ಕುಂದಾಪುರ(ಜು,2): ಪೃಕೃತಿಯ ಮೂಲಭೂತ ಸಂಗತಿಗಳನ್ನು ತಿಳಿಸುವ ಮೂಲಕ ಹೊಸ ಚಿಂತನೆಗೆ ದಾರಿ ಮಾಡಿಕೊಡುವ ವಿಜ್ಞಾನ ವಿಭಾಗದ ವಿಷಯಗಳ ಆಳದ ವಿಚಾರಗಳನ್ನು ಕಲಿಯುವಲ್ಲಿ ಸಿ.ಇ.ಟಿ, ಜೆ. ಇ. ಇ, ನೀಟ್ ಕೋಚಿಂಗ್ ಸಹಕಾರಿಯಾಗಿದೆ. ಇಂಥ ಕೋಚಿಂಗ್ ಪಡೆದ ಪರಿಣಿತರಿಗೆ ಉನ್ನತ ವ್ಯಾಸಂಗಕ್ಕೆ ಸಂಬಂಧ ಪಟ್ಟ ಸಂಶೋಧನಾ ಕೇಂದ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ ” ಎಂದು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಮಾಜಿ ಪ್ರಾಂಶುಪಾಲರು ಮತ್ತು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. […]
Author: KundaVahini Editor
ವೈದ್ಯರ ದಿನಾಚರಣೆ: ಡಾ. ಮಹೇಶ್ ಜಿ & ಡಾ.ಸುಜಾತ ದಂಪತಿಗೆ ಸನ್ಮಾನ
ಗಂಗೊಳ್ಳಿ(ಜು,2): ವೈದ್ಯರ ದಿನಾಚರಣೆಯ ಪ್ರಯುಕ್ತ ಗಂಗೊಳ್ಳಿ ರೋಟರಿ ಕ್ಲಬ್ ನ ವತಿಯಿಂದ ಗಂಗೊಳ್ಳಿಯ ಚಂದ್ರ ನರ್ಸಿಂಗ್ ಹೋಮಿನ ನಿರ್ದೇಶಕರಾದ ಡಾ. ಮಹೇಶ್ ಜಿ ಹಾಗೂ ಡಾ ಸುಜಾತ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯ್ಷತೆಯನ್ನು ರೋಟರಿಯ ಅಧ್ಯಕ್ಷರಾದ ಸುಗುಣ ಆರ್. ಕೆ ವಹಿಸಿಕೊಂಡಿದ್ದರು. ರೊಟೇರಿಯನ್ ರಾಮನಾಥ್ ನಾಯಕ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವೆಕೇಷನ್ ಸರ್ವಿಸ್ ಚೆರ್ಮನ್ ಗೋಪಾಲ್ ಅವರು ಸನ್ಮಾನವನ್ನು ನೆರವೇರಿಸಿದರು. ರೋಟೇರಿಯನ್ ಉಮೇಶ್ ಮೇಸ್ತ ವೈದ್ಯ ದಂಪತಿಗಳ ಸೇವೆಯನ್ನು ಶ್ಲಾಘಿಸಿದರು. ಕ್ಲಬ್ […]
ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ಮುಖ್ಯಮಂತ್ರಿಗಳ ಪ್ರಶಸ್ತಿ’
ಕುಂದಾಪುರ (ಜು,2): ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ 2021-22ನೇ ಸಾಲಿನ ಪ್ರತಿಷ್ಠಿತ‘ಮುಖ್ಯಮಂತ್ರಿಗಳ ಪ್ರಶಸ್ತಿ’ ಗೆ ಶ್ರೀ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರು ಆಯ್ಕೆಯಾಗಿದ್ದು ಜುಲೈ 1 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಇವರು ಪ್ರಸ್ತುತ ಮಂಗಳೂರಿನ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಎಸ್ ಟಿ […]
ಡಾ. ಗೋವಿಂದ ಬಾಬು ಪೂಜಾರಿ ಯವರಿಗೆ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಪ್ರದಾನ
ಕುಂದಾಪುರ( ಜೂ30): ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ 111ನೇ ಜನುಮದಿನದ ಸಂಭ್ರಮದ ಅಂಗವಾಗಿ ಶ್ರೀ ಸಿದ್ಧಾರ್ಥ ಎಜುಕೇಷನ್ ಸೊಸೈಟಿ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ನೀಡುವ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2020ಯನ್ನು ಡಾ. ಗೋವಿಂದ ಬಾಬು ಪೂಜಾರಿ ಅವರಿಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. […]
ಗಂಗೊಳ್ಳಿ: ಕೆನರಾ ಬ್ಯಾಂಕ್ ಸಿಬ್ಬಂದಿ ಜಾರ್ಜ್ ಫರ್ನಾಂಡೀಸ್ ಸೇವಾ ನಿವೃತ್ತಿ- ಸನ್ಮಾನ
ಗಂಗೊಳ್ಳಿ(ಜು,01): ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಜಾರ್ಜ್ ಫರ್ನಾಂಡೀಸ್ ರವರು ಸೇವಾ ನಿವ್ರತ್ತಿ ಹೊಂದಿದ್ದಾರೆ. 1983 ರಲ್ಲಿ ಗಂಗೊಳ್ಳಿಯ ಕೆನರಾ ಬ್ಯಾಂಕ್ ನಲ್ಲಿ ವತ್ತಿ ಜೀವನ ಆರಂಭಿಸಿದ ಇವರು ನಂತರದ ದಿನಗಳಲ್ಲಿ ಮಂಗಳೂರು ಮಹಾ ನಗರದ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಉಪ್ಪುಂದದ ಶಾಖೆಯಲ್ಲಿಯೂ ಕೆಲಸ ನಿರ್ವಹಿಸಿ ನಂತರ ವರ್ಗಾವಣೆಗೊಂಡು ಮೂರು ವರ್ಷಗಳಿಂದ ಗಂಗೊಳ್ಳಿ ಶಾಖೆಯಲ್ಲಿ ಸೇವೆ ಸಲ್ಲಿಸಿ ನಿವ್ರತ್ತಿ ಹೊಂದಿದ್ದಾರೆ. ಈ ಸನ್ಮಾನ ಕಾರ್ಯಕ್ರಮದಲ್ಲಿ ಗಂಗೊಳ್ಳಿಯ ಖ್ಯಾತ […]
ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿನಿ ಸುರಕ್ಷ ಶೆಟ್ಟಿಗೆ ಪ್ರೋತ್ಸಾಹ ಧನ ವಿತರಣೆ
ನಾವುಂದ( ಜೂ,27): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿನಿ ಸುರಕ್ಷ ಶೆಟ್ಟಿ ಅವರಿಗೆ 1995 -96ನೇ ಸಾಲಿನ ಕಾಲೇಜಿನ ವಿಜ್ಞಾನ ವಿಭಾಗದ ಹಳೆಯ ವಿದ್ಯಾರ್ಥಿಗಳು ನೀಡಿದ 15000 ರೂಪಾಯಿ ಪ್ರೋತ್ಸಾಹ ಧನವನ್ನು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳ ಪರವಾಗಿ ಭಾಷ್ ಟೆಕ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಹೆಬ್ಬಾರ್ […]
ಎಕ್ಸಲೆಂಟ್ ಪಿಯು ಕಾಲೇಜು & ಶಾಲೆ : ವಿಶ್ವ ಪರಿಸರ ದಿನಾಚಾರಣೆ
ಕುಂದಾಪುರ (ಜೂ ,27): ಜೂನ್ 05 ರ ವಿಶ್ವ ಪರಿಸರ ದಿನದ ಅಂಗವಾಗಿ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಶಾಲೆಯಲ್ಲಿ ವಿಶ್ವಪರಿಸರ ದಿನ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಾತಾನಾಡಿ ಪ್ರತಿಯೊಬ್ಬರು ಗಿಡ-ಮರ ನೆಟ್ಟು ಬೆಳಸಿ ಹಸಿರೇ ಉಸಿರಾಗಿರುವಂತೆ ಮತುವರ್ಜಿವಹಿಸಬೇಕೆಂದರು. ಶಾಲೆಯ ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸ್ಥೆಯ ಖಜಾಂಚಿಯಾದ ಭರತ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಸಾಲುಮರದ ತಿಮ್ಮಕ್ಕನಂತೆ ಪರಿಸರ ಉಳಿಸಿ ಬೆಳೆಸುವ ಕಾಳಜಿಯನ್ನು ಮೈಗೂಡಿಕೊಳ್ಳಬೇಕೆಂದರು. ವಿಶ್ವ […]
ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು,ಕುಂದಾಪುರ: ಮಾದಕ ವಸ್ತು- ವ್ಯಸನದ ದುಷ್ಪರಿಣಾಮಗಳ ಕುರಿತು ಉಪನ್ಯಾಸ
ಕುಂದಾಪುರ(ಜೂ,27): ಮಾದಕವಸ್ತು ಸೇವನೆಯು ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿದೆ.ಈ ವ್ಯಸನದಿಂದ ಸಂಪೂರ್ಣ ದೂರವಿರುವ ಜೊತೆಗೆ ಮಾದಕ ವ್ಯಸನ ಸಂಬಂಧಿತ ಪ್ರಬಲ ಕಾನೂನುಗಳ ಕುರಿತು ಅರಿವು ಹೊಂದಿರಬೇಕು ಎಂದು ಕುಂದಾಪುರದ ಪೋಲಿಸ್ ಠಾಣಾಧಿಕಾರಿ ಶ್ರೀ ಸದಾಶಿವ ಗವರೋಜಿ ಹೇಳಿದರು. ಅವರು ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಮಾದಕವ್ಯಸನ ವಿರೋಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು. ಕಾರ್ಯಕ್ರಮದ […]
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ,). ಉಪ್ಪುಂದ:ಡಾ. ಗೋವಿಂದ ಬಾಬು ಪೂಜಾರಿ ನಿರ್ಮಿಸಿಕೊಡುವ 8ನೇ ಮನೆಯ ಗ್ರಹಪ್ರವೇಶ
ಉಪ್ಪುಂದ(ಜೂ,25): ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ ಇದರ ಅಧ್ಯಕ್ಷರಾದ ಉದ್ಯಮಿ ,ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ನಿರ್ಮಿಸಿಕೊಡುವ 8ನೇ ಮನೆಯ ಗ್ರಹಪ್ರವೇಶ ಮತ್ತು ಫಲಾನುಭವಿಗಳಿಗೆ ಕೀ ಹಸ್ತಾಂತರ ಇದೇ ಭಾನುವಾರ 26 ರಂದು ಉಪ್ಪುಂದ ಶಾಲೆ ಬಾಗಿಲಿನಲ್ಲಿ ನಡೆಯಲಿದೆ. ಟ್ರಸ್ಟ್ ಮೂಲಕ ತೀರಾ ಅಗತ್ಯವುಳ್ಳವರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡುವ ಆಶ್ರಯ ನೀಡುವ ಪುಣ್ಯ ಕೆಲಸವನ್ನು ಡಾ.ಗೋವಿಂದ ಬಾಬು ಪೂಜಾರಿಯವರು ನಿರಂತರವಾಗಿ ನಡೆದುಕೊಂಡು ಬಂದಿದ್ದಾರೆ. ಉಪ್ಪುಂದ ಶಾಲೆ […]
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ (ಲಿ): ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಉಡುಪಿ (ಜೂ,24): ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ. ಬ್ಯಾಂಕಿನ ಸದಸ್ಯರ ಮಕ್ಕಳು 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.85, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80 ಹಾಗೂ 2021ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ. 70 ಮತ್ತು ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ 65 ಅಂಕಗಳಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ […]










