ಕುಂದಾಪುರ (ಜು, 21): ಕುಂದಾಪುರದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಆನಗಳ್ಳಿಯ ಶ್ರೀ ದತ್ತಾಶ್ರಮದಲ್ಲಿ ಜುಲೈ, 24 ರಂದು ಗುರು ಪೂರ್ಣಿಮೆಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ತುಳಸಿ ಅರ್ಚನೆ, ಮಹಾಮಂಗಳಾರತಿ ಹಾಗೂ ಸಂಜೆ ದತ್ತ ಹೋಮ, ಭಜನಾ ಕೀರ್ತನೆ, ಸಾಧು-ಸಂತರಿಗೆ ಕಾಣಿಕೆ ಸಮರ್ಪಣೆ , ವಸ್ತ್ರ ವಿತರಣೆ , ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಲಿದ್ದು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಬೇಕೆಂದು ಆನಗಳ್ಳಿ ಶ್ರೀ […]
Category: ನಮ್ಮ ಕುಂದಾಪುರ
ನಮ್ಮ ಕುಂದಾಪುರ
ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ : ಉಡುಪಿಯಲ್ಲಿ ಉಚಿತ ಯಕ್ಷಗಾನ ನಾಟ್ಯ ತರಬೇತಿ
ಉಡುಪಿ (ಜೂ, 21): ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದ ಕುರಿತು ಯುವ ಜನತೆಯಲ್ಲಿ ಆಸಕ್ತಿ ಹಾಗೂ ಕಾಳಜಿ ಮೂಡಿಸುವ ನೆಲೆಯಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನವು ಉಡುಪಿಯಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಉದ್ಘಾಟನಾ ಸಮಾರಂಭ ಜುಲೈ 20 ರ ಮಂಗಳವಾರದಂದು ಜರುಗಿತು. ಶ್ರೀ ಶಶಿಕಾಂತ್ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯಕ್ಷಗಾನ ಹಾಗೂ ಈ ಸಂಸ್ಥೆಯ ಹಿರಿಮೆಯನ್ನು ಜಗತ್ತಿನಾದ್ಯಂತ ಪಸರಿಸುವ […]
ಕವಿ ಕೆ.ವಿ.ತಿರುಮಲೇಶ್ ಕವಿತೆಗಳು ಮಲೆಯಾಳಕ್ಕೆ ಅನುವಾದ
ಬ್ರಹ್ಮಾವರ(ಜು,18): ಮಲೆಯಾಳದ ಮಹಾಕವಿ ಚಙ್ಙಪ್ಪುಳ ಕೃಷ್ಣ ಪಿಳ್ಳೆಯವರು ಹೇಳಿದಂತೆ ಕಾವ್ಯವು ಒಬ್ಬ ನರ್ತಕಿ ಇದ್ದಂತೆ. ನರ್ತಕಿ ತನಗೆ ಹೇಳಬೇಕಾದ ವಿಚಾರಗಳನ್ನು ಸನ್ನೆ – ಸಂಕೇತಗಳ ಮೂಲಕವೇ ಸೂಚಿಸುತ್ತಾಳೆ. ಚಙ್ಙಪ್ಪುಳ, ವಳ್ಳತ್ತೋಳ್, ಉಳ್ಳೂರ್ ಮೊದಲಾದ ಮಹಾಕವಿಗಳು ಮಲೆಯಾಳ ಕಾವ್ಯದ ತೋರುಗಂಬಗಳಾಗಿ ಉತ್ಕೃಷ್ಟ ಕಾವ್ಯ ರಚನೆ ಮಾಡಿದರು. ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಮೊದಲಾದ ಮಹಾಕಾವ್ಯಗಳು, ಭಗವದ್ಗೀತೆಯಂಥ ಅಮೂಲ್ಯ ಗ್ರಂಥ, ಕಾಳಿದಾಸ-ಭಾಸರಂಥ ಮಹಾಕವಿಗಳು ಸಾಹಿತ್ಯವನ್ನು ಶ್ರೀಮಂತವಾಗಿಸಿದಂತಹ ನಾಡು ನಮ್ಮದು. ಅವರ ಆದರ್ಶದಲ್ಲೇ ಮಲೆಯಾಳ ಕಾವ್ಯವು […]
ಬಗ್ವಾಡಿ:ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರರ ಮನೆ ನಿರ್ಮಾಣಕ್ಕೆ ಶ್ರೀ ಗೋವಿಂದ ಬಾಬು ಪೂಜಾರಿ ನೆರವು
ಬಗ್ವಾಡಿ (ಜು, 15) : ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಬಗ್ವಾಡಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿರುವುದರ ಜೊತೆಗೆ ವಾಸಯೋಗ್ಯ ಮನೆಇಲ್ಲದೆ ತೀರ ಕಷ್ಟದಲ್ಲಿರುವುದನ್ನು ಗಮನಿಸಿದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಸ್ವತಃ ಕಲಾವಿದ ಸುಬ್ರಹ್ಮಣ್ಯನ ಮನೆಗೆ ಭೇಟಿ ನೀಡಿ ನೂತನ ಮನೆ ನಿರ್ಮಾಣಕ್ಕೆ 50,000 ರೂಪಾಯಿ ಚೆಕ್ ಹಸ್ತಾಂತರಿಸಿದರು. ಅಮ್ಮಾ ವೇದಿಕೆಯ ಸದಸ್ಯರ ಜೊತೆ ಸೇರಿ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ […]
ಧಾರಿಣಿ ಕೆ. ಎಸ್. ಗೆ ಸ್ವರ ಕುಡ್ಲ ಸೀಸನ್ – 3 ಪ್ರಶಸ್ತಿ
ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಮಂಗಳೂರು ಇವರು ಫೆಬ್ರವರಿ 10ರಂದು ಆಯೋಜಿಸಿದ “ಸ್ವರ ಕುಡ್ಲ” ಸೀಸನ್ 3 ಅಂತರ್ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಧಾರಿಣಿ ಕೆ.ಎಸ್ ಕುಂದಾಪುರ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಹೌಂದರಾಯನ ವಾಲ್ಗ
ಹೌಂದರಾಯನ ವಾಲ್ಗ ಇದು ಕುಂದಾಪುರದ ಕರಾವಳಿ ಭಾಗದ ಜನಪದ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇದನ್ನು ಜನರು ಧಾರ್ಮಿಕ ಹಿನ್ನೆಲೆಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಪ್ರಶಂಸನೀಯ.
ಹೀರೋ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ಕುಂದಾಪುರದ ನವ ಪ್ರತಿಭೆ – ಪ್ರದೀಪ್ ಶೆಟ್ಟಿ ಬೆಳ್ಳಾಲ
ಕನ್ನಡ ಚಿತ್ರರಂಗದ ಯಶಸ್ವಿ, ಸೃಜನಶೀಲ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಿರ್ಮಾಣದ ಹೀರೋ ಸಿನಿಮಾ ಇದೇ ಮಾರ್ಚ್ 5 ರಂದು ತೆರೆ ಕಾಣಲಿದೆ. ಸಾಕಷ್ಟು ಕುತೂಹಲ ಹಾಗೂ ರಹಸ್ಯಮಯ ಕಥೆಯನ್ನು ಹೊಂದಿರುವ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದೆ.