ಕುಂದಾಪುರ (ಆ,12): ಜನತ ಪದವಿ ಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ರಿಷಿಕ್,ಸುಜಯ್ ಹಾಗೂ ಪ್ರವೀಕ್ಷಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಹಾಗೆಯೇ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಮುಂದಾರ್ತಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕೋ ಕೋ ಪಂದ್ಯಾಟದಲ್ಲಿ ದರ್ಶನ್ ಮತ್ತು ಸಹನಾ ಆಯ್ಕೆಯಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರು, ಬೋಧಕ -ಬೋಧಕೇತರ ವ್ರಂದ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಅ.15 ರಂದು ಬೆಂಗಳೂರಿ ನಲ್ಲಿ ಆಪದ್ಬಾಂಧವ- ಜೀವ ರಕ್ಷಕ ಈಶ್ವರ್ ಮಲ್ಪೆಯವರಿಗೆ ಡಾ.ಎ ಪಿ ಜಿ ಕಲಾಂ ಪ್ರಶಸ್ತಿ ಪ್ರದಾನ
ಕುಕಂದಾಪುರ(ಅ.15): ಕರಾವಳಿಯ ಆಪದ್ಬಾಂಧವ- ಜೀವ ರಕ್ಷಕ ಈಶ್ವರಮಲ್ಪೆ ಯವರು ಅಕ್ಟೋಬರ್ 15 ಬೆಂಗಳೂರಿನಲ್ಲಿ ಅಕ್ಷಯ ಪಾತ್ರೆ ಮಾನವ ಫೌಂಡೇಶನ್ ವತಿಯಿಂದ ಕೊಡಲಾಗುವ ಡಾ. ಎಪಿಜೆ ಕಲಾಂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಪ್ರಧಾನ ಮಾಡಲಿದ್ದು ಈ ಕಾರ್ಯಕ್ರಮದಲ್ಲಿ ದಿ ಗ್ರೇಟ್ ಕಲಿ ಮಹಿಮಾ ಚೌದ್ರಿ ಬಾಲಿವುಡ್ ಸಿಂಗರ್ ಜಾವೇದ್ ಆಲಿ ಮಿಸ್ ಇಂಡಿಯಾ ಸಿಮ್ರಾನ್ ಅಹುಜಾ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗಣ್ಯ […]
ಶ್ರೀ ಗುರುಕುಲ ತಿಲಕ ಪುರಸ್ಕಾರಕ್ಕೆ ಕೃಷ್ಣಮೂರ್ತಿ ಡಿಬಿ ಆಯ್ಕೆ
ಕುಂದಾಪುರ (ಆ,12):ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ (ಅಕ್ಟೋಬರ್ 5) ಪ್ರಯುಕ್ತ “ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಇವರು ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ನೀಡುವ ಶ್ರೀ ಗುರುಕುಲ ತಿಲಕ ಪುರಸ್ಕಾರ ಕ್ಕೆ ಉಪನ್ಯಾಸಕ ಕೃಷ್ಣಮೂರ್ತಿ ಡಿಬಿ ಆಯ್ಕೆ ಯಾಗಿದ್ದಾರೆ ಕೃಷ್ಣಮೂರ್ತಿ ಡಿಬಿ ಯವರು ಕುಂದಾಪುರದ ಆರ್ ಎನ್ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಕನ್ನಡ ವಿಭಾಗದ ಮುಖ್ಯಸ್ಥರಾದ ಕೆಲಸ ನಿರ್ವಹಿಸುತಿದ್ದಾರೆ.
ಸೇವಾ ಮನೋ ಭಾವನೆ ಹಾಗೂ ಸಹಬಾಳ್ವೆ ಮೂಲಕ ಬದುಕು ಕಲಿಸಲು ಎನ್ ಎಸ್ ಎಸ್ ಸಹಕಾರಿ-ವಿ. ಸುನಿಲ್ ಕುಮಾರ್
ಕಾರ್ಕಳ(ಆ,12): ಸೇವಾ ಮನೋ ಭಾವನೆ ಹಾಗೂ ಸಹಬಾಳ್ವೆ ಮೂಲಕ ಬದುಕು ಕಲಿಸಲು ಎನ್ ಎಸ್ ಎಸ್ ಸಹಕಾರಿ ಯಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು ಅವರು ಕಾರ್ಕಳ ತಾಲೂಕಿನ ಕ್ರಿಯೆಟಿವ್ ಕಾಲೇಜು ವತಿಯಿಂದ ಹಿರ್ಗಾನದ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುಲೋಚನಾ ಸುಂದರ ಶೆಟ್ಟಿ ಕಲಾ ವೇದಿಕೆಯಲ್ಲಿ ನಡೆದ ಕಾಲೇಜಿನ ಮೊದಲ ಎನ್ ಎಸ್ ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸೇವಾ ಭಾವನೆ ಜೀವನದ […]
ನೆತ್ತರ ನೆರವು ಕಾರ್ಯಕ್ರಮದ ಸಂಯೋಜಕರಾಗಿ ಲ .ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು ಆಯ್ಕೆ
ಕುಂದಾಪುರ(ಆ10): ಕುಂದಾಪುರ ತಾಲೂಕು ಯುವ ಬಂಟರ ಸಂಘ(ರಿ) ಕುಂದಾಪುರದ ನೆತ್ತರ ನೆರವು ಕಾರ್ಯಕ್ರಮದ ಸಂಯೋಜಕರಾಗಿ ಲ .ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು ಆಯ್ಕೆಯಾಗಿದ್ದಾರೆ. ಕುಂದಾಪುರ ತಾಲೂಕು ಯುವ ಬಂಟರ ಸಂಘ(ರಿ) ಕುಂದಾಪುರ ,ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ರಕ್ತ ನಿಧಿ ಕೇಂದ್ರ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಡಾ.ಬಿ.ಬಿ ಹೆಗ್ಡೆ ಕಾಲೇಜು, ಭಂಡಾಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು, ಶ್ರೀ ವರದರಾಜ ಶೆಟ್ಟಿ […]
ರಾಜ್ಯ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ್ ಗೆ ಹೆಮ್ಮಾಡಿ ಜನತಾ ಪಿ ಯು ಕಾಲೇಜಿನ ತೇಜಸ್ವಿ ಮಿಥುನ್ ಆಯ್ಕೆ
ಹೆಮ್ಮಾಡಿ(ಆ,10): ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ ನಲ್ಲಿ ಸ್ಪರ್ಧಿಸಿದ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗ ವಿದ್ಯಾರ್ಥಿ ತೇಜಸ್ವಿ ಮಿಥುನ್ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ್ ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಡಾ|ಬಿ.ಬಿ.ಹೆಗ್ಡೆ ಕಾಲೇಜು: ವೈಬ್ರೆಂಟ್ ಸ್ಟಾರ್ಟ್ ಅಪ್@ Rs100 ಸ್ಪರ್ಧೆ
ಕುಂದಾಪುರ (ಆ,06): ವಿದ್ಯಾರ್ಥಿ ದೆಸೆಯಲ್ಲಿಯೇ ಉದ್ಯಮಶೀಲತೆಯ ಕೌಶಲ್ಯಗಳನ್ನು ಬೆಳೆಸುವ ಸಲುವಾಗಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಿಗೆ ವೈಬ್ರೆಂಟ್ ಸ್ಟಾರ್ಟ್ ಅಪ್@ Rs100 ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ ಉಮೇಶ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಶುಭ ಹಾರೈಸಿದರು. ವಿಭಾಗದ ಮುಖ್ಯಸ್ಥರಾದ ನಂದಾ ರೈ ಉಪಸ್ಥಿತರಿದ್ದರು. ನೂರು ರೂಪಾಯಿ ಒಳಗಿನ ಮೊತ್ತದ ಕಚ್ಚಾ […]
ಪುತ್ತೂರು ವಿವೇಕಾನಂದ ಕಾಲೇಜ್ ಗೆ ಎಂ.ಸಿ.ಎ. ಯಲ್ಲಿ ಶೇ.100 ಫಲಿತಾಂಶ
ಪುತ್ತೂರು (ಅ. 8) : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಎಂ.ಸಿ.ಎ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶವು ಪ್ರಕಟಗೊಂಡಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂ.ಸಿ.ಎ ವಿಭಾಗದ ವಿದ್ಯಾರ್ಥಿಗಳು ಶೇ.100 ಫಲಿತಾಂಶದೊಂದಿಗೆ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಪರೀಕ್ಷೆಗೆ ಕಾಲೇಜಿನಿಂದ ಒಟ್ಟು 51 ವಿದ್ಯಾರ್ಥಿಗಳು ಹಾಜರಾಗಿದ್ದು 48 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 3 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. […]
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಣೆ
ಕುಂದಾಪುರ(ಆ,6): ಗಾಂಧೀಜಿಯವರು ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಮಾತ್ರವಲ್ಲದೇ, ದೇಶ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವುದರಲ್ಲಿಯೂ ಮುಂಚೂಣಿಯ ಪಾತ್ರವಹಿಸಿದ್ದರು. ಭಾರತದ ಸಂವಿಧಾನದಲ್ಲಿಯೂ ಅಳವಡಿಸಲಾದ ರಾಮರಾಜ್ಯದ ಪರಿಕಲ್ಪನೆ ಮತ್ತು ಸರಳತೆ, ಸ್ವಚ್ಚತೆಯೆಂಬ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಜನಜೀವನದಲ್ಲಿ ತಲುಪಿಸಿದವರೂ ಗಾಂಧೀಜಿಯವರು. ಹಾಗೆಯೇ ಗಾಂಧೀಜಿಯವರ ಶ್ರೇಷ್ಠ ತತ್ವ ಮತ್ತು ಮೌಲ್ಯಗಳನ್ನು ಅತ್ಯಂತ ಸಾರ್ಥಕ ರೀತಿಯಲ್ಲಿ ಬದುಕಿ ಯಶಸ್ವಿಯಾದವರು ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ […]
ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್ ಶಿಬಿರದ ಪೂರ್ವಭಾವಿ ಸಭೆ
ಕಾರ್ಕಳ(ಆ,06): ಇಲ್ಲಿನ ಮೂರೂರಿನಲ್ಲಿ ಅಕ್ಟೋಬರ್ 12 ರಿಂದ 18 ರ ವರೆಗೆ ಬಿ. ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್ ಶಿಬಿರವು ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಊರಿನ ಹಿರಿಯರು ಹಾಗೂ ಗಣ್ಯರ ಮಾರ್ಗದರ್ಶನದಲ್ಲಿ ಶಿಬಿರದ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆಯಿತು. ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಯವರು ಶಿಬಿರದ ಆಯೋಜನೆಯ ಉದ್ದೇಶ ಮತ್ತು ನಾಗರಿಕ ಸಮುದಾಯಗಳ ಪ್ರಗತಿ, ಊರಿನವರ ಸಹಕಾರ […]










