ಕುಂದಾಪುರ(ಫೆ,13): ಇಲ್ಲಿನ ಯುವ ಬಂಟರ ಸಂಘದ ಆಶ್ರಯದಲ್ಲಿ ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ, ಶ್ರೇಷ್ಠ ಕವಯತ್ರಿ, ಭಾರತದ ಕೋಗಿಲೆ ಸರೋಜಿನಿ ನಾಯ್ಡು ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಉಪ್ಪಿನಕಾಯಿ ಅಜ್ಜಿ ಎಂದೇ ಖ್ಯಾತರಾದ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಐರಬೈಲು ನಿವಾಸಿ ಶ್ರೀಮತಿ ಗುಲಾಬಿ ಶೆಟ್ಟಿ ಅವರನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ […]
Author: KundaVahini Editor
ವ್ಯಸನಿಗಳಿಗೆ ಸಮಾಜದಲ್ಲಿ ಬದುಕಿಲ್ಲ – ಡಾ. ಪಿ. ವಿ. ಭಂಡಾರಿ
ಕುಂದಾಪುರ(ಫೆ,10): ಮಾದಕ ವ್ಯಸನಿಗಳಿಗೆ ಸಮಾಜದಲ್ಲಿ ಬಹುಕಾಲ ಬದುಕಿಲ್ಲ. ಇಂತಹ ವಸ್ತುಗಳಿಂದ ವ್ಯಕ್ತಿಯ ನೋವು, ಸಂಕಟಗಳನ್ನು ಮರೆಯಲು ಸಾಧ್ಯವಿಲ್ಲ. ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕರೂ, ಮನೋವೈದ್ಯರೂ ಆದ ಡಾ. ಪಿ. ವಿ. ಭಂಡಾರಿ ಮಾತನಾಡಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಆಂಗ್ಲ ಪ್ರಾಥಮಿಕ ಮತ್ತು ವಿ. ಕೆ. […]
ಜೆ.ಇ.ಇ (ಮೈನ್) ಫಲಿತಾಂಶ : ಕ್ರಿಯೇಟಿವ್ ವಿದ್ಯಾರ್ಥಿಗಳ ಉತ್ತಮ ಸಾಧನೆ
ಉಡುಪಿ(ಫೆ,10): ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) 2025 ಅರ್ಹತಾ ಪರೀಕ್ಷೆಯ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್.ಎಸ್ 99.4676491, ಸಾನಿಕ ಕೆ.ಎನ್ 99. 2028725, ಎಂ. ಮಂಜುನಾಥ್ 99.0174525, ಮೋಹಿತ್ ಎಂ 99.1632262, ಎಚ್. ಎ ರಾಜೇಶ್ 99.1055485, ಪರ್ಸಂಟೈಲ್ ಗಳಿಸಿರುತ್ತಾರೆ. ಸಂಸ್ಥೆಯು ಆರಂಭದ ವರ್ಷದಿಂದಲೇ […]
ಕುಂದಾಪುರ ಯುವ ಬಂಟರ ಸಂಘದಿಂದ ಕೊಡುಗೆ
ಕುಂದಾಪುರ (ಫೆ, 05):ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಉಡುಪಿಯ ಕೊಳಲಗಿರಿಯ ಸಮೀಪ ಇರುವ ಹೋಂ ಡಾಕ್ಟರ್ ಫೌಂಡೇಶನ್ ನ ಆಡಳಿತಕ್ಕೂಳಪಟ್ಟ ಸ್ವರ್ಗ ಅಸಹಾಯಕರ ಅರಮನೆ ಅನಾಥಾಶ್ರಮಕ್ಕೆ 35000 ರೂಪಾಯಿ ಮೌಲ್ಯದ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಹಾಗೂ ಆಶ್ರಮಕ್ಕೆ ಬೇಕಾದ 10000 ರೂಪಾಯಿ ಮೌಲ್ಯದ ದಿನಚರಿ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು. ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ವತ್ಸಲಾ ದಯಾನಂದ ಶೆಟ್ಟಿ ಹೋಮ್ ಡಾಕ್ಟರ್ ಫೌಂಡೇಶನ್ ನ ಆಡಳಿತ […]
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಂಪಾರು ಮೂರು ಕೈ : ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ಅoಪಾರು(ಫೆ,13): ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಂಪಾರು ಮೂರು ಕೈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ ಫೆಬ್ರವರಿ 08 ರಂದು ನಡೆಯಿತು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಪಂಚಾಯಿತಿ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಕಿಣಿ ಇವರು ಉದ್ಘಾಟಿಸಿದರು. ಸ್ಮಾರ್ಟ್ ಕ್ಲಾಸ್ ಶ್ರೀಯುತ ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು. ಸಿದ್ವಿನ್ ಔಟೋ ಟೆಕ್ ಕಂಪನಿ ಬೆಂಗಳೂರು ಇಲ್ಲಿಯ ಇಂಜಿನಿಯರ್ ಮನೀಶ್ ನಾಯಕ್ […]
ಜ್ಞಾನಸುಧಾದ ಜೆ ಇ.ಇ ಮೈನ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ- ಪ್ರೋತ್ಸಾಹ ಧನ ವಿತರಣೆ
ಕಾರ್ಕಳ(ಫೆ,13): ತಂದೆ-ತಾಯಿ-ಗುರುಗಳಿಗೆ ವಂದಿಸಿ ಪಡೆದ ವಿದ್ಯೆಯು ವಿದ್ಯಾರ್ಥಿಯ ಸಾಧನೆಗೆ ಕಾರಣವಾಗುತ್ತದೆ. ಸಂಕಲ್ಪ ಶುದ್ಧದಿಂದ ಇಟ್ಟಹೆಜ್ಜೆಯು ಯಶಸ್ಸನ್ನೇ ತಂದುಕೊಡುತ್ತದೆ. ಯಶಸ್ವಿ ಬದುಕಿನ ಸಾರ್ಥಕತೆ ಪೋಷಕರದಾಗುತ್ತದೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹೇಳಿದರು. ಅವರು ರಾಷ್ಟ್ರ ಮಟ್ಟದಲ್ಲಿ ಇಂಜಿನಿಯರಿoಗ್ ಪ್ರವೇಶಕ್ಕೆ ಎನ್.ಟಿ.ಎ ನಡೆಸಿದ ಪ್ರಥಮ ಹಂತದ ಜೆ.ಇ.ಇ ಮೈನ್ ಫಲಿತಾಂಶದಲ್ಲಿ 97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 47 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. […]
ಕರ್ನಾಟಕ ಯುವ ಕ್ರೀಡಾ ಉತ್ಸವದಲ್ಲಿ ಮಿಂಚಿದ ಕೆಡಿಎಫ್ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ ಕುಂದಾಪುರದ ವಿದ್ಯಾರ್ಥಿಗಳು
ಕುಂದಾಪುರ (ಫೆ,05): ಬೆಂಗಳೂರಿನ ಯಲಹಂಕಾದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಯುವ ಕ್ರೀಡಾ ಉತ್ಸವದಲ್ಲಿ ಕುಂದಾಪುರದ ಕೆಡಿಎಫ್ ಕರಾಟೆ ಮತ್ತು ಫಿಟ್ನೆಸ್ ಸೆಂಟರ್ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಒಟ್ಟು 5 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಪಡೆದುಕೊಂಡು ಕರಾಟೆನಲ್ಲಿ ತಮ್ಮ ಉತ್ಕೃಷ್ಟತೆಯನ್ನು ಮೆರೆದಿದ್ದಾರೆ. ಪದಕ ವಿಜೇತರ ವಿವರ:ಸೌರವ್ – ಚಿನ್ನದ ಪದಕ (ಬ್ರೌನ್ ಬೆಲ್ಟ್, 48 ಕೆಜಿ ಕುಮೀಟೆ – 21 ವಯೋಮಿತಿ ಒಳಗಿನ ವಿಭಾಗ) […]
ಶ್ರೀ ಶಿವಾನಂದ್ ಕೋಟೇಶ್ವರ ರವರಿಗೆ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ
ಕುಂದಾಪುರ(ಫೆ. 08): ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಮತ್ತು ನೆಲಮಂಗಲ ತಾಲೂಕು ಘಟಕ ಇವರ ಸಂಯುಕ್ತಾಶ್ರಯದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿಗೆ ಶ್ರೀ ಶಿವಾನಂದ್ ಕೋಟೇಶ್ವರ ಭಾಜನರಾಗಿದ್ದಾರೆ. ಇವರು ಇಡೂರು ಮತ್ತು ಮುದೂರಿನ ಬೆಳ್ಕಲ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿಧ್ಯಾರ್ಥಿಗಳ ಮತ್ತು ಊರಿನವರ ನೆಚ್ಚಿನ ಅಧ್ಯಾಪಕರಾಗಿದ್ದರು. ಹಲವು […]
ಪೋಳ್ಯ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ವೈಭವದ ರಥೋತ್ಸವ ಸಂಪನ್ನ
ಪುತ್ತೂರು(ಫೆ. 07): ತಾಲೂಕಿನ ಮಾತ್ರವಲ್ಲದೆ ಹತ್ತೂರಲ್ಲೂ ಜನಮೆಚ್ಚುಗೆ ಪಡೆದ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ರಥೋತ್ಸವ ಫೆ. 4ರಂದು ವೈಭವದಿಂದ ನಡೆಯಿತು. ಪೂರ್ವಾಹ್ನ ರಥ ಪೂಜೆಯ ಬಳಿಕ ಶ್ರೀದೇವರ ಅಲಂಕೃತ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಬಲಿ ಹೊರಟು ರಥ ಪ್ರದಕ್ಷಿಣೆಯ ಬಳಿಕ ರಥಾರೋಹಣ ನಡೆದು ಭಕ್ತಗಣ ಸಂಭ್ರಮದಿ ನೋಡುತ್ತಿದ್ದಂತೆ ಬಾನೆತ್ತರದ ಆಗಸದಲ್ಲಿ ಗರುಡಗಳೆರಡು ಪ್ರತ್ಯಕ್ಷವಾಗಿ ರಥ ಮತ್ತು ದೇವಳದ ಸುತ್ತ ಪ್ರದಕ್ಷಿಣೆ ಗೈದವು.ಬಳಿಕ ರಥದಲ್ಲಿ […]
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಹಿನ್ನೆಲೆ ಕುಂದಾಪುರ ಬಿಜೆಪಿ ನೇತೃತ್ವದಲ್ಲಿ ಸಂಭ್ರಮಾಚರಣೆ.
ಕುಂದಾಪುರ: ಫೆ:08 ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ನಿಕಟ ಪೂರ್ವ ಬಿಜೆಪಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್. ಕೆ.ಎಸ್. ಇವರ ಉಪಸ್ಥಿತಿಯಲ್ಲಿ […]










