ಇಂದಿನ ದಿನಗಳಲ್ಲಿ ಯಕ್ಷಗಾನದ ಕಲಾ ಪ್ರಕಾರಗಳಲ್ಲೊಂದಾದ “ಚಿಕ್ಕಮೇಳ”ವನ್ನು ಸತತ ಹತ್ತು ವರ್ಷ ನಡೆಸಿಕೊಂಡು ಬರುವುದೆಂದರೆ ಅದೊಂದು ಸಾಹಸವೇ ಸರಿ. ಈ ವರ್ಷ ಇದ್ದ ಚಿಕ್ಕಮೇಳ ಬರುವ ವರ್ಷ ಇರುವುದಿಲ್ಲ. ಹೀಗಿರುವಾಗ ಆರ್ಥಿಕತೆಯ ಮುಖ ನೋಡದೆ ಕಲೆ ಮತ್ತು ಸೇವೆಯ ಮನೋಭಾವದಿಂದ ಮಳೆಗಾಲದಲ್ಲಿ ಮನೆಯೊಳಗೆ ಕಲಾದೇವಿಯ ಸಾಕ್ಷಾತ್ಕರಿಸುವ ಶ್ರದ್ಧಾಭಕ್ತಿಯ ಆರಾಧನಾ ಕಲೆಯನ್ನು ಕಳೆದ ಹತ್ತು ವರ್ಷಗಳಿಂದ ಮಾಡುತ್ತ ಬಂದವರು ಶ್ರೀ ತಿಮ್ಮಪ್ಪ ದೇವಾಡಿಗ ಮತ್ತು ಶ್ರೀ ನಾಗರಾಜ ಭಟ್. ಈ ಚಿಕ್ಕ […]
Author: KundaVahini Editor
ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ:ಪಂಡೀತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ
ಕುಂದಾಪುರ ( ಸೆ,25):ಪಂಡೀತ್ ದೀನದಯಾಳ್ ಉಪಾಧ್ಯಾಯರ 105ನೇ ಜನ್ಮದಿನದ ಅಂಗವಾಗಿ ಕುಂದಾಪುರ ಮಂಡಲ ಕಾರ್ಯಾಲಯದಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಯವರ ಅಧ್ಯಕ್ಷತೆಯಲ್ಲಿ ಪುಷ್ಪ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಸ್ವಾತಂತ್ರ್ಯ ನಂತರ ಕುಟುಂಬ ರಾಜಕಾರಣದ ಪಕ್ಷವೊಂದು ಬಲಿಷ್ಠವಾಗಿ ಬೆಳೆದಿದ್ದ ಸಮಯದಲ್ಲಿ ರಾಷ್ಟ್ರೀಯತೆ, ರಾಷ್ಟ್ರಪರ ಚಿಂತನೆಯ ಪಕ್ಷವೊಂದು ಬೇಕು ಎನ್ನುವ ನೆಲೆಯಲ್ಲಿ ಜನಸಂಘ ಕಟ್ಟಿ ಅದನ್ನು ಸಂಘಟಿಸುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಅರ್ಪಿಸಿದ ದೀನದಯಾಳ್ […]
ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ- (ಸಹವಾಸಗಳು ಸಾಮರ್ಥ್ಯ ಹಿಗ್ಗಿಸುವಂತಿರಲಿ – ಆರ್. ಉಪೇಂದ್ರ ಶೆಟ್ಟಿ)
ಕುಂದಾಪುರ (ಸೆ,27) :ನಿಮ್ಮನ್ನು ನೀವು ನಂಬಿ, ನಿಮ್ಮ ಸಾಮರ್ಥ್ಯವನ್ನು ನಂಬಿ, ಅದು ನಿಮ್ಮನ್ನು ಯಶಸ್ಸಿನತ್ತ ಸಾಗಿಸುತ್ತದೆ. ನಿಮ್ಮಿಂದ ಅಸಾಧ್ಯ ಎಂಬುದು ಯಾವುದು ಇಲ್ಲ. ಸಂಪರ್ಕವನ್ನು ಬೆಳೆಸಿ, ಸಾಮರ್ಥ್ಯವನ್ನು ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಿ. ಹಾಗೆ ಸಹಾಯ ಪಡೆದ ಸಂಸ್ಥೆಯನ್ನು ಸ್ಮರಿಸಿ ಎಂದು ಯುನಿವರ್ಸಲ್ ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ಸ್ನ ಅಧ್ಯಕ್ಷರಾದ ಆರ್.ಉಪೇಂದ್ರ ಶೆಟ್ಟಿಯವರು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಡಾ. ಬಿ.ಬಿ. ಹೆಗ್ಡೆ ಕಾಲೇಜಿನ […]
ಅರಾಟೆ : ವಾಜಪೇಯಿ ಬಸ್ಸು ತಂಗುದಾಣ ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ
ಅರಾಟೆ (ಸೆ, 27) : ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಅರಾಟೆ ಎಂಬಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ, ದೇಶ ಕಂಡ ಧೀಮಂತ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಹೆಸರಿನಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಬೈಂದೂರಿನ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾಪಕ್ಷದ ಬೈಂದೂರು ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ […]
ಡಾ। ಬಿ. ಬಿ. ಹೆಗ್ಡೆ ಕಾಲೇಜು-ಎನ್.ಎಸ್.ಎಸ್ ಘಟಕ: ಬಸ್ರೂರಿನಲ್ಲಿ “ನಿರ್ಮಲ ದೇಗುಲ ” ಸ್ವಚ್ಚತಾ ಕಾರ್ಯಕ್ರಮ
ಬಸ್ರೂರು (ಸೆ, 26): ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಬಸ್ರೂರಿನ ಮೂಡ್ಕೇರಿಯ ನಾಥ ಪರಂಪರೆಯ ಪ್ರಾಚೀನ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಸೆಪ್ಟೆಂಬರ್26 ರಂದು ಸ್ವಚ್ಚತಾ ಕಾರ್ಯ “ನಿರ್ಮಲ ದೇಗುಲ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ಶೆಟ್ಟಿ ನೈಕಂಬ್ಳಿ , ನಿಕಟಪೂರ್ವ ಎನ್.ಎಸ್.ಎಸ್ ಯೋಜನಾಧಿಕಾರಿ […]
ಕಾರ್ಪೋರೇಟ್ ಕ್ಯಾಟರಿಂಗ್ ರಂಗದ “ಗುಣವಂತ”ಉದ್ಯಮಿ ದಯಾನಂದ್ ಶ್ರೀಯಾನ್
ಧರ್ಮವು ಮರೆಯಾಗಿ ಅಧರ್ಮವೇ ಗೆಲ್ಲುತಿರುವ ಈ ಕಾಲಘಟ್ಟದಲ್ಲಿ ಯಾರಿಗೂ ತಿಳಿಯದಂತೆ, ಯಾರಲ್ಲೂ ಹೇಳಿಕೊಳ್ಳದೆ ,ಯಾರಿಗೂ ಬರೆಯಲು ಅವಕಾಶ ಮಾಡಿಕೊಡದೆ ದಾನ-ಧರ್ಮ ಸಮಾಜಸೇವೆ ಮಾಡುತ್ತಿರುವ ಒರ್ವ ವ್ಯಕ್ತಿ ಮತ್ತು ಶಕ್ತಿಯ ಯಶೋಗಾತೆಯನ್ನು ಪ್ರೀತಿಯಿಂದ ನನ್ನನು ಗದರಿಸಿ ಬಿಡುತ್ತಾರೋ ಏನೋ ಎಂಬ ಹೆದರಿಯಿಂದಲೇ ಬರೆಯುವ ಅನಿವಾರ್ಯತೆ ನನಗೆ. ಮಹಾಭಾರತದ ನೀತಿ ಸತ್ಯದಂತೆ ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡದಿದ್ದರೂ ಎಂದೂ ತಪ್ಪುಗಳ ಬಗ್ಗೆ ಚರ್ಚೆಗೆ ಅವಕಾಶ ಕೂಡದೆ ಪರೋಪಕಾರಕ್ಕಾಗಿ ಕೆಲಸ ಮಾಡುವರೇ ಹೊರತು ಪ್ರತ್ಯುಪಕಾರ ವನ್ನು […]
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕಳವಾಡಿ- ಮಯ್ಯಾಡಿ :ಅಧ್ಯಕ್ಷರಾಗಿ ರವಿರಾಜ ಚಂದನ್ ಕಳವಾಡಿ ಪುನರಾಯ್ಕೆ
ಬೈಂದೂರು(ಸೆ,25): ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ರವಿರಾಜ ಚಂದನ ಕಳವಾಡಿ ಯವರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕಳವಾಡಿ- ಮಯ್ಯಾಡಿ ಇದರ 28ನೇ ವರ್ಷದ ಅಧ್ಯಕ್ಷ ರಾಗಿ ಪುನರಾಯ್ಕೆಯಾಗಿದ್ದಾರೆ. ಹಾಗೆಯೇ ಕಾರ್ಯಾದರ್ಶಿಯಾಗಿ ಶ್ರೀ ರಾಜು ಪೂಜಾರಿ ಕಳವಾಡಿ ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಕುಂದಾಪುರ (ಸೆ, 25) : ಕೊಡುಗೈ ದಾನಿ ಉದ್ಯಮಿ ,ಶೇಫ್ ಟಾಕ್ ಹಾಸ್ಪಿಟಾಲಿಟಿ ಸಂಸ್ಥೆ ಹಾಗೂ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರಾದ ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಸಮಾಜ ಸೇವಾ ಕ್ಷೇತ್ರದ ಅನನ್ಯ ಕೊಡುಗೆಯನ್ನು ಗುರುತಿಸಿ ಏಶಿಯಾ ವೇದಿಕ್ ಕಲ್ಚರ್ ಫೌಂಡೇಷನ್ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ। ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ : ಎನ್.ಎಸ್.ಎಸ್ ಘಟಕದ ವತಿಯಿಂದ ಸೆ,26 ರಂದು ಸ್ವಚ್ಚತಾ ಕಾರ್ಯಕ್ರಮ
ಕುಂದಾಪುರ (ಸೆ, 24):ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಬಸ್ರೂರಿನ ಮೂಡ್ಕೇರಿಯ ನಾಥ ಪರಂಪರೆಯ ಪ್ರಾಚೀನ ಶ್ರೀ ಕಾಲಭೈರವ ದೇವಸ್ಥಾನದ ಸ್ವಚ್ಚತಾ ಕಾರ್ಯ “ನಿರ್ಮಲ ದೇಗುಲ” ಕಾರ್ಯಕ್ರಮವನ್ನು ಇದೇ ಸೆಪ್ಟೆಂಬರ್ 26 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ವತಿಯಿಂದ ತಿಳಿಸಿದ್ದಾರೆ.
ಗಾಂಧಿ ಜಯಂತಿಯ ಪ್ರಯುಕ್ತ ರಾಜ್ಯ ಮಟ್ಟದ ಅಂಚೆ ಕಾರ್ಡ್ ನಲ್ಲಿ ಗಾಂಧೀಜಿಯ ಚಿತ್ರ ರಚಿಸುವ ಸ್ಪರ್ಧೆ
ಕೋಟೇಶ್ವರ (ಸೆ,24): ಸ್ಮಾರ್ಟ್ ಕ್ರೀಯೇಷನ್ಸ್ ಎಜುಕೇಶನ್ ಮತ್ತು ಜ್ಞಾನವಾಹಿನಿ ಯುಟ್ಯೂಬ್ ಚಾನೆಲ್ ರವರ ಸಹಭಾಗಿತ್ವದಲ್ಲಿ ಅಕ್ಟೋಬರ್ 2 ರ ಗಾಂಧಿ ಜಯಂತಿ ಅಂಗವಾಗಿ “ನಮ್ಮ ಬಾಪೂಜೀ” ಶೀರ್ಷಿಕೆ ಅಡಿಯಲ್ಲಿ ರಾಜ್ಯ ಮಟ್ಟದ ಅಂಚೆ ಕಾರ್ಡ್ ನಲ್ಲಿ ಗಾಂಧೀಜಿ ಚಿತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗ(ಎಲ್.ಕೆ.ಜಿ ಯಿಂದ 7ನೇ ತರಗತಿವರೆಗೆ), ಪ್ರೌಢ ವಿಭಾಗ (8ನೇ ತರಗತಿಯಿಂದ 10ನೇ ತರಗತಿ) ಹಾಗೂ ಪದವಿಪೂರ್ವ ವಿಭಾಗ ( ಪ್ರಥಮ ಪಿಯುಸಿ ಮತ್ತು […]










