ಗಂಗೊಳ್ಳಿ(ಜು,6): ರೋಟರಿ ಕ್ಲಬ್ ಗಂಗೊಳ್ಳಿ ಡಿಸ್ಟ್ರಿಕ್ 3182 ವಲಯ 1ರ, 2022 – 23ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಸುಗುಣ ಆರ್ ಕೆ ಆಯ್ಕೆಯಾಗಿರುತ್ತಾರೆ.
ಕಾರ್ಯದರ್ಶಿಯಾಗಿ ಚಂದ್ರಕಲಾ ಟಿ ಮತ್ತು ಖಜಾಂಜಿಯಾಗಿ ಜನಾರ್ದನ ಪೆರಾಜೆ ಆಯ್ಕೆಯಾಗಿರುತ್ತಾರೆ. ಜುಲೈ 17 ರ ಭಾನುವಾರದಂದು ಪದಪ್ರಧಾನ ಸಮಾರಂಭವು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಇಂಡೋರ್ ಸ್ಟೇಡಿಯಂನಲ್ಲಿ ಜರಗಲಿದ್ದು ವಲಯ 1 ರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ಪದಪ್ರಧಾನ ಸಮಾರಂಭವನ್ನು ನೆರವೇರಿಸಲಿದ್ದಾರೆ. ಖ್ಯಾತ ಬರಹಗಾರ್ತಿ ಶುಭ ಮರವಂತೆ, ವಲಯ ಸೇನಾನಿ ಡಾ. ಪ್ರವೀಣ್ ಶೆಟ್ಟಿ. ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.