ಕೆಲವು ದಿನಗಳಿಂದ ಕರಾವಳಿಯ ಉದ್ದಗಲಕ್ಕೂ ಸೋಷಿಯಲ್ ಮಿಡಿಯಗಳಲ್ಲಿ ಯುವಕನ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ… ಸುದ್ದಿ ವಾಹಿನಿಗಳು ಕೂಡ ಸುದ್ದಿಯಲ್ಲಿ ಹಂಚಿ ಕೊಂಡವು..ಅಷ್ಟೊಂದು ವೈರಲ್ ಆಯ್ತು ಆ ಒಂದು ಹಾಡಿನ ವಿಡಿಯೋ…ಯಾವ ಹಾಡು ಇರಬಹುದು?ಸಿನಿಮಾ ಹಾಡು ಇರಬಹುದು ಅನ್ಕೊಂಡ್ರ !ಹಾಗಂದು ಕೊಂಡ್ರೆ ನಿಮ್ಮ ಊಹೆ ತಪ್ಪು. ಅದೊಂದು ರಾಮನ ಭಜನೆ. ರಾಮ ಮಂತ್ರವ ಜಪಿಸಿ … ಪಾಪವ ಕಳೆಯೋಣ ಎನ್ನುವ ರಾಮ ನಾಮ ಸ್ಮರಣೆಯ ಆ ಹಾಡನ್ನು ಒಟ್ಟಾರೆ 10 […]
Category: ಲೇಖನ
ಶಿಶಿರ್ ಸುವರ್ಣ : ಶಿಖರದಷ್ಟೇ ಅಚಲ – ಸುವರ್ಣದಷ್ಟೇ ಮೆರುಗಿನಂತಹ ಪ್ರಖರ ವ್ಯಕ್ತಿತ್ವ
ಕಳೆದ ಅಕ್ಟೋಬರ್ 10, 2020 ರಿಂದ ಆರಂಭಗೊಂಡು ಜನವರಿ 15, 2021ರ ವರೆಗೂ ನಡೆದ ಇಂಡಿಯನ್ ಏರ್ ಫೋರ್ಸ್ ನ ಔದ್ಯೋಗಿಕ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಡೆದ ಎರಡು ಹಂತದಲ್ಲಿನ ( Phase 1: Physical, Written. Phase 2; GD, Psychological and Medical Test) ವಿವಿಧ ಪರೀಕ್ಷೆಗಳಲ್ಲಿ ಸಫಲರಾಗಿ ಇಂಡಿಯನ್ ಏರ್ ಫೋರ್ಸ್ ನ ಏರ್ ಮನ್ (ಟೆಕ್ನಿಕಲ್) ಹುದ್ದೆಗೆ ಆಯ್ಕೆಯಾಗಿ, ಪ್ರಸ್ತುತ ಬೆಳಗಾಂನಲ್ಲಿ ತರಬೇತಿಯಲ್ಲಿರುವ ಶಿಶಿರನ […]
ಬಾಲ್ಯದ ಗೆಳತಿ
ಬಾಲ್ಯದ ಗೆಳತಿಮಳೆಗಾಲದ ಸಮಯ….ಶಾಲೆಯ ಮೊದಲ ದಿನ. ಅಮ್ಮ ನನಗೆ ಸಮವಸ್ತ್ರ ತೊಡಿಸಿ, ರೆಡಿ ಮಾಡಿಸಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಳು. ಮನಸ್ಸಿನಲ್ಲಿ ತುಂಬಾ ಭಯ ಮತ್ತು ಕಳವಳ. ನನ್ನ ಹಾಗೆ ಎಲ್ಲಾ ಮಕ್ಕಳು ಶಾಲೆಗೆ ಬರುತ್ತಿದ್ದರು. ಕೆಲವರು ಅಳುತ್ತಿದ್ದರು, ನನಗೆ ಭಯ, ಅತ್ತರೆ ಅಮ್ಮ ಬೈಯುತ್ತಾರೆಂದು. ಬೆಂಚಿನ ಮೇಲೆ ಹೋಗಿ ಕುಳಿತೆ. ಅಮ್ಮ ಮನೆಗೆ ಹೋಗುದನ್ನು ನೋಡಿ ಉಸಿರು ಬಿಗುವಾಯಿತು, ಕಣ್ಣಲ್ಲಿ ನೀರು ತುಂಬಿಬಂತು. ತಕ್ಷಣ ಅಮ್ಮನ ಹಿಂದೆ ಓಡಬೇಕೆಂದುಕೊಂಡೆ! ಧೈರ್ಯ […]
ಸಾಮಾಜಿಕ ಜವಾಬ್ದಾರಿ
ಸಾಮಾಜಿಕ_ಜವಾಬ್ದಾರಿ ಸಮಾಜದಲ್ಲಿ ಸಕಲ ಜೀವಿಗಳೊಂದಿಗೆ ಸಹಬಾಳ್ವೆಯಿಂದ ಬಾಳುವ ಪಾಠವನ್ನು ಕಲಿತ ಪ್ರತಿ ಒಬ್ಬ ವ್ಯಕ್ತಿಯೂ ‘ಸಂಘ’ಜೀವಿ. ತನ್ನ ಬದುಕು ತನಗಲ್ಲ ಅದು ಲೋಕದ ಹಿತಕೆ, ತನಗಾಗಿ ಮಾಡಿದ್ದು ತನ್ನೊಂದಿಗೆ ಮುಗಿದುಹೋಗುವುದು ಪರರಿಗಾಗಿ ದುಡಿದಿದ್ದು ತನ್ನ ನಂತರವೂ ಇರುವುದೆಂಬ ‘ಸಂಘ’ಜೀವನದ ಆದರ್ಶ ಬದುಕಿಗೆ ಹಿರಿಯರು ಬೋದಿಸಿದ ‘ವಿವೇಕ’ವಾಣಿ. ಕೊಡುಕೊಳ್ಳವಿಕೆಯ ಸಾಮಾಜಿಕ ವ್ಯವಹಾರದಲ್ಲಿ ಸಮಾಜ ನಮಗೆ ನೀಡಿದ ಉಡುಗೊರೆಗಳ ಮುಂದೆ ನಮ್ಮ ಕೊಡುಗೆಗಳು ಅತ್ಯಂತ ಅಲ್ಪ. ಎಷ್ಟೇ ಸಪ್ಪೆ ನೀರು ಸುರಿದರೂ ಸಮುದ್ರದ […]
ಆ ದಿನ ರಾತ್ರಿ
ಆ ದಿನ ರಾತ್ರಿ ಸಮಯ 10 ಗಂಟೆ… ಊಟ ಮಾಡಿ ಮನೆಯವರೆಲ್ಲರೂ ನಿದ್ದೆಗೆ ಜಾರುತ್ತಿದ್ದ ಸಮಯ… ನಿದ್ದೆಗೆ ಜಾರಿದ ಸ್ವಲ್ಪ ಹೊತ್ತಿನಲ್ಲಿ ದೇಹದ ಉಸಿರಾಟದಲ್ಲಿ ಏರಿಳಿತವಾದ ಅನುಭವವಾಯಿತು.. ಸ್ವಲ್ಪ ಹೊತ್ತು ಎದ್ದು ಕೂತು ಮತ್ತೆ ಮಲಗಿದೆ.ಆದರೂ ಉಸಿರಾಟ ಅಸಹಜವಾಗಿತ್ತು. ಇನ್ನೆನೂ ಉಸಿರೆ ನಿಂತಂತೆ ಭಾಸವಾಯಿತು.. ಅಯ್ಯೋ ದೇವರೆ .. ಇದೆಂತ ದುರ್ವಿಧಿ.. ನನಗೆನಾದರೂ ಕರೋನಾ ಸೋಂಕು ತಗುಲಿತೆ ಎಂದು ಭ್ರಮಿತನಾದೆ.ನನ್ನಿಂದಾಗಿ ಮನೆ ಮಂದಿಯೆಲ್ಲಾ ಸಂಕಷ್ಟಕ್ಕೆ ಸಿಲುಕಿದರೆಂಬ ಭಯ ಕಾಡತೊಡಗಿತು. ಭವಿತವ್ಯದ […]
ಅ(ಸ)ಬಲೆ
ಆಕೆ ನನ್ನಂತೆ ಕನಸು ಕಂಡಿರಬಹುದಲ್ಲವೇ,ರೆಕ್ಕೆ ಬಿಚ್ಚಿ ಹಾರಾಡೋ ಕನಸು, ಯಾರ ಪರಿವಿಲ್ಲದೇ ಗುನುಗಾಡೋ ಮನಸು ಆಕೆಗೂ ಇದ್ದಿರಬಹುದಲ್ಲವೇ!ಆದರೆ ಇಂದು ಇನ್ನೊಬ್ಬರ ಖುಷಿಯಲಿ ತನ್ನ ಕನಸನ್ನು ಕಾಣುತಿರುವಳಷ್ಟೇ. ಚಿಕ್ಕ ಪುಟ್ಟ ವಿಷಯಕ್ಕೂ ಕೂಗಾಡೋ ನಮ್ಮ ಪರಿಸ್ಥಿತಿಗೆ ,ಕೋಪ ಆಕೆಗೂ ಬರುವುದೇ ಎನ್ನುವುದು ಪ್ರಶ್ನೆ.ನಮ್ಮ ಕೋಪ ಕೂಗಾಡಿ ಕರಗಿದರೆ,ಆಕೆಯ ಕೋಪ ಪಾತ್ರೆಗಳ ಮೇಲೆ ತೀರಿಸಿಕೊಂಡು, ಒಬ್ಬಳೇ ನೀರ್ಜೀವ ವಸ್ತುಗಳ ಮೇಲೆ ಕೋಪ ಹೊರಗೆ ಹಾಕುತ್ತಾಳೆ. ಇನ್ನೂ ಇವಳ ಹಾಗೆ ಮಾಡಬೇಡ, ಹೀಗೆ ಮಾಡಬೇಡ […]
ಹೋಟೆಲ್ ಬದುಕು
ಹೋಟೆಲ್ ಕೆಲಸ ಎಂದಾಕ್ಷಣ ಬೇರೆ-ಬೇರೆ ರೀತಿ ಆಲೋಚನೆ ಮಾಡುವ ಜನರಿದ್ದಾರೆ. ಅದೇನೋ ಗೊತ್ತಿಲ್ಲ ಕೆಲವರು ಹೋಟೆಲ್ ಕೆಲಸ ಎಂದರೆ ಸ್ವಲ್ಪ ತಾತ್ಸಾರದಿಂದ ಕಾಣುತ್ತಾರೆ. ಅಷ್ಟೇ ಅಲ್ಲ ಚುಚ್ಚುಮಾತುಗಳನ್ನಾಡಿ ಮನ ನೋಯಿಸುತ್ತಾರೆ. ಹೆಣ್ಣು ಗಂಡಿನ ವಿಚಾರದಲ್ಲೂ ಕಡೆಗಣಿಸುವ ಮನೋಭಾವನೆಯಿಂದ ಕಾಣುತ್ತಾರೆ. ಆದರೆ ಕಡೆಗಣಿಸುವವರಿಗೆ ಅರಿವಿಲ್ಲ ಕೋಟ್ಯಂತರ ಜನರ ಜೀವನ ಇದರಿಂದ ಸಾಗುತ್ತಿದೆಯೆಂದು. ಹೌದು ಅದೆಷ್ಟೋ ಯುವಕರು ಕೆಲಸ ಹುಡುಕಿಕೊಂಡು ಊರುಗಳಿಂದ ಪಟ್ಟಣಕ್ಕೆ ವಲಸೆ ಬಂದಿರುತ್ತಾರೆ. ಆಗ ಅವರ ಕೈ ಹಿಡಿಯುವುದು ಈ […]
ಸಂಸ್ಕಾರ – ಸಂಸ್ಕ್ರತಿ
ಹೌದು ಸ್ನೇಹಿತರೇ,ಗಾಳಿಬಂದ ಕಡೆಯಲ್ಲಿ ತೂರಿಕೊಂಡು ಅತೀ ಧಾವಂತದಲ್ಲಿ ಮುನ್ನೆಡೆಯುತ್ತಿರುವ ನಾವು ಹಾಗೂ ನಮ್ಮ ಯುವ ಪೀಳಿಗೆ ಸಂಸ್ಕಾರವನ್ನು ಮರೆಯುವತ್ತ ಹೆಜ್ಜೆಗಳನ್ನಿಡುತ್ತಿದ್ದೇವೆ.. ಇಲ್ಲಿವೆ ನೋಡಿ ಸಂಸ್ಕಾರದ ಪಾಠಕೈಯಲ್ಲಿ ಕೋಟಿ ಇದ್ದರು ಗುರು ಹಿರಿಯರನ್ನು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..! ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು ಸಂಸ್ಕಾರ..! ಎಷ್ಟೇ ಆಧುನಿಕತೆಯ ಗಾಳಿ ಬೀಸಿದರು ಜಡೆಯ ತುಂಬ ಹೂವು ಸಂಸ್ಕಾರ..! ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ […]
ಬದುಕಿನ ತಲ್ಲಣ
ಬದುಕು ಎಂದರೇನು? ಇದನ್ನುತಿಳಿಯೋ ಪ್ರಯತ್ನ ಹಲವು ಬಾರಿ ಮಾಡಿದ್ದುಂಟು.ಅದೆಷ್ಟೋ ಬಾರಿ ಇನ್ನೊಬ್ಬರ ಇಷ್ಟಕ್ಕೆ , ನಮ್ಮ ಇಷ್ಟ- ಕಷ್ಟ ಬದಲಾಗುತ್ತಿದ್ದಾಗ, ನಾವು ಮಾಡುತಿರುವುದಂತೂ ಪ್ರದರ್ಶನ ಅನ್ನಿಸುವುದಂತೂ ಸತ್ಯ. ಈ ನಾಟಕವೇಕೆ? ಅಂದ ಮಾತ್ರಕೆ ಇವರೆಲ್ಲರ ಮಾತೇಕೆ ಒಪ್ಪಬೇಕು.! ಒಮ್ಮತ ಸೂಚಿಸದೇ ಹೋದರೆ?ಆಗಂತೂ, ಅವರ ಮಾತಿಗೆ, ಅಪವಾದಕ್ಕೆ ಎಲ್ಲಿ ಬಲಿಯಾಗುತ್ತೇವೆನೊ ಎನ್ನುವ ಭಯ, ಅದನ್ನು ಮೀರಿ ಒಬ್ಬಂಟಿಯಾಗಿ ಹೋರಾಡೋ ಮನಸು ಮಾಡಿದಾಗ, ಮುಂದೆ ನಿಲ್ಲೋ ಸವಾಲು ಹಲವಾರು… ನಮ್ಮ ಮಾತೇ ದಿಕ್ಕರಿಸಿರುವೇ..!?, […]
ಅಮ್ಮನ ಸೆರಗು
ಇಂದಿನ ಮಕ್ಕಳಿಗೆ ಅಮ್ಮನ ಸೆರಗಂಚಿನ ಅನುಭವ ಕಡಿಮೆ. ಏಕೆಂದರೆ ಅಮ್ಮ ಸೀರೆ ಉಡುವುದೇ ಕಡಿಮೆ. ಹಬ್ಬಕ್ಕೆ ಹಾಗೂ ಇನ್ನಿತರ ಸಭಾ ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ ಮಹಿಮೆಯೇ ಬೇರೆ. ಉಪಯೋಗವಂತೂ ಒಂದಕ್ಕಿಂತ ಒಂದು.ಬಾಲ್ಯದಲ್ಲಿ ನಮ್ಮ ಅಮ್ಮನ ಸೇರಗೆಂದರೆ ಅದೊಂದು ಖಜಾನೆ ಇದ್ದಂತೆ, ನಾವೆಲ್ಲಿಯಾದರೂ ಸಪ್ಪೆ ಮೊರೆ ಹಾಕಿದ್ದೇವೆಂದರೆ ಅಮ್ಮ ತನ್ನ ಸೀರೆಯ ಸೆರಗಿನ ತುದಿಯಲ್ಲಿದ್ದ ಆ ಖಜಾನೆ ಗಂಟನ್ನು ಬಿಡಿಸಿ ಒಂದೆರಡು ಚಿಲ್ಲರೆ […]










