ಕೆರಾಡಿ (ಸೆ, 17) : ಇಲ್ಲಿನ ವರಸಿದ್ದಿವಿನಾಯಕ ಪಿಯು ಕಾಲೇಜಿ ನಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಫ್ರೇಶರ್ಸ್ ಡೇ ಕಾರ್ಯಕ್ರಮವನ್ನು ಸಪ್ಟೆಂಬರ್ 15ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಉಪನ್ಯಾಸಕರಾದ ಅಭಿಜಿತ್ ಹೆಮ್ಮಾಡಿ, ನೇಹಾ ಶೆಟ್ಟಿ ಮತ್ತು ಶ್ವೇತಾ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಭು ಸ್ವಾಗತಿಸಿ, ಧನುಶ್ ರಾಜ್ ವಂದಿಸಿದರು. ಉಪನ್ಯಾಸಕರಾದ ಅಭಿಜಿತ್ ಹೆಮ್ಮಾಡಿ ಮತ್ತು […]
Author: KundaVahini Editor
ಸಂತ ಮೇರಿ ಕಾಲೇಜು ಶಿರ್ವ: ಕಾಲೇಜು ಆಡಳಿತ ಕಛೇರಿಯ ಅಧೀಕ್ಷ ಕರಾಗಿ ಶ್ರೀಮತಿ ಡೊರಿನ್ ಡಿ’ಸಿಲ್ವ ನೇಮಕ
ಶಿರ್ವ (ಸೆ,16): ಇಲ್ಲಿನ ಸಂತ ಮೇರಿ ಕಾಲೇಜಿನಆಡಳಿತ ಕಛೇರಿಯ ಸಿಬ್ಬಂದಿಯಾದ ಶ್ರೀಮತಿ ಡೊರಿನ್ ಡಿ’ಸಿಲ್ವ ರವರನ್ನು ಕಾಲೇಜು ಆಡಳಿತ ಮಂಡಳಿಯಾದ ಕ್ಯಾಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ (CESU)ಯು ಸಪ್ಟೆಂಬರ್,16 ರಂದು ಪದೋನ್ನತಿಗೊಳಿಸಿ ಕಾಲೇಜು ಆಡಳಿತ ಕಛೇರಿಯ ಅಧೀಕ್ಷ ಕರನ್ನಾಗಿ ನೇಮಕಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಇಂಜಿನಿಯರ್ಸ್ ಡೇ ದಿನಾಚರಣೆ
ಕುಂದಾಪುರ (ಸೆ,17): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಸಪ್ಟೆಂಬರ್ 15 ರಂದು ಕುಂದಾಪುರದ ಜೆ. ಕೆ. ಹೋಟೆಲ್ ಸಭಾಂಗಣದಲ್ಲಿ ಆಚರಿಸಲಾಯಿತು.ಕೋಟ ಮೆಸ್ಕಾಂನ ಸಹಾಯಕ ಇಂಜಿನಿಯರ್ ಪ್ರಶಾಂತ್ ಶೆಟ್ಟಿ ಯವರನ್ನು ಕ್ಲಬ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಸನ್ಮಾನಿಸಿ ಗೌರವಿಸುವ ಮೂಲಕ ಆಚರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಶೆಟ್ಟಿ ಇಂಜಿನಿಯರ್ಸ್ ಡೇ ದೇಶದಾದ್ಯಂತ ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಪ್ರಯುಕ್ತ […]
ವರಸಿದ್ಧಿ ವಿನಾಯಕ ಪಿ.ಯು ಕಾಲೇಜು ಕೆರಾಡಿ: ವೃತ್ತಿಪರ ಕೋರ್ಸ್ ಕುರಿತಾದ ಮಾಹಿತಿ ಕಾರ್ಯಾಗಾರ
ಕೆರಾಡಿ(ಸೆ,17): ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ ಇದರ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಾದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣದ ಪ್ರವೇಶ ಪರೀಕ್ಷೆಗಳಾದ NEET, CET, ಮತ್ತು JEE ಎದುರಿಸಿ ಯಶಸ್ವಿಯಾಗಲು ಪೂರ್ವ ತಯಾರಿಯ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರ ದಿನಾಂಕ ಸಪ್ಟೆಂಬರ್ 13 ರಂದು ನಡೆಯಿತುಸಂಪನ್ಮೂಲ ವ್ಯಕ್ತಿ ಎಮ್.ಎಸ್ ರಾಮಚಂದ್ರ ಐಐಟಿ ರೂರ್ಕೆ ರವರು ವಿದ್ಯಾರ್ಥಿಗಳಿಗೆ ಸಮಗ್ರ […]
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ : ವಿವಿಧ ಬೇಡಿಕೆ ಇಡೇರಿಸುವಂತೆ ತಹಶೀಲ್ದಾರರಿಗೆ ಮನವಿ
ಕುಂದಾಪುರ(ಸೆ,27): ರಾಜ್ಯಾದ್ಯಂತ ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮಗಳಿಗೆ ಬಸ್ ಸೇವೆ ಪುನರಾಂಭಿಸಬೇಕು, ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಿ, ಹಾಸ್ಟಲ್ಗಳನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾರಂಭಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ತಾಲೂಕು ಇದರ ವತಿಯಿಂದ ತಹಶೀಲ್ದಾರರಾದ ಶ್ರೀ ಕಿರಣ್ ಗೊರಯ್ಯ ಇವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಬಿವಿಪಿಯ ಪ್ರಮುಖರಾದ ಜಯಸೂರ್ಯ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ಶೆಟ್ಟಿ , ಸುಚಿನ್, ದಿನೇಶ್, ರೋಹಿತ್, […]
ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ : ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟ
ಗಂಗೊಳ್ಳಿ (ಸೆ,16): ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ವತಿಯಿಂದ ಎಸ್ ಎಂ ಗೋಪಾಲಕೃಷ್ಣ ಬೆಳ್ಳಾರೆ ಮತ್ತು ಪೈ ಟೆಕ್ಸ್ ಟೈಲ್ಸ್ ಮತ್ತು ಪೈ ಗಾರ್ಮೆಂಟ್ಸ್ ಗಂಗೊಳ್ಳಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ “ನನ್ನ ಪ್ರೇರಣೆಯ ಶ್ರೀಕೃಷ್ಣ ” ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಹಾಲಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಿವಾನಿ ಬಿ ಶೆಟ್ಟಿ ಮತ್ತು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ […]
ಹಾಲಾಡಿ: ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮ
ಹಾಲಾಡಿ(ಸೆ,16): ಜಿಲ್ಲಾ ವಿಕಲಚೇತನರ ಇಲಾಖೆ ಉಡುಪಿ ಜಿಲ್ಲೆ , ಎಪಿಡಿ ಸಂಸ್ಥೆ ಬೆಳಗಾವಿ, ಗ್ರಾಮ ಪಂಚಾಯತ್ ಹಾಲಾಡಿ ಹಾಗೂ ಗ್ರಾಮ ಪಂಚಾಯತ್ ಹಾರ್ದಳ್ಳಿ-ಮಂಡಳ್ಳಿ ಆಶ್ರಯದಲ್ಲಿ ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸಪ್ಟೆಂಬರ್, 15 ರಂದು ಹಾಲಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಶ್ರೀ ಮಂಜುನಾಥ ಹೆಬ್ಬಾರ್ ರವರು ಮಾತನಾಡಿ ವಿಶೇಷ ಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ […]
ಭಾಗಮಂಡಲ: ರಸ್ತೆ ಕಾಮಗಾರಿ ವಿಳಂಬ- ಶೀಘ್ರ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆಗೆ ಕರೆ
ಭಾಗಮಂಡಲ(ಸೆ,16): ಭಾಗಮಂಡಲ ಹೃದಯಭಾಗದಲ್ಲಿ ಮೇಲ್ಸೇತುವೆಯ ಕೆಲಸಗಳು ನಡೆಯುತ್ತಿದ್ದು ,ಮಳೆಗಾಲ ಪ್ರಾರಂಭವಾದ ಜೂನ್ ತಿಂಗಳಿನಿಂದ ಕೆಲಸ ನಿಂತಿರುತ್ತದೆ. ಭಾಗಮಂಡಲ ಪೇಟೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತುದ್ದು, ಜನರಿಗೆ ಒಂದು ಕಿಲೋಮೀಟರ್ ನಷ್ಟು ದೂರ ನಡೆಯಲು ಕಷ್ಟವಾಗುತ್ತಿದೆ. ಪೇಟೆಯ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸ್ರಷ್ಠಿಯಾಗಿದ್ದು ತುಂಬಾ ಕೆಸರುಮಯವಾಗಿದೆ, ಜನರು ಪೇಟೆಯಲ್ಲಿ ನಡೆಯಲು ಪರ್ಯಾಯ ರಸ್ತೆಯಿಲ್ಲದ ಕಾರಣ ಹೆಂಗಸರು ಮಕ್ಕಳು ಕೆಸರು ಗುಂಡಿಯಲ್ಲಿಯೆ ನಡೆದಾಡುವಂತಹ ಪರಿಸ್ಥಿತಿ ಭಾಗಮಂಡಲದಲ್ಲಿ ಎದ್ದುಕಾಣುತ್ತಿದೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ […]
ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತ ನೀತಿ – ಡಾ. ಕರುಣಾಕರ್. ಎ.ಕೋಟೆಗಾರ್
ಕುಂದಾಪುರ (ಸೆ,16): ರಾಷ್ಟ್ರೀಯ ಶಿಕ್ಷಣ ನೀತಿ 2021 – 22 ವಿದ್ಯಾರ್ಥಿ ಕೇಂದ್ರಿತ ನೀತಿಯಾಗಿದ್ದು, ಇದರಲ್ಲಿನ ಪ್ರತಿ ಅಂಶವನ್ನೂ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ರೂಪಿಸಲಾಗಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಆಸಕ್ತಿ-ಕೌಶಲ್ಯ ಆಧಾರಿತ ಕಲಿಕೆ ಹಾಗೂ ದೇಶದ ಮಾನವ ಸಂಪನ್ಮೂಲದ ಸದ್ಬಳಕೆ ನಿಜಾರ್ಥದಲ್ಲಿ ಆಗಲಿದೆ ಎಂದು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಕರುಣಾಕರ ಕೊಟೇಗಾರ್ ಹೇಳಿದರು. ಅವರು ಗುರುವಾರ ಕುಂದಾಪುರದ ಡಾ. […]
ಕುಂದಾಪುರ: ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
ಕುಂದಾಪುರ(ಸೆ,15): ಇಲ್ಲಿನ ಕಲಾಮಂದಿರದಲ್ಲಿ ರೋಟರಿ ಕುಂದಾಪುರ, ತಾಲೂಕು ಆರೋಗ್ಯ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು. ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ಸುಮಾರು 500 ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲಾಯಿತು. ಸಮಾರಂಭವನ್ನು ಸಹಾಯಕ ಆಯುಕ್ತರಾದ ಶ್ರೀ ರಾಜು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ರಾಜೇಶ್ವರಿ, ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಾಬರ್ಟ್, […]










