ಚಂದಿರನ ಬೆಳಕಿನಲಿ ತಾರೆಗಳ ನಡುವಿನಲಿಸುಂದರಿಯ ಹಾಗೆ ಬಂದೆ ನನ್ನೆದೆ ಬಾಂದಳದಲಿಒಲವಿನ ಉಡುಗೊರೆಯ ಮುತ್ತಿನಮಾಲಿಕೆಯುನುಣುಪಾಗಿ ಪೋಣಿಸಿ ಕೊರಳಲಿ ಜಾರಿಸಿ ಬೆಳದಿಂಗಳಿಗೊಂದು ಹೆಣ್ಣಾಗಿ ಬಂದಂತೆ ಕಂಡೆಧರೆಗಿಳಿದ ದೇವತೆಯಾಗಿ ನನ್ನ ಎದುರಲಿ ನಿಂದೆನಕ್ಷತ್ರ ಲೋಕದ ಪಾರಿಜಾತದ ಸುಮವುಹುಣ್ಣಿಮೆಯ ಬೆಳಕಿನಲಿ ಬಾನಿಗೆ ಜಾರಿರುವೆ ಅಮೃತ ಸುಧೆಯ ಜರಿಯಾರೆಯ ನಾರಿಎಂದಿಗೂ ನೀ ಸರಿಯದಿರು ನನ್ನ ಕೈ ಜಾರಿತೂಗುಯ್ಯಾಲೆಯಲಿ ಜೋಕಾಲಿಯಾಡುತಾನಿನ್ನಲ್ಲಿ ಪವಡಿಸುವೆ ತಾರೆಗಳ ಜೊತೆಯಾಡುತಾ ಸೌಭಾಗ್ಯ ಲಕ್ಷ್ಮಿಯ ಅವತಾರದ ಪ್ರತೀಕ ಹೆಣ್ಣುಹೃದಯಂಗಳಕೆ ಜಾರಿರುವೆ ಹೊತ್ತು ನೀ ಹೊನ್ನುಪ್ರೀತಿಯ ಮಹಲಿನಲಿ […]
Category: ಕವನ/ಹನಿಗವನ
ಹುಡುಕಾಟ
ಹುಟ್ಟು ಹುಡುಗಾಟದಿಂದ ಹುಟ್ಟಿಕೊಂಡ ಹುಚ್ಚು ಈ ಹುಡುಕಾಟ, ಕಟ್ಟಿದ ಕನಸುಗಳಿಗೆ ಕಟ್ಟೆಯ ಕಟ್ಟಲು ಗಟ್ಟಿಯ ರಟ್ಟೆಗಾಗಿ ಹುಡುಕಾಟ, ಹೊಟ್ಟೆಯೆಂಬ ಪಟ್ಟಣವಾಸಿಗಳ ಹೊಟ್ಟೆಯ ಹೊರೆಯಲು ತುತ್ತಿನ ಪೊಟ್ಟಣಕ್ಕಾಗಿ ಹುಡುಕಾಟ, ಬೆಟ್ಟದಷ್ಟಿರುವ ಕಷ್ಟವ ಕುಟ್ಟಿ ಪುಡಿಗೈಯುವ ಬಲಿಷ್ಠ ಆ ಮುಷ್ಟಿಗಾಗಿ ಹುಡುಕಾಟ, ಸೃಷ್ಟಿಯ ಸೌಧದ ಮೆಟ್ಟಿಲ ಮೇಲೆ ನಿಂತು ಹಾಯಿಸಿದ ದೃಷ್ಟಿ ಆ ಸೃಷ್ಟಿಕರ್ತನಿಗಾಗಿ ಹುಡುಕಾಟ. #ಏನೇ_ಹೇಳಿ, ಸದಾ ನನ್ನನ್ನೇ ನಾ ಹುಡುಕಿಕೊಳ್ಳುವ #ಪಾಗಲ್ ಆಗದೆ, ಅನ್ಯರ ಅನಿಸಿಕೆ, ಅನುಮಾನಗಳ ಹುಡುಕಿ ಬಗೆಹರಿಸುವ […]
ಭಾರತ್ ಮಾತಾಕಿ ಜೈ
ನಿನ್ನಯ ಮಡಿಲಿನಲ್ಲಿ ನೆತ್ತರ ಮಡುವಿನಲ್ಲಿ ಮಲಗಿದ್ದಾಗಲೂಅರಿಗಳಾಡುವ ಪ್ರಶ್ನೆಗೆ ಗುಡುಗುಡುಗಿ ನೀಡುವ ಉತ್ತರವೊಂದೆ “ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಎಂದೆ” ಭಾರತ್ಮಾತಾಕೀ_ಜೈ . . . .🇮🇳 Feb_14_2019 #Pulwama_Attack 🙁
Net – Work
Net – Work ಕಟ್ಟು ಪಾಡುಗಳ ನಡುವೆ ಬದುಕು ಕಟ್ಟುವ ಪಾಡು ಪೆಟ್ಟುಗಳ ನಡುವೆ ಪಟ್ಟು ಬಿಡದೆ ಕಟ್ಟುವ ಗೂಡು ದಿಟ್ಟವಾಗಿ ಅಟ್ಟದಿ ಕುಳಿತು ಮೌನದಿ ಹಾಡುವ ಹಾಡು #ಏನೇ_ಹೇಳಿ, ಒಟ್ಟು ಇಷ್ಟ ಕಷ್ಟ ನಷ್ಟಗಳ ನಡುವೆ ನಡೆಯುವುದು ಸಂತುಷ್ಟ ಜೀವನದ ಹೊಟ್ಟೆಪಾಡು . #Say_Whatever, Life Is a ” Net – Work ” . . . . 🕸️
ನೆನಪಾಗುವೆ ಮತ್ತದೆ ಸಂಜೆಯಲಿ
ಕಾಡುತಿದೆ ಮನ ನಿನ್ನ ಮಮತೆಯ ಸ್ಪರ್ಷವನುಬಯಸುತಿದೆ ಒಡಲು ನಿನ್ನ ಆ ಕೖೆ ತುತ್ತನುಕಣ್ಗಳರಸುತಿವೆ ನಿನ್ನ ಬೆಲೆಬರಿತ ಇರುವಿಕೆಯನುನೆನಪಾಗುತಿದೆ ನೀನು ಮತ್ತೆ ಮತ್ತೆ ಬೖೆಯ್ದ ಬಯ್ಗುಳ, ಬಾಯ್ತುಂಬ ಕರೆಯುತಿದೆಹೊಡೆದ ಕೖೆಗಳು, ಕೖೆ ಮುಗಿದ ಬೇಡುತಿದೆಹರಿದ ಸೀರೆಯನ ನಿನುಟ್ಟು, ಶುಭ್ರ ಅಂಗಿಯ ನನಗ್ಹಾಕಿನನ್ನ ಮೊಗದಿ ನಗು ಕಂಡು ನಕ್ಕಿದ್ದೆ ನೀನು ನೆನಪಾಗುವೆ ನೀನು ಮತ್ತೆ ಮತ್ತೆನೀನೂಣಿಸಿದ ನಿನ್ನ ಆ ಕೈಗಳುನೀ ತೊರಿಸಿದ ಆ ನೀಲಿ ಪಕ್ಷಿಗಳುತಿಳಿಯ ಬಾನಲಿ ಸ್ವಾಗತಿಸಿದ ಬಣ್ಣಗಳುನೆನಪಾಗುವೆ ನೀನು ಮತ್ತದೆ […]
ಕೃಷ್ಣಂ ವಂದೇ ಜಗದ್ಗುರುಂ
ಎಲ್ಲ ಲೀಲೆಯೂ ನಿನಗೆ ಸ್ವಂತನೀನೇ ಸತ್ಯ ನೀನೇ ನಿತ್ಯ ನೀನೆ ಅನಂತ ಬಾಯಲ್ಲಿ ಬ್ರಹ್ಮಾಂಡ ತೋರಿದವನುನೀನಲ್ಲವೇ ಕೃಷ್ಣಗೀತೆಯ ಸಾರವನ್ನು ಭೋದಿಸಿದವನೀನಲ್ಲವೇ ಕೃಷ್ಣ ಇಂದ್ರನ ಸೊಕ್ಕಡಗಿಸಿದಗೋವರ್ಧನ ಧಾರಿ ಶ್ರೀಕೃಷ್ಣಕಾಳಿಂಗನ ಮರ್ಧಿಸಿದಮುಕುಂದ ಮುರಾರಿ ಕೃಷ್ಣ ಕೃಷ್ಣ ಕೃಷ್ಣ ನೀ ಎಂಡೆಜೀವಂಡೆ ತುಡಿಪಾನ್ ಕೃಷ್ಣ..ಶ್ರೀಕೃಷ್ಣ ಸುಧಾಮನ ಪ್ರಿಯಮಾಧವನೀನಲ್ಲವೇ ಕೃಷ್ಣಪಾಂಡವರ ಕುಲಬಾಂಧವನೀನಲ್ಲವೇ ಕೃಷ್ಣ ರಾಧೆಯ ಮನದರಸಬೃಂದಾವನ ಕೃಷ್ಣರುಕ್ಮಿಣಿಯ ವರಿಸಿದವಗೋಕುಲದ ಕೃಷ್ಣ ವಸುದೇವ ದೇವಕಿ ದಂಪತಿಯಸುಪುತ್ರ ನೀನೆ ವಟಪತ್ರ ಕೃಷ್ಣವಿಷವುಣಿಸಲು ಬಂದ ಪೂತನಿಯಕೊಂದವ ನೀನೆ ಬೆಣ್ಣೆಕೃಷ್ಣ ಕೃಷ್ಣ […]
ಹೀಗೊಂದು ಪ್ರೇಮ ಕವನ
ಉಳಿದದ್ದು ನೆನಪು ಮಾತ್ರ,ಉಳಿಯದ ಅವಳ ಪ್ರೀತಿಯಲಿ.ಉಳಿದದ್ದು ನೋವು ಮಾತ್ರ,ಮರೆಯದ ಅವಳ ನೆನೆಪಿನಲ್ಲಿ. ಖಾಲಿ ಕಿಸೆಯಿದ್ದರೂ ಆಗ,ನೀಲಿ ಬಾನೆತ್ತರದ ಕನಸುಗಳು.ಜಾಲಿ ಮುಳ್ಳುಗಳೀಗ ನೆನಪು,ಕಿಸೆತುಂಬಿದ್ದರೂ ಮನಸು ಬರಿದು. ಎಲ್ಲಿ ಮರೆಯಾಗುವೆಯೋ ನೀನುಹಂಚಿಕೊಂಡರೆ ಪ್ರೀತಿ.ಹೇಳಲಾಗದ ಧೈರ್ಯ,ಕಳವಳದ ಮನಸ್ಸಿಗೆ ಒಂದೇ ಭೀತಿ. ಅಂದು ನನ್ನದು ಬರೀ ಮೌನ.ಆಡಬೇಕಿದ್ದ ಮಾತುಗಳುಇಂದಾಗುತ್ತಿದೆ ಕವನ.ಕ್ಷಮಿಸಿಬಿಡು ನನ್ನನ್ನ. – ನಾಗು
ಉಸಿರಾಗಲೇ ನಿನಗೆ…!?
ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? ನಿನ್ನ ಬೆರಳ ತುದಿಯಲ್ಲಿ ಲಿಪಿಯಾಗಲೇನಿನ್ನ ಕೊರಳ ಒಂಪಲ್ಲಿ ಸ್ವರವಾಗಲೇಮಳೆ ಬರುವ ದಾರಿಯಲಿ ಹಸಿರಾಗಲೇಹೂಬಿರಿವ ನಗುವಲ್ಲಿ ಕಂಪಾಗಲೇ…? ಇಂಪಾಗಿ ಸೊಂಪಾಗಿ ತಂಪಾಗಲೇಇಂಚಿಂಚು ಮಿಂಚಾಗಿ ಹರಿದಾಡಲೇಕಡಲಲ್ಲಿ ಅಲೆಯಾಗಿ ದಡ ತಬ್ಬಲೇಲತೆಯಂತೆ ಮೈಚಾಚಿ ನಿನ್ನ ಹಬ್ಬಲೇ…? ನೀ ಮುಂದೆ ನಡೆವಾಗ ನೆರಳಾಗಲೇನಾಚಿಕೆಯ ಲಹರಿಯಲಿ ನದಿಯಾಗಲೇಮಡಿಲಲ್ಲಿ ಮೈಮರೆತು ಮಗುವಾಗಲೇನಿನ್ನೆದೆಯ ಚೈತ್ರಕ್ಕೆ ಉಸಿರಾಗಲೇ…? ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? – ಆಕಾಶ ಮಲ್ಲಿಗೆ










