ಕುಂದಾಪುರ (ಜೂ,15): ಕುಂದಾಪುರ ಮೂಲದ ಅಂತರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ| ಅಸೋಡು ಅನಂತರಾಮ ಶೆಟ್ಟಿಯವರನ್ನು ಇಂಗ್ಲೆಂಡಿನ 3 ನೇ ಕಿಂಗ್ ಚಾರ್ಲ್ಸ್ ರವರು ಕೆಂಟ್ನ ಲಾರ್ಡ್ ಲೆಫ್ಟಿನೆಂಟ್ (ಗವರ್ನರ್) ಆಗಿ ನೇಮಕ ಮಾಡಿರುತ್ತಾರೆ. ಇದು ಗೌರವಾನ್ವಿತ ಮತ್ತು ಸಾಂವಿಧಾನಿಕ ಹುದ್ದೆಯಾಗಿದ್ದು, 3 ಸ್ಟಾರ್ ಜನರಲ್ ಶ್ರೇಣಿಯಾಗಿದೆ ಮತ್ತು ಭಾರತದಿಂದ ಆಯ್ಕೆಯಾದ ಎಕೈಕ ವ್ಯಕ್ತಿ ಇವರಾಗಿದ್ದಾರೆ.ಈ ಹಿಂದೆ ಡಾ ಎ.ಎ ಶೆಟ್ಟಿಯವರು ವೈದ್ಯಕೀಯ ಕ್ಷೇತ್ರದ ಉತ್ಕೃಷ್ಟ ಮನ್ನಣೆಯಾದ ಸರ್ಜಿಕಲ್ ನೋಬೆಲ್ ಪ್ರಶಸ್ತಿಯನ್ನು […]
Category: ನಮ್ಮ ಕುಂದಾಪುರ
ನಮ್ಮ ಕುಂದಾಪುರ
ವಿ. ಕೆ. ಆರ್. ಶಾಲೆ ಕುಂದಾಪುರ: ಪ್ರತೀಕ್ ಎನ್ ಶೆಟ್ಟಿ ರಾಜ್ಯಕ್ಕೆ 6ನೇ ರ್ಯಾಂಕ್
ಕುoದಾಪುರ(ಜೂ,12): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರತೀಕ್ ಎನ್. ಶೆಟ್ಟಿ ಇವನು ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 616 ಅಂಕ ಗಳಿಸಿದ್ದು ಮರುಮೌಲ್ಯಮಾಪನದ ನಂತರ 620 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿರುತ್ತಾನೆ. ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 4 ಹೆಚ್ಚುವರಿ ಅಂಕ ಗಳಿಸುವುದರೊಂದಿಗೆ ಈ ಸಾಧನೆ ಮಾಡಿರುತ್ತಾನೆ. […]
ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರ ಸಟ್ವಾಡಿ ಬಿ.ಎಸ್.ಸೂರಪ್ಪ ಶೆಟ್ಟಿ ರವರ ಮನೆಯಲ್ಲಿ ನಾಮ ಫಲಕ ಅನಾವರಣ
ಕುಂದಾಪುರ(ಜೂ.10): ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಟ್ವಾಡಿ ಬಿ.ಎಸ್.ಸೂರಪ್ಪ ಶೆಟ್ಟಿ ಯವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂದು ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಸ್ವರಾಜ್ಯ 75 ತಂಡದ 24ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮಕ್ಕೆ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದಜೆ೯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ,ಹಸ್ತ ಚಿತ್ರ ಫೌಂಡೇಶನ್ ಕ್ವಾಡಿ,ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ,ಜನಸೇವಾ ಟ್ರಸ್ಟ್ […]
ಚಿತ್ತೂರು: ಜೂನ್ 23 ರಂದು ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನದ ವರ್ದಂತಿ ಉತ್ಸವ
ಚಿತ್ತೂರು(ಜೂ,9):ಗ್ರಾಮದ ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ವರ್ದಂತಿ ಉತ್ಸವ ಇದೇ ಜೂನ್ 23 ರಂದು ನೆಡೆಯಲಿದೆ. ಆ ದಿನ ಬೆಳಿಗ್ಗೆ 9 ಗಂಟೆಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆಡಯಲಿದ್ದು 12 ಘಂಟೆಗೆ ಶ್ರೀಮತಿ ಸುಧಾರಾಜಗೋಪಾಲ್ ಭಟ್ ಮತ್ತು ಬಳಗದವರಿಂದ ಭಕ್ತಿ ಸುಧೆ ಕಾರ್ಯಕ್ರಮ ನೆಡೆಯಲಿದೆ. ಮದ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ನೆಡೆಯಲಿದ್ದು ಸಂಜೆ 7 ಘಂಟೆಗೆ ರಂಗಪೂಜೆ ಹಾಗೂ ರಾತ್ರಿ 8 ರಿಂದ ಸ್ಥಳೀಯ ಪ್ರೇರಣಾ ಯುವ ವೇದಿಕೆ ವತಿಯಿಂದ […]
ಶ್ರೀ ಮಂಜುನಾಥ್ ಎಸ್ ಅವರಿಗೆ ಪಿಎಚ್ಡಿ ಪದವಿ ಪ್ರದಾನ
ಉಡುಪಿ (ಫೆ,28): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಮಂಜುನಾಥ್ ಎಸ್ ಇವರು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿo ಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ ಎನ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಡೆವೆಲಪ್ಮೆಂಟ್ ಆಫ್ ಎ ಡ್ಯುಯಲ್ ಸ್ವಿರ್ಲ್ ಚೇಂಬರ್ ಫಾರ್ ಆ್ಯನ್ ಐಡಿ ಇಂಜಿನ್ ಆ್ಯಂಡ್ ಇನ್ವೆಸ್ಟಿಗೇಷನ್ ಆನ್ ಇಟ್ಸ್ ಇಪೆಕ್ಟ್ ಆನ್ ಎಂಜಿನ್ ಫರ್ಫಾರ್ಮೆನ್ಸ್ ಯುಸಿಂಗ್ […]
ಗುಜ್ಜಾಡಿ: ಪ್ರಶಾಂತ್ ಆಚಾರ್ಯರ ಕೈಚಳದಲ್ಲಿ ಮೂಡಿದ ಮಾರಣಕಟ್ಟೆ ಮೇಳದ ರಂಗಸ್ಥಳ
ಗುಜ್ಜಾಡಿ (ಫೆ. 5): ಉದಯೋನ್ಮುಖ ಕಲಾವಿದ ಪ್ರಶಾಂತ್ ಆಚಾರ್ಯ ಗುಜ್ಜಾಡಿ ತಮ್ಮ ಕೈಚಳಕದಿಂದ ಮಾರಣಕಟ್ಟೆ ಮೇಳದ ರಂಗಸ್ಥಳ ಮಾದರಿಯ ಚಿಕ್ಕ ರಂಗಮಂಠಪವನ್ನು ರಚಿಸಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಇದರ ಆಡಳಿತ ಮೊಕ್ತೇಸರರಾದ ಸದಾಶಿವ ಶೆಟ್ಟಿ ಯವರ ಮೂಲಕ ಶ್ರೀ ದೇವರ ಸನ್ನಿಧಿಗೆ ಹಸ್ತಾಂತರಿಸಿದರು. ಪ್ರಶಾಂತ್ ಆಚಾರ್ಯ ತೆಂಕಮನೆ ಗುಜ್ಜಾಡಿ , ವೃತ್ತಿಯಲ್ಲಿ ಪ್ಲೈವುಡ್ ,ಅಲ್ಯೂಮಿನಿಯಂ ಹಾಗೂ ಫೈಬರ್ ಡೋರ್ ವರ್ಕ್ ,ರಂಗಸ್ಥಳ ಮಾದರಿಯ ಮಂಟಪ ,ರಬ್ಬರ್ ಮರ,ಬಟ್ಟೆ ,ರೇಡಿಯಂ […]
ಶ್ರೀ ಚೇತನ್ ಶೆಟ್ಟಿ ಕೊವಾಡಿಯವರಿಗೆ ಯುವರತ್ನ ಪ್ರಶಸ್ತಿ
ಕುಂದಾಪುರ (ಜ,13): ಸಾಹಿತ್ಯ, ಸಾಂಸ್ಕೃತಿಕ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಯಲ್ಲಿ ನಿರತರಾಗಿರುವ ಕುಂದಾಪುರದ ಪ್ರತಿಷ್ಠಿತ ಡಾ|ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಯಾದ ಶ್ರೀಚೇತನ್ ಶೆಟ್ಟಿ ಕೊವಾಡಿಯವರಿಗೆ ಜೆ.ಸಿ.ಐ ಕುಂದಾಪುರ ಸಿಟಿ ವತಿಯಿಂದ ಯುವ ರತ್ನ ಪ್ರಶಸ್ತಿಯನ್ನು ಜ.12 ರಂದು ವಿವೇಕಾನಂದ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ .ಉಮೇಶ ಶೆಟ್ಟಿ ವಹಿಸಿದ್ದರು. […]
ಜೇಸಿಐ ಕುಂದಾಪುರದ ನೂತನ ಅಧ್ಯಕ್ಷರಾಗಿ ಸುಧಾಕರ್ ಕಾಂಚನ್ ಆಯ್ಕೆ
ಕುಂದಾಪುರ(ಡಿ,23): ಜೇಸಿಐ ಕುಂದಾಪುರದ ನೂತನ ಅಧ್ಯಕ್ಷರಾಗಿ ಸುಧಾಕರ್ ಕಾಂಚನ್ ಹಾಗೂ ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿಯ ಆಯ್ಕೆ ಯಾಗಿದ್ದಾರೆ . ನಿಕಟಪೂರ್ವಧ್ಯಕ್ಷರಾಗಿ ಶ್ರೀಮತಿ ನಾಗರತ್ನ ಜಿ ಹೆರ್ಳೆ, ಉಪಾಧ್ಯಕ್ಷರುಗಳಾಗಿ ಪ್ರವೀಣ್ ಎಮ್ , ಶ್ರೀಮತಿ ಶರ್ಮಿಳಾ ಕಾರಂತ್, ಚಂದನ್ ಗೌಡ , ಸುಬ್ರಮಣ್ಯ ಆಚಾರ್ಯ , ಶಶಿಧರ್ ಶೆಟ್ಟಿ , ಜೊತೆ ಕಾರ್ಯದರ್ಶಿಯಾಗಿ ಚೇತನ್ ದೇವಾಡಿಗ , ಕೋಶಾಧಿಕಾರಿಯಾಗಿ ಧನುಷ್ ಕುಮಾರ್, ಜ್ಯೂನಿಯರ್ ಜೇ.ಸಿ ಅಧ್ಯಕ್ಷರಾಗಿ ಸತ್ಯನ್ ಎಸ್ ಕಾಂಚನ್ , […]
ಡಾ. ಶಿವರಾಮ ಕಾರಂತ್ ಬಾಲ ಪುರಸ್ಕಾರಕ್ಕೆ ಸಂಜಿತ್ ಎಂ ದೇವಾಡಿಗ ಆಯ್ಕೆ
ಕೋಟ (ಡಿ.18): ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ( ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ 2022ನೇ ಸಾಲಿನ ಡಾ. ಶಿವರಾಮ ಕಾರಂತ್ ಬಾಲ ಪುರಸ್ಕಾರಕ್ಕೆ ಸಂಜಿತ್ ಎಂ ದೇವಾಡಿಗ ಆಯ್ಕೆಯಾಗಿದ್ದಾರೆ. ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ನೆ ತರಗತಿಯ ವಿಧ್ಯಾರ್ಥಿಯಾಗಿರುವ ಸಂಜಿತ್ ಆಯ್ಕೆಗೆ ಶಾಲೆಯ ಭೋಧಕ ವ್ರoದ ಹಾಗೂ ಶಾಲಾ ಆಡಳಿತ ಮಂಡಳಿ ಅಭಿನಂಧನೆ ಸಲ್ಲಿಸಿದ್ದಾರೆ.
ಗಂಗೊಳ್ಳಿ:ಮರಣಿ ಮಾಂಟೆ ನಾಟಕ ಪ್ರದರ್ಶನ
ಗಂಗೊಳ್ಳಿ(ಡಿ.18): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಿದ್ಯಾರ್ಥಿಗಳು ಮರಣಿ ಮಾಂಟೆ ಎನ್ನುವ ಭಿನ್ನ ಶೈಲಿಯ ನಾಟಕ ಇತ್ತೀಚೆಗೆ ಪ್ರದರ್ಶನಗೊಂಡಿತು . ಸಾವಿನ ದೇವತೆಯೊಂದಿಗೆ ಹೋರಾಡುವ ಕುತೂಹಲಕಾರಿ ಕಥಾನಕವನ್ನು ಮರಣಿ ಮಾಂಟೆ ನಾಟಕವು ಒಳಗೊಂಡಿದ್ದು ಇದನ್ನು ಇಲ್ಲಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ರಚಿಸಿ ನಿರ್ದೇಶಿಸಿದ್ದಾರೆ. ಶ್ರಾವ್ಯ ಎನ್, ನಿಶಾ ಬಿ ಪೂಜಾರಿ ಹೃತಿಕ, ದಿಯಾ, ಅಮೀಕ್ಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಒಟ್ಟು […]










