವಾಗತಿಸಿದರು. ಮಾಜಿ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಪ್ರಾಸ್ತಾವಿಸಿದರು.
ನಿಕಟಪೂರ್ವ ಅಧ್ಯಕ್ಷ ಶಿವರಾಮ್.ಕೆ.ಎಮ್ ,ಮಾಜಿ ಅಧ್ಯಕ್ಷ ಸಂಜೀವ ಕೋಟ,ಸತೀಶ್ ಎಮ್.ನಾಯ್ಕ್ ,ಮೊಗವೀರ ಮಹಾಜನ ಸೇವಾ ಸಂಘ ಸೇವಾ (ರಿ) ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಹಾಲಾಡಿ ಶಂಕರನಾರಾಯಣ ಘಟಕದ ಸ್ಥಾಪಕಾಧ್ಯಕ್ಷ ಶ್ರೀನಿವಾಸ ಹದ್ದೂರು,ನಿಕಟಪೂರ್ವ ಅಧ್ಯಕ್ಷ ಕ್ರಷ್ಣ ಪುತ್ರನ್ ಆರ್ಡಿ,ಜಿಲ್ಲಾ ಸಂಘಟೆನೆಯ ಪ್ರಧಾನ ಕಾರ್ಯದರ್ಶಿ ರವೀಶ ಕೊರವಡಿ ಉಪಸ್ಥಿತರಿದ್ದರು.
ನಿರ್ಗಮಿತ ಅಧ್ಯಕ್ಷ ಶ್ರೀ ಶೇಖರ್ ತೋಳಾರ್ ಮರಾತೂರು ಸಂಘಟನೆಯ ಲಾಂಛನ ವನ್ನು ನೂತನ ಅಧ್ಯಕ್ಷ ಕ್ರಷ್ಷಮೂರ್ತಿ ಕಾಂಚನ್ ಹಸ್ತಾಂತರಿಸಿ ಅಧ್ಯಕ್ಷೀಯ ನೆಲೆಯ ಮಾತುಗಳನ್ನಾಡಿದರು. ನೂತನ ಅಧ್ಯಕ್ಷ ಕೃಷ್ಣ ಮೂರ್ತಿ ಕಾಂಚನ್ , ಕಾರ್ಯದರ್ಶಿ ಶರತ್ ಸೌಡ, ಕೋಶಾಧಿಕಾರಿ ಸುಭಾಸ್ ಮೊಗವೀರ ಹಾಗೂ ಪದಾಧಿಕಾರಿಗಳು ಮುಂದಿನ ಎರಡು ವರ್ಷಗಳ ಅವಧಿಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಿಗೆ ಹಾಗೂ ಶೈಕ್ಷಣಿಕ ಸಾಧಕರಿಗೆ ಸನ್ಮಾನಿಸಲಾಯಿತು. ಹಾಗೆಯೇ 2020-22 ನೇ ಸಾಲಿನ ವಾರ್ಷಿಕ ವರದಿಯನ್ನು ನಿಕಟಪೂರ್ವ ಕಾರ್ಯದರ್ಶಿ ರಂಜಿತ ಸೌಡ ವಾಚಿಸಿದರು, ಕೋಶಾಧಿಕಾರಿ ಸುಭಾಸ್ ಮೊಗವೀರ ಲೆಕ್ಕಪತ್ರ ಮಂಡಿಸಿದರು. ಜಗದೀಶ್ ಬಿದ್ಕಲ್ಕಟ್ಟೆ ವಂದನಾರ್ಪಣೆಗೈದರು .ಶ್ರೀ ಅಶೋಕ ತೆಕ್ಕಟ್ಟೆ ನಿರೂಪಿಸಿದರು.