ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ, ಮಿತ್ರ ಬಳಗವನ್ನು ಬೆಳೆಸುತ್ತಾ, ತಮ್ಮ ಬದುಕಿನ ಇತಿಮಿತಿಯ ಒಳಗೆ ಉತ್ತಮ ಕೆಲಸ ಮಾಡುವುದರೊಂದಿಗೆ ಹ್ರದಯ ವೈಶಾಲ್ಯತೆಯನ್ನು ತೋರುವ ಒಬ್ಬ ಯುವಕನ ಬಗ್ಗೆ ನಿಮಗೆ ಹೇಳಲೇ ಬೇಕು. ಅವರೇ ಸರಳ ಸ್ವಭಾವದ ಸೇವಾ ಜೀವಿ,ಯುವ ಸಾಹಿತಿ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ. ಗೆಳೆಯರು ಇವರನ್ನು ಪ್ರೀತಿಯಿಂದ” ಜಗ್ಗು” ಎಂದು ಕರೆಯುತ್ತಾರೆ. ಶ್ರೀಯುತರು 1985ರ ಮಾರ್ಚ್ ,7 ರಂದು ಭದ್ರ ದೇವಾಡಿಗ & ಚಂದು ದೇವಾಡಿಗರ ಎರಡನೆಯ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಸಮಾಜ ಸೇವೆಯಿಂದ ಸಂತ್ರಪ್ತಿ ಪಡೆದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಮನದಾಳದ ಮಾತು
ಪ್ರೀತಿಯ ಬಂಧು ಮಿತ್ರರೇ, ನಾನು ನಿಮ್ಮ ಗೋವಿಂದ ಬಾಬು ಪೂಜಾರಿ.ಕರೋನದಿಂದ ಇಡೀ ಜಗತ್ತೇ ತತ್ತರಿಸಿದೆ. ಕಳೆದ ಎರಡು ವರ್ಷಗಳಿಂದ ಕರೋನಾ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿರುವವರನ್ನು ಗುರುತಿಸಿ ಆಹಾರದ ಕಿಟ್ ಗಳನ್ನು ಅವರವರ ಗ್ರಾಮಕ್ಕೆ ಇಂತಿಷ್ಟು ಎಂದು ನನ್ನ ಕೈಲಾದಷ್ಟು ಸ್ವತಃ ನಾನೇ ಗ್ರಾಮಗಳಿಗೆ ಭೇಟಿ ನೀಡಿ ಕಿಟ್ ಹಸ್ತಾಂತರಿಸಿದ್ದೇನೆ. ಯಾವುದೇ ಜಾತಿ, ಮತ, ಧರ್ಮ, ರಾಜಕೀಯ ಭೇದಭಾವ ಇಲ್ಲದೆ ಎಲ್ಲಾ ವರ್ಗದವರನ್ನು ಸಮಾನರಂತೆ ಪರಿಗಣಿಸಿ ಬೈಂದೂರು ಭಾಗದ ಮೂಲೆ -ಮೂಲೆಗೆ […]
ವಿಶ್ವ ವಿಖ್ಯಾತ ಮುರ್ಡೇಶ್ವರದ ಶಿವನ ಮೂರ್ತಿಯ ಸೊಬಗಿಗೆ ಅಂತರಾಷ್ಟ್ರೀಯ ಪ್ರಶಸ್ತಿ
ಭಟ್ಕಳ (ಜೂ, 18) : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ವಿಶ್ವ ವಿಖ್ಯಾತ ಮುರ್ಡೇಶ್ವರದ ಶಿವನ ಮೂರ್ತಿಯ ಎಲ್ ಇ ಡಿ ವಿದ್ಯುತ್ ಅಲಂಕಾರಕ್ಕೆ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತಿದೆ. ಅಮೆರಿಕಾದ ಇ- ಗ್ಲೋಬಲ್ ಫಿಲಿಪ್ಸ್ ಆಯೋಜಿಸಿದ್ದ ಸರ್ಟಿಫೈಡ್ ಸಿಸ್ಟಮ್ ಇಂಟಿಗ್ರೇಟರ್ ಸಮಿಟ್ನಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಜಗತ್ತಿನ 24 ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಮುರ್ಡೇಶ್ವರದ ಶಿವನ ಮೂರ್ತಿಗೆ ಮಾಡಲಾದ ವಿದ್ಯುತ್ ಅಲಂಕಾರ […]
ಯುವ ಸಾಹಿತಿ ಕೊಡಗಿನ ಕಿಗ್ಗಾಲು ಜಿ. ಹರೀಶ್ ಕುಂದವಾಹಿನಿಯಲ್ಲಿ ತಮ್ಮ ಸಾಹಿತ್ಯ ಅನುಭವವನ್ನು ಹಂಚಿಕೊಳ್ಳಲಿದ್ದಾರೆ
ಯುವ ಸಾಹಿತಿ ಕಿಗ್ಗಾಲು ಜಿ. ಹರೀಶ್ ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದವರು. ಮೂರ್ನಾಡುವಿನ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಈಗಾಗಲೇ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇವರ ರಾಯರ ತೋಟ ಎಂಬ ಲಲಿತ ಪ್ರಬಂಧಗಳ ಸಂಕಲನ 2011 ರಲ್ಲಿ ಬಿಡುಗಡೆಯಾಗಿದೆ. ಕಥೆ,ಕವನ ,ಲೇಖನ ರಚನೆಯ ಜೊತೆಗೆ ವರದಿಗಾರಿಕೆಯನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯ ಶಕ್ತಿ ದಿನಪತ್ರಿಕೆಯಲ್ಲಿ, ಸುಧಾ, […]
ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ : ಖಾಯಂ ವೈದ್ಯಾಧಿಕಾರಿಯಾಗಿ ಡಾ|ಅಮಿತಾ ಕೆ . ನೇಮಕ
ಗಂಗೊಳ್ಳಿ(ಜೂ,18): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಖಾಯಂ ವೈದ್ಯಾಧಿಕಾರಿಯಾಗಿ ಡಾ| ಅಮಿತಾ ರವರನ್ನು ನೇಮಕ ಮಾಡಲಾಗಿದೆ. ಡಾ|ಗಿರೀಶ್ ಕುಲಕರ್ಣಿಯವರ ವರ್ಗಾವಣೆಯಿಂದಾಗಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ತೆರವಾಗಿತ್ತು. ಡಾ| ಅಮಿತಾ ಈ ಹಿಂದೆ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಹಾಗೂ ಕುಂದಾಪುರದ ಇಎಸ್ ಐ ಆಸತ್ರೆಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿರುತ್ತಾರೆ.
ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ : ಸಾಫ್ಟ್ವೇರ್ ಆಧಾರಿತ ರಾಷ್ಟ್ರಮಟ್ಟದ ಹ್ಯಾಕಾಥಾನ್ – “ಹ್ಯಾಕೋತ್ಸವ”
ಉಡುಪಿ (ಜೂ, 17): ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ವಿಭಾಗದ ಕೋಡ್ ಟ್ರೂಪರ್ಸ್ ಕ್ಲಬ್ ಹಾಗೂ IEEE ಯ ವಿದ್ಯಾರ್ಥಿ ಘಟಕ (STB10147) ದ ಸಹಭಾಗಿತ್ವದಲ್ಲಿ 48 ಗಂಟೆಗಳ “ಹ್ಯಾಕೋತ್ಸವ” ಎಂಬ ಸಾಫ್ಟ್ವೇರ್ ಆಧಾರಿತ ರಾಷ್ಟ್ರಮಟ್ಟದ “ಹ್ಯಾಕಾಥಾನ್” ಅನ್ನು ವರ್ಚುವಲ್ ಆಗಿ ಸಂಯೋಜಿಸಲಾಗುತ್ತಿದೆ. ಮೂರು ದಿನಗಳ ಪರ್ಯಂತ (2021 ಜುಲೈ 9ರಿಂದ 11ರವರೆಗೆ) ಜರಗುವ ಈ ಹ್ಯಾಕಾಥಾನ್ನಲ್ಲಿ ರಾಷ್ಟ್ರದಾದ್ಯಂತ ಪದವಿ ಮತ್ತು ಸ್ನಾತಕೋತರ […]
ದುಡಿಮೆಯ ಒಂದು ಪಾಲು ಸಮಾಜಸೇವೆಗೆ ಮೀಸಲು : ಶ್ರೀ ಗೋವಿಂದ ಬಾಬು ಪೂಜಾರಿ
ಉಪ್ಪುಂದ (ಜೂ, 17): ದುಡಿಮೆಯ ಒಂದು ಪಾಲು ಸಮಾಜಸೇವೆಗೆ ಮೀಸಲಾಗಿಡುವುದರ ಜೊತೆಗೆ ಸಮಾಜ ಸೇವೆಯೊಳಗಿನ ಸಂತೃಪ್ತಿಯಿಂದ ನಾವು ಪ್ರತಿಯೊಬ್ಬರಲ್ಲೂ ದೈವತ್ವವನ್ನು ನೋಡಬಹುದು ಎಂದು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಪ್ರವರ್ತಕರು, ಮ್ಯಾನೇಜಿಂಗ್ ಡೈರೆಕ್ಟರ್ ಕೊಡುಗೈ ದಾನಿ ಶ್ರೀ ಗೋವಿಂದ ಬಾಬು ಪೂಜಾರಿ ಹೇಳಿದರು. ಅವರು ಜೂನ್ 17ರಂದು ಉಪ್ಪುಂದದ ಅಂಬಾಗಿಲಿನಲ್ಲಿರುವ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ವರಲಕ್ಷ್ಮೀ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಸದಸ್ಯರಿಗೆ ದಿನಸಿ […]
ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ). ಉಪ್ಪುಂದ : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನ ಚಿಕಿತ್ಸೆಗೆ ನೆರವು
ಉಪ್ಪುಂದ (ಜೂ, 17): ಕಳೆದ ಆರು ತಿಂಗಳುಗಳಿಂದ ಎರಡು ಕಿಡ್ನಿಗಳು ವೈಫಲ್ಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾವುಂದ ಬಡಾಕೆರೆ ಗ್ರಾಮದ 12 ವರ್ಷ ಪ್ರಾಯದ ಯುವಕ ಧನುಷ್ ಪೂಜಾರಿ ಯವರ ವೈದ್ಯಕೀಯ ಚಿಕಿತ್ಸೆಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಪ್ರವರ್ತಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್, ಉದ್ಯಮಿ ಹಾಗೂ ಕೊಡುಗೈದಾನಿಗಳಾದ ಶ್ರೀ ಗೋವಿಂದ ಬಾಬು ಪೂಜಾರಿ ಯವರು ತಮ್ಮ ಟ್ರಸ್ಟ್ ವತಿಯಿಂದ ಸಹಾಯಧನವನ್ನು ಯುವಕನ ಚಿಕ್ಕಪ್ಪ […]
ಕಾಣದ ಜೀವಿಯ ಕಣ್ಣಾಮುಚ್ಚಾಲೆ
ಕಾಣದ ಜೀವಿಯ ಕಣ್ಣಾಮುಚ್ಚಾಲೆ ಭಯವನು ಹೂಡಿ ಆವರಿಸಿಹುದು ಕತ್ತಲೆಅಪರಿಚಿತರ ಅಪರಾಧಕೆ ಬಲಿಯಾಗಿದೆ ಇಡೀ ವಿಶ್ವವೇ!ನಾಳೆಗೆಂದೂ ಕೂಡಿಟ್ಟ ಕನಸೆಲ್ಲಾ ಕುಸಿದು ಮಣ್ಣಾಯಿತೇ?ಬಿಡದ ಅನಿವಾರ್ಯತೆ ಹುಡುಕುತಿದೆ ಪರಿಹಾರಸ್ವಾಭಿಮಾನ ನಲುಗಿ ಕೈಯೊಡ್ಡುತಿರುವಾಗ, ಆಗೋ ತಿರಸ್ಕಾರಆ ಅಸಹಾಯಕತೆಯಲ್ಲೂ ಸೋತು ಬಡತನ ಮತ್ತಷ್ಟು ಅನುಭವಿಸುತಿದೆ ಬಹಿಷ್ಕಾರದಾರಿ ಕಂಗೆಟ್ಟು ದಾರಿದೀಪವನು ಹುಡುಕಾಡುತಿದೆ.ಬಡವಾಯ್ತು ಬದುಕುಆಶಾವಾದವಷ್ಟೇ ಇನ್ನುಳಿದ ಬೆಳಕು-ಕೊರೊನಾ ಕಥೆ. -ಅರ್ಚನಾ .ಆರ್. ಕುಂದಾಪುರ
“ಅದೃಷ್ಟವಂತರಲ್ಲ, ಆಶಾವಾದಿಯಾಗೋಣ”
ಅದೇನೋ ಹತಾಶೆ. ಯಾವುದೂ ಸರಿ ಇಲ್ಲ ಎನ್ನುವ ಭಾವ. ಮರಳಿ ಪ್ರಯತ್ನಿಸಲೂ ಅದೇನೋ ಭಯ .ಪದೇ ಪದೇ ಅದೇ ಕನಸು ಹಳ್ಳ ಹಿಡಿಯುತ್ತಿರುವುದನ್ನು ನೋಡಿ ಕುಸಿದು ಹೋಗಿದ್ದೆ.ಋಣಾತ್ಮಕ ಚಿಂತನೆ ತಲೆ ತುಂಬಾ ತುಂಬಿಕೊಂಡು ಬಿಟ್ಟಿದ್ದವು.ವಿಫಲವಾದ ಯೋಜನೆಯ ನೆನೆದು ಅತ್ತು ಅತ್ತು ಮಂಕಾಗಿಯೇ ಬಿಡುತ್ತಿದ್ದೆ.ಹೊರ ಬರುವ ದಾರಿಯ ಹುಡುಕಾಟ ಮರಳಿ ನನ್ನ ಋಣಾತ್ಮಕ ಚಿಂತನೆಗೆ ದೂಡಿ ಹಾಕುತ್ತಿತ್ತು.ಬದಲಾಗೋ ಆಸೆ ಅಲ್ಲ.ಕಳೆದುಕೊಂಡ ನನ್ನನ್ನು ಹುಡುಕಾಡೋ ಪ್ರಯತ್ನ ಅದಾಗಿತ್ತು.ಒಂದು ಸಣ್ಣ ವಿರಾಮ ತೆಗೆದುಕೊಂಡೆ.ಆ ವಿರಾಮದಲ್ಲಿ […]










