ಕುಂದಾಪುರ (ಮಾ. 10) ಶ್ರೀ ಶಾರದಾ ಕಾಲೇಜಿನ ಮಹಿಳಾ ವೇದಿಕೆ ಮತ್ತು ರೋವರ್ ಹಾಗೂ ರೇಂಜರ್ ಘಟಕದ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾರಣೆ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಅಂತರಾಷ್ಟ್ರೀಯ ಮಹಿಳಾ ದಿನ ಒಂದು ವಿಶೇಷ ದಿನವಾಗಿದ್ದು, ಮಹಿಳೆ ಒಂದು ಕುಟುಂಬದ ಆಧಾರ ಸ್ತಂಭವಾಗಿ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ವಿಜ್ಞಾನ, ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ನೆನೆಯುವ ದಿನವಾಗಿದೆ. ಮಹಿಳೆಯರ ಸಾಧನೆಗೆ ಪ್ರೋತ್ಸಾಹ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಡಾ| ಬಿ.ಬಿ ಹೆಗ್ಡೆ ಕಾಲೇಜು : ಲಯನ್ಸ್ ಕ್ಲಬ್ ಕುಂದಾಪುರ ವತಿಯಿಂದ ವಾಟರ್ ಕೂಲರ್ ಹಸ್ತಾಂತರ
ಒಂದು ಜಿಲ್ಲೆ ಒಂದು ಯೋಜನೆಯಡಿ ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷರಾಗಿರುವ ಲಯನ್ ಕೆ. ಚಂದ್ರಶೇಖರ್ ರವರು ಡಾ. ಬಿ. ಬಿ. ಹೆಗ್ಡೆ ಕಾಲೇಜಿಗೆ ಕೊಡುಗೆಯಾಗಿ ನೀಡಿದ ವಾಟರ್ ಕೂಲರ್ ನ್ನು ಲಯನ್ಸ್ ಕ್ಲಬ್ ಇದರ ಜಿಲ್ಲಾ ಗವರ್ನರ್ Ln. ಎನ್.ಎಮ್ ಹೆಗ್ಡೆ ಹಾಗೂ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್.ಟಿ.ಸೋನ್ಸ್ ಉದ್ಘಾಟಿಸಿದರು.
ಮಾರ್ಚ್ 11 ರಿಂದ 13 ರ ವರೆಗೆ ಪಡುಗುಡ್ಡೆ ಶ್ರೀ ಸರ್ವೇಶ್ವರ ದೇವಸ್ಥಾನದ 25 ನೇ ವರ್ಧಂತ್ಯುತ್ಸವ
ಉಡುಪಿ (ಮಾ. 10) ಉಡುಪಿ ಜಿಲ್ಲೆ, ಮಲ್ಪೆಯ ಬಾಪುತೋಟ ಪಡುಗುಡ್ಡೆ ಶ್ರೀ ಸರ್ವೇಶ್ವರ ದೇವಸ್ಥಾನದ 25 ನೇ ವರ್ಧಂತ್ಯುತ್ಸವ ಇದೇ ಮಾರ್ಚ್ 11 ರಿಂದ 13 ರ ವರೆಗೆ ನಡೆಯಲಿದೆ. ಮಾರ್ಚ್ 11 ರ ಗುರುವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 12 ಗಂಟೆಗೆ ತುಲಾಭಾರ ಸೇವೆ, ಸಂಜೆ ರಂಗ ಪೂಜೆ ಹಾಗೂ ರಾತ್ರಿ ಸ್ಥಳೀಯ ಪುಟಾಣಿಗಳಿಂದ ಮನೋರಂಜನೆ ಕಾರ್ಯಕ್ರಮ ಮತ್ತು ಶ್ರೀ ಶಕ್ತಿ ಮಹಿಳಾ […]
ಬಜೆಟ್ – 2021 ರ ಕುರಿತು ಡಾ| ಶ್ರೀಪತಿ ಕಲ್ಲೂರಾಯರಿಂದ ವಿಶೇಷ ಉಪನ್ಯಾಸ
ಕುಂದಾಪುರ (ಮಾ. 9) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ “ಬಜೆಟ್ 2021 ಕುರಿತು ಚರ್ಚೆ” ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುನಿಯನ್ ಬಜೆಟ್ 2021ರ ಪ್ರಮುಖ ಮುಖ್ಯಾಂಶಗಳಾದ ಆರೋಗ್ಯ ಮತ್ತು ಯೋಗಕ್ಷೇಮ, ಭೌತಿಕ ಮತ್ತು ಆರ್ಥಿಕ ಬಂಡವಾಳ ಮತ್ತು ಮೂಲ ಸೌಕರ್ಯ, ಮಹತ್ವಾಕಾಂಕ್ಷೆಯ ಭಾರತ ಕ್ಕೆ ಅಂತರ್ಗತ ಅಭಿವೃದ್ಧಿ, ಮಾನವ ಬಂಡವಾಳವನ್ನು ಉತ್ತೇಜಿಸುವ ,ನಾವೀನ್ಯತೆ ಮತ್ತು ಸಂಶೋಧನೆ […]
ಶ್ರೀ ಶಾರದಾ ಕಾಲೇಜು ಬಸ್ರೂರು : ಮಾರ್ಚ್ 12 ರಂದು ಶ್ರೀ ಶಾರದ ಕಾಲೇಜು ಬಸ್ರೂರಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಶ್ರೀ ಶಾರದಾ ಕಾಲೇಜು ಬಸ್ರೂರಿನಲ್ಲಿ ಇದೇ ಮಾರ್ಚ್ 12 ರಂದು ಕರಾವಳಿ ಲೇಖಕಿಯರ – ವಾಚಕಿಯರ ಸಂಘ (ರಿ.) ಮತ್ತು ಶ್ರೀ ಶಾರದಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ “ಮಹಿಳೆ ಮತ್ತು ಪುರಾಣ : ಸೃಜನಾತ್ಮಕತೆ”ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾಲೇಜಿನ ವೀರರಾಜೇಂದ್ರ ಹೆಗ್ಡೆ ಸಭಾಂಗಣದಲ್ಲಿ ನಡೆಯಲಿದೆ.
ಡಾ|ಬಿ. ಬಿ. ಹೆಗ್ಡೆ ಕಾಲೇಜು : ರಾಷ್ಟ್ರೀಯ ವಿಜ್ಞಾನ ದಿನ – ತರಂಗ 2K21
ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವೇದಿಕೆ ಆಶ್ರಯದಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನ – ತರಂಗ 2K21’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಮಹಿಳಾ ದಿನಾಚರಣೆ”
ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಸ್ಥೆಯ ಆವರಣದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಕುಂದಗನ್ನಡ ಅಧ್ಯಯನ ಪೀಠಕ್ಕೆ ಮಂಗಳೂರು ವಿವಿಯಲ್ಲಿ ನಿರ್ಣಯ
ಉಡುಪಿ (ಮಾ. 9) ತನ್ನದೆಯಾದ ಸಂಸ್ಕೃತಿಗಳ ಅಸ್ಮಿತೆ, ಜನಪದ ಹಾಡುಗಳು, ಭಾಷಾ ಸೊಗಡು ಹಾಗೂ ವಿಶೇಷ ಆಚರಣೆಯನ್ನು ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಹೆಬ್ರಿ, ಬ್ರಹ್ಮಾವರ ಭಾಗದ ಜನರ ಆಡುಭಾಷೆಯಾಗಿರುವ ಕುಂದಗನ್ನಡದ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಕುಂದಗನ್ನಡ ಭಾಷಾ ಅಧ್ಯಯನ ಪೀಠ ಸ್ಥಾಪನೆಗೆ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಮಂಗಳೂರು ವಿವಿಯ ಕುಲಸಚಿವರು ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು […]
ಮೂಡ್ಲಕಟ್ಟೆ ಎಂ. ಐ. ಟಿ. : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಆಚರಿಸಲಾಯಿತು. ಕಾಲೇಜಿನ ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ| ಬಿ. ಬಿ. ಹೆಗ್ಡೆ ಕಾಲೇಜು : ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ಮಾ. 9) : ವಿಧ್ಯಾರ್ಥಿಗಳು ಸಮಾಜದ ಆಗು-ಹೋಗುಗಳ ಕುರಿತು ಸೂಕ್ಷ್ಮವಾಗಿ ಗಮನಿಸುವುದರ ಜತೆಗೆ ವಿಧ್ಯಾರ್ಥಿ ದೆಸೆಯಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನ ವಿವಿಧ ವೇದಿಕೆಗಳ ಕ್ರಿಯಾಚಟುವಟಿಕೆಗಳಲ್ಲಿ ತಮ್ಮನ್ನು ಸೃಜನಶೀಲವಾಗಿ ತೊಡಗಿಸಿಕೊಂಡು, ವಿಧ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಸತ್ವಜೆಗಳಾಗಬೇಕೆಂದು ಕೊಲ್ಲೂರು ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅರುಣ್ ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳನ್ನು ಮಾರ್ಚ್ 05 ರಂದು ಉದ್ಘಾಟಿಸಿ […]