ಕುಂದಾಪುರ (ಜ.15): ಮಕರ ಸಂಕ್ರಾಂತಿಯಂದು ಮಾರಣಕಟ್ಟೆ ಹಬ್ಬದಲ್ಲಿ ಜರುಗಿದ ಪಾವಂಜೆ ಮೇಳದ ಯಕ್ಷಗಾನ ಬಯಲಾಟದಲ್ಲಿ ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ನಾಗರಾಜ್ ಶೆಟ್ಟಿ ನೈಕಂಬ್ಳಿ ನೇತೃತ್ವದ ಯಕ್ಷ ಸಂಕ್ರಾಂತಿಯ ‘ಕಿರೀಟ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂದಾವರ ರಘುರಾಮ ಶೆಟ್ಟಿಯವರು, ಯಕ್ಷಗಾನ ಅಮೋಘವಾದ ಕಲೆ. ದೀರ್ಘವಾಗಿ ಸಾಗಿ ಬಂದ ಈ ಕಲೆ ವಿಚಾರಶೀಲರು, ಜಿಜ್ಞಾಸುಗಳು, ಸಾಮಾನ್ಯ ಹಳ್ಳಿಯ ಜನರನ್ನೂ ತಲುಪುವ ಸಾಮರ್ಥ್ಯ ಹೊಂದಿದ ಪ್ರಭಾವಿ ಕಲೆಯಾಗಿದೆ. ಯಕ್ಷಗಾನಕ್ಕೆ […]
Category: ನಮ್ಮ ಕುಂದಾಪುರ
ನಮ್ಮ ಕುಂದಾಪುರ
ಸ್ಯಾಕ್ಸೋಫೋನ್ ವಾದಕ ಬಾಲಪ್ರತಿಭೆ ಸಂಜಿತ್ ಎಂ.ದೇವಾಡಿಗರಿಗೆ ಸನ್ಮಾನ
ಗಂಗೊಳ್ಳಿ(ಜ.5):ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ರೋಟರ್ಯಾಕ್ಟ್ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಾಲಪ್ರತಿಭೆ ಸಂಜಿತ್ ಎಂ ದೇವಾಡಿಗ ಇವರನ್ನು ಗಂಗೊಳ್ಳಿಯ ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ. ಜಿ, ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ಅರ್ಚಕರಾದ ರಘುನಾಥ ಪೂಜಾರಿ ಕಳಿಹಿತ್ಲು, ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಅಮೀಕ್ಷಾ ಡಿ ನಾಯ್ಕ್,ಸದಸ್ಯರಾದ ದೀಕ್ಷಾ, ಶ್ರೇಯಾ, ತ್ರಿಷಾ, ಪೂಜಾ, ಸುಷ್ಮಾ, […]
ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್, ಪೋಸ್ಟರ್, ಟ್ರೈಲರ್ ಮತ್ತು ಹಾಡು ಬಿಡುಗಡೆ
ಬಸ್ರೂರು(ಜ.3): ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ರೊನಾಲ್ಡ್ ಲೋಬೊ ನಿರ್ದೇಶನದ ಕರಾವಳಿಯ ಯುವ ಪ್ರತಿಭೆಗಳನ್ನೊಳಗೊಂಡ ಆ 90 ದಿನಗಳು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ಟೈಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಜ.02 ರಂದು ಗುಲ್ವಾಡಿಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ,ನಾಡೋಜ ಡಾ. ಜಿ ಶಂಕರ್ ,ಖ್ಯಾತ ಚಲನಚಿತ್ರ ನಿರ್ದೇಶಕ,-ನಟ ರಿಷಬ್ ಶೆಟ್ಟಿ ,ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ,ಹಿರಿಯ ನ್ಯಾಯವಾದಿ […]
ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ 2022 ರ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ
ಕೋಟ (ಡಿ,23): ಯಕ್ಷಗಾನ ವಿದ್ವಾಂಸ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ರಂಗನಟ, ಸಾಹಿತಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ 2022 ರ ಪ್ರಶಸ್ತಿಯನ್ನು ಯಕ್ಷಗಾನ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ ಪ್ರದಾನ ಮಾಡಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ ಉಡುಪ, ಮಂದಾರ್ತಿ ಅಧ್ಯಕ್ಷ ಬಲರಾಮ ಕಲ್ಕೂರು, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂಡ ಸಮಿತಿ ನಿರ್ಧರಿಸಿದೆ. ಬಡಗು ತಿಟ್ಟಿನ ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ, ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ, ಸೌಕೂರು […]
•••ಅವಳೆಂದರೆ•••
ನಾ ಹೇಗೆ ವರ್ಣಿಸಲಿ ನಿನ್ನ ಪುಸ್ತಕ ಪೆನ್ನುಗಳಿಗೆ ಸೀಮಿತವೇ … ನಿನ್ನೆಲ್ಲಾ ಅನುರಣನ ನೆನಪುಗಳು..? ನಾಲ್ಕು ಸಾಲು ಗೀಚಿದರೆ ಮುಗಿಯಿತೇ ನಮ್ಮೆಲ್ಲ ಸ್ನೇಹ ಸಂಬಂಧಗಳು….?? ತಡಕಾಡುವುದೀ ಮನ ಹೊಸ ಪದ ಹುಡುಕಲು…. ಮಿಡಿಯುವುದೀ ಕ್ಷಣ ನಿನ್ನತನವ ಗುರುತಿಸಲು…. ನಾ ಹೇಗೆ ಬರೆಯಲಿ ಹೇಳು….. ಪದಕಡಲ ಸಾಮ್ರಾಜ್ಞಿ ನೀನು…. ಪದ ಪೋಣಿಸುವ ತಿರುಕ ನಾನು…. ಒಮ್ಮೊಮ್ಮೆ ಯೋಚಿಸುವೆ ನಿನ್ನ ನೆರಳ … ಚಿತ್ರಿಸುವ ಕಲಾಕಾರ ನಾನು…. ಚಿತ್ರಭಂಡಾರವೇ ನೀನಾಗಿರುವಾಗ ನಾನೆಷ್ಟು ಗೀಚಲಿ ಹೇಳುನಿನ್ನ […]
ಆಚ್ಲಾಡಿ ಗ್ರಾಮದ ಸೊಬಗು
ಕನ್ನಡ ಕರಾವಳಿ ಪ್ರಕ್ರತಿಯ ರಮಣೀಯ ತಾಣ. ಒಂದೆಡೆ ಪಶ್ಚಿಮ ಘಟ್ಟದ ಸಾಲಾದರೆ, ಇನ್ನೊಂದೆಡೆ ಕಡಲ ಕಿನಾರೆ ಕರಾವಳಿಗೆ ಸಾಕಷ್ಟು ಮೆರುಗು ನೀಡಿದೆ. ಸದಾ ಹಸಿರುಟ್ಟ ಭೂತಾಯಿ ಇಲ್ಲಿ ಸಂತಸದ ನಗೆ ಬೀರುತ್ತಿದ್ದಾಳೆ. ವಿದ್ಯಾ ದೇವತೆ ಕೂಡ ಇಲ್ಲಿ ಪ್ರಸನ್ನಳಾಗಿದ್ದಾಳೆ ಎನ್ನುವುದು ಹೆಮ್ಮೆ ವಿಷಯ . ಇಂತಹ ಪುಣ್ಯ ಭೂಮಿಯಲ್ಲಿನ ಜನ ಅನಾದಿ ಕಾಲದಿಂದಲೂ ದೈವ ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಉಡುಪಿ ಹಾಗೂ ದಕ್ಷಿಣ ಕನ್ನಡ ಹತ್ತು ಹಲವು ಪುರಾತನ […]
ಶ್ರೇಷ್ಠ ಆರ್ ಶೇಟ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಗಂಗೊಳ್ಳಿ(ನ ,30) : ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ನಡೆಸಲ್ಪಡುವ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿನ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೇಷ್ಠ ಆರ್ ಶೇಟ್ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಹೆಮ್ಮಾಡಿ:ಮನೆ ಮನೆ ಭಜನೆ ಕಾರ್ಯಕ್ರಮ
ಹೆಮ್ಮಾಡಿ(ನ,28): ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ, ವಂಡ್ಸೆ ವಲಯ ಭಜನಾ ಒಕ್ಕೂಟ ಹಾಗೂ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಹೆಮ್ಮಾಡಿ ಸಹಯೋಗದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಹೆಮ್ಮಾಡಿ ಯವರ 20 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮನೆ ಮನೆ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನೆ ಮನೆ ಭಜನೆ ಶ್ರೀ ರಾಮನಾಮ ಹರಿ ಸ್ಮರಣೆ, 108 ಮನೆಯಂಗಳದಲ್ಲಿ ಭಜನಾ ಕಾರ್ಯಕ್ರಮ ಮತ್ತು ಭಜನಾ ತಾಳ […]
ಗ್ರಾಮ ವಿಕಾಸ ಸಮಿತಿ ಪಡು ಗೋಪಾಡಿ : ಮನೆ ಮನೆ ಭಜನೆ ಕಾರ್ಯಕ್ರಮ
ಗೋಪಾಡಿ(ನ,25): ಗ್ರಾಮ ವಿಕಾಸ ಸಮಿತಿ ಪಡು ಗೋಪಾಡಿ ಆಯೋಜನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕುಟುಂಬ ಪ್ರಬೋಧನ ಪ್ರಮುಖ್ ಗುರುರಾಜ್ ರಾವ್. ಕೋಟೇಶ್ವರ ರವರು ಇತ್ತೀಚೆಗೆ ಚಾಲನೆ ನೀಡಿದ್ದು, ಭಜನೆಯ ಮೂಲಕ ಜನರಲ್ಲಿ ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ಉದ್ದೀಪನಗೊಳಿಸುವ ನೆಲೆಯಲ್ಲಿ ಗೋಪಾಡಿ ಪಡು ಗ್ರಾಮ ವಿಕಾಸ ಸಮಿತಿಯ ಸಂಚಾಲಕ ಸುರೇಂದ್ರ ಸಂಗಮ್ ರವರ ನೇತೃತ್ವದಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಯಾವುದೇ ರೀತಿಯ ಹಣ […]
ಸಿಎಸ್ಇಇಟಿ ಪರೀಕ್ಷಾ ಫಲಿತಾಂಶ: ಡಾ. ಬಿ.ಬಿ. ಹೆಗ್ಡೆ ವಿದ್ಯಾರ್ಥಿಗಳ ಉತ್ಕ್ರಷ್ಟ ಸಾಧನೆ
ಕುಂದಾಪುರ(ನ,25): ಇತ್ತೀಚೆಗೆ ನಡೆದ ಸಿ.ಎಸ್.ಇ.ಇ.ಟಿ. ಪರೀಕ್ಷೆಯಲ್ಲಿ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು 87% ಫಲಿತಾಂಶ ಪಡೆದಿದ್ದಾರೆ. ಒಟ್ಟು 23 ವಿದ್ಯಾರ್ಥಿಗಳು ಸಿ.ಎಸ್. ಪರೀಕ್ಷೆ ಬರೆದಿದ್ದು 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಇದರ ಅಧ್ಯಕ್ಷರು ಹಾಗೂ ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿಯವರು ಶುಭ ಹಾರೈಸಿದರು. ದ್ವಿತೀಯ ಬಿ.ಕಾಂ.ನ ತೇಜಸ್ 84.5% ಹಾಗೂ ಧ್ವನಿ ಶೆಟ್ಟಿ 84.5% ಅಂಕಗಳೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, […]










