ಉಡುಪಿ (ಮಾ.06): ಶ್ರೀ ವಿಶ್ವನಾಥ ದೇವಾಲಯ ಮೂಲ್ಕಿ ಇಲ್ಲಿ ಏರ್ಪಡಿಸಿದ 13 ನೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ವಿದ್ಯಾಲಯ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ , ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು , ಪುನರೂರು ಪ್ರತಿಷ್ಠಾನ ಹಾಗೂ ಪುನರೂರು ಡೇಕಾರೇಟ್ ಇವರ ಸಂಯುಕ್ತ ಆಶ್ರಯದಲ್ಲಿ ನಾಡಿನ ಪ್ರಸಿದ್ಧ ಗಾಯಕ ಹಾಗೂ ಸಂಘಟಕರಾದ ಡಾ.ಗಣೇಶ್ ಗಂಗೊಳ್ಳಿ ಯವರಿಗೆ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಗರ್ಭಪೀಠದಿಂದ ಮರಣಪೀಠದೆಡೆಗೆ…
ಗರ್ಭಪೀಠದಿಂದ ಮರಣಪೀಠದೆಡೆಗೆ ಸಾಗುವ ಮಾನವನ ಬದುಕನ್ನು ಕೆದುಕಿದಾಗ ನಡುಕ ಹುಟ್ಟಿಸುವ ನಿಗೂಢತೆ ಅಡಕವಾಗಿರುವುದು ಗೋಚರಿಸದಿರದು. ಸೃಷ್ಠಿಯ ಪ್ರೇಮಾಂಕುರದ ಪರಾಕಾಷ್ಠೆಯಲ್ಲಿ ಹೊರಬರುತ್ತಲೇ ಗರ್ಭಕೋಶದಲ್ಲಿ ತನ್ನ ಆಸ್ತಿತ್ವಕ್ಕಾಗಿ ಜೀವಾಣುರೂಪದಲ್ಲೇ ಕಾದಾಡುವ ಪರಿ ಕೌತುಕವಾದುದು. ಸಾವಿರ ಸಂಖ್ಯೆಯ ಸಹವರ್ತಿಗಳೊಡನೆ ಅಂಜದೆ ಅಳುಕದೆ ಕಾದಾಡಿ ಜಯಸಿದ ಶುಕ್ಲವೊಂದು ಶೋಣಿತದೊಂದಿಗೆ ಒಂದಾಗಿ ಗರ್ಭ ಪೀಠದಲ್ಲಿ ಸ್ಥಿತವಾಗಿ ಬೆಳೆದು ಹೊರ ಬರುವ ಮಾನವನ ಜನನವೇ ಚಿತ್ರ-ವಿಚಿತ್ರವಾದುದು. ಗರ್ಭಲೋಕದಲ್ಲಿ ಅಂತರ್ಮುಖಿಯಾಗಿ ಸೃಷ್ಟಿಯ ಪರಿಪೂರ್ಣತೆಯನ್ನು ಸಿದ್ದಿಸಿಕೊಂಡು ಹೊರಜಗತ್ತಿಗೆ ದೃಷ್ಟಿ ಹಾಯಿಸುವ ಮನವ […]
ಟ್ರಿಪಲ್ ಜಂಪ್ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕುಂದಾಪುರದ ಪ್ರಶಾಂತ್ ಶೆಟ್ಟಿ ಮೊರ್ಟು
ಕುಂದಾಪುರ( ಮಾ.04): 42 ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನ ಟ್ರಿಪಲ್ ಜಂಪ್ ಸ್ಪರ್ಧೆಗೆ ಕುಂದಾಪುರದ ಪ್ರಶಾಂತ್ ಶೆಟ್ಟಿ ಮೊರ್ಟುರವರು ಆಯ್ಕೆಯಾಗಿದ್ದಾರೆ.ಇದೇ ಮಾರ್ಚ್ 27 ರಿಂದ 30 ತನಕ ಬೆಂಗಳೂರಿನ ಕಂಠೀರವ ಸ್ಟೆಂಡಿಯಂನಲ್ಲಿ ನಡೆಯಲಿರುವ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನ ಟ್ರಿಪಲ್ ಜಂಪ್ ಸ್ಪರ್ಧೆಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ಇದರ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಇವರು ಕುಂದಾಪುರ ಟ್ರ್ಯಾಕ್ & ಫಿಲ್ಡ್ ಅಥ್ಲೆಟಿಕ್ […]
ಡಾ.ಗಣೇಶ್ ಗಂಗೊಳ್ಳಿಯವರಿಗೆ ಸನ್ಮಾನ
ಗಂಗೊಳ್ಳಿ(ಮಾ.05): ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇದರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಾಡಗೀತೆ ಮತ್ತು ರೈತ ಗೀತೆ ಹಾಗೂ ಇತರ ಹಾಡುಗಳನ್ನು ಹಾಡಲು ಅತ್ಯುತ್ತಮ ರೀತಿಯಲ್ಲಿ ತರಬೇತಿ ನೀಡಿದ ಗಾಯಕ ಹಾಗೂ ಸಂಘಟಕ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಸಂಸ್ಥೆಯ ವತಿಯಿಂದ ಮಾ.04 ರಂದು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಉಮೇಶ್ ಕಾರ್ಣಿಕ್ , ಶ್ರೀ ರಾಘವೇಂದ್ರ , ಹಾಗೂ ಸಹ ಶಿಕ್ಷಕರಾದ ಶ್ರೀ ಗೋಪಾಲ್ ,ಶ್ರೀಮತಿ […]
ಕರಾಟೆ ಕ್ಷೇತ್ರದ ಸಾಧಕ ಪ್ರತಿಭೆ ಶ್ರೀಶ ಗುಡ್ರಿಯನ್ನು ಅಭಿನಂದಿಸಿದ ಶಾಸಕ ಬಿ .ಎಂ ಸುಕುಮಾರ್ ಶೆಟ್ಟಿ
ವoಡ್ಸೆ(ಮಾ.05): ಕರಾಟೆ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಯುವ ಪ್ರತಿಭೆ ಶ್ರೀಶ ಗುಡ್ರಿ ಯವರನ್ನು ಬೈoದೂರಿನ ಶಾಸಕರಾದ ಶ್ರೀ ಬಿ ಎಂ ಸುಕುಮಾರ್ ಶೆಟ್ಟಿ ಇವರು ಅಭಿನಂದಿಸಿ ಗೌರವಿಸಿದರು. ಯುವಕನ ಸಾಧನೆಯನ್ನು ಪ್ರಶoಸಿಸಿದ ಶಾಸಕರು ತಾಯಿ ಮೂಕಾಂಬಿಕೆಯ ಆಶೀರ್ವಾದದೊಂದಿಗೆ ಇನ್ನಷ್ಟು ಸಾಧನೆ ಮಾಡಲು ಶುಭ ಹಾರೈಸಿದರು.
ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕುಂದಾಪುರ(ಮಾ .03): ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಸಿ.ವಿ.ರಾಮನ್ ಕ್ಲಬ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನ ವನ್ನು ಆಯೋಜಿಸಲಾಗಿದ್ದು 40ಕ್ಕೂ ಅಧಿಕ ತಂಡಗಳು ಪ್ರಥಮ ಸುತ್ತಿನಲ್ಲಿ ಭಾಗವಹಿಸಿ ವಿಭಿನ್ನ ರೀತಿಯ ಮಾದರಿಯನ್ನು ತಯಾರಿಸಿ ಪ್ರದರ್ಶಿಸಿದರು. ಆಯ್ದ ಹದಿನೈದು ಮಾದರಿಗಳ ಪ್ರದರ್ಶನ ಹಾಗೂ ಕೊನೆಯ ಹಂತದ ತೀರ್ಪನ್ನು ರಾಷ್ಟ್ರೀಯ ವಿಜ್ಞಾನ ದಿನದಂದು ನಡೆಸಲಾಯಿತು. ಅತಿಥಿ ಹಾಗೂ ತೀರ್ಪು ಗಾರರಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಪ್ರಶಸ್ತಿ ವಿಜೇತ ಗಣಿತ ಪ್ರಾಧ್ಯಾಪಕರಾದ ಶ್ರೀ ಉದಯಕುಮಾರ್ ಹಾಗೂ ಭಟ್ಕಳದ ಸಿದ್ದಾರ್ಥ […]
ರಾಜ್ಯಮಟ್ಟದ ಕವನ ಸ್ಪರ್ಧೆ: ನರೇಂದ್ರ ಎಸ್. ಗಂಗೊಳ್ಳಿ ಪ್ರಥಮ
ಗಂಗೊಳ್ಳಿ(ಮಾ.03): ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಬೈಲಹೊಂಗಲ ಇವರ ವತಿಯಿಂದ ಕಳೆದ ನವೆಂಬರ್ ನಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ರಾಣಿ ಮಲ್ಲಮ್ಮ ಕುರಿತಾದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಅವರ ‘ವೀರರಾಣಿ ಬೆಳವಡಿ ಮಲ್ಲಮ್ಮ’ ಹೆಸರಿನ ಕವಿತೆಗೆ […]
ಗಂಗೊಳ್ಳಿ : ಮಾ.05 ರಂದು ಬೈಂದೂರು & ಕುಂದಾಪುರ ತಾಲೂಕು ಮಟ್ಟದ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ
ಗಂಗೊಳ್ಳಿ (ಮಾ.02) : ಗೌಂಡ್ ರೈಡರ್ಸ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಬೈಂದೂರು & ಕುಂದಾಪುರ ತಾಲೂಕು ಮಟ್ಟದ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಗೌಂಡ್ ರೈಡರ್ಸ್ ಪ್ರೀಮಿಯರ್ ಟ್ರೋಫಿ-2023 ಇದೇ ಮಾರ್ಚ್ 05 ರಂದು ಗಂಗೊಳ್ಳಿ ಎಸ್ ವಿ ಕಾಲೇಜಿನ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರವೇಶ ಶುಲ್ಕ 500 ರೂ ನಿಗದಿ ಪಡಿಸಲಾಗಿದ್ದು, ಪ್ರಥಮ ಬಹುಮಾನ 7,007/- + ಶಾಶ್ವತ ಫಲಕ,ದ್ವಿತೀಯ 5,005/- + ಶಾಶ್ವತ ಫಲಕ, […]
ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಂದ ಜೆ.ಇ.ಇ. B. Arch ನಲ್ಲಿ ಉತ್ತಮ ಸಾಧನೆ
ಕಾರ್ಕಳ (ಫೆ.28) : ಇಲ್ಲಿನ ಕ್ರಿಯೇಟಿವ್ ಪ. ಪೂ ಕಾಲೇಜಿನ ವಿದ್ಯಾರ್ಥಿಗಳು ಜನವರಿ ತಿಂಗಳಿನಲ್ಲಿ ನ್ಯಾಷನಲ್ ಎಜೆನ್ಸಿ ನಡೆಸಿದ ಜಂಟಿ ಪ್ರವೇಶ ಪರೀಕ್ಷೆ-ಮುಖ್ಯ (ಜೆಇಇ-ಮೈನ್) 2ಎ (ಆರ್ಕಿಟೆಕ್ಚರ್) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ವಿದ್ಯಾರ್ಥಿಗಳಾದ ಕು. ದೀಕ್ಷಾ ಪಾಂಡು 95.8311 ಪರ್ಸಂಟೈಲ್, ಸಾತ್ವಿಕ್ ಕೆ ಭಟ್ 91.4659 ಪರ್ಸಂಟೈಲ್, ವರುಣ್ ಜಿ ನಾಯಕ್ 86.1552 ಪರ್ಸಂಟೈಲ್ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕ್ರಿಯೇಟಿವ್ ಕಾಲೇಜಿನ […]
ಶ್ರೀ ಸದಾನಂದ ರವರಿಗೆ ಪಿಎಚ್ಡಿ ಪದವಿ ಪ್ರದಾನ
ಉಡುಪಿ (ಫೆ.28): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಸದಾನಂದ ಎಲ್ ರವರು ಬ್ಯಾರೀಸ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ ಆಜೀಜ್ ಮುಸ್ತಫ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಮ್ ಎಲ್ ಅಪ್ರೊಚಸಸ್ ಟವರ್ಡ್ಸ್ ಡಿಟೆಕ್ಟಿಂಗ್ ಆಂಡ್ರಾಯಿಡ್ ಸ್ಪೆಸಿಫಿಕ್ ಅಡ್ವಾನ್ಸ್ಡ್ ಮಾಲ್ವೆರ್ಸ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ […]










