ಉಡುಪಿ ( ನ .17) : ಕರ್ನಾಟಕ ಯುವ ಬರಹಗಾರರ ಬಳಗದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಸಂಸ್ಮರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಪ್ರಥಮ ಕವಿಗೋಷ್ಠಿಯನ್ನು ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಆಸಕ್ತ ಕವಿ-ಕವಯಿತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಜಿ.ಎಸ್. ಕಿರಣ್ ಕುಮಾರ್ ತಿಳಿಸಿದ್ದಾರೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಯಾವುದೇ ವಯೋಮಾನದ ಆಸಕ್ತ ಕವಿ-ಕವಯಿತ್ರಿಯರು […]
Category: ಜಿಲ್ಲಾ ಸುದ್ದಿ
ಸುದ್ದಿ ಸಮಾಚಾರ — > ಜಿಲ್ಲಾ ಸುದ್ದಿ
ಶ್ರೀ ಉದಯಕುಮಾರ್ ಹಟ್ಟಿಯಂಗಡಿಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ(ಆ, 31): ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಅಧಿಕೃತ ಪಟ್ಟಿಯನ್ನು ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ್ದು ಸಮಾಜ ಸೇವಾ ವಿಭಾಗದಲ್ಲಿ ಶ್ರೀ ಉದಯಕುಮಾರ್ ಹಟ್ಟಿಯಂಗಡಿಯವರು ಆಯ್ಕೆಯಾಗಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ (ನಿ), ಇದರ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಂಘದ ಸ್ಥಾಪನೆಯಿಂದ ಹಿಡಿದು ಸಂಘಕ್ಕೆ ಎನ್ ಸಿ ಡಿ ಸಿ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಮೀನುಗಾರಿಕಾ ಸಹಕಾರಿ ಸಂಘ […]
ಉಡುಪಿ: ಎಂಜಿಎಂ ಕಾಲೇಜಿಗೆ ಎರಡು ರ್ಯಾಂಕ್
ಉಡುಪಿ( ಮಾ.07): : ಇಲ್ಲಿನ ಎಂಜಿಎಂ ಪದವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 2021-22 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುತ್ತಾರೆ. ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ಪೂಜಾ ಆರ್. 96.34% ಅಂಕಗಳೊಂದಿಗೆ ತೃತೀಯ ರ್ಯಾಂಕ್ , ತೃತೀಯ ಬಿ.ಎ. ವಿದ್ಯಾರ್ಥಿನಿ ಚಿನ್ಮಯಿ 85.18% ಅಂಕಗಳೊಂದಿಗೆ ಹತ್ತನೇ ರ್ಯಾಂಕ್ ಪಡೆದಿರುತ್ತಾರೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಪತ್ಭಾಂದವ- ಸಮಾಜಸೆವಕ ಈಶ್ವರ್ ಮಲ್ಪೆಗೆ ರಜತ ಗೌರವ
ಕೋಟ(ಜ,26): ಪಂಚವರ್ಣ ಯುವಕ ಮಂಡಲ ಕೋಟ ಇದರ ಪಂಚವರ್ಣ ಮಹಿಳಾ ಮಂಡಲ ಆಶ್ರಯದಲ್ಲಿ ಬೆಳ್ಳಿಹಬ್ಬ ವರ್ಷಾಚರಣೆ ಅಂಗವಾಗಿ ರಜತ ಗೌರವಾರ್ಪಣೆಗೆ ಆಪತ್ಭಾಂದವ ,ಸಮಾಜಸೇವಕ ಈಶ್ವರ್ ಮಲ್ಪೆ ಯವರನ್ನು ಆಯ್ಕೆ ಮಾಡಲಾಗಿದೆ . ಜನವರಿ .28ರಂದು ಕೋಟದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೋಟ ಅಮೃತೇಶ್ವರಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ,ಉದ್ಯಮಿ ಆನಂದ್ ಸಿ.ಕುಂದರ್ ಗೌರವಾರ್ಪಣೆ ನೆರವೇರಿಸಲಿದ್ದಾರೆ. .ಜಯಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಸಮಾಜ ಸೇವಕ ಬಡಾಮನೆ ರತ್ನಾಕರ ಶೆಟ್ಟಿ, ಶ್ರೀಕಾಂತ್ ಶೆಣೈ […]
ಸಿ.ಇ.ಟಿ ಫಲಿತಾಂಶ : ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜು ಪ್ರಥಮ ವರ್ಷದಲ್ಲಿಯೇ ಅಮೋಘ ಸಾಧನೆ
ಕಾರ್ಕಳ (ಜು, 30) : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ -2022 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆಗಳಿಸಿದ್ದಾರೆ. ರಾಜ್ಯದ ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪಾಸನ ಬಿ ಪಿ ರಾಜ್ಯಕ್ಕೆ 42 ನೇ ರ್ಯಾಂಕ್ ಹಾಗೂ ಪಶುವೈದ್ಯಕೀಯ […]
ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ: ರಕ್ತದಾನ ಶಿಬಿರ
ಹೆಮ್ಮಾಡಿ (ಜೂ,12): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ,ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇದರ “ಮತ್ಸ ಜ್ಯೋತಿ” ಸಭಾಂಗಣದಲ್ಲಿ ಜೂನ್,12 ರಂದು ನಡೆಯಿತು. ಮೊಗವೀರ ಮಹಾಜನ ಸೇವಾ ಸಂಘ (ರಿ.) ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆಯ ಅಧ್ಯಕ್ಷರಾದ […]
ಶಿರ್ವ: ರೋವರ್ಸ & ರೇಂಜರ್ಸ್ ಪುನಶ್ಚೇತನಾ ಶಿಬಿರ
ಶಿರ್ವ(ಜೂ, 11): ಸಂತ ಮೇರಿ ಕಾಲೇಜು ಶಿರ್ವ ಇದರ ರೋವರ್ಸ & ರೇಂಜರ್ಸ್ ಘಟಕದ ವತಿಯಿಂದ ಕಾಲೇಜಿನ ರೋವರ್ಸ & ರೇಂಜರ್ಸ್ ಗಳಿಗೆ ಒಂದು ದಿನದ ಪುನಶ್ಚೇತನಾ ಶಿಬಿರವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಶಿಬಿರಕ್ಕೆ ಮುಖ್ಯ ಅತಿಥಿಯಾಗಿ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ಶ್ರೀಮತಿ ಸುಮನ ಶೇಖರ್ ಆಗಮಿಸಿ, ಕಾಲೇಜಿನಲ್ಲಿ ರೋವರ್ಸ & ರೇಂಜರ್ಸ್ ಮಹತ್ವ ಹಾಗೂ ರೋವರ್ಸ & ರೇಂಜರ್ಸ್ ಗಳಿಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಬೇಕಾದ ಮಾರ್ಗದರ್ಶನ […]
ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್: ಟಿ. ಶಶಾಂಕ್ ಶೆಣೈ ಗೆ ಚಿನ್ನದ ಪದಕ
ಉಡುಪಿ(ಜೂ,5): ಬೊಡೋಕಾನ್ ಕರಾಟೆ& ಸ್ಪೋರ್ಟ್ಸ್ ಅಸೋಸಿಯೇಷನ್ ಉಡುಪಿ ಇವರು ಅಂಬಲಪಾಡಿಯಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕಿರಣ್ಸ್ ಡ್ರಾಗನ್ ಫಿಸ್ಟ್ ಮಾರ್ಷಲ್ ಆರ್ಟ್ ವಿದ್ಯಾರ್ಥಿ ಹಾಗೂ ತರಬೇತುದಾರರಾದ ಟಿ. ಶಶಾಂಕ್ ಶೆಣೈ ಸೀನಿಯರ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಕಿಯೋಶಿ ಕಿರಣ್ ಕುಂದಾಪುರ ಇವರ ಶಿಷ್ಯ ಹಾಗೂ ಗಂಗೊಳ್ಳಿ ನಿವಾಸಿ ಟಿ.ದಿನಕರ ಶ್ಯಾನುಭಾಗ್ ಮತ್ತು ಉಷಾ ದಿನಕರ್ ರವರ ಪುತ್ರ .
ಅಂಪಾರು: ನಮ್ಮೂರ ಸಂಭ್ರಮದ ಪೋಸ್ಟರ್ ಅನಾವರಣಗೊಳಿಸಿ ಶುಭ ಹಾರೈಸಿದ ಡಾ.ಡಿ.ವೀರೇಂದ್ರ ಹೆಗ್ಡೆ
ಕುಂದಾಪುರ (ಏ,14):ಇಲ್ಲಿನ ಅಂಪಾರು ಗ್ರಾಮ ಮೂಡುಬಗೆಯಲ್ಲಿ ಮೇ, 11 ರಂದು ಜರುಗಲಿರುವ ಧಾರ್ಮಿಕ -ಸಾಮಾಜಿಕ- ಸಾಂಸ್ಕೃತಿಕ ಸಮಾಗಮ ”ನಮ್ಮೂರ ಸಂಭ್ರಮ’‘ದ ಪೋಸ್ಟರ್ ನ್ನು ಧರ್ಮಸ್ಥಳದ ಧರ್ಮದರ್ಶಿಗಳಾದ ಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಧರ್ಮಸ್ಥಳಕ್ಕೆ ಭೇಟಿ ನೀಡಿದ ಅಂಪಾರಿನ ನಮ್ಮೂರ ಸಂಭ್ರಮದ ತಂಡದ ಬಳಿ ಮಾತನಾಡಿ ಡಾ. ಡಿ. ವೀರೇಂದ್ರ ಹೆಗಡೆಯವರು ಕಾರ್ಯಕ್ರಮದ ಉದ್ದೇಶಗಳನ್ನು ರೂಪು ರೇಷೆಗಳನ್ನು ತಿಳಿದುಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶುಭಕೋರಿದರು.ಕಾರ್ಯಕ್ರಮದ ಬಗ್ಗೆ ವಿವರಣೆ ಪಡೆದು ಸಂತೃಪ್ತರಾದ […]
ದಿ.ಸದಿಯ ಸಾಹುಕಾರ್ ರವರ ಹ್ರದಯ ವೈಶಾಲ್ಯತೆಗೆ ಶರಣು ಶರಣಾರ್ತಿ
ಯಪ್ಪಾ..ಬರೋಬ್ಬರಿ 16.50 ಎಕ್ರೆ ಜಾಗ…ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಕೋಟಿ – ಕೋಟಿ ಬೆಲೆ ಬಾಳುವ ಆಸ್ತಿ ಎಂದು ಹುಬ್ಬೆರಿಸಿ ಆಶ್ಚರ್ಯ ಚಿಕಿತರಾಗಿ ಅಕ್ಕ ಪಕ್ಕದವರ ಜೊತೆ ಮಾತನಾಡುವ ಜನರನ್ನು ಕಂಡು ಹೀಗೆ ಸುಮ್ಮನೆ ಆಲೋಚಿಸತೋಡಗಿದೆ. ಆಧುನಿಕ ಬದುಕಿನ ಈ ನಾಗಾಲೋಟದಲ್ಲಿ ತಾನು,ತನ್ನದು,ತನ್ನದಷ್ಟಕ್ಕೆ ಎನ್ನುವ ಸ್ವಾರ್ಥಪರತೆಗೆ ಒಳಗಾದ ಜನತೆ ಇಂದು ಪರರ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತು ಕೊಡುತ್ತೀರುವುದು ವಾಸ್ತವ.ಈ ಸ್ವಾರ್ಥ ತುಂಬಿದ ಜಗತ್ತೀನಲ್ಲಿ ಒಂದಿಂಚು ಭೂಮಿಗೂ ಹೊಡೆದಾಡುವ ಮನುಷ್ಯರ […]