ಕುಂದಾಪುರ (ಜು, 19) : ಡಾ|ಬಸ್ರೂರು ಭುಜಂಗ ಹೆಗ್ಡೆಯವರ ನೆನಪಿನಲ್ಲಿ ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸಲು ಸ್ಥಳದಾನ ಮಾಡಿದ ಸೌಕೂರು ಸೇರ್ವೆಗಾರ್ ಮನೆತನದ ವಿಶಾಲಾಕ್ಷಿ ಬಿ.ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ.ಕೆ .ಉಮೇಶ್ ಶೆಟ್ಟಿ ಸಂಸ್ಮರಣಾ ಮಾತುಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಇಂಗ್ಲಿಷ್ ಉಪನ್ಯಾಸಕಿ ಶ್ರೀಮತಿ ದೀಪಿಕಾ ರಾಘವೇಂದ್ರ ಮತ್ತು ಭೌತಶಾಸ್ತ್ರ […]
Author: KundaVahini Editor
ಕವಿ ಕೆ.ವಿ.ತಿರುಮಲೇಶ್ ಕವಿತೆಗಳು ಮಲೆಯಾಳಕ್ಕೆ ಅನುವಾದ
ಬ್ರಹ್ಮಾವರ(ಜು,18): ಮಲೆಯಾಳದ ಮಹಾಕವಿ ಚಙ್ಙಪ್ಪುಳ ಕೃಷ್ಣ ಪಿಳ್ಳೆಯವರು ಹೇಳಿದಂತೆ ಕಾವ್ಯವು ಒಬ್ಬ ನರ್ತಕಿ ಇದ್ದಂತೆ. ನರ್ತಕಿ ತನಗೆ ಹೇಳಬೇಕಾದ ವಿಚಾರಗಳನ್ನು ಸನ್ನೆ – ಸಂಕೇತಗಳ ಮೂಲಕವೇ ಸೂಚಿಸುತ್ತಾಳೆ. ಚಙ್ಙಪ್ಪುಳ, ವಳ್ಳತ್ತೋಳ್, ಉಳ್ಳೂರ್ ಮೊದಲಾದ ಮಹಾಕವಿಗಳು ಮಲೆಯಾಳ ಕಾವ್ಯದ ತೋರುಗಂಬಗಳಾಗಿ ಉತ್ಕೃಷ್ಟ ಕಾವ್ಯ ರಚನೆ ಮಾಡಿದರು. ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಮೊದಲಾದ ಮಹಾಕಾವ್ಯಗಳು, ಭಗವದ್ಗೀತೆಯಂಥ ಅಮೂಲ್ಯ ಗ್ರಂಥ, ಕಾಳಿದಾಸ-ಭಾಸರಂಥ ಮಹಾಕವಿಗಳು ಸಾಹಿತ್ಯವನ್ನು ಶ್ರೀಮಂತವಾಗಿಸಿದಂತಹ ನಾಡು ನಮ್ಮದು. ಅವರ ಆದರ್ಶದಲ್ಲೇ ಮಲೆಯಾಳ ಕಾವ್ಯವು […]
ಉಪ್ಪಿನ ಕುದ್ರು: ಪಂಚಗಂಗಾವಳಿ ನದಿ ತೀರದಲ್ಲಿ ಗಂಗಾವತಿಯ ಸೋನಾ ಮಸೂರಿ ಭತ್ತದ ತಳಿ ನಾಟಿ ಕಾರ್ಯಕ್ರಮ
ತಲ್ಲೂರು (ಜು, 18) : ಕುಂದಾಪುರ ಕರಾವಳಿಯ ಪಂಚಗಂಗಾವಳಿ ನದಿತೀರದಲ್ಲಿ ಗಂಗಾವತಿಯ ಸೋನಾ ಮಸೂರಿ ಭತ್ತದ ತಳಿ ನಾಟಿ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುಂದಾಪುರ ರೋಟರಿ ಕ್ಲಬ್ ಕೃಷಿಮಿತ್ರ ಯೋಜನೆಯಡಿಯಲ್ಲಿ ಉಪ್ಪಿನಕುದ್ರು ಗ್ರಾಮದಲ್ಲಿ ಪ್ರಯೋಗಿಕವಾಗಿ 1 ಎಕರೆ ಕೃಷಿ ಭೂಮಿಯಲ್ಲಿ ಪ್ರಾಯೋಗಿಕವಾಗಿ ನಾಟಿ ಮಾಡಿದ್ದೇವೆ ಎಂದು ಕುಂದಾಪುರ ರೋಟರಿ ಕ್ಲಬ್ ನೂತನ ಅಧ್ಯಕ್ಷರಾದ ಶ್ರೀ ಶಶಿಧರ್ ಹೆಗ್ಡೆ ಹೇಳಿದರು. ಅವರು ಕುಂದಾಪುರದ ರೋಟರಿ ಕ್ಲಬ್ ಹಾಗೂ ಯುವ ಸ್ಪಂದನ […]
ಬಿಜೂರು : ಗ್ರಾಮ ಪಂಚಾಯತ್ ನೂತನ ಕಟ್ಟಡ & ಅಂಗನವಾಡಿ ಕೇಂದ್ರ ಉದ್ಘಾಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಉಪ್ಪುಂದ (ಜು, 18) : ಬಿಜೂರು ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಹಾಗೂ ಹೊಳೆತೋಟ ಅಂಗನವಾಡಿ ಕಟ್ಟಡವನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರು ಸ್ಥಳೀಯಾಡಳಿತದ ಜವಾಬ್ದಾರಿಯ ಕುರಿತು ತಿಳಿಸಿದರು. ಬಿಜೂರು ಶಾಲೆ ರಸ್ತೆಗೆ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿ ನಡೆಸುವುದರ ಜೊತೆಗೆ ಬಾಕಿ ಇರುವ 94ಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಬಿಜೂರು ಗ್ರಾ.ಪಂ. ಅಧ್ಯಕ್ಷ ರಮೇಶ ವಿ.ದೇವಾಡಿಗ […]
ಪೊಲೀಸ್ ಸಬ್ಇನ್ಸ್ಪೆಕ್ಟರ್ (PSI ) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ : ಸಂಭಾವ್ಯ ವೇಳಾಪಟ್ಟಿ ಪ್ರಕಟ
ಬೆಂಗಳೂರು (ಜು,18) : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 545, 402 ನಾಗರಿಕ ಪೊಲೀಸ್ ಸಬ್ಇನ್ಸ್ಪೆಕ್ಟರ್(PSI) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳಿಗೆ ದಿನಾಂಕ ನಿಗದಿಪಡಿಸಿದೆ. 545 ಸಿವಿಲ್ ಪಿಎಸ್ಐ ಹುದ್ದೆಗಳ ನೇಮಕಾತಿಗೆ ದಿನಾಂಕ 10-10-2021 ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 402 ಸಿವಿಲ್ ಪಿಎಸ್ಐ ಹುದ್ದೆಗಳ ನೇಮಕಾತಿಗೆ ದಿನಾಂಕ 24-10-2021 ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪ್ರಸ್ತುತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ, ದೈಹಿಕ […]
ಜುಲೈ, 20 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ
ಬೆಂಗಳೂರು (ಜು, 18) : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಜು. 20ಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದೆ ಎಂದು ಪಿ.ಯು ಶಿಕ್ಷಣ ಇಲಾಖೆಯ ನಿರ್ದೇಶಕರ ಕಛೇರಿಯಿಂದ ಪ್ರಕಟಣೆ ಹೊರಬಿದ್ದಿದೆ. 2020-21ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸುವ ಸಲುವಾಗಿ ನೋಂದಣಿ ಸಂಖ್ಯೆ ನೀಡಲಾಗುತ್ತಿದೆ.ಫಲಿತಾಂಶ ಪ್ರಕಟಗೊಳಿಸುವ ವಿಚಾರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ […]
ರೋಟರಿ ಕ್ಲಬ್ ಕುಂದಾಪುರ : 2021-22 ನೇ ಸಾಲಿನ ಪದಪ್ರಧಾನ ಸಮಾರಂಭ
ಕುಂದಾಪುರ (ಜು, 17): ರೋಟರಿ ಕ್ಲಬ್ ಕುಂದಾಪುರ ದ 2021- 22 ನೇ ಸಾಲಿನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಜುಲೈ,16 ರಂದು ಕೋಟೇಶ್ವರದ ಸಹನ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಜರುಗಿತು. ರೋಟರಿ ವರ್ಷ 2021- 22ರ ಕ್ಲಬ್ ನ ಸಾರಥ್ಯವನ್ನು Rtn Phf ಶಶಿಧರ್ ಹೆಗ್ಡೆಯವರು ವಹಿಸಿಕೊಂಡರು. ಸಮಾಜಸೇವೆಯಲ್ಲಿ ರೋಟರಿಯ ಮಹತ್ವ ಹಾಗೂ ತಮ್ಮ ಮುಂದಿರುವ ಸವಾಲುಗಳ ಬಗ್ಗೆ ತಿಳಿಸಿ ಸದಸ್ಯರ ಸಹಕಾರವನ್ನು ಕೋರಿದರು. ಈ ಕಾರ್ಯಕ್ರಮಕ್ಕೆ ಮುಖ್ಯ […]
ಭಾಗಮಂಡಲ : ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭದಲ್ಲಿ ಉಚಿತ ಆಟೋ ರೀಕ್ಷಾ ಸೇವೆ
ಭಾಗಮಂಡಲ (ಜು, 17) : ಕೋವಿಡ್ ಸಂಕಷ್ಟ ಹಾಗೂ ಸವಾಲುಗಳ ನಡುವೆಯೂ ಕರ್ನಾಟಕ ಸರಕಾರವು ಅತ್ಯಂತ ಸುರಕ್ಷಿತ ಮುಂಜಾಗ್ರತಾ ಕ್ರಮ ಗಳೊಂದಿಗೆ ಈ ಬಾರಿಯ ಎಸ್. ಎಸ್. ಎಲ್. ಸಿ. ಪರೀಕ್ಷೆ ಯನ್ನು ಇದೇ ಜುಲೈ 19 ರಿಂದ ನಡೆಸಲು ತೀರ್ಮಾನಿಸಿದೆ. ಹಾಗೆಯೇ ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಸರ್ಕಾರದ ವತಿಯಿಂದ ಮಾಡಲಾಗಿದೆ. ಒಂದು ವೇಳೆ ದೂರದಿಂದ ಕಾಲ್ನಡಿಗೆಯಲ್ಲಿ ಬಂದು ಆಕಸ್ಮಿಕ ವಾಗಿ ಬಸ್ಸು […]
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಗಂಗೊಳ್ಳಿ (ಜು, 17) : ಇಲ್ಲಿನ ಸಮುದಾಯ ಹಿತರಕ್ಷಣಾ ಸಮಿತಿ(ರಿ). ಗಂಗೊಳ್ಳಿ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. 2021- 22 ನೇ ಶೈಕ್ಷಣಿಕ ಸಾಲಿನಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ ಕಲಿಯುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಬಂಧದ ವಿಷಯ ದೇಶಪ್ರೇಮ ಎಂದರೆ?. […]
ಕೃಷಿಯ ಬಗ್ಗೆ ವಿದ್ಯಾರ್ಥಿಗಳು ಒಲವು ಮೂಡಿಸಿಕೊಳ್ಳಬೇಕು – ಶ್ರೀ ಮುರಳಿ ಕಡೆಕಾರು
ಕಲ್ಯಾಣಪುರ(ಜು ,16): ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಜುಲೈ 15 ರ ಗುರುವಾರದಂದು ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಅಂಗವಾಗಿ ಕೊಡಂಕೂರು ಪರಿಸರದ ಗದ್ದೆಯಲ್ಲಿ ನಾಟಿ ಕಾರ್ಯ ಹಾಗೂ ಕಡೆಕಾರು ಪರಿಸರದಲ್ಲಿ ನಾಟಿ ಮಾಡಿದ ಗದ್ದೆಯಲ್ಲಿ ಬೆಳೆದಿರುವ ಕಳೆಯನ್ನು ಕೀಳುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಇದರ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕೆದಾರೋತ್ಥಾನ ಟ್ರಸ್ಟ್ […]