ಅಕ್ಕಾ ಹೇಳೇ ಟೈಮ್ ಆಯಿತು ಆಫೀಸ್ಗೆ ಓಗಲ್ವಾ… ನನ್ ತಂಗಿ ಅನ್ನಿಸಿಕೊಂಡಿರೋ ಸುಧ್ಧ ಕನ್ನಡತಿ ಬೆಳಿಗ್ಗೆ ಬೆಳಿಗ್ಗೇನೇ ನನ್ನ ಜೀವದ ಭಾಷೆಯನ್ನು ಹೀಗೆ ಕೊಲೆ ಮಾಡ್ತಾ ಇದ್ರೆ ಅವಳನ್ನು ಸಾಯಿಸಿಬಿಡೋಣ ಅನ್ನೋವಷ್ಟು ಕೋಪ ಬರುತ್ತೆ ನನಗೆ. ಆದರೂ ಸುಧಾರಿಸಿಕೊಂಡು ಅದು ಹೇಳೇ ಅಲ್ವೇ ಏಳೇ ಅಂತ ಹೇಳೇ ಮಾರಾಯ್ತಿ, ಆಫೀಸ್ಗೆ ಓಗೋದಲ್ಲಾ ಹೋಗೋದು ಅಂತ ಅವಳ ಭಾಷೆ ತಿದ್ದಿ ನನ್ನ ಪಾಡಿಗೆ ನಾನು ನೆಮ್ಮದಿಯಾಗಿ ಇರೋ ಕೆಲಸ ಮುಗಿಸಿಕೊಂಡು ಹೊರಡೋಣ […]
Category: ಸಮಗ್ರ ಕನ್ನಡ
ಕೃಷ್ಣಂ ವಂದೇ ಜಗದ್ಗುರುಂ
ಎಲ್ಲ ಲೀಲೆಯೂ ನಿನಗೆ ಸ್ವಂತನೀನೇ ಸತ್ಯ ನೀನೇ ನಿತ್ಯ ನೀನೆ ಅನಂತ ಬಾಯಲ್ಲಿ ಬ್ರಹ್ಮಾಂಡ ತೋರಿದವನುನೀನಲ್ಲವೇ ಕೃಷ್ಣಗೀತೆಯ ಸಾರವನ್ನು ಭೋದಿಸಿದವನೀನಲ್ಲವೇ ಕೃಷ್ಣ ಇಂದ್ರನ ಸೊಕ್ಕಡಗಿಸಿದಗೋವರ್ಧನ ಧಾರಿ ಶ್ರೀಕೃಷ್ಣಕಾಳಿಂಗನ ಮರ್ಧಿಸಿದಮುಕುಂದ ಮುರಾರಿ ಕೃಷ್ಣ ಕೃಷ್ಣ ಕೃಷ್ಣ ನೀ ಎಂಡೆಜೀವಂಡೆ ತುಡಿಪಾನ್ ಕೃಷ್ಣ..ಶ್ರೀಕೃಷ್ಣ ಸುಧಾಮನ ಪ್ರಿಯಮಾಧವನೀನಲ್ಲವೇ ಕೃಷ್ಣಪಾಂಡವರ ಕುಲಬಾಂಧವನೀನಲ್ಲವೇ ಕೃಷ್ಣ ರಾಧೆಯ ಮನದರಸಬೃಂದಾವನ ಕೃಷ್ಣರುಕ್ಮಿಣಿಯ ವರಿಸಿದವಗೋಕುಲದ ಕೃಷ್ಣ ವಸುದೇವ ದೇವಕಿ ದಂಪತಿಯಸುಪುತ್ರ ನೀನೆ ವಟಪತ್ರ ಕೃಷ್ಣವಿಷವುಣಿಸಲು ಬಂದ ಪೂತನಿಯಕೊಂದವ ನೀನೆ ಬೆಣ್ಣೆಕೃಷ್ಣ ಕೃಷ್ಣ […]
ಹೀಗೊಂದು ಪ್ರೇಮ ಕವನ
ಉಳಿದದ್ದು ನೆನಪು ಮಾತ್ರ,ಉಳಿಯದ ಅವಳ ಪ್ರೀತಿಯಲಿ.ಉಳಿದದ್ದು ನೋವು ಮಾತ್ರ,ಮರೆಯದ ಅವಳ ನೆನೆಪಿನಲ್ಲಿ. ಖಾಲಿ ಕಿಸೆಯಿದ್ದರೂ ಆಗ,ನೀಲಿ ಬಾನೆತ್ತರದ ಕನಸುಗಳು.ಜಾಲಿ ಮುಳ್ಳುಗಳೀಗ ನೆನಪು,ಕಿಸೆತುಂಬಿದ್ದರೂ ಮನಸು ಬರಿದು. ಎಲ್ಲಿ ಮರೆಯಾಗುವೆಯೋ ನೀನುಹಂಚಿಕೊಂಡರೆ ಪ್ರೀತಿ.ಹೇಳಲಾಗದ ಧೈರ್ಯ,ಕಳವಳದ ಮನಸ್ಸಿಗೆ ಒಂದೇ ಭೀತಿ. ಅಂದು ನನ್ನದು ಬರೀ ಮೌನ.ಆಡಬೇಕಿದ್ದ ಮಾತುಗಳುಇಂದಾಗುತ್ತಿದೆ ಕವನ.ಕ್ಷಮಿಸಿಬಿಡು ನನ್ನನ್ನ. – ನಾಗು
ನಮ್ಮಿಬ್ರದ್ದು ಇವತ್ತು ನಿನ್ನೆಯ ಪ್ರೀತಿ ಅನ್ಕೊಂಡ್ರಾ???… ನೋ ವೇ ಚಾನ್ಸೆ ಇಲ್ಲ.
ಕೆಲಸ ಮುಗಿಸಿ ಬಂದು ಸುಸ್ತಾಗಿದ್ದ ಅಜ್ಜಯ್ಯ, ಕಾಲು ತೊಳೆದು ಚಾವಡಿ ಗೆ ಬಂದಿದ್ದರಷ್ಟೇ, ಆಗಲೇ ಬೊಬ್ಬೆ ಬಿದ್ದಿತ್ತು!!!. ಅವರೇನು ಬರಿಗೈಯಲ್ಲಿ ಮನೆಯನ್ನ ಹೊಕ್ಕಿರಲಿಲ್ಲ. ನಾಲ್ಕೈದು ಬೊಟಿ ಪ್ಯಾಕೆಟ್ಟು, ನಾಲ್ಕಾಣೆಯ ನಾಲ್ಕು ಚಾಕ್ಲೆಟ್ಟುಗಳು, ಬಲಗೈಯಲ್ಲಿ ಹಿಡಿದಿದ್ದ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಕಣ್ಣ್ ಕಣ್ಣ್ ಬಿಡುತ್ತ, ಎಡಗೈಯಲ್ಲಿ ಹಿಡಿದಿದ್ದ ಮೀನಿನ ಚೀಲದೊಂದಿಗೆ ಅಡುಗೆ ಮನೆ ಸೇರಿದ್ದವು… ನನಗೂ ಮೊದ ಮೊದಲು ಅರ್ಥ ಆಗಿರ್ಲಿಲ್ಲ. ನನ್ನನ್ನ ಯಾಕಿವನು ಇಷ್ಟು ಇಷ್ಟ ಪಡ್ತಿದ್ದಾನೆ ಅಂತ. ಈಗ್ಲೂ ಮಹಾ […]
ಅನುಬಂದ ಕಿರುಚಿತ್ರ – ಒಂದು ವಿಶ್ಲೇಷಣೆ
ಕುಂದಾಪುರದ ಡಾ|| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಅನುಬಂಧ – ಇದು ರಕ್ತದ ಸಂಬಂಧ ಎನ್ನುವ ಕಿರುಚಿತ್ರ ಇಂದು ಬಿಡುಗಡೆಗೊಂಡಿದೆ. ಒಮ್ಮೆ ಕಾಣುವ ತವಕದಲ್ಲಿದ್ದ ನಾನು ಹೊತ್ತು ಬಿಡುವು ಮಾಡಿ ನೋಡಿದೆ, ಮೊದಲರ್ಧ ಭಾಗ ನೋಡುತ್ತಿದ್ದಂತೆ ಕುತೂಹಲ ಹುಟ್ಟಿತ್ತು. ರಕ್ತದ ಅಗತ್ಯಕ್ಕೆ ಕರೆ ಬಂದ ಸಂಗತಿ ಕೇಳಿದ ಸ್ನೇಹಿತರು ನಿರ್ಲಕ್ಷಿಸಿ ಸಿನೆಮಾ ನೋಡಲು ಹೋದರೆ ಇಲ್ಲಿ ನಡೆದ ಘಟನೆಯೇ ಬೇರೆ. (ಪೂರ್ತಿ ಚಿತ್ರ ನೋಡಿದರೆ […]
ಶಿವಪುರ ಡಾಕ್ಟ್ರ್
ಕನಸು ಹೊತ್ತು ಜನಸೇವೆಗೆ ಬರುವ, ಬಂದಿರುವ ಲಕ್ಷಾಂತರ ವೈದ್ಯರಿಗೆ ಡಾ| ಪಿ.ಎಸ್. ಆಚಾರ್ಯ ರು ಜೀವಂತ ಪ್ರೇರಣೆ, ಉದಾಹರಣೆ.
ಗಣರಾಜ್ಯ ದಿನ -ಸ್ವಾವಲಂಬನೆಯ ದಿನ
ಜನವರಿ 26 – ಗಣರಾಜ್ಯೋತ್ಸವ ದಿನ. ದೇಶದ ಮೂಲಭೂತ ಶಾಸನವಾದ ಸಂವಿಧಾನ ಸೃಷ್ಟಿಯ ಸಂಭ್ರಮಾಚರಣೆಯ ದಿನ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯು ಜಾರಿಗೆ ಬಂದ ಸುದಿನ. ನಮ್ಮ ಭಾರತ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿದೆ. ಹಾಗಾಗಿ ಪ್ರತೀ ವರ್ಷ ಜನವರಿ 26ನ್ನು ಗಣರಾಜ್ಯೋತ್ಸವ ದಿನ ವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಸಂವಿಧಾನವು ನವೆಂಬರ್ 26, 1949 ರಂದು ಸಂವಿಧಾನ ರಚನಾ ಸಮಿತಿಯಿಂದ ಅಂಗೀಕಾರವಾಯಿತು. ಆದರೆ ಅದು ಜಾರಿಗೆ […]
ರಾಷ್ಟ್ರೀಯ ಮತದಾರರ ದಿನ – ಮತದಾನ ಮಹತ್ವ
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಅದರಲ್ಲೂ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರ ಭಾರತ. ಇಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ತರವಾಗಿದೆ.
ಉಸಿರಾಗಲೇ ನಿನಗೆ…!?
ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? ನಿನ್ನ ಬೆರಳ ತುದಿಯಲ್ಲಿ ಲಿಪಿಯಾಗಲೇನಿನ್ನ ಕೊರಳ ಒಂಪಲ್ಲಿ ಸ್ವರವಾಗಲೇಮಳೆ ಬರುವ ದಾರಿಯಲಿ ಹಸಿರಾಗಲೇಹೂಬಿರಿವ ನಗುವಲ್ಲಿ ಕಂಪಾಗಲೇ…? ಇಂಪಾಗಿ ಸೊಂಪಾಗಿ ತಂಪಾಗಲೇಇಂಚಿಂಚು ಮಿಂಚಾಗಿ ಹರಿದಾಡಲೇಕಡಲಲ್ಲಿ ಅಲೆಯಾಗಿ ದಡ ತಬ್ಬಲೇಲತೆಯಂತೆ ಮೈಚಾಚಿ ನಿನ್ನ ಹಬ್ಬಲೇ…? ನೀ ಮುಂದೆ ನಡೆವಾಗ ನೆರಳಾಗಲೇನಾಚಿಕೆಯ ಲಹರಿಯಲಿ ನದಿಯಾಗಲೇಮಡಿಲಲ್ಲಿ ಮೈಮರೆತು ಮಗುವಾಗಲೇನಿನ್ನೆದೆಯ ಚೈತ್ರಕ್ಕೆ ಉಸಿರಾಗಲೇ…? ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? – ಆಕಾಶ ಮಲ್ಲಿಗೆ










