ಕುಂದಾಪುರ (ಅ,30): ಮಾರಣಕಟ್ಟೆಯ ಕರ್ಣ, ಕೊಡುಗೈ ದಾನಿ, ಸಮಾಜಸೇವಕ, ಶಿಕ್ಷಣ ಪ್ರೇಮಿ, ತನ್ನ ದುಡಿಮೆಯ ಅರ್ಧ ಭಾಗಕ್ಕೂ ಹೆಚ್ಚು ಹಣವನ್ನು ಸಮಾಜಕ್ಕೆ ನೀಡುವ ಕೃಷ್ಣಮೂರ್ತಿ ಮಂಜರು ಈ ಬಾರಿಯ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ಮೂಲಕ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕಾರಣರಾದವರು, ತನ್ನ ದುಡಿಮೆ ಹಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ಸಮಾಜಕ್ಕಾಗಿ ವಿನಿಯೋಗಿಸುವ ಧೀಮಂತ ವ್ಯಕ್ತಿತ್ವದ ಶ್ರೀ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರುರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರೋದು ಅವರ ಅಭಿಮಾನಿ ಬಳಗಕ್ಕೆ ಸಂತೋಷ ತಂದಿದೆ.











