ಕುಂದಾಪುರ( ಸೆ.03): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 03 ರಂದು ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದಲ್ಲಿ ಆಚರಿಸಲಾಯಿತು. ಕ್ಲಬ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯಾಧ್ಯಕ್ಷರಾದ ಲ. ಅಶೋಕ್ ಶೆಟ್ಟಿ ಸಂಸಾಡಿ , ನಿಕಟ ಪೂರ್ವ ಅಧ್ಯಕ್ಷರಾದ ಲ.ರತ್ನಾಕರ ಶೆಟ್ಟಿ ಕಂದಾವರ, ಪ್ರಧಾನ ಕಾರ್ಯದರ್ಶಿ ಲ. ಗಿರೀಶ್ ಮೇಸ್ತ, ನಿರ್ದೇಶಕರಾದ ಲ. ಅಂಪಾರು ನಿತ್ಯಾನಂದ ಶೆಟ್ಟಿ, […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಸಂಗಮ್: ಕೋವಿಡ್ ಲಸಿಕಾ ಅಭಿಯಾನ ಶಿಬಿರ
ಕುಂದಾಪುರ (ಸೆ, 02) : ಆರೋಗ್ಯ ಇಲಾಖೆ ಕುಂದಾಪುರ ಹಾಗೂ ಸಂಗಮ್ ಫ್ರೆಂಡ್ಸ್ ಸಂಗಮ್ ಇವರ ಸಹ ಸಹಯೋಗದೊಂದಿಗೆ ಚಿಕ್ಕಮ್ಮನ ಸಾಲು ರಸ್ತೆ ಸಂಗಮ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ ಶಿಬಿರ ಸೆಪ್ಟೆಂಬರ್,02ರಂದು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಗಮ್ ಫ್ರೆಂಡ್ಸ್ ಸಂಗಮ್ ಇದರ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರು, ಕುಂದಾಪುರ ಪುರಸಭೆಯ ಸದಸ್ಯರಾದ ದಿವಾಕರ ಪೂಜಾರಿ ಕಡ್ಗಿ,ಸಂತೋಷ್ ಶೆಟ್ಟಿ, ಹಾಗೂ ಕುಂದಾಪುರ ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ […]
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಕೋಟೇಶ್ವರ (ಸೆ. 01) : ಮೊಗವೀರ ಯುವ ಸಂಘಟನೆ (.ರಿ) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕದ ವತಿಯಿಂದ ಇತಿಹಾಸ ಪ್ರಸಿದ್ದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಸುತ್ತ ಸ್ವಚ್ಚಗೊಳಿಸುವ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕೋಟೇಶ್ವರ ಘಟಕದ ನಿಯೊಜಿತ ಅಧ್ಯಕ್ಷರಾದ ಸುನೀಲ್ ಜಿ ನಾಯ್ಕ್, ಕಾರ್ಯದರ್ಶಿ ಪುಂಡಲೀಕ ಮೊಗವೀರ, ಕೋಶಾಧಿಕಾರಿ ಪ್ರದೀಪ್ ಮೊಗವೀರ, ಮಹಿಳಾ ಸಂಘಟನೆಯ ಅಧ್ಯಕ್ಷರಾದ ಅನುಸೂಯ ಕೆದೂರು ಇವರ ನೇತ್ರತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಘಟಕದ ಸ್ಥಾಪಕಾಧ್ಯಕ್ಷರಾದ […]
ಲಯನ್ಸ್ ಕ್ಲಬ್ ಕೋಸ್ಟಲ್ ವತಿಯಿಂದ ಮದರ್ ತೆರೆಸಾ ಡೇ
ಕುಂದಾಪುರ (ಸೆ. 01) : ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಮದರ್ ತೆರೆಸಾ ಡೇ ಯನ್ನು ಜೆ. ಕೆ. ಹೋಟೆಲ್ ನ ಸಭಾಂಗಣದಲ್ಲಿ ಅಗಸ್ಟ್ 27 ರಂದು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ದಿನೇಶ್ ಹೆಗ್ಡೆ ಮದರ್ ತೆರೆಸಾ ರವರು ವಿಶ್ವ ಮಾತೆಯಾಗಿ ಗುರುತಿಸಿ ಕೊಳ್ಳುವುದರ ಮೂಲಕ ಜಗತ್ತಿಗೆ ಸಾರಿದ ಸಂದೇಶಗಳ ಬಗ್ಗೆ ವಿವರಣೆ ನೀಡಿದರು. ಲ. ಜಯಶೀಲ ಶೆಟ್ಟಿ […]
ಹಳೆ ಪಿಂಚಣಿ ಸೌಲಭ್ಯ ವಿಸ್ತರಿಸುವಂತೆ ಸಚಿವರಿಗೆ ಜೆಓಸಿ ನೌಕರರ ಮನವಿ
ಕುಂದಾಪುರ (ಸೆ. 01) : ಸತತ ಐದು ವರ್ಷಗಳ ನಿರಂತರ ಸೇವೆ ಪರಿಗಣಿಸಿ 2011ರಲ್ಲಿ ವಿಶೇಷ ವಿಧೇಯಕದ ಮೂಲಕ ಖಾಯಮಾತಿ ಪಡೆದ ಜೆಒಸಿ ನೌಕರರು ತಮಗೆ ಹಳೆ ಪಿಂಚಣಿ ಸೌಲಭ್ಯ ವಿಸ್ತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನಿಲ್ ಕುಮಾರ್ ಅವರಿಗೆ ಸಚಿವರ ಕಚೇರಿಯಲ್ಲಿ ಇತ್ತೀಚಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಜೆಒಸಿ ನೌಕರರ ಸಂಘದ ಗೌರವಾಧ್ಯಕ್ಷ ಬಾಲಚಂದ್ರ ಹೆಬ್ಬಾರ್ ಖಾಯಂ ಪೂರ್ವ […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮ
ವಂಡ್ಸೆ (ಆ, 30) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ಇದರ ಕೊಲ್ಲೂರು ವಲಯ ಹೊಸೂರು ಕಾರ್ಯಕ್ಷೇತ್ರದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಸಂಭ್ರಮದಿಂದ ಹೊರ್ಲಾಡಿ ಕೆರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಲಯ ಒಕ್ಕೂಟಗಳ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ಹಾಗೂ ಬೈಂದೂರು ತಾಲೂಕು ಯೋಜನಾಧಿಕಾರಿ ಶ್ರೀಮತಿ ಶಶಿರೇಖಾ ಪಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶ್ರೀಕೃಷ್ಣಜನ್ಮಾಷ್ಟಮಿಯ ಮಹತ್ವವನ್ನು ತಿಳಿಸಿದರು. ಜೊತೆಗೆ ಇಡೂರು […]
ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆ ಗಂಗೊಳ್ಳಿ : ಸಾಧಕ ವಿದ್ಯಾರ್ಥಿ ಶ್ರೇಯಾ ಮೇಸ್ತ ಹಾಗೂ ಸಂಜಯ್ ಮೇಸ್ತ ರಿಗೆ ಸನ್ಮಾನ
ಗಂಗೊಳ್ಳಿ (ಆ, 30) : ಇಲ್ಲಿನ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಗೆ ಉಡುಪಿ ಜಿಲ್ಲಾ ಸನ್ಮಾನ್ಯ ಉಪ ನಿರ್ದೇಶಕರಾದ ಎನ್. ಹೆಚ್. ನಾಗೂರ್ ಭೇಟಿ ನೀಡಿ ಎಸ್.ಎಸ್ .ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೇ 625 ಅಂಕ ಗಳಿಸಿದ ಕುಮಾರಿ ಶ್ರೇಯ ಮೇಸ್ತ ಹಾಗೂ ಸಹೋದರ ಸಂಜಯ್ ಮೇಸ್ತ (625/600) ರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ವಲಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಪದ್ಮನಾಭ, ಕಾರ್ಮೆಲ್ ಸಂಸ್ಥೆಯ ಶಿಕ್ಷಣ ಕಾರ್ಯದರ್ಶಿ […]
ಸಮಾಜ ಸೇವಕಿ ಶೈನಾ ಕಲ್ಯಾಣ ಪುರ
ಮಾನವೀಯ ನೆಲೆಯ ಸಮಾಜ ಸೇವೆ ಜಾತಿ ಮತ್ತು ಧರ್ಮಗಳನ್ನು ಮೀರಿದ್ದು. ಒಬ್ಬ ವ್ಯಕ್ತಿ ಸಮಾಜಸೇವೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ಸಮಾಜದ ದುರ್ಬಲ ವರ್ಗದವರ ಸೇವೆಯ ಕುರಿತಾದ ತುಡಿತ ಇರಬೇಕು ಜೊತೆಗೆ ಕಷ್ಟದಲ್ಲಿರುವವರಿಗೆ ಮಿಡಿಯುವ ಹ್ರದಯವನ್ನು ಹೊಂದಿರಬೇಕು. ಹೌದು ಆತ್ಮೀಯರೇ , ನಿಮಗೆ ಇಂದು ನಾವು ಸಮಾಜ ಸೇವೆಯಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಶಕ್ತರಿಗೆ ನೆರಳಾಗುತ್ತಿರುವ ಶೈನಾ ಕಲ್ಯಾಣ ಪುರ ರವರನ್ನು ಪರಿಚಯಿಸಲು ಇಚ್ಚಿಸುತ್ತಿದ್ದೇವೆ. ಒಂದು ಹೆಣ್ಣು […]
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೈಕಂಬ್ಳಿ : ಜ್ಞಾನ ಫೌಂಡೇಶನ್ ಬೆಂಗಳೂರು ವತಿಯಿಂದ ಉಚಿತ ಸಮ ವಸ್ತ್ರ ವಿತರಣೆ
ವಂಡ್ಸೆ (ಆ, 29) : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೈಕಂಬ್ಳಿಯ ವಿದ್ಯಾರ್ಥಿಗಳಿಗೆ ಆರ್ಡಿಯ ಸಿ. ಎ. ಸುದೀಪ್ ಶೆಟ್ಟಿ ನಾಯಕತ್ವದ ಜ್ಞಾನ ಫೌಂಡೇಶನ್ ಬೆಂಗಳೂರು ಕೊಡಮಾಡಿದ ಉಚಿತ ಸಮವಸ್ತ್ರವನ್ನು ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆಯವರು ವಿತರಿಸಿದರು. ಗ್ರಾಮೀಣ ಭಾಗದ ನಮ್ಮ ಶಾಲೆಗೆ ಕಟ್ಟಡಗಳ ಕೊರತೆಯಿದೆ. ಅಗತ್ಯ ಸೌಲಭ್ಯಗಳ ಪೂರೈಕೆಗೆ ದಾನಿಗಳ ಸಹಕಾರ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರೇರಣಾ ಮತ್ತು ಜ್ಞಾನ ಪೌಂಢೇಶನ್ ಈ ರೀತಿಯ ಸಹಕಾರಕ್ಕೆ ಧನ್ಯವಾದ ಎಂದು […]
ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಗಂಗೊಳ್ಳಿ (ಆ, 27) : ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ ವತಿಯಿಂದ ಎಸ್ ಎಂ ಗೋಪಾಲಕೃಷ್ಣ ಬೆಳ್ಳಾರೆ ಪ್ರಾಯೋಜಕತ್ವದಲ್ಲಿ, ಪೈ ಟೆಕ್ಸ್ ಟೈಲ್ಸ್ ಮತ್ತು ಪೈ ಗಾರ್ಮೆಂಟ್ಸ್ ಗಂಗೊಳ್ಳಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ […]