ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ್ಗದ್ದೆಕೇರಿ ಎಂಬಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವೆಂಟೆಡ್ ಡ್ಯಾಂ ಮತ್ತು ಸೇತುವೆಗೆ ಬೈಂದೂರಿನ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ಗುದ್ದಲಿಪೂಜೆ ನೆರವೆರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಪಂಚಾಯತ್ ಸದಸ್ಯರಾದ ಸೂಲಿಯಣ್ಣ ಶೆಟ್ಟಿ, ಶ್ರೀನಿವಾಸ ಪೂಜಾರಿ ಬಾಬು, ಆಚಾರ್ಯ ಕಿರಣ್ ಶೆಟ್ಟಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾದ ಭೋಜ ನಾಯ್ಕ, ಮಂಡಲ ಅಧ್ಯಕ್ಷ ರಾದ ದೀಪಕ ಶೆಟ್ಟಿ, ವಿರೇಂದ್ರ ಹೆಗ್ಡೆ ಊರಿನ ಗಣ್ಯರು ಉಪಸ್ಥಿತರಿದ್ದರು. ಗ್ರಾಮೀಣ ಭಾಗದ ಬಹುದಿನದ ಬೇಡಿಕೆಯಾದ ಸೇತುವೆ ಹಾಗೂ ವೆಂಟೆಡ್ ಡ್ಯಾಂ ನಿರ್ಮಾಣವಾಗುವುದರಿಂದ ಕೇರಿಸಿದ್ದುಮನೆ ಜೋಗಿಜೆಡ್ಡು ಮತ್ತು ಸ್ಥಳೀಯರಿಗೆ ಅಂತರ್ಜಲ ವೃದ್ಧಿಯಾಗುವುದರೊಂದಿಗೆ ಸಾರಿಗೆ ವ್ಯವಸ್ಥೆ ತುಂಬಾ ಅನುಕೂಲವಾಗಿದೆ. ಮಾಜಿ ಪಂಚಾಯತ್ ಅಧ್ಯಕ್ಷ ರಾದ ಅಶೋಕ ಕುಮಾರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಗುದ್ದಲಿ ಪೂಜಾ ವಿಧಿ ವಿಧಾನಗಳನ್ನು ಶಂಕರ ಭಟ್ ಯಾರುಕೋಣೆ ನೆರವೇರಿಸಿದರು.












