ಉಡುಪಿ (ಅ, 30): ಇಲ್ಲಿನ ಕೆಮ್ಮಣ್ಣು ಗಣಪತಿ ವ್ಯವಸಾಯ ಸಂಘ ನಿ. ವತಿಯಿಂದ ಜೀವರಕ್ಷಕ, ಈಜುಪಟು ಶ್ರೀ ಈಶ್ವರ್ ಮಲ್ಪೆ ಯವರ ಸಮಾಜಸೇವೆ ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಯಾಗಿ ಈಶ್ವರ್ ಮಲ್ಪೆ ಯವರು ಸಂತಸವನ್ನು ವ್ಯಕ್ತಪಡಿಸುವುದರ ಜೊತೆಗೆ ಇನ್ನು ಸಮಾಜಸೇವೆಯ ಕರ್ತವ್ಯದ ಹೊಣೆ ಹೆಚ್ಚಾಗಿದೆಯೆಂದು ಸಂತೋಷದಿಂದಲೇ ಹೇಳಿಕೊಂಡರು.
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಪಡುಕೋಣೆಯಲ್ಲಿ ಸಾಫಲ್ಯಗೊಂಡ ಯೋಗ ಶಿಬಿರ
ಪಡುಕೋಣೆ(ಅ,27): ಸ್ಥಳೀಯ ಗ್ರಾಮಾಂತರ ಜನರ ಆರೋಗ್ಯವರ್ಧನೆಗಾಗಿ ಆಯುಷ್ಮಾನ್ ಇಲಾಖೆಯ ಸೂಚನೆಯ ಮೇರೆಗೆ ಅಕ್ಟೋಬರ್ 26 ರಂದು ನಾಡ ಪ್ರಾಥಮಿಕ ಆರೋಗ್ಯಕೇಂದ್ರದ ಪ್ರಾಯೋಜಕತ್ವದಲ್ಲಿ ಇಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀಮಹಾವಿಷ್ಣು ಕಲಾಮಂದಿರದಲ್ಲಿ ಆಯೋಜನೆಗೊಂಡ ಸರಳ ಯೋಗ ಮತ್ತು ಪ್ರಾಣಾಯಾಮ ಶಿಬಿರವು ಅಕ್ಟೋಬರ್ 17ರಿಂದ ಪ್ರಾರಂಭವಾಗಿ 26 ರ ತನಕ 10 ದಿನಗಳ ಪರ್ಯಂತ ಶಿಬಿರಾರ್ಥಿಗಳಿಗೆ ತರಬೇತಿ ನಡೆದು ಸಮಾರೋಪಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಪುರುಷೋತ್ತಮ ಅಡಿಗ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ […]
ಕೋಟೇಶ್ವರ: ಹೆಣ್ಣುಮಕ್ಕಳ ರಕ್ಷಣೆ, ಸಾಂತ್ವನ ಕೇಂದ್ರಕ್ಕೆ ದಾಖಲು
ಕೋಟೇಶ್ವರ(ಅ,22): ಇಲ್ಲಿನ ಪದವಿ ಕಾಲೇಜು ಸಮೀಪದ ಬಸ್ ನಿಲ್ದಾಣ ಒಂದರಲ್ಲಿ ಪ್ರತಿ ರಾತ್ರಿ ಮಧ್ಯಪಾನ ಸೇವಿಸುತ್ತಿದ್ದ ತಮ್ಮ ತಂದೆ ತಾಯಿಯೊಂದಿಗೆ ಅಸುರಕ್ಷತೆಯಿಂದ ಮಲಗುತ್ತಿದ್ದ ಹನ್ನೊಂದು ವರ್ಷ ಮತ್ತು ಒಂದುವರೆ ವರ್ಷದ ಇಬ್ಬರು ಅಬಲೆಯರನ್ನು ಗಮನಿಸಿದ ಸ್ಥಳೀಯ ಆಶಾಕಾರ್ಯಕರ್ತೆಯರು ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರ ಗಮನಕ್ಕೆ ತಂದು ರಕ್ಷಿಸುವಂತೆ ಕೋರಿದ್ದರು. ಆ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲೋಕೇಶ್ ಅಂಕದಕಟ್ಟೆ ಮಾಹಿತಿ ನೀಡಿ ತುರ್ತು ರಕ್ಷಣೆಗೆ ಮನವಿ […]
ಶಿರ್ವ: ಡಂಪಿಂಗ್ ಯಾರ್ಡ್ ಆಗುತ್ತಿದೆ ಶಾಂತಿಗುಡ್ಡೆ
ಶಿರ್ವ(ಅ,21): ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವುದರೊಂದಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಸುತ್ತ-ಮುತ್ತ ದಿನನಿತ್ಯ ಒಡಾಡುವ ನಾಗರಿಕರಿಗೆ ಕೆಟ್ಟ ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡೇ ಹೋಗ ಬೇಕಾದ ಪರಿಸ್ಥಿತಿ ಬಂದೊದಗಿದೆ. ಸುತ್ತಲ ಫಲಪತ್ತೆಯ ಭೂಮಿ ತ್ಯಾಜ ಮತ್ತು ಪ್ಲಾಸ್ಟಿಕ್ ನಿಂದ ತುಂಬಿದೆ. ಇದಕ್ಕೆ ಸಂಬಂದ […]
ಸ್ವಾತಂತ್ರ್ಯ ಹೋರಾಟಗಾರ ಉಪ್ಪುಂದ ಗೋವಿಂದ ಖಾವಿ೯ಯವರ ಮನೆಗೆ ನಾಮ ಫಲಕ ಅಳವಡಿಕೆ
ಉಪ್ಪುಂದ(ಅ,19): ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಸಂಕದ ಬಾಗಿಲು ದಿ.ಗೋವಿಂದ ಖಾರ್ವಿಯವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಅಕ್ಟೋಬರ್ 17 ರ ಭಾನುವಾರದಂದು ನಡೆಯಿತು. “ಸ್ವರಾಜ್ಯ ೭೫” ರ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ನಾಮಫಲಕ ಅಳವಡಿಕೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಸಾಹಿತಿಗಳಾದ ಉಪ್ಪುಂದ ಶ್ರೀ ರಮೇಶ್ ವೈದ್ಯರವರು ನಾಮಫಲಕ ಅನಾವರಣ ಮಾಡಿ ದಿ.ಗೋವಿಂದ ಖಾವಿ೯ಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ […]
ಪ್ರವೀಣ್ ಬಾಳೆಕೆರೆಯವರ ಮಿರಾಕಲ್ ಡ್ಯಾನ್ಸ್ ಟೀಮ್ ಡಾನ್ಸ್ ಸ್ಟುಡಿಯೋ ಶಾಖೆ ಶುಭಾರಂಭ
ಹೆಮ್ಮಾಡಿ(ಅ,17): ಮಿರಾಕಲ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕರಾದ ಪ್ರವೀಣ್ ರವರ ಈ ಡ್ಯಾನ್ಸ್ ಟೀಮ್ ಸತತ ಏಳು ವರ್ಷಗಳಿಂದ ನೃತ್ಯ ತರಬೇತಿಯನ್ನು ನೀಡಿ ಹಲವಾರು ನೃತ್ಯಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಖ್ಯಾತಿ ಈ ತಂಡಕ್ಕಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಡ್ಯಾನ್ಸ್- ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ತನ್ನದೇ ಆದ ಛಾಪನ್ನು ಮೂಡಿಸಿದೆ. ಪ್ರಸ್ತುತ ಮಿರಾಕಲ್ ಡ್ಯಾನ್ಸ್ ಕಟ್ ಬೆಲ್ತೂರುನಲ್ಲಿ ರಾಮ ಲಕ್ಷ್ಮಣ ಸಭಾಗ್ರಹ ಹೆಮ್ಮಾಡಿ (ಕೊಲ್ಲೂರು ರೋಡ್)ಲ್ಲಿ ಹೊಸದಾಗಿ […]
ಅಂಪಾರು: ಪ್ರಕೃತಿ ವಿಕೋಪಕ್ಕೆ ಮನೆ ಹಾನಿ- ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿಯವರಿಂದ ಪರಿಹಾರದ ಚೆಕ್ ವಿತರಣೆ
ಅಂಪಾರು (ಅ,14): ಇತ್ತೀಚೆಗೆ ಅಂಪಾರು ಪರಿಸರದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಮನೆ ಹಾನಿಯಾದ 63 ಕುಟುಂಬಗಳಿಗೆ ಬೈಂದೂರು ಶಾಸಕ ಶ್ರೀ ಬಿ.ಎಮ್ .ಸುಕುಮಾರ್ ಶೆಟ್ಟಿ ಯವರು ಪರಿಹಾರದ ಚೆಕ್ ವಿತರಿಸಿದರು. 25 ℅ ಮನೆ ಹಾನಿಯಾದ ವರಿಗೆ ಐವತ್ತು ಸಾವಿರ ರೂ, 50 ℅ ಮನೆ ಹಾನಿ ಯಾದವರಿಗೆ 3ಲಕ್ಷ ರೂ ಹಾಗೂ ಸಂಪೂರ್ಣ ಮನೆ ಹಾನಿ ಯಾದವರಿಗೆ 5 ಲಕ್ಷ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.ಕ್ರಷಿ ತೋಟ ಹಾನಿಯಾದ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಶಾರದಾ ಪೂಜೆ
ಕುಂದಾಪುರ (ಅ, 11) : ಇಲ್ಲಿನ ಡಾ|ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನವರಾತ್ರಿಯ ಆಚರಣೆಯ ಭಾಗವಾಗಿ ಶಾರದಾ ಪೂಜೆ ನೆರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಮಾತನಾಡಿ ನವರಾತ್ರಿಯ ಶುಭಾಶಯ ಕೋರಿ ಸರ್ವರಿಗೂ ಶಾರದಾದೇವಿಯು ಆಯುರಾರೋಗ್ಯ ನೀಡಿ ಕಾಪಾಡಲಿ ಎಂದರು. ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಪಾಲಕ ಮಹೇಶ್ ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಣ […]
ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಈಶ್ವರ್ ಮಲ್ಪೆ ಆಯ್ಕೆ
ಕೋಟ (ಅ, 12) : ಪ್ರತಿವರ್ಷದಂತೆ ಶ್ರೀ ಅಘೋರೇಶ್ವರ ಕಲಾರಂಗದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡಮಾಡುತ್ತಿರುವ ಶ್ರೀಅಘೋರಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಈ ಸಮಾಜ ಸೇವಕ, ಮುಳುಗು ತಜ್ಞ, ಜೀವರಕ್ಷಕ, ಆಪದ್ಬಾಂಧವ. ಈಶ್ವರ ಮಲ್ಪೆ ಯವರನ್ನು ಆಯ್ಕೆಗೊಳಿಸಲಾಗಿದ್ದು ನವಂಬರ್ 13ರಂದು ಸಂಜೆ ಸಂಜೆ ಸಾಲಿಗ್ರಾಮದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಲಿದೆ ಎಂದು ಶ್ರೀ ಅಘೋರೇಶ್ವರ ಕಲಾರಂಗದ ಕಾರ್ಯದರ್ಶಿ ನಾಗರಾಜ್ ಐತಾಳ್ ಪತ್ರಿಕಾ […]
ಶೆಫ್ ಟಾಕ್ ಸಂಸ್ಥೆಯ ಗುಣಮಟ್ಟದ ಸೇವೆಗೆ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ – 2021 ಪ್ರಶಸ್ತಿ
ಬೈಂದೂರು (ಅ, 12) :ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯ ಜೊತೆಗೆ ಉತ್ತಮ ಆದರಾತಿಥ್ಯಕ್ಕೆ ಹೆಸರುವಾಸಿಯಾದ ಡಾ. ಗೋವಿಂದ ಬಾಬು ಪೂಜಾರಿಯವರ ಮಾಲೀಕತ್ವದ ಶೆಫ್ಟಾಕ್ ಸಂಸ್ಥೆಗೆ ಆಲ್ ಇಂಡಿಯಾ ಬಿಸಿನೆಸ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ -2021 ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ.ಗೋವಿಂದ ಬಾಬು ಪೂಜಾರಿಯವರು ಪ್ರಶಸ್ತಿಯನ್ನು ಸ್ವೀಕರಿಸಿದರು.










