ಬೈಂದೂರು (ಆ,15): ಮೊಗವೀರ ಯುವ ಸಂಘಟನೆ( ರಿ) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ವತಿಯಿಂದ ಕಾವೇರಿ ಮೊಗವೀರ್ತಿ ಯವರಿಗೆ ನೂತನ ಮನೆಯನ್ನು ನಿರ್ಮಿಸಿ ಕೊಡುವುದರ ಜೊತೆಗೆ ,ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ಆಗಸ್ಟ್15 ರಂದು ಜರುಗಿತು.
ಜಿಲ್ಲಾ ಸಂಘಟನೆ ಯ ಅಧ್ಯಕ್ಷರು ಶಿವರಾಮ್ ಕೋಟ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಕುಂದಾಪುರ ಶಾಖಾ ಅಧ್ಯಕ್ಷರಾದ ಕೆ .ಕೆ ಕಾಂಚನ, ಸತೀಶ್ ನಾಯಕ್ ನಾಡ ಪಡುಕೋಣೆ, ಉದಯ್ ಕುಮಾರ್ ಹಟ್ಟಿಯಂಗಡಿ, ರಾಜು ಮೆಂಡನ್ ತ್ರಾಸಿ,ನಾಗೇಶ್ ಕಾಂಚನ್ ನಾಡ, ರಾಜು ಶ್ರೀಯನ್, ಸುರೇಶ ವಿಠ್ಠಲ್ ವಾಡಿ,ರವೀಶ್ ಶ್ರೀಯನ್ ಕೋಟೇಶ್ವರ, ಜಯಂತ್ ಅಮೀನ್ ಕೋಟ,ಸ್ಥಳೀಯ ಪಂಚಾಯತ್ ಸದಸ್ಯರು ಉದಯ್ ಜೋಗಿ, ತ್ರಾಸಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಪುತ್ರನ್, ಆನಂದ್ ಮೊಗವೀರ ದೇವಲ್ಕುಂದ, ನರಸಿಂಹ ಬಂಟ್ವಾಡಿ, ಶರತ್ ಶೆಟ್ಟಿ ನಾಡ, ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಪ್ರಭಾಕರ್ ಸೇನಾಪುರ,ಮುಂತಾದ ಗಣ್ಯರ ಸಮ್ಮುಖದಲ್ಲಿ ಕಾವೇರಿ ಮೊಗವಿರ್ತಿಯವರಿಗೆ ಹಸ್ತಾಂತರಿಸಲಾಯಿತು.
ಹೆಮ್ಮಾಡಿ ಘಟಕದ ಕಾರ್ಯದರ್ಶಿ ಲೋಹಿತಾಶ್ವ ಆರ್ ಕುಂದರ್ ಕಾರ್ಯಕ್ರಮವನ್ನು ನಿರೂಪಿಸಿದರು.