ಕುಂದಾಪುರ :(ಎ.13): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳು ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 4ರ ಆರನೇ ದಿನವಾದ ಇಂದು ಶಿಬಿರಾರ್ಥಿಗಳು ಬ್ರಹ್ಮಾವರದ ಕರ್ಜೆಯಲ್ಲಿರುವ ಅಂಜಲಿ ವಾಟರ್ ಪಾರ್ಕ್ ಗೆ ಭೇಟಿ ನೀಡಿದರು.

ಅಲ್ಲಿ ವಿವಿಧ ರೀತಿಯ ಆಟಗಳನ್ನಾಡಿ ಸಂಭ್ರಮಿಸಿ ಮಳೆ ನೃತ್ಯಕ್ಕೆ ಹೆಜ್ಜೆ ಹಾಕಿದರು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.











