ಹೆಮ್ಮಾಡಿ (ಏ ,02): ಶ್ರೀ ಕ್ಷೇತ್ರ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ರಥೋತ್ಸವದ ಪೂರ್ವಭಾವಿಯಾಗಿ ದೇವಸ್ಥಾನದ ವಠಾರ ಸ್ವಚ್ಛತೆ ಕಾರ್ಯಕ್ರಮವನ್ನು ಮಾರ್ಚ್ 30 ರಂದು ಹಮ್ಮಿಕೊಳ್ಳಲಾಯಿತು.
ಮೊಗವೀರ ಮಹಾಜನಾ ಸೇವಾ ಸಂಘ(ರಿ.)ಮುಂಬೈ, ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆ, ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ ಹಾಗೂ ಜಿ. ಶಂಕರ್ ಫ್ಯಾಮಿಲಿ(ರಿ.)ಅಂಬಲಪಾಡಿ, ಉಡುಪಿ ಹಾಗೂ ಮೊಗವೀರ ಸ್ತ್ರೀ ಶಕ್ತಿ ಬಗ್ವಾಡಿ ಹೋಬಳಿ, ಬಗ್ವಾಡಿ ಫ್ರೆಂಡ್ಸ್ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಈ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.