ಕುಂದಾಪುರ(ಅ,8): ಹಲವಾರು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿರುವ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿ ಸೋಮಶೇಖರ್ ಖಾರ್ವಿಯವರು ಇತ್ತೀಚೆಗೆ ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆದ ಬಾಡಿ ಬಿಲ್ಡಿಂಗ್ 65 ಕೆ.ಜಿ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಸೋಮ ಶೇಖರ್ ಖಾರ್ವಿಯವರ ಈ ಸಾಧನೆಗೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಅಭಿನಂದನೆಕೋರಿದ್ದಾರೆ.
Category: ನಮ್ಮ ಕುಂದಾಪುರ
ನಮ್ಮ ಕುಂದಾಪುರ
ಸಾಹಿತಿ ಜಗದೀಶ್ ದೇವಾಡಿಗ ಉಪ್ಪುಂದ ರವರಿಗೆ “ಕಣವಿ ಕಾವ್ಯ” ಪ್ರಶಸ್ತಿ ಪ್ರದಾನ
ಕುಂದಾಪುರ (ಜು,23): ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಫೌಂಡೇಶನ್ ಕರ್ನಾಟಕ ಸಹಯೋಗದಲ್ಲಿ ಆಯೋಜಿಸಲಾದ ಧಾರವಾಡ ನುಡಿಸಡಗರ ಕಾರ್ಯಕ್ರಮದಲ್ಲಿ ಸಾಹಿತಿ ಜಗದೀಶ್ ದೇವಾಡಿಗ ಉಪ್ಪುಂದ ಅವರಿಗೆ ಕರ್ನಾಟಕ ವಿವಿ ಕುಲಪತಿ ಪ್ರೊ.ಕೆ.ಬಿ ಗುಡಸಿ ಅವರು ಕಣವಿ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರೋ.ನಿಜಲಿಂಗಪ್ಪ ಮಟ್ಟಿಹಾಳ , ಧಾರವಾಡದ ಕನಕ ಅಧ್ಯಯನ ಪೀಠದ ಕ.ವಿ.ವಿ ಮುಖ್ಯಸ್ಥ ಡಾ.ಆರ್.ಸಿ.ಹಿರೇಮಠ,ಗದಗ ಡಾ.ವಿ.ಬಿ.ಪ್ರತಿಷ್ಠಾನ ಅಧ್ಯಕ್ಷ ಡಾ.ವಿ.ವಿ.ಹಿರೇಮಠ ,ಹಿರಿಯ ಸಾಹಿತಿ ಸುರೇಶ್ ಕೋರಕೊಪ್ಪ ಬೆಳಗಾವಿ,ಧಾರವಾಡದ […]
ಡಾ. ಗೋವಿಂದ ಬಾಬು ಪೂಜಾರಿ ಯವರಿಗೆ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಪ್ರದಾನ
ಕುಂದಾಪುರ( ಜೂ30): ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ 111ನೇ ಜನುಮದಿನದ ಸಂಭ್ರಮದ ಅಂಗವಾಗಿ ಶ್ರೀ ಸಿದ್ಧಾರ್ಥ ಎಜುಕೇಷನ್ ಸೊಸೈಟಿ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ನೀಡುವ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2020ಯನ್ನು ಡಾ. ಗೋವಿಂದ ಬಾಬು ಪೂಜಾರಿ ಅವರಿಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. […]
ಲಡಾಕ್ ಗೆ ಪ್ರಯಾಣಿಸಿದ ಜಿತೇಂದ್ರ್ ಕುಮಾರ್ ಕೊಲ್ಲೂರು
ಜೀವನದಲ್ಲಿ ಪ್ರತಿನಿತ್ಯ ಹಲವಾರು ಸವಾಲುಗಳನ್ನು ಎದುರಿಸುವುದು ನೋಡಿರುತ್ತೇವೆ ಹಾಗೆ ಪ್ರತಿಯೊಬ್ಬ ಬೈಕ್ ಸವಾರರಿಗೂ ಲಡಾಕ್ ಗೆ ಪ್ರಯಾಣ ಬೆಳೆಸೋದು ಒಂದು ಅತಿದೊಡ್ಡ ಕನಸು. ಆ ಕನಸನ್ನು ನನಸು ಮಾಡಲು ಹೊರಟ ನಮ್ಮೂರ ಹುಡುಗ ಜಿತೇಂದ್ರ್ ಕುಮಾರ್ ಕೂಡ ಒಬ್ಬರು. ವೃತ್ತಿಯಲ್ಲಿ ವಕೀಲ. ಶಿಕ್ಷಣ ಮುಗಿಸಿರುವ ಇವರು ಈಗಾಗಲೇ ಯ್ಯೂಟ್ಯೂಬ್ ನಲ್ಲಿ ಹಲವಾರು VLOG ವಿಡಿಯೋಗಳ ಮೂಲಕ ಮನೆ ಮಾತಾದವರು. ಎಲ್ಲಾ ವಿಡಿಯೋದಲ್ಲು ಕುಂದಾಪ್ರ ಕನ್ನಡದಲ್ಲಿ ಮಾತಾಡೋದು ಇವರ ವಿಶೇಷ. ಕುಂದಾಪುರದ […]
ಚಿಟ್ಟೆ ನಾಟಕ ಪ್ರದರ್ಶನಕ್ಕೆ ಮನಸೋತ ಪ್ರೇಕ್ಷಕ ವರ್ಗ
ಬೇಲೂರು ರಘುನಂದನ್ ಸರ್ ರವರ ರಚನೆಯ, ಕೃಷ್ಣಮೂರ್ತಿ ಕವತ್ತಾರ್ ಸರ್ ರವರ ನಿರ್ದೇಶನದಲ್ಲಿ, ನನ್ನ ಪುಟ್ಟ ಗೆಳೆಯ ಗೋಕುಲ ಸಹೃದಯ ನಟಿಸಿರುವ ನಾಟಕ ಚಿಟ್ಟೆ. ಈ ನಾಟಕ ರಚನೆಯಾಗಿ ಪ್ರದರ್ಶನ ಗೊಳ್ಳಲು ಪ್ರಾರಂಭವಾಗಿ ಸುಮಾರು ಒಂದೂವರೆ ವರ್ಷಗಳೇ ಆಗಿರಬಹುದು ಎಂದು ಭಾವಿಸುತ್ತೇನೆ.ಇಂದು ಕರಾವಳಿ ಭಾಗದಲ್ಲಿ ಈ ನಾಟಕದ ಪ್ರದರ್ಶನಗಳು ಆಯೋಜನೆಗೊಂಡಿದ್ದು ಅದೆಷ್ಟೋ ದಿನಗಳಿಂದ ಈ ನಾಟಕವನ್ನು ನೋಡಲು ಅವಕಾಶ ವಂಚಿತನಾಗಿದ್ದ ನಾನು ಇಂದು ಅರೆಹೊಳೆ ಪ್ರತಿಷ್ಠಾನ, ಅರೆಹೊಳೆಯಲ್ಲಿ ಈ ನಾಟಕದ ನಲವತ್ತೈದನೇ ಪ್ರದರ್ಶನ […]
ಶ್ರಾವ್ಯಾಳ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ಡಾ. ಗೋವಿಂದ ಬಾಬು ಪೂಜಾರಿ
ಹೆಮ್ಮಾಡಿ(ಜೂ,7): ಅನಾರೋಗ್ಯದ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ವಿಶೇಷ ಸಾಧನೆಗೈದ ಕುಂದಾಪುರ ತಾಲ್ಲೂಕಿನ ಬಗ್ವಾಡಿ ಗ್ರಾಮದ ಬಗ್ವಾಡಿ ನಿವಾಸಿ ರಾಜು ಪೂಜಾರಿ ಮತ್ತು ಸುಜಾತಾ ಆರ್. ಪೂಜಾರಿ ದಂಪತಿಗಳ ಪುತ್ರಿ ಶ್ರಾವ್ಯಾ ಕರಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಇಕೆಯ ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಲು ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಮಂದೆ ಬಂದಿದ್ದಾರೆ. ಬಗ್ವಾಡಿ ಸಿಂಗನಕೊಡ್ಲುವಿನಲ್ಲಿರುವ ಶ್ರಾವ್ಯಳ ಮನೆಗೆ ಖುದ್ದಾಗಿ ಡಾ.ಗೋವಿಂದ ಬಾಬು ಪೂಜಾರಿಯವರಯ […]
ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್: ಟಿ. ಶಶಾಂಕ್ ಶೆಣೈ ಗೆ ಚಿನ್ನದ ಪದಕ
ಉಡುಪಿ(ಜೂ,5): ಬೊಡೋಕಾನ್ ಕರಾಟೆ& ಸ್ಪೋರ್ಟ್ಸ್ ಅಸೋಸಿಯೇಷನ್ ಉಡುಪಿ ಇವರು ಅಂಬಲಪಾಡಿಯಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕಿರಣ್ಸ್ ಡ್ರಾಗನ್ ಫಿಸ್ಟ್ ಮಾರ್ಷಲ್ ಆರ್ಟ್ ವಿದ್ಯಾರ್ಥಿ ಹಾಗೂ ತರಬೇತುದಾರರಾದ ಟಿ. ಶಶಾಂಕ್ ಶೆಣೈ ಸೀನಿಯರ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಕಿಯೋಶಿ ಕಿರಣ್ ಕುಂದಾಪುರ ಇವರ ಶಿಷ್ಯ ಹಾಗೂ ಗಂಗೊಳ್ಳಿ ನಿವಾಸಿ ಟಿ.ದಿನಕರ ಶ್ಯಾನುಭಾಗ್ ಮತ್ತು ಉಷಾ ದಿನಕರ್ ರವರ ಪುತ್ರ .
ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ಪ್ರತಿಭಾ ಪ್ರದರ್ಶನ ಸಂಪನ್ನ
ಕುಂದಾಪುರ (ಜೂ,5): ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2021-22 ನೇ ಸಾಲಿನ ಪ್ರತಿಭಾ ಪ್ರದರ್ಶನ ದಿನ ಜೂನ್03 ರಂದು ಕುಂದಾಪುರದ ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಸಂಪನ್ನಗೊಂಡಿತು. ಕಾಲೇಜಿನ ಅಂತರ್ ತರಗತಿ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಬಹಳ ವೈಶಿಷ್ಟ್ಯಮಯ ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮವು ಮೂಡಿ ಬಂದಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಉಮೇಶ್ ಶೆಟ್ಟಿ ಕೊತ್ತಾಡಿ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಹಾಗೂ […]
ಡಾ.ಬಿ.ಬಿ.ಹೆಗ್ಡೆ ಕಾಲೇಜು : ಪ್ರತಿಭಾ ಪ್ರದರ್ಶನ – ನೆಲದ ಕಲೆ & ಸಂಸ್ಕೃತಿಯನ್ನುಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮಮೇಲಿದೆ -ಶ್ರೀ ಭಾಸ್ಕರ ಕೊಗ್ಗ ಕಾಮತ್
ಕುಂದಾಪುರ (ಜೂ,5): ನಮ್ಮ ನೆಲೆದ ಕಲೆ ,ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ .ಆ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಅಯೋಜಿಸುವ ಮಹತ್ವಪೂರ್ಣ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷರಾದ ಶ್ರೀ ಭಾಸ್ಕರ ಕೊಗ್ಗ ಕಾಮತ್ ಹೇಳಿದರು. ಅವರು ಜೂನ್03 ರಂದು ಕುಂದಾಪುರದ ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಡಾ. ಬಿ.ಬಿ. […]
ಕಾಳಾವರ: ಎಸ್.ಎಸ್.ಎಲ್ .ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ನಿಶಾ ಜೋಗಿಗೆ ಸನ್ಮಾನ
ಕೋಟೇಶ್ವರ (ಜೂ,02): ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿಶಾ ಜೋಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ಹಿನ್ನೆಲೆಯಲ್ಲಿ ಕಾಳಾವರ ಗ್ರಾಮ ಪಂಚಾಯತ್, ಶಾಲಾಭಿವೃದ್ಧಿ ಸಮಿತಿ, ಅಧ್ಯಾಪಕ ವೃಂದ ಮತ್ತು ಗ್ರಾಮಸ್ಥರು ಕಾಳಾವರ ಸಹಭಾಗತ್ವದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಣಾಧಿಕಾರಿ ಕೆ ರಾಜೀವ ಶೆಟ್ಟಿ ಸಾಧಕ ವಿದ್ಯಾರ್ಥಿ ನಿಶಾ ಜೋಗಿಗೆ ಸನ್ಮಾನಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. […]