ಕೋಟೇಶ್ವರ(ಜು,4): ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಶಾಲೆಯಲ್ಲಿ ಮಕ್ಕಳ ಸೃಜನಶೀಲ ಚಟುವಟಿಕೆಗೆ ವೇದಿಕೆ ಕಲ್ಪಿಸಲು ಶಾಲಾ ಭಿತ್ತಿಫಲಕವನ್ನು ವಿಶೇಷವಾಗಿ ಉದ್ಘಾಟಿಸಲಾಯಿತು. ಸಂಸ್ಥೆಯ ಅವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ : ಡಾ.ರಮೇಶ್ ಶೆಟ್ಟಿಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪುರವರ ಕವಿವಾಣಿಯಂತೆ ಶಾಲಾ ಕಾಲೇಜಿನಲ್ಲಿ ‘ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಠ್ಯೇತರ ಚಟುವಟಿಕೆ ಪೂರಕ’ ಎಂದು ಹೇಳಿದರು.
ಮುಖ್ಯಶಿಕ್ಷಕಿಯಾದ ಶ್ರೀಮತಿ ಸುರೇಖಾರವರು ಮಕ್ಕಳ ಮುದ್ದಾದ ಚಿತ್ರಕಲೆ, ಕವನ, ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಶಿಕ್ಷಕರಾದ ಶರತ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ನಾಗರಾಜ ಶೆಟ್ಟಿ, ಗಿರೀಶ್, ಗುರುಪ್ರಸಾದ್, ವಿನುತಾ, ಪ್ರೇಮಾ, ಅನುಪಮಾ, ಸುದಕ್ಷಿಣಾ, ಪ್ರಕಾಶ್ ಪದ್ಮಿನಿ ಮೊದಲಾದವರು ಉಪಸ್ಥಿತರಿದ್ದರು.