ಬ್ರಹ್ಮಾವರ( ಏ.28): ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.),ಅಂಬಲಪಾಡಿ, ಮೊಗವೀರ ಯುವಸಂಘಟನೆ (ರಿ.),ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ
ಮೇ 4 ರಂದು ನಡೆಯಲಿರುವ 13ನೇ ವರ್ಷದ ಉಚಿತ ಸಾಮೂಹಿಕ ಸರಳ ವಿವಾಹದ ಪೂರ್ವಭಾವಿ ವೀಳ್ಯಶಾಸ್ತ್ರ ಕಾರ್ಯಕ್ರಮ ಏ.27 ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್ನಲ್ಲಿ ನಡೆಯಿತು.
.
ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ನ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಹಾಗೂ ಅವರ ಪತ್ನಿ ಶಾಲಿನಿ ಜಿ. ಶಂಕರ್, ಮಗಳು ಶ್ಯಾಮಿಲಿ ನವೀನ್ ಮತ್ತು ಮೂರು ಹೋಬಳಿ ಮುಖಂಡರು, ಹೋಬಳಿಯ ಸರ್ವ ಗುರಿಕಾರರು ಜೊತೆಯಾಗಿ ಸಾಮೂಹಿಕ ವಿವಾಹದ ಜೋಡಿಗಳಿಗೆ ಸೀರೆ ,ಕಾಲುಂಗುರ ಹಾಗೂ ಉಡುಗೆ -ತೊಡುಗೆಗಳನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆ(ರಿ), ಉಡುಪಿ ಜಿಲ್ಲೆ ಇದರ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ಉದ್ಯಮಿಗಳಾದ ಆನಂದ ಸಿ ಕುಂದರ್, ದ.ಕ ಜಿಲ್ಲಾ ಮೊಗವೀರ ಮಹಾಜನ ಸಂಘ(ರಿ.),ಉಚ್ಚಿಲದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಅಧ್ಯಕ್ಷರಾದ ರಾಜು ಮೊಗವೀರ ವಂಡ್ಸೆ, ಕುಂದಾಪುರ ಶಾಖಾಧ್ಯಕ್ಷರಾದ ಉದಯ್ ಕುಮಾರ್ ಹಟ್ಟಿಯಂಗಡಿ, ಮಾಜಿ ಶಾಖಾಧ್ಯಕ್ಷ ಕೆ.ಕೆ ಕಾಂಚನ್,ಬಾರ್ಕೂರು ಸಂಯುಕ್ತ ಸಭಾ ಇದರ ಅಧ್ಯಕ್ಷರಾದ ಸತೀಶ್ ಅಮೀನ್ ಬಾರ್ಕೂರು, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಮಾಜಿ ಅಧ್ಯಕ್ಷರುಗಳಾದ
ಶಿವರಾಮ್ ಕೆ ಎಮ್, ವಿನಯ್ ಕರ್ಕೇರ, ಗಣೇಶ್ ಕಾಂಚನ್, ಸದಾನಂದ ಬಳ್ಕೂರು, ಸತೀಸ್ ಎಂ ನಾಯ್ಕ್, ಸಂಜೀವ ಎಂ ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಶ್ ಎಸ್. ಕೊರವಾಡಿ, ಬ್ರಹ್ಮಾವರ ಘಟಕದ ಅಧ್ಯಕ್ಷರಾದ ದಿನೇಶ್ ಅಮೀನ್ ಉಪಸ್ಥಿತರಿದ್ದರು.
ಸಂಘಟನೆಯ ಉಪಾಧ್ಯಕ್ಷರಾದ ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಜಿ ಶಂಕರ್ ಟ್ರಸ್ಟ್ನ ಶಂಕರ್ ಸಾಲಿಯಾನ್ ವಂದಿಸಿದರು.