ಕುಂದಾಪುರ ( ನ. 09): ಉಡುಪಿ ಜಿಲ್ಲಾ ಮಟ್ಟದ ಅಥ್ಲೆಟಿಕ್ ಚಾಂಪಿಯನ್ಶಿಪ್ ನ 14 ವರ್ಷ ಹುಡುಗರ ವಿಭಾಗದಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಸಂಸ್ಥೆಯ ರೋನಕ್ ರಾಘವೇಂದ್ರ ಖಾರ್ವಿ ಗುಂಡು ಹೆಸರಿನಲ್ಲಿ ಪ್ರಥಮ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಟೆಲ್ಲಾ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇಲ್ಲಿಯ ವಿದ್ಯಾರ್ಥಿಯಾಗಿರುವ ಈತ ಕುಂದಾಪುರದ ಟ್ರ್ಯಾಕ್ & ಫೀಲ್ಡ್ ಸಂಸ್ಥೆಯ ಪ್ರಶಾಂತ ಶೆಟ್ಟಿ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಆಲ್ ಇಂಡಿಯಾ ಆಕಾಶ್ ಸ್ಕಾಲರ್ಶಿಪ್ ಪರೀಕ್ಷೆ: ಆಕಾಶ್ ಮೊಗವೀರ 3ನೇ ರ್ಯಾಂಕ್
ಕುಂದಾಪುರ ( ನ .09): ಆಲ್ ಇಂಡಿಯಾ ಆಕಾಶ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಆಕಾಶ್ ಈ ಮೊಗವೀರ ಉಡುಪಿ ಜಿಲ್ಲೆಗೆ 3ನೇ ರ್ಯಾಂಕ್ ಪಡೆದಿದ್ದಾರೆ. ಆಕಾಶ್ ಎಜುಕೇಶನ್ ಸಂಸ್ಥೆ ಭಾರತದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿಷಯಗಳ ಆಯ್ಕೆಯಲ್ಲಿ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಈ ಪರೀಕ್ಷೆ ನಡೆಸುತ್ತದೆ. ಇಂಜಿನಿಯರ್ ವಿಷಯನ್ನು ಆಯ್ದುಕೊಂಡು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕುಂದಾಪುರ ಇಲ್ಲಿ ಹತ್ತನೇ ತರಗತಿಯಲ್ಲಿ […]
ಹೆಮ್ಮಾಡಿ ಜನತಾ ಪಿ ಯು ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಖೇಲೋ ಜನತಾ -2K24
ಹೆಮ್ಮಾಡಿ ( ನ .09): ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಖೇಲೋ ಜನತಾ- 2024 ನವೆಂಬರ್ ,08 ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಉದಯ ರವರು ಮಾತನಾಡಿ ಜನತಾ ಶಿಕ್ಷಣ ಸಂಸ್ಥೆ ಕ್ರೀಡಾ ರಂಗಕ್ಕೆ ಕೊಡುತ್ತಿರುವ ಪ್ರೋತ್ಸಾಹ ಅದ್ಭುತವಾಗಿದೆ.ವಿದ್ಯಾರ್ಥಿಗಳೇ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧಕರಾಗಬೇಕಾದರೆ ಕಾಲೇಜಿನ ಕ್ರೀಡಾಕೂಟಗಳು ಅಡಿಪಾಯವಾಗಿದೆ.ಧೈರ್ಯವಾಗಿ ಕ್ರೀಡೆಯಲ್ಲಿ ಭಾಗವಹಿಸಿ ಎಂದು ಶುಭ ಹಾರೈಸಿದರು. […]
ಹೆಜ್ಜೆ ಗೆಜ್ಜೆ -ಮೊಗವೀರ ಸಾಂಸ್ಕೃತಿಕ ಸಿಂಚನ -2024: ಪೋಸ್ಟರ್ ಬಿಡುಗಡೆ
ಹೆಮ್ಮಾಡಿ ( ನ,07): ಮೊಗವೀರ ಯುವ ಸಂಘಟನೆ(ರಿ.), ಉಡುಪಿ ಜಿಲ್ಲೆಯ ಹಿರಿತನದಲ್ಲಿ, ಜಿ ಶಂಕರ್ ಪ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ ಉಡುಪಿ ಇವರ ಸಹಯೋಗದಲ್ಲಿ, ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇವರ ಆತಿಥ್ಯದಲ್ಲಿ ಡಿಸೆಂಬರ್ ,07 ರಂದು ಕುಂದಾಪುರ ಮೊಗವೀರದ ಭವನದಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಅಂತರ್ ಘಟಕ ಗಳ ಸಂಸ್ಕೃತಿಕ ಕಾರ್ಯಕ್ರಮ “ಹೆಜ್ಜೆ ಗೆಜ್ಜೆ “ಮೊಗವೀರ ಸಾಂಸ್ಕೃತಿಕ ಸಿಂಚನ -2024 ಇದರ […]
ಬಿ. ಬಿ. ಹೆಗ್ಡೆ ಕಾಲೇಜು: ನ.14 ಹಾಗೂ15 ರಂದು ಮಂಗಳೂರು ವಿ. ವಿ ಅಂತರ್ ಕಾಲೇಜು ಮಟ್ಟದ ಕುಸ್ತಿ ಪಂದ್ಯಾಟ
ಕುಂದಾಪುರ (ನವೆಂಬರ್ 04): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಅಶ್ರಯದಲ್ಲಿ ಪುರುಷರ ಮತ್ತು ಮಹಿಳೆಯರ ಅಂತರ್ ಕಾಲೇಜು ಮಟ್ಟದ ಕುಸ್ತಿ ಪಂದ್ಯಾಟ ನವೆಂಬರ್ 14 ಮತ್ತು 15ರಂದು ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳ ಸುಮಾರು 70 ಕಾಲೇಜುಗಳ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| […]
ಬಿ.ಬಿ. ಹೆಗ್ಡೆ ಕಾಲೇಜು : ವಿಸ್ತರಣಾ ಚಟುವಟಿಕೆ
ಕುಂದಾಪುರ (ಅ 31): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ವಿಸ್ತರಣಾ ಚಟುವಟಿಕೆಯ ಹಿನ್ನಲೆಯಲ್ಲಿ ಕಲಾಕ್ಷೇತ್ರ ಕುಂದಾಪುರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕನ್ನಡ ಹಬ್ಬ’ ಸಪ್ತಾಹದ ಪೂರ್ವಭಾವಿಯಾಗಿ ಅಕ್ಟೋಬರ್ 31ರಂದು ಕುಂದಾಪುರ ನಗರದಲ್ಲಿ ‘ಕನ್ನಡ ರಥೋತ್ಸವ’ ಪುರ ಮೆರವಣಿಗೆಯಲ್ಲಿ ಕಾಲೇಜಿನ ಕನ್ನಡ ಸಂಘದ ವಿದ್ಯಾರ್ಥಿಗಳು ಹಾಗೂ ಬೋಧಕೇತರರು ಭಾಗವಹಿಸಿದರು. ಕುಂದಾಪುರದ ಜ್ಯೂನಿಯರ್ ಕಾಲೇಜಿನಿಂದ ಪ್ರಾರಂಭವಾದ ಪುರಮೆರವಣಿಗೆ ಕುಂದಾಪುರ ನಗರದ ಒಳಗಡೆ […]
ರಾಜ್ಯಮಟ್ಟದ ಅಬಾಕಸ್ – ಎಚ್.ಎಮ್.ಎಮ್ ವಿದ್ಯಾರ್ಥಿನಿ ಛಾಯಾ ಪ್ರಥಮ
ಕುಂದಾಪುರ (ನ. 04) : ಬಿ. ಎಂ ಸುಕುಮಾರ ಶೆಟ್ಟಿಯವರ ನೇತೃತ್ವದ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಹಲ್ಸನಾಡು ಮಾದಪ್ಪಯ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿ ಛಾಯಾ ವಿಶ್ವನಾಥ್ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನಮಠ ಚಿತ್ರದುರ್ಗದಲ್ಲಿ ನಡೆದ 19ನೇ ಕರ್ನಾಟಕ […]
ಬಿ. ಬಿ. ಹೆಗ್ಡೆ ಕಾಲೇಜು :ಮಾನವ ಜೀವನದಲ್ಲಿ ನೈತಿಕತೆ–ಮಾಹಿತಿ ಕಾರ್ಯಾಗಾರ
ಕುಂದಾಪುರ (ಅ.30): ಮನುಷ್ಯನ ಮನಸ್ಸಿನಲ್ಲಿ ಅಹಂಕಾರವು ತುಂಬಿರಬಾರದು. ಅಹಂಕಾರ ತುಂಬಿದ ಮನುಷ್ಯನ ಜೀವನವು ಅವನನ್ನು ಅಧೋಗತಿಯತ್ತ ಕೊಂಡೊಯ್ಯುವುದು. ಹಿರಿಯರು ಹಾಕಿಕೊಟ್ಟಂತಹ ನೀತಿ-ನಿಯಮಗಳನ್ನು ಗೌರವಿಸಿ ಪಾಲಿಸಿಕೊಂಡು ಬಂದಲ್ಲಿ ಮನುಷ್ಯ ಜೀವನ ಸಾಫಲ್ಯತೆಯನ್ನು ಸಾಧಿಸುತ್ತದೆ ಎಂದು ಸರಕಾರಿ ಪ್ರೌಢಶಾಲೆ ಸುಣ್ಣಾರಿಯ ನಿವೃತ್ತ ದೈಹಿಕ ಶಿಕ್ಷಕ ಶ್ರೀ ಕಿರಣ್ ಕುಮಾರ್ ಬಿ. ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಾನವೀಯ ಮೌಲ್ಯಗಳು ಮತ್ತು ವೃತ್ತಿಪರ ನೀತಿ ಸಂಘ ಆಯೋಜಿಸಿದ […]
ಕೋಡಿ ಬ್ಯಾರೀಸ್ ನಲ್ಲಿ ದೀಪಾವಳಿ ಸಂಭ್ರಮಾಚರಣೆ
ಕುಂದಾಪುರ ( ನ .05): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಇದರ ಆಶ್ರಯದಲ್ಲಿ”ದೀಪಾವಳಿ ಆಚರಣೆ” ವಿಶೇಷವಾಗಿ ಜರುಗಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿ ಸದಸ್ಯರಾದ ಸಿದ್ದೀಕ್ ಬ್ಯಾರಿ ಇವರು ಕಾರ್ಯಕ್ರಮವನ್ನುದ್ದೇಶಿಸಿ “ಹಬ್ಬಗಳು ಸೌಹಾರ್ದತೆಯ ಮೂಲ ಸಂಕೇತಗಳು, ನಮ್ಮ ಮನದಲ್ಲಿಯ ಅಜ್ಞಾನ ಹಾಗೂ ಅಂಧಕಾರಗಳು ದೂರವಾಗಿ ವಿಶ್ವಕುಟುಂಬಿಯಾಗಬೇಕು. ಇದರ ಮೂಲಕ ನಾವು ವಿಶ್ವಶಾಂತಿಯನ್ನು ಕಾಣುವಂತಾಗಬೇಕು ಎಂದು ನುಡಿದರು”. ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ. ಆಸೀಫ್ ಬ್ಯಾರಿ […]
ಬಿ.ಬಿ. ಹೆಗ್ಡೆ ಕಾಲೇಜು: ದೀಪಾವಳಿ ಸಂಭ್ರಮಾಚರಣೆ
ಕುಂದಾಪುರ (ನ, 01): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಹಾಗೂ ಶಿಕ್ಷಕ ಸತೀಶ್ ವಡ್ಡರ್ಸೆ ಕುಂದಾಪುರದಲ್ಲಿ ಭೂಮಿಯೊಂದಿಗೆ ಬೆಸೆದುಕೊಂಡ ಈ ದೀಪಾವಳಿ ಕೃಷಿ ಸಂಬoಧಿಯಾಗಿ ಬೆಳೆದು ಬಂದಿದ್ದು. ಹೀಗಾಗಿ ನರಕ ಚತುರ್ದಶಿ, ಬಲಿ ಪೂಜೆ ಮತ್ತು ಗೋಪೂಜೆಗಳು […]