ಕುಂದಾಪುರ( ನ,19 ): ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ) ಕುಂದಾಪುರ ದಶಮ ಸಂಭ್ರಮ – 2022 ರ ಪ್ರಯುಕ್ತ ಡಿಸೆಂಬರ್ ತಿಂಗಳ ಕೊನೆಯಲ್ಲಿ ಹಮ್ಮಿಕೊಂಡಿರುವ ಅವಿಭಜಿತ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕದ ಬೇರೆ ಬೇರೆ ಅಹ್ವಾನಿತ ತಂಡಗಳ ಬೃಹತ್ ಕ್ರೀಡಾ ಮೇಳದ ಸಂಚಾಲಕರಾಗಿ ಶ್ರೀ ಎಂ. ಭಾಸ್ಕರ್ ಪೈ ಸರ್ಕಾರಿ ಪ್ರೌಢಶಾಲೆ ಗುಜ್ಜಾಡಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಯವರು […]
Author: KundaVahini Editor
ಕೈಗಾರಿಕಾ ಕ್ಷೇತ್ರಗಳಲ್ಲಿ ವಿಫುಲ ಅವಕಾಶ : ಶ್ರೀ. ರಾಜ್ ಗಣೇಶ್ ಕಾಮತ್
ಕಾರ್ಕಳ ( ನ,20): ಇಂದಿನ ದಿನಗಳಲ್ಲಿ ಕಾಮರ್ಸ್ ವಿಭಾಗದಲ್ಲಿ C.A, C.S ಮತ್ತು CMA ಕೋರ್ಸ್ಗಳಿಗೆ ಮಹತ್ತರವಾದ ಬೇಡಿಕೆಯಿದೆ. ಅತೀ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಕೋರ್ಸ್ ಎಂದರೆ CMA (ವೆಚ್ಚ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರ) ಕೋರ್ಸ್. ಈ ಕೋರ್ಸ್ನ ಕಲಿಕಾ ಹಂತಗಳು ಹಾಗೂ ಕೋರ್ಸ್ ಮುಗಿಸಿದ ನಂತರ ಉದ್ಯೋಗಾವಕಾಶಗಳು ವಿಪುಲವಾಗಿ ಲಭ್ಯವಾಗಲಿದೆ ಎಂದು ಲೇಖ್ಪಾಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ರಾಜ್ ಗಣೇಶ್ ಕಾಮತ್ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್ ಪದವಿ […]
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಕ್ಸಲೆಂಟ್ ಪ್ರೌಢಶಾಲೆಯ ಕ್ರೀಡಾ ಪಟುಗಳು
ಕುಂದಾಪುರ (ನ ,18): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಕುಂದಾಪುರ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಕ್ಸಲೆಂಟ್ ಪ್ರೌಢಶಾಲೆ ಸುಣ್ಣಾರಿ ಇಲ್ಲಿನ 9 ನೇ ತರಗತಿಯ ವಿದ್ಯಾರ್ಥಿಗಳಾದ ಯತೀಶ್ ಶೆಟ್ಟಿ ಮತ್ತು ಸಿರಿಕಾ ಇವರು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ 7 ನೇ ತರಗತಿಯ ಅಕ್ಷರ್ ಎನ್ ಶೆಟ್ಟಿ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳನ್ನು ಎಂ.ಎಂ ಹೆಗ್ಡೆ ಎಜುಕೇಶನಲ್ […]
ಸರಸ್ವತಿ ವಿದ್ಯಾಲಯದಲ್ಲಿ ಮಹಿಳಾ ಸ್ವರಕ್ಷಣ ತರಬೇತಿ ಕಾರ್ಯಗಾರ
ಗಂಗೊಳ್ಳಿ ( ನ,18): ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಸ್ವರಕ್ಷಣಾ ತಂತ್ರಗಳನ್ನು ಕಲಿತುಕೊಳ್ಳಬೇಕು. ಇದು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಆಪತ್ತಿನ ಕಾಲದಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕವಿತಾ ಎಂ.ಸಿ ಹೇಳಿದರು. ಅವರು ಇಲ್ಲಿನ ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ,ರೋಟರಿ ಕ್ಲಬ್ ಗಂಗೊಳ್ಳಿ, ವೆಂಕಟೇಶ ಕೃಪ ಟ್ರೇಡರ್ಸ್ ಗಂಗೊಳ್ಳಿ ಸುರಭಿ ಡಿಜಿಟಲ್ ಸ್ಟುಡಿಯೋ […]
ಡಾ | ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ನ,18): ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವಗುಣ, ಸಮಯಪ್ರಜ್ಞೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಎನ್.ಎಸ್.ಎಸ್. ಉತ್ತಮ ವೇದಿಕೆ. ಈ ವೇದಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಉತ್ತಮ ಉದ್ಯೋಗಗಳನ್ನು ಪಡೆಯುವುದರ ಜೊತೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ| ರಾಧಾಕೃಷ್ಣ ಶೆಟ್ಟಿ ಹೇಳಿದರು. ಅವರು ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರಾಷ್ಟ್ರೀಯ […]
ಡಾ | ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕಗಳ ಉದ್ಘಾಟನೆ
ಕುಂದಾಪುರ ( ನ,18): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ವಾರ್ಷಿಕ ಚಟುಟಿಕೆಗಳ ಉದ್ಘಾಟನೆ ನವೆಂಬರ್ 17 ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಇಂಡಿಯನ್ ರೆಡ್ಕ್ರಾಸ್ ಘಟಕದ ಸಭಾಪತಿಗಳಾದ ಶ್ರೀ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯುವ ರೆಡ್ಕ್ರಾಸ್ ಕಾರ್ಯವೈಖರಿಯಲ್ಲಿ ಸ್ವಯಂ ಸೇವಕರ ಪಾತ್ರ ಹಾಗೂ ಇಂದಿನ ಯುವ ಪೀಳಿಗೆ ಹೇಗೆ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. […]
ಡಾ | ಬಿ. ಬಿ. ಹೆಗ್ಡೆ ಕಾಲೇಜು: ಇಂಗ್ಲೀಷ್ ಸಂಘದ ಉದ್ಘಾಟನೆ
ಕುಂದಾಪುರ (ನ,18): ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯ ಅಗತ್ಯವಿಲ್ಲದಿರಬಹುದು ಆದರೆ ಇಂಗ್ಲೀಷ್ ಭಾಷೆಯ ಬಳಕೆ ಇಂದಿನ ತುರ್ತು. ಹಾಗಾಗಿ ಯಾವುದೇ ಹಿಂಜರಿಕೆ, ಕೀಳರಿಮೆ ಇಲ್ಲದೆ ಮಾತನಾಡುವ ಮೂಲಕ ಸಂವಹನ ಸ್ಪಷ್ಟತೆಯನ್ನು ಮತ್ತು ಭಾಷೆಯ ತೊಡಕುಗಳನ್ನು ನಿವಾರಿಸಿಕೊಳ್ಳಲು ಸಾಧ್ಯ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಶ್ರೀ ಪಿ.ಎ. ಥೋಮಸ್ ಹೇಳಿದರು. ಅವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು:ಅoತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯತರಬೇತಿ ಸಂಪನ್ನ
ಕುಂದಾಪುರ (ನ,5 ) : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ ಮತ್ತು ತರಬೇತಿ ವಿಭಾಗದ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ನ .16 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿಯ ಡಿಸ್ಟ್ರಿಕ್ಟ್ ಸ್ಕಿಲ್ ಡೆವಲಪ್ಮೆಂಟ್ನ ಸಹಾಯಕ ನಿರ್ದೇಶಕರಾದ ಶ್ರೀ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಜೇಸಿ ಸಪ್ತಾಹ 2022 ರ ಒಡ್ಡೋಲಗ ಯಕ್ಷರಾಧನೆ ಪ್ರಶಸ್ತಿ
ಕುಂದಾಪುರ (ನ,17): ಜೇಸಿಐ ಕುಂದಾಪುರ ಇದರ ಜೇಸಿ ಸಪ್ತಾಹ 2022 ರ ವೈವಿಧ್ಯಮಯ ಯಕ್ಷಗಾನ ಕಲಾಪ್ರಕಾರಗಳನ್ನೊಳಗೊಂಡ ‘ಒಡ್ಡೋಲಗ ಯಕ್ಷರಾಧನೆ’ ಎಂಬ ಶೀರ್ಷಿಕೆಯಡಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಯಕ್ಷಗಾನ ಭಾಗವತಿಕೆ ಸ್ಪರ್ಧೆಯಲ್ಲಿ ಪ್ರಥಮ ಬಿಸಿಎ ‘ಎ’ ವಿಭಾಗದ ಪೂಜಾ ಆಚಾರ್ ತೆಕ್ಕಟ್ಟೆ ಪ್ರಥಮ ಸ್ಥಾನ ಮತ್ತು ಯಕ್ಷಗಾನ ಚಂಡೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಯಕ್ಷಗಾನ ನಾಟ್ಯ ಸ್ಪರ್ಧೆಯಲ್ಲಿ […]
ಪ್ರಬಂಧ ಸ್ಪರ್ಧೆಯಲ್ಲಿ ನರೇಂದ್ರ ಎಸ್ ಗಂಗೊಳ್ಳಿಯವರಿಗೆ ಪ್ರಥಮ ಸ್ಥಾನ
ಗಂಗೊಳ್ಳಿ (ನ,17):ಸಾಹಿತ್ಯ ಗಂಗಾ ಧಾರವಾಡ ವತಿಯಿಂದ ನಡೆದ “ಕನ್ನಡ ಪ್ರಜ್ಞೆ” ಮತ್ತು “ಕನ್ನಡದ ನಾಳೆಗಳು” ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಕುಂದಾಪುರದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಸಾಹಿತ್ಯ ,ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ನರೇಂದ್ರ ಎಸ್ ಗಂಗೊಳ್ಳಿಯವರು ಬಹುಮುಖ ಪ್ರತಿಭಾ ಸoಪನ್ನರಾಗಿದ್ದು ,ಇತ್ತೀಚೆಗೆ ಇವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ನೇಷನ್ […]










