ಹೆಮ್ಮಾಡಿ (ಎ. 2): ಪುರಾಣ ಪ್ರಸಿದ್ದ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮ ರಥೋತ್ಸವವು ಇದೇ ಏಪ್ರಿಲ್ 27ರಂದು ನಡೆಯಲಿದ್ದು, ರಥೋತ್ಸವದ ಪೂರ್ವ ತಯಾರಿ ಹಿನ್ನಲೆಯಲ್ಲಿ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಭೆಯು ಏಪ್ರಿಲ್ 4 ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ದೇವಸ್ಥಾನದ ಬಳಿ ಇರುವ ಮಹಿಷಾಸುರ ಮರ್ದಿನಿ ಸಭಾಭವನದಲ್ಲಿ ನಡೆಯಲಿದ್ದು, ಈ ಸಭೆಯನ್ನು ನಾಡೋಜಾ ಡಾ. ಜಿ. ಶಂಕರ್ ರವರು ಉದ್ಘಾಟಿಸಲಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಬೈಂದೂರು ಎಳಜಿತ್ ನ ವಿದ್ಯಾಗೌಡರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ ಬೈಂದೂರಿನ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ
ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ( BSF) ಆಯ್ಕೆಗೊಂಡ ಬೈಂದೂರು ಎಳಜಿತ್ ನ ವಿದ್ಯಾಗೌಡ ರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ ಬೈಂದೂರಿನ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ
ಯೋಧರ ಶೌರ್ಯ ಸಾಹಸಗಳನ್ನು ಪ್ರೋತ್ಸಾಹಿಸಿ : ಯೋಧ ಅನುಪ್ ಪೂಜಾರಿ
ಕುಂದಾಪುರ (ಮಾ. 28) : ಕುಂದಾಪುರ ತಾಲೂಕಿನ ಬೀಜಾಡಿಯ ಶ್ರೀ ನಂದಿಕೇಶ್ವರ ಫ್ರೆಂಡ್ಸ್ ರಿ. ಬೀಜಾಡಿ ಇವರು ಆಯೋಜಿಸಿದ ಶ್ರೀ ನಂದಿಕೇಶ್ವರ ದೇವರ 31 ನೇ ವಾರ್ಷಿಕೋತ್ಸವ ಹಾಗೂ 7ನೇ ವರ್ಷದ ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ವೀರ ಯೋಧ ಅನುಪ್ ಪೂಜಾರಿಯನ್ನು ಸನ್ಮಾನಿಸಲಾಯಿತು.ಗೌರವ ಸನ್ಮಾನ ಸ್ವೀಕರಿಸಿ ಮಾತುಗಳನ್ನಾಡಿದ ಯೋಧ ಅನುಪ್ ಪೂಜಾರಿ ಹೆತ್ತವರು ಮಕ್ಕಳ ಸಾಹಸ ಶೌರ್ಯಗಳನ್ನು ಪ್ರೋತ್ಸಾಹಿಸುತ್ತಾ ದೇಶ ಭಕ್ತಿ ಹಾಗೂ ದೇಶದ ರಕ್ಷಣೆಯ ಕಡೆಗೆ ಗಮನ ಹರಿಸುವಂತೆ […]
ಬಾಲಕನ ಚಿಕಿತ್ಸಾ ವೆಚ್ಚದ ಸಹಾಯಾರ್ಥ ಕ್ರಿಕೆಟ್ ಪಂದ್ಯಕೂಟ
ಕುಂದಾಪುರ (ಮಾ. 26): ಕುಂದಾಪುರದ ನಾಡ ಸೇನಾಪುರದ ರಾಮನಗರ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪುಟಾಣಿ ಬಾಲಕ ರಿಷಿಕ್ ಆಚಾರ್ಯ ಪಡುಕೋಣೆ ಈತನ ಚಿಕಿತ್ಸಾ ವೆಚ್ಚದ ಸಲುವಾಗಿ ನಾಡ- ಸೇನಾಪುರದ ರಾಮನಗರದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಟ – “ಫ್ರೆಂಡ್ಸ್ ಟ್ರೋಫಿ” ಯನ್ನು ಮಾ. 27 ಹಾಗೂ 28ರಂದು ಆಯೋಜಿಸಲಾಗಿದೆ.
ಕಥಾಸ್ಪರ್ಧೆಯಲ್ಲಿ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ
ಉಡುಪಿ (ಮಾ. 26) ಅಬ್ಬಾಸ್ ಮೇಲಿನಮನಿ ಸ್ಮರಣಾರ್ಥ ಗ್ರಾಮೀಣ ಸಾಹಿತ್ಯ ವೇದಿಕೆ ಬಾಗಲಕೋಟೆ ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಯುವ ಬರಹಗಾರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ರಚಿಸಿರುವ ‘ಯಾವುದೀ ಪ್ರವಾಹವು..?’ ಕಥೆಗೆ ಮೊದಲ ಸ್ಥಾನ ಬಂದಿದ್ದು ಮೂರು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
ಡಾ| ಬಿ.ಬಿ. ಹೆಗ್ಡೆ ಕಾಲೇಜು : ಸಾಂಪ್ರದಾಯಿಕ ದಿನಾಚರಣೆ
ಸಂಸ್ಕೃತಿ, ಆಚರಣೆಗಳು ಕೇವಲ ಒಂದು ದಿನಕ್ಕಷ್ಟೇ ಸೀಮಿತವಾಗಬಾರದು. ಧಾರ್ಮಿಕ ಕಾರ್ಯಕ್ರಮಗಳಿಗಾದರೂ ಸಾಂಪ್ರದಾಯಿಕ ಉಡುಗೆ ತೊಡುವಂತಾಗಬೇಕು. ಆ ಮೂಲಕ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಉಳಿಯುವಂತಾದರೆ ಈ ದಿನದ ಆಚರಣೆ ಅರ್ಥಪೂರ್ಣವಾಗುತ್ತದೆ.
ಮಾರ್ಚ್ 21ರಂದು ಗಂಗೊಳ್ಳಿ ಭಾಸ್ಕರ ಕಲೈಕಾರ್ ಮ್ಯೂಸಿಯಂ ಉದ್ಘಾಟನೆ
ಗಂಗೊಳ್ಳಿ (ಮಾ.18) ಕರ್ನಾಟಕ ಸರಕಾರ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಕೊಂಕಣಿ ಅಕಾಡೆಮಿಯ ಕೊಂಕಣಿ ನಕ್ಷತ್ರ ಬಿರುದು, ಎಸ್.ಎಮ್.ಎಸ್. ಕಲಾವೈಭವ ಪ್ರಶಸ್ತಿ ಪುರಸ್ಕೃತ ವ್ಯಂಗ್ಯಚಿತ್ರಗಾರ, ಪ್ರಾಚೀನ ವಸ್ತು ಸಂಗ್ರಹಕಾರ, ಚುಟುಕು ಸಾಹಿತಿ, ಪ್ರದರ್ಶನಕಾರ ಮತ್ತು ಛಾಯಾ ಚಿತ್ರಗ್ರಾಹಕ ಗಂಗೊಳ್ಳಿ ಶ್ರೀ ಭಾಸ್ಕರ ಕಲೈಕಾರ್ ರವರು ಮುಂದಿನ ಯುವ ಪೀಳಿಗೆಗಾಗಿ ನಿರ್ಮಿಸಿರುವ ಮ್ಯೂಸಿಯಂ ಉದ್ಘಾಟನೆ ಇದೇ ಮಾರ್ಚ್ 21ರ ಬೆಳಿಗ್ಗೆ 10-30 ಗಂಟೆಗೆ ಗಂಗೊಳ್ಳಿಯ. ‘ಶ್ರೀ ದೇವಿಪ್ರಸಾದ್’ ಕಲೈಕಾರ್ ಮಠದ ಬಳಿ ನಡೆಯಲಿದೆ. ಈ […]
ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಕುಂದಾಪುರದ ಯುವಕ ತ್ರಿವರ್ಣ ಕಂಡ್ಲೂರು
ಬಾಲ್ಯದಿಂದಲೇ ಕ್ರಿಕೆಟ್ ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ನಿರಂತರ ಶ್ರಮವಹಿಸಿ ಇಂದು ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಕುಂದಾಪುರದ ಮೂಲದ ಯುವಕ ತ್ರಿವರ್ಣ ಕಂಡ್ಲೂರು ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಮಾರ್ಚ್ 11 ರಿಂದ 13 ರ ವರೆಗೆ ಪಡುಗುಡ್ಡೆ ಶ್ರೀ ಸರ್ವೇಶ್ವರ ದೇವಸ್ಥಾನದ 25 ನೇ ವರ್ಧಂತ್ಯುತ್ಸವ
ಉಡುಪಿ (ಮಾ. 10) ಉಡುಪಿ ಜಿಲ್ಲೆ, ಮಲ್ಪೆಯ ಬಾಪುತೋಟ ಪಡುಗುಡ್ಡೆ ಶ್ರೀ ಸರ್ವೇಶ್ವರ ದೇವಸ್ಥಾನದ 25 ನೇ ವರ್ಧಂತ್ಯುತ್ಸವ ಇದೇ ಮಾರ್ಚ್ 11 ರಿಂದ 13 ರ ವರೆಗೆ ನಡೆಯಲಿದೆ. ಮಾರ್ಚ್ 11 ರ ಗುರುವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 12 ಗಂಟೆಗೆ ತುಲಾಭಾರ ಸೇವೆ, ಸಂಜೆ ರಂಗ ಪೂಜೆ ಹಾಗೂ ರಾತ್ರಿ ಸ್ಥಳೀಯ ಪುಟಾಣಿಗಳಿಂದ ಮನೋರಂಜನೆ ಕಾರ್ಯಕ್ರಮ ಮತ್ತು ಶ್ರೀ ಶಕ್ತಿ ಮಹಿಳಾ […]
ಇಂದುಧರ ದೇವಸ್ಥಾನ ಗಂಗೊಳ್ಳಿ : ಅಮೃತ ಮಹೋತ್ಸವ ಹಾಗೂ ನೂತನ ಸಭಾಭವನ ಉದ್ಘಾಟನೆ
ಗಂಗೊಳ್ಳಿ (ಮಾ.8): ಗಂಗೊಳ್ಳಿಯಲ್ಲಿ ಕಳೆದ 75 ವರ್ಷಗಳಿಂದ ಧರ್ಮ ಜಾಗ್ರತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುತ್ತಿರುವ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನ ಕುಂದಾಪುರ ಪರಿಸರದ ಪ್ರಮುಖ ಭಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ಸರಕಾರದ ಹಾಗೂಇತರ ಅನುದಾನವನ್ನು ಬಳಸಿಕೊಂಡು ವ್ಯವಸ್ಥಿತವಾದ ಸಭಾಭವನವನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದು ಬೈಂದೂರಿನ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಅವರು ಮಾರ್ಚ್ 7 ರ ರವಿವಾರ ಶ್ರೀ ಇಂದುಧರ ದೇವಸ್ಥಾನ […]










