ಕುಂದಾಪುರ (ಆ, 16) : ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಮಾತ್ರಭೂಮಿಯ ರಕ್ಷಣೆಗಾಗಿ ಹೋರಾಡಿದ ಯೋಧರನ್ನು ಗೌರವಿಸುವ ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ನೇತ್ರತ್ವದಲ್ಲಿ ಆಗಸ್ಟ್ 15 ರಂದು ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿವೃತ್ತ ಯೋಧರಾದ ಶ್ರೀವಿಶ್ವನಾಥ ಹಂದೆ ಕುಂಭಾಶಿ ಹಾಗೂ ಕೋಟ ಪಡುಕರೆಯ ಯೋಧ ಶ್ರೀ ಲೋಹಿತ್ ಪೂಜಾರಿ ಯವರನ್ನು ಅತ್ಯಂತ ಗೌರವ ಪೂರ್ವಕವಾಗಿ ಅವರ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಬಡಾಬಾಳು : ಅಟಲ್ ಜೀ ಬಸ್ ತಂಗುದಾಣ ಉದ್ಘಾಸಿದ ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ
ಸಿದ್ದಾಪುರ (ಆ, 17) : ಸಿದ್ದಾಪುರ ಗ್ರಾಮ ಪಂಚಾಯತ್ ಬಡಾಬಾಳುವಿನಲ್ಲಿ ದೇಶದ ಮಾಜಿ ಪ್ರಧಾನಿ, ಧೀಮಂತ ನಾಯಕ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲಿ ಅಟಲ್ ಜೀ ಬಸ್ ತಂಗುದಾಣ ವನ್ನು ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗ ಬಡಾಬಾಳು ಇದರ ಸದಸ್ಯರು, ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಗಂಗೊಳ್ಳಿ: ಸರಸ್ವತಿ ವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯೋತ್ಸವ
ಗಂಗೊಳ್ಳಿ (ಆ,15): ಇಲ್ಲಿನ ಸರಸ್ವತಿ ವಿದ್ಯಾಲಯದ ಪದವಿಪೂರ್ವ ಕಾಲೇಜು, ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಧ್ವಜಾರೋಹಣವನ್ನು ನೆರವೇರಿಸಿದರು. ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲ ಉಮೇಶ್ ಕರ್ಣಿಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೊಗವೀರ ಯುವ ಸಂಘಟನೆ( ರಿ) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ: ಕಾವೇರಿ ಮೊಗವೀರ್ತಿ ಯವರಿಗೆನೂತನ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ
ಬೈಂದೂರು (ಆ,15): ಮೊಗವೀರ ಯುವ ಸಂಘಟನೆ( ರಿ) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ವತಿಯಿಂದ ಕಾವೇರಿ ಮೊಗವೀರ್ತಿ ಯವರಿಗೆ ನೂತನ ಮನೆಯನ್ನು ನಿರ್ಮಿಸಿ ಕೊಡುವುದರ ಜೊತೆಗೆ ,ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ಆಗಸ್ಟ್15 ರಂದು ಜರುಗಿತು. ಜಿಲ್ಲಾ ಸಂಘಟನೆ ಯ ಅಧ್ಯಕ್ಷರು ಶಿವರಾಮ್ ಕೋಟ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಕುಂದಾಪುರ ಶಾಖಾ ಅಧ್ಯಕ್ಷರಾದ ಕೆ .ಕೆ ಕಾಂಚನ, ಸತೀಶ್ ನಾಯಕ್ ನಾಡ ಪಡುಕೋಣೆ, […]
ವರಲಕ್ಷೀ ಚಾರಿಟೇಬಲ್ ಟ್ರಸ್ಟ್(ರಿ) ಉಪ್ಪುಂದ : ಸ್ವಾತಂತ್ಯ್ರೋತ್ಸವ ದಿನದಂದು ಶ್ರೀ ಗೋವಿಂದ ಬಾಬು ಪೂಜಾರಿಯವರಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ
ತ್ರಾಸಿ (ಆ,15): ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ ಪುಷ್ಪಾ ಉಲ್ಲಾಸ್ ದಂಪತಿಗೆ ಅಗಸ್ಟ್ 15 ರಂದು ನೂತನ ಮನೆಯನ್ನು ಉದ್ಯಮಿ ,ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ತಮ್ಮಕುಟಂಬದ ಸದಸ್ಯರು, ಅಭಿಮಾನಿಗಳು , ಸೇವಾ ಸಂಕಲ್ಪ ಸಂಸ್ಥೆಯ ಸದಸ್ಯರು ಹಾಗೂ ಊರ ಜನತೆಗಳ ಉಪಸ್ಥಿತಿಯಲ್ಲಿ ಶ್ರೀಮತಿ ಪುಷ್ಪಾ ಉಲ್ಲಾಸ್ ದಂಪತಿಗೆ ಮನೆಯ ಕೀ ನೀಡುವುದರ ಮೂಲಕ ಹಸ್ತಾಂತರಿಸಿದರು. ಹಲವು ಬಡ ಕುಟುಂಬಗಳಿಗೆ ಆಶ್ರಯದಾತರಾಗಿರುವ ಶ್ರೀ ಗೋವಿಂದ ಬಾಬು ಪೂಜಾರಿಯವರು ಮಾಧ್ಯಮ […]
ಮಲ್ಪೆ : ಬೋಟ್ ದುರಂತ ತಪ್ಪಿಸಿದ ಈಶ್ವರ್ ಮಲ್ಪೆ ತಂಡ
ಮಲ್ಪೆ (ಆ, 14) : ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಬೋಟುಗಳ ಹಗ್ಗ ತುಂಡಾಗಿ ನೀರಿನ ರಭಸಕ್ಕೆ ಸೈಂಟ್ ಮೇರಿಸ್ ಐಲ್ಯಾಂಡ್ ಕಲ್ಲಿನ ಬಳಿ ಬೋಟ್ ಗಳು ಸಮುದ್ರ ಪಾಲಾಗುವ ಸ್ಥಿತಿಯಲ್ಲಿದ್ದುದ್ದನ್ನು ಗಮನಿಸಿದ ಗಾಳ ಹಾಕುವವರು ಫೋನ್ ಕರೆಯ ಮುಖಾಂತರ ಆಪತ್ಭಾಂಧವ ಈಶ್ವರ್ ಮಲ್ಪೆರವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಈಶ್ವರ್ ಮಲ್ಪೆ ಮತ್ತು ಜಮೀರ್ ಕಲ್ಮಾಡಿ ಸಮುದ್ರದಲ್ಲಿನ ಕಲ್ಲಿನ ಬಳಿ ತೆರಳಿ ಸಮುದ್ರ ಪಾಲಾಗುತ್ತಿದ್ದ ಎರಡು ಬೋಟುಗಳನ್ನು […]
ಎಸ್ಎಸ್ಎಲ್ಸಿ ಫಲಿತಾಂಶ : ಶೇಕಡಾ 98.24 ಅಂಕ ಪಡೆದ ಸುಚಿತ್ ಚಂದ್ರ
ಕುಂದಾಪುರ (ಆ, 13) : ಮುಂಬೈ ಪದ್ಮ ಕಮಲ ಕೇಟರರ್ಸ ಮಾಲಿಕರಾದ ಕಂಡ್ಲೂರು ಚಂದ್ರ ಮೊಗವೀರ ಹಾಗೂ ಶಿಕ್ಷಕಿ ಸುಜಾತ ಚಂದ್ರರ ಪುತ್ರ ಸುಚಿತ್ ಚಂದ್ರ ಕುಂದಾಪುರದ ವಿ.ಕೆ. ಆರ್. ಆಂಗ್ಲ ಮಾದ್ಶಮ ಶಾಲೆಯ ವಿದ್ಯಾರ್ಥಿಯಾಗಿದ್ದು ಈ ವರ್ಷ ನಡೆದ ಎಸ್ .ಎಸ್ .ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 98.24 ಅಂಕ ಪಡೆದಿರುತ್ತಾರೆ. ಶೈಕ್ಚಣಿಕ ಸಾಧನೆಯ ಜೊತೆಗೆ ಇತ ಕ್ರಿಕೆಟ್, ಕ್ವೀಜ್, ಚೆಸ್ ನಲ್ಲಿ ಆಸಕ್ತಿ ಹೊಂದಿದ್ದಾನೆ .
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ವತಿಯಿಂದ ಬಡ ಮಹಿಳೆ ಕಾವೇರಿ ಮೊಗವೀರ್ತಿಯವರಿಗೆ ಮನೆ ನಿರ್ಮಾಣ
ಹೆಮ್ಮಾಡಿ (ಆ, 13) : ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ವತಿಯಿಂದ ಬೈಂದೂರು ತಾಲೂಕಿನ ನಾಡ ಗ್ರಾಮದ ಬಡ ಒಂಟಿ ಮಹಿಳೆ ಹೊರ್ನಿ ಮನೆ ಕಾವೇರಿ ಮೊಗವೀರ್ತಿಯವರಿಗೆ ನೂತನ ಮನೆ “ಅಮ್ಮ” ನಿರ್ಮಾಣ ಮಾಡಿ ಆಗಸ್ಟ್,15 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸತ್ಯನಾರಾಯಣ ಪೂಜೆಯೊಂದಿಗೆ ನೂತನ ಗ್ರಹದ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾನವೀಯ ನೆಲೆಯ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ […]
ಅಗಸ್ಟ್ 15 ರ ಸ್ವಾತಂತ್ರ ದಿನದಂದು ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸಲಿರುವ ಗೋವಿಂದ ಬಾಬು ಪೂಜಾರಿ
ತ್ರಾಸಿ (ಆ, 12) : ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಬಡ ವರ್ಗದ ಜನರಿಗೆ ಕಷ್ಟ ಕಾಲದ ಆಪತ್ಬಾಂಧವನಾಗಿದ್ದಾರೆ. ಆಶ್ರಯ ಇಲ್ಲದಿರುವ ಕಡು ಬಡವರಿಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಮೂರು ಮನೆಗಳನ್ನು ಹಸ್ತಾಂತರಿಸಿದ್ದು , ಇದೀಗ ನಾಲ್ಕನೇ ಮನೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿದೆ. ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ […]
ಕೊಲ್ಲೂರು : ನವಚೈತನ್ಯ ಜೆ. ಎಲ್. ಜಿ. ತಂಡದ ಉದ್ಘಾಟನೆ
ಕೊಲ್ಲೂರು (ಆ, 12) : ಕೊಲ್ಲೂರು ವಲಯ ಮೆಕ್ಕೆ ಒಕ್ಕೂಟದ ವಾಟೇಗುಂಡಿಯಲ್ಲಿ ನೂತನವಾಗಿ ನವಚೈತನ್ಯ ಜೆ.ಎಲ್.ಜಿ. ತಂಡದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ರಾಮ ಎನ್. ಸಂಘದ ಬಗ್ಗೆ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಒಕ್ಕೂಟದ ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್, ಒಕ್ಕೂಟದ ಪದಾಧಿಕಾರಿ ಮಂಜುನಾಥ್ ನಾಯ್ಕ್ ರವರ ಸಮ್ಮುಖದಲ್ಲಿ ನೂತನ ಸಂಘವನ್ನು ಉದ್ಘಾಟನೆ ಮಾಡಲಾಯಿತು. ಸಭೆಯಲ್ಲಿ ನವಚೈತನ್ಯ ಸಂಘದ ಸದಸ್ಯರು ಉಪಸ್ಥಿತರಿದ್ದು, ಸಂಘದ ಉದ್ಘಾಟನೆಯ ಸವಿ […]