ಮಂಗಳೂರು (ಮಾ. 28): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ವನಜ ರವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ ನೀಡಿದೆ. ಇವರು ಮಂಡಿಸಿದ “USE OF N-LIST RESOURCES BY FACULTY AND STUDENTS OF POST GRADUATE CENTERS AFFILIATED TO MANGALORE UNIVERSITY” ಎನ್ನುವ ವಿಷಯಕ್ಕೆ ಪಿಹೆಚ್.ಡಿ. ಲಭಿಸಿದ್ದು, ಇವರು ಮಂಗಳೂರು ವಿ.ವಿ. ಗಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ನಿವ್ರತ್ತ ಪ್ರೋ. ಮಹೇಶ್.ವಿ. ಮುಧೋಳ್ ರವರಿಂದ […]
Author: KundaVahini Editor
ಯುವಾ ಬ್ರಿಗೇಡ್ ವತಿಯಿಂದ ವಿನೂತನ ಕಾರ್ಯಕ್ರಮ
ಕುಂದಾಪುರ (ಮಾ. 29): ಇದೇ ಎಪ್ರಿಲ್ 4 ರ ಭಾನುವಾರದಂದು ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ನ ಕಾರ್ಯಕರ್ತರು ಹಳೆಯ, ಬದಿಗಿಟ್ಟ, ಬೀದಿಯಲ್ಲಿ ಅನಾಥವಾಗಿ ಬಿದ್ದಿರುವ ದೇವರ ಫೋಟೊಗಳ ವಿಲೇವಾರಿ ಮಾಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. “ಕಣ ಕಣದಲ್ಲೂ ಶಿವ” ಎನ್ನುವ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಕಟ್ಟೆಯ ಬಳಿ, ಫುಟ್ ಪಾತ್ ನ ಮೇಲೆ ಬಿಟ್ಟುಹೋಗಿರುವ ದೇವರ ಫೋಟೋಗಳನ್ನು ವಿಲೇವಾರಿ ಮಾಡಿ ಭಗವಂತನ ಕೃಪೆಗೆ ಪಾತ್ರರಾಗುವ ಸಂಕಲ್ಪ ಹೊಂದಿದ್ದಾರೆ.
ಮೂಡ್ಲಕಟ್ಟೆ ಎಂ. ಐ. ಟಿ. : ಪ್ರಾದ್ಯಾಪಕರಿಗೆ ಆನ್ ಲೈನ್ ತರಬೇತಿ ಕಾರ್ಯಾಗಾರ
ಕುಂದಾಪುರ (ಮಾ. 27): ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವತಿಯಿಂದ ಉಪನ್ಯಾಸಕರಿಗಾಗಿ ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ ನಲ್ಲಿ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಕುರಿತು ಐದು ದಿನಗಳ ಆನ್ ಲೈನ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಲಿಕೆ ಎನ್ನುವುದು ನಿರಂತರವಾದ ಪ್ರಕ್ರಿಯೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಕರು ತಮ್ಮ ಜ್ಞಾನ ಕೌಶಲ್ಯವನ್ನು ವೃದ್ದಿಗೊಳಿಸಿಕೊಳ್ಳುವುದು ಅವಶ್ಯಕ ಎಂದು ಕಾರ್ಯಾಗಾರದ ಉದ್ಘಾಟಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಣಿಪಾಲ್ ಡಾಟ್ ನೆಟ್ […]
ಕೆಪಟ್ರಾಯ – ಕುಂದಗನ್ನಡ ಕಥೆ
ನಾನ್ ವಾರಿ ಸೊಡ್ ಮಾಡ್ಕ “ನಂಗಿವತ್ ಶಾಲಿಗ್ ಹೋಪುಕ್ಯೆಡ್ಯಾ..!?? ನಂಗುತ್ತಿಲ್ಲ..ಅಂದೆ .. “ಅಮ್ಮ ಅಲ್ಕಾಣ್ ಆ ಗಂಡಿಗೆ ಶಾಲಿಗ್ ಹೊಪುಕ್ ಯಡ್ಯಾ ಅಂಬ್ರ ಕಾಣ್…ದಡ್ ರೋಗ್ವಾ..??ಏಗಳಿಕ್ ಕಂಡ್ರು ನಂಗ್ ಶಾಲಿಗ್ ಹೊಪ್ಕ್ಯಾಡಿಯ ಅಂಬುದ್..ಆಚಿಚ್ ಮನಿ ಮಕ್ಕಳೆಲ್ಲಾ ಸಿದಾ ಹೊತಿಲ್ಯಾ..?? “ಇದೆಲ್ಲಿ ಶಾಲಿ ಕಳ್ಳ ಮನಿ ಹೆಗ್ಗುಳಾ..?? ಮರತಿ ” ಅಂದೇಳಿ ಅಕ್ಕ ಒರ್ಲು ಹೊತ್ತಿಗ್. ಅಮ್ಮ, ” ಹೌದ ಗಡಾ..??ಎಂತಕ್ ಶಾಲಿಗ್ ಹೊತಿಲ್ಲ..??ಟೀಚರ್ ಕೊಟ್ಟದ್ ಬರು ಎಲ್ಲಾ ಬರ್ಕಂಡಿಲ್ಯಾ ಕಾಂತ್…??ಅದ್ಕೆ ಅಲ್ದಾ […]
ಯೋಧರ ಶೌರ್ಯ ಸಾಹಸಗಳನ್ನು ಪ್ರೋತ್ಸಾಹಿಸಿ : ಯೋಧ ಅನುಪ್ ಪೂಜಾರಿ
ಕುಂದಾಪುರ (ಮಾ. 28) : ಕುಂದಾಪುರ ತಾಲೂಕಿನ ಬೀಜಾಡಿಯ ಶ್ರೀ ನಂದಿಕೇಶ್ವರ ಫ್ರೆಂಡ್ಸ್ ರಿ. ಬೀಜಾಡಿ ಇವರು ಆಯೋಜಿಸಿದ ಶ್ರೀ ನಂದಿಕೇಶ್ವರ ದೇವರ 31 ನೇ ವಾರ್ಷಿಕೋತ್ಸವ ಹಾಗೂ 7ನೇ ವರ್ಷದ ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ವೀರ ಯೋಧ ಅನುಪ್ ಪೂಜಾರಿಯನ್ನು ಸನ್ಮಾನಿಸಲಾಯಿತು.ಗೌರವ ಸನ್ಮಾನ ಸ್ವೀಕರಿಸಿ ಮಾತುಗಳನ್ನಾಡಿದ ಯೋಧ ಅನುಪ್ ಪೂಜಾರಿ ಹೆತ್ತವರು ಮಕ್ಕಳ ಸಾಹಸ ಶೌರ್ಯಗಳನ್ನು ಪ್ರೋತ್ಸಾಹಿಸುತ್ತಾ ದೇಶ ಭಕ್ತಿ ಹಾಗೂ ದೇಶದ ರಕ್ಷಣೆಯ ಕಡೆಗೆ ಗಮನ ಹರಿಸುವಂತೆ […]
ಬಾಲಕನ ಚಿಕಿತ್ಸಾ ವೆಚ್ಚದ ಸಹಾಯಾರ್ಥ ಕ್ರಿಕೆಟ್ ಪಂದ್ಯಕೂಟ
ಕುಂದಾಪುರ (ಮಾ. 26): ಕುಂದಾಪುರದ ನಾಡ ಸೇನಾಪುರದ ರಾಮನಗರ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪುಟಾಣಿ ಬಾಲಕ ರಿಷಿಕ್ ಆಚಾರ್ಯ ಪಡುಕೋಣೆ ಈತನ ಚಿಕಿತ್ಸಾ ವೆಚ್ಚದ ಸಲುವಾಗಿ ನಾಡ- ಸೇನಾಪುರದ ರಾಮನಗರದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಟ – “ಫ್ರೆಂಡ್ಸ್ ಟ್ರೋಫಿ” ಯನ್ನು ಮಾ. 27 ಹಾಗೂ 28ರಂದು ಆಯೋಜಿಸಲಾಗಿದೆ.
ಮೂಡ್ಲಕಟ್ಟೆ ಎಂ.ಐ.ಟಿ. : ಕ್ಯಾಂಪಸ್ ಉದ್ಯೋಗ ಮೇಳದ ಉದ್ಘಾಟನೆ
ಕುಂದಾಪುರ (ಮಾ. 26) : ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಕ್ಯಾಂಪಸ್ ನಲ್ಲಿ “ಉದ್ಯೋಗ ಮೇಳ” ವನ್ನು ಆಯೋಜಿಸಲಾಗಿತ್ತು. ಸುರತ್ಕಲ್ ನ ಎನ್.ಐ.ಟಿ.ಕೆ ಯ ಪ್ರಾಧ್ಯಾಪಕರಾದ ಪ್ರೊ. ನರೇಂದ್ರನಾಥ್ ಎಸ್.ರವರು ಉದ್ಯೋಗ ಮೇಳ ಉದ್ಘಾಟಿಸಿ ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿ ಮಾತಾನಾಡಿದರು. ಪ್ರತಿಯೊಬ್ಬರೂ ತಮ್ಮದೇ ಆದ ಧ್ಯೇಯ ಮತ್ತು ಗುರಿಯನ್ನು ಅಳವಡಿಸಿಕೊಂಡು ಅದನ್ನು ಸಾಕಾರಗೊಳಿಸುವ ಕಡೆ ಪ್ರಯತ್ನಶೀಲರಗಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರ ರಾವ್ ಮದಾನೆ ಯವರು […]
ಡಾ| ಬಿ.ಬಿ. ಹೆಗ್ಡೆ ಕಾಲೇಜು : ಮಾರ್ಚ್ 30 ರಂದು ಮಂಗಳೂರು ವಿ.ವಿ. ಅಂತರ್ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ
ಕುಂದಾಪುರ (ಮಾ. 26) : ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರಕಾಲೇಜು ಪುರುಷ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ ಇದೇ ಮಾರ್ಚ್ 30ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಪಂದ್ಯಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರಿನ ಶಾಸಕರು ಹಾಗೂ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷರಾದ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರು ವಹಿಸಲಿದ್ದು, ಕುಂದಾಪುರದ ಪ್ರಸಿದ್ಧ ಟೋರ್ಪಡೋಸ್ ಕ್ರಿಕೆಟ್ […]
ಅಮೇರಿಕದಲ್ಲಿ ಮಿಂಚಿದ ಕುಂದಾಪುರದ ಸಹೇೂದರಿಯರು
ಮಂಗಳೂರು (ಮಾ, 26) : ಅಮೇರಿಕದ ಕೊಲಂಬಿಯಾ ಮೇಸೊರಿಯನ್ ನಲ್ಲಿ ಇತ್ತೀಚೆಗೆ ನಡೆದ “Regional Spelling Bee” ಎನ್ನುವ ಸ್ಪರ್ಧೆಯಲ್ಲಿ ಕುಂದಾಪುರ ಮೂಲದ ಅಂಪಾರಿನ ಬಾಳೆಬೇರು ಮನೆಯ ಡಾ. ಪವನ್ ಕುಮಾರ್ ಶೆಟ್ಟಿ ಮತ್ತು ಚೈತ್ರಾ ಪಿ. ಶೆಟ್ಟಿ ಯವರ ಸುಪುತ್ರಿಯರಾದ ಜೇಯಾ ಶೆಟ್ಟಿ (Jiya) ಮತ್ತು ಅನ್ಯಾ ಶೆಟ್ಟಿ (Anya) ವಿಶಿಷ್ಟ ಸಾಧನೆಗೈದಿದ್ದಾರೆ. ಜೇಯಿಾ ಶೆಟ್ಟಿ ಈ ಬಾರಿಯೂ ಕೂಡ ರಿಜೀನಲ್ ಚಾಂಪಿಯನ್ನಾಗಿ ಹೊರ ಹೊಮ್ಮಿ ಸತತ ಎರಡನೇಯ […]
ಕಥಾಸ್ಪರ್ಧೆಯಲ್ಲಿ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ
ಉಡುಪಿ (ಮಾ. 26) ಅಬ್ಬಾಸ್ ಮೇಲಿನಮನಿ ಸ್ಮರಣಾರ್ಥ ಗ್ರಾಮೀಣ ಸಾಹಿತ್ಯ ವೇದಿಕೆ ಬಾಗಲಕೋಟೆ ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಯುವ ಬರಹಗಾರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ರಚಿಸಿರುವ ‘ಯಾವುದೀ ಪ್ರವಾಹವು..?’ ಕಥೆಗೆ ಮೊದಲ ಸ್ಥಾನ ಬಂದಿದ್ದು ಮೂರು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.