ಕುಂದಾಪುರ (ನ,12): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜಾ ಡಾ. ಜಿ. ಶಂಕರ್ ರವರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಡವರ ಅರೋಗ್ಯ ಸ್ವಾಸ್ಥ್ಯಕ್ಕಾಗಿ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದಿಂದ ಹಮ್ಮಿಕೊಂಡ ಜಿ. ಶಂಕರ್ ಆರೋಗ್ಯ ವಿಮಾ ಯೋಜನೆ ನವೀಕರಣ ಮತ್ತು ಹೊಸ ಕಾರ್ಡುಗಳ ನೋಂದಾವಣಿ ಅಭಿಯಾನ ಇದೇ ನವೆಂಬರ್ ,15 ರಿಂದ 30 ರ ತನಕ ನಡೆಯಲಿದೆ. 2021ರಲ್ಲಿ ಒಟ್ಟು 52,505 […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ನ,15 ರಿಂದ ಜಿ. ಶಂಕರ್ ಆರೋಗ್ಯಸುರಕ್ಷಾ ಕಾರ್ಡ್ಗಳ ನವೀಕರಣ ಪ್ರಾರಂಭ
ಕುಂದಾಪುರ (ನ,12): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜಾ ಡಾ. ಜಿ. ಶಂಕರ್ ರವರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಡವರ ಅರೋಗ್ಯ ಸ್ವಾಸ್ಥ್ಯಕ್ಕಾಗಿ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದಿಂದ ಹಮ್ಮಿಕೊಂಡ ಜಿ. ಶಂಕರ್ ಆರೋಗ್ಯ ವಿಮಾ ಯೋಜನೆ ನವೀಕರಣ ಮತ್ತು ಹೊಸ ಕಾರ್ಡುಗಳ ನೋಂದಾವಣಿ ಅಭಿಯಾನ ಇದೇ ನವೆಂಬರ್ ,15 ರಿಂದ 30 ರ ತನಕ ನಡೆಯಲಿದೆ. 2021ರಲ್ಲಿ ಒಟ್ಟು 52,505 […]
•••ಗೆಳೆತನ•••
ಎತ್ತ ಸಾಗುವುದೀ ಪಯಣ ಹೊತ್ತು ಮುಳುಗುವ ಮುನ್ನ ಚಿತ್ತ ಧೃತಿಗೆಡದಿದ್ದರೆ ಸಾಕು ಮತ್ತೆ ಶೋಧಿಸಲು ಸಮಯವಾದೀತು…..!! ಕಳೆದೆವು ಅದೆಷ್ಟೋ ಕ್ಷಣಗಳ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯೇರಿ ಸಾಗಿದಷ್ಟೂ ದೂರ ಸೇರಿದಷ್ಟೂ ದಾರಿ….. ಸವಿದರೂ ಸವೆಯದ ಸ್ನೇಹವ ನೆನೆದು ಅಳುವುದೊಂದೆ ಉಳಿದಿದೆ ಇನ್ನೆಲ್ಲವ ನಾವಾಗಲೇ ಅಳಿಸಿಯಾಗಿದೆ. ಅನಂತತೆಯ ಅಲೆಯೊಂದು ಉದಯಿಸಿದೆ ಎದೆಯೊಳಗೆ ಸಾಗಲು ದೋಣಿ ಹಡಗುಗಳಿಲ್ಲ ಸೇರಲು ಸ್ನೇಹ ಸಂಬಂಧಗಳಿಲ್ಲ ತೀರ ಸಾಗರದಲ್ಲಿ ಒಂಟಿ ನಾನು….. ಮಾತಿನ ಶಿಖರಕ್ಕೀಗ ಮೌನದ ಮೆಟ್ಟಿಲು […]
ಡಾ|ಬಸ್ರೂರು ಭುಜಂಗ ಹೆಗ್ಡೆ ಸಂಸ್ಮರಣೆ
ಕುಂದಾಪುರ(ನ,11):ಉದ್ಯಮಿಗಳಾಗಿ ಅನೇಕರಿಗೆ ಉದ್ಯೋಗವನ್ನು ನೀಡಿದ ಡಾ.ಬಿ.ಬಿ. ಹೆಗ್ಡೆಯವರು ವೈದ್ಯರಾಗಿ ಕೂಡ ಸೇವೆ ಸಲ್ಲಿಸಿದವರು. ಸಮಾಜದ ಸಮಸ್ಯೆಗಳಿಗೆ ಶಿಕ್ಷಣದ ಮೂಲಕ ಚಿಕಿತ್ಸೆ ನೀಡುವ ಕಾರ್ಯ ಆರಂಭಿಸಿದ ಡಾ.ಬಿ.ಬಿ. ಹೆಗ್ಡೆಯವರ ಸಂಸ್ಮರಣೆಯನ್ನು ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಗಿತ್ತು. ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ದೀಪ ಬೆಳಗಿ, ಪುಷ್ಪನಮನ ಸಲ್ಲಿಸಿದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಬೋಧಕ ಬೋಧಕೇತರರು ಉಪಸ್ಥಿತರಿದ್ದು ಮೌನ ಪ್ರಾರ್ಥನೆ ಸಲ್ಲಿಸಿದರು. ಉಪನ್ಯಾಸಕಿ ರೇಷ್ಮಾ ಶೆಟ್ಟಿ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಳವಾದ ಕಲಿಕೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಕುರಿತು ತಾಂತ್ರಿಕ ಕಾರ್ಯಗಾರ
ಬಂಟಕಲ್ (ನ,10): ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕತಂತ್ರ ವಿಭಾಗದ ಐಎಸ್ಟಿಇ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ “ಆಳವಾದ ಕಲಿಕೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು‘ ಎಂಬ ವಿಷಯದ ಕುರಿತು ತಾಂತ್ರಿಕ ಕಾರ್ಯಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಬೆಂಗಳೂರಿನ ಟೆಕ್ವೆಡ್ ಲ್ಯಾಬ್ಸ್ ನ ಕಾರ್ಪೊರೇಟ್ ತರಬೇತುದಾರರಾದ ಶ್ರೀ ಮೊಹಮ್ಮದ್ ಆಮೀರ್ ರವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಇವರು ಆಳವಾದ ಕಲಿಕೆಯ ಕುರಿತು ವಿವರಿಸುತ್ತ, ಗುಗಲ್ನಲ್ಲಿ ಕಲಿಕಾ ವೇದಿಕೆಯನ್ನು ಉಪಯೋಗಿಸಿಕೊಂಡು ಕೆಲವು ಉದಾಹರಣೆಯನ್ನು ನೀಡಿದರು. […]
ಡಾ.ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ: ಶ್ರೀ ಆರ್. ಉಪೇಂದ್ರ ಶೆಟ್ಟಿ ಯವರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಪುಸ್ತಕಗಳ ಹಸ್ತಾಂತರ
ಕುಂದಾಪುರ (ನ,10): ಕರ್ನಾಟಕದ ಪ್ರಸಿದ್ಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ಬೆಂಗಳೂರಿನ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಇದರ ನಿರ್ದೇಶಕರಾದ ಶ್ರೀ ಉಪೇಂದ್ರ ಶೆಟ್ಟಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಉಪಯುಕ್ತ ಮಾಹಿತಿಯುಳ್ಳ ಸರಿಸುಮಾರು ಮೂವತ್ತು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಹಾಗೂ […]
ಉಡುಪಿ: ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಉಡುಪಿ (ನ,9): ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನ,08 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿ ರವರು ಮಾತನಾಡಿ ಜಾನಪದ ಮೂಕಾದರೆ ಮಾನವ ಜಾನಂಗ ಮೂಕ ಆದಂತೆ,ಆದ್ದರಿಂದ ಜಾನಪದ ಕಲೆ ಸಂಸ್ಕತಿಯನ್ನು ಇಂದಿನ ಯುವ ಜನಾಂಗ ಉಳಿಸಿ ಬೆಳೆಸ ಬೇಕೆಂದು […]
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ವಂಡ್ಸೆ(ನ,7): ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಿಜ್ಞಾನಿ ಡಾ. ದಿನೇಶ್ ಶೆಟ್ಟಿ, ಶ್ರೀ ಬಿ. ರಾಮ ಟೈಲರ್ ಹಾಗೂ ಉಪ್ಪುಂದ ಶ್ರೀಧರ ಗಾಣಿಗರನ್ನು ಬೈಂದೂರು ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರು ತಮ್ಮ ಗ್ರಹ ಕಛೇರಿಯಲ್ಲಿ ಗೌರವಪೂರ್ವಕವಾಗಿ ಅಭಿನಂದಿಸಿದರು.
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ಬಂಟಕಲ್(ನ,8): ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 8ನೇ ವರ್ಷದ ಪದವಿ ಪ್ರದಾನ ಸಮಾರಂಭವು ನ, 07 ರ ಭಾನುವಾರದಂದು ಕಾಲೇಜಿನ ಆವರಣದಲ್ಲಿ ಜರುಗಿತು. ಮಣಿಪಾಲದ ಕೆನರಾ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಶ್ರೀ ರಾಮ ನಾಯಕ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಪದವಿ ಪ್ರದಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಗೌರವ ಆತಿಥಿಗಳಾಗಿ ಭಾಗವಹಿಸಿದ ಮಾಹೆ ಮಣಿಪಾಲದ ಕುಲಸಚಿವರಾದ ಡಾ. ನಾರಾಯಣ ಸಭಾಹಿತ್ ರವರು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ,ಪದವೀಧರರು ತಮ್ಮ ವ್ಯತ್ತಿ ಜೀವನದಲ್ಲಿ […]
ಜೀವರಕ್ಷಕ ಭಾಸ್ಕರ್ ತಳಗೊಡುರವರ ಬದುಕನ್ನು ಬೆಳಗಿಸಿದ ದೀಪಾವಳಿ
ಜೀವರಕ್ಷಕ, ಮುಳುಗು ತಜ್ಞ ಭಾಸ್ಕರ್ ಕಳಸ ತಳಗೊಡು, ಈ ಬಡ ಸಂಸಾರ ಆ ಮಕ್ಕಳ ಮೊಗದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಖುಷಿ ತರಿಸಿದ ಎಲ್ಲಾ ಸಮಾಜ ಸೇವಕರಿಗೂ ಶಿರಬಾಗಿ ನಮಸ್ಕರಿಸುವೆ. ಪ್ರತಿಬಿಂಬ ಟ್ರಸ್ಟ್ ಬೆಂಗಳೂರು ಭಾಸ್ಕರ್ ರವರ ಮೂರು ಮಕ್ಕಳಿಗೆ ಅನುಕೂಲವಾಗಲೆಂದು ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳು ಮತ್ತು ಬಟ್ಟೆ ಪುಸ್ತಕವನ್ನು ಜೋಡಿಸಿಡಲು ಕಾಪಾಟ್ ಒಂದನ್ನು ಬೆಂಗಳೂರಿನಿಂದ ಕಳಿಸಿಕೊಟ್ಟಿದ್ದಾರೆ. ಕಳಸದ ಕೃಷಿಕರು, ಪತ್ರಕರ್ತರಾದ ರವಿ ಕೆಳಂಗಡಿ […]










