ಕುಂದಾಪುರ, (ಏ, 17) : ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ್ಯ ಬೆಳೆಸುವ ಉದ್ಧೇಶದಿಂದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿರುವ ‘ವಿ-ಗ್ರೋ’ ಬ್ಯುಸಿನೆಸ್ ಡೇ ಇದರ ಮೊದಲನೇ ಹಂತದ ವ್ಯವಹಾರ ಯೋಜನೆ ಪ್ರಸ್ತುತಿ ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿಗಳು ತಮ್ಮಲ್ಲಿರುವ ವ್ಯವಹಾರ ಜ್ಞಾನವನ್ನು, ಹೊಸ ಹೊಸ ಕ್ರಿಯಾ ಯೋಜನೆ ಮತ್ತು ಯೋಚನೆಯನ್ನು ಪ್ರಸ್ತುತ ಪಡಿಸುವ ಮೂಲಕ, ಕೌಶಲ್ಯ ಅಭಿವೃದ್ಧಿಗೆ ಇದೊಂದು ಸೂಕ್ತ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಎಕ್ಸಲೆಂಟ್ ಪಿ.ಯು ಕಾಲೇಜು ಕುಂದಾಪುರ : ಸ್ಪರ್ಧಾತ್ಮಕ ಪರೀಕ್ಷೆಗೆ ಗುಣಮಟ್ಟದ ತರಬೇತಿ
ಎಂ.ಎo . ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಇದರ ಅಂಗಸoಸ್ಥೆ ಎಕ್ಸಲೆಂಟ್ ಪಿ.ಯು ಕಾಲೇಜ್ ಕುಂದಾಪುರ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಹೊಸ ಆಡಳಿತದೊಂದಿಗೆ ಕಳೆದ ಕೆಲವು ವರ್ಷಗಳಿಂದ ಪಿಯುಸಿ ವಿಜ್ಞಾನ ವಿಭಾಗದ ಪಿಸಿಎಮ್ಬಿ, ಪಿಸಿಎಮ್ಸಿ, ಪಿಸಿಎಮ್ಎಸ್ ಮತ್ತು ವಾಣಿಜ್ಯ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಸ್ಟಾಟಿಸ್ಟಿಕ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಿ.ಯು.ಸಿ ಶಿಕ್ಷಣವನ್ನು ನೀಡುತ್ತಾ ಪಿ.ಯು.ಸಿ ವಿಭಾಗದಲ್ಲಿ ರಾಜ್ಯಕ್ಕೆ ಅನೇಕ ರ್ಯಾಂಕ್ಗಳನ್ನು ನೀಡಿರುವ ಪ್ರತಿಷ್ಠಿತ ಕಾಲೇಜ್ ಎಕ್ಸಲೆಂಟ್ […]
ಕ್ರಿಯೇಟಿವ್ ಕಾಲೇಜ್ ಉಡುಪಿ :ಸಂವಿಧಾನ ಶಿಲ್ಪಿ ಡಾ. ಬಿ . ಆರ್ ಅಂಬೇಡ್ಕರ್ ರವರ 132 ನೇ ಜನ್ಮದಿನಾಚರಣೆ
ಉಡುಪಿ(ಎ,14): ಮಹಾನ್ ಮಾನವತವಾದಿ, ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಜಗತ್ತಿನಾದ್ಯಂತ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಅತ್ಯುನ್ನತ ವಿದ್ಯಾಭ್ಯಾಸವನ್ನು ಮಾಡಿ, ಶೋಷಿತ ಸಮುದಾಯದ ಬಾಳಿನ ಬೆಳಕಾಗಿ, ಇಡೀ ವಿಶ್ವವೇ ಮೆಚ್ಚುವಂತಹ ಜಗತ್ತಿನ ಅತಿ ದೊಡ್ಡ , ಶ್ರೇಷ್ಠ ಸಂವಿಧಾನವನ್ನು ರಚಿಸಿದ ಕೀರ್ತಿ ಅಂಬೇಡ್ಕರ್ ರವರದ್ದು. ಅವರ ಕಠಿಣ ಪರಿಶ್ರಮ, ನಡೆದು ಬಂದ ದಾರಿ, ಅವರ ಜ್ಞಾನ, ಇಡೀ ವಿಶ್ವಕ್ಕೆ ಮಾದರಿ ಎಂದು […]
ಕ್ರಿಯೇಟಿವ್ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ
ಕಾರ್ಕಳ(ಎ,14): ಸಂವಿಧಾನ ಶಿಲ್ಪಿ ಡಾ| ಬಿ ಆರ್ ಅಂಬೇಡ್ಕರ್ ರವರ 132 ನೇ ಜಯಂತಿಯನ್ನು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಡಾ| ಬಿ ಆರ್ ಅಂಬೇಡ್ಕರ್ ರವರು ವಿದೇಶದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ (ಪಿಹೆಚ್ಡಿ) ಪದವಿ ಪಡೆದ ಮೊದಲ ಭಾರತೀಯ. ಸುಮಾರು 64 ವಿಷಯಗಳಲ್ಲಿ ಸ್ನಾತಕೊತ್ತರ ಪದವಿಗಳನ್ನು ಹಾಗೂ ಒಂಬತ್ತು ಭಾಷೆಗಳನ್ನು ಬಲ್ಲವರಾಗಿದ್ದರು. ವಿಶ್ವದರ್ಜೆಯ ವಕೀಲರು, ಸಾಮಾಜ ಸುಧಾರಕರೂ ಆಗಿದ್ದವರು. ಭಾರತದ ದಲಿತ ಚಳವಳಿಗಳ ಹಿಂದಿನ ಶಕ್ತಿ ಎಂಬ […]
ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ “ESPERANZA 2K23” ಫ್ರೆಶರ್ಸ್ ಡೇ ಸಂಭ್ರಮ
ಕುಂದಾಪುರ(ಎ:06): ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ “ESPERANZA 2K23” ಫ್ರೆಶರ್ಸ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಿಕೊಂಡರು. ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಜೆನಿಫರ್ ಫ್ರೀಡಾ ಮಿನೇಜೆಸ್ ಹಾಗೂ ಐ.ಎಂ.ಜೆ. ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ದೋಮ ಚಂದ್ರಶೇಖರ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಐ.ಎಂ.ಜೆ.ಐ.ಎಸ್.ಸಿ. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ಮತ್ತು […]
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್: ಬೇಸಿಗೆ ಶಿಬಿರ
ಕುಂದಾಪುರ(ಎ,06): : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ, ವಿದ್ಯಾರ್ಥಿಗಳು ಬೇಸಿಗೆಯ ರಜಾ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯುವ ಮತ್ತು ಹಳ್ಳಿ ಜನರ ಬದುಕಿನ ಸೊಗಡನ್ನು ಪರಿಚಯಿಸುವ ಉದ್ದೇಶದೊಂದಿಗೆ ಪ್ರಪ್ರಥಮ ಬಾರಿಗೆ ಪಾರಂಪರಿಕ ವಾತಾವರಣದಲ್ಲಿ ಕಲಿಕಾನುಭವ ಒದಗಿಸುವ ಅಪರೂಪದ ಒಂದು ವಿಭಿನ್ನ ಮತ್ತು ವಿನೂತನವಾದ 10 ದಿನಗಳ ಬೇಸಿಗೆ ಶಿಬಿರ ” ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ […]
ಮಿಲಾಗ್ರಿಸ್ ಕಾಲೇಜನಲ್ಲಿ ನಂಗೆಲಿಯ ರೂಪಕ
ಉಡುಪಿ(ಎ,06): ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದಲ್ಲಿ ಎಪ್ರಿಲ್ 06 ರ ಗುರುವಾರ ಅಪರಾಹ್ನ ನೆಡೆದ ವಿದ್ಯಾರ್ಥಿ ದರ್ಬಾರ್ ಕಾರ್ಯಕ್ರಮದಲ್ಲಿ ಕೇರಳದಲ್ಲಿ 19 ನೇ ಶತಮಾನದ ಸಂದರ್ಭದಲ್ಲಿ ಇದ್ದ ನಂಗೆಲಿಯ ಎನ್ನುವ ಮಹಿಳೆಯ ಮೂಲಕ ಮೊಲೆ ತೆರಿಗೆ ಕಾನೂನು ನಿಂತು ಹೋದ ಬಗ್ಗೆ ಕಾಲೇಜ್ ನ ಪ್ರಾಂಗಣದಲ್ಲಿ ದಲ್ಲಿ ಉಡುಪಿಯ ರೋಬೋ ಸಾಫ್ಟ್ ಉದ್ಯೋಗಿ ಬಿ. ಇ ಪದವೀಧರೆ ಹೊನ್ನಾವರದ ಚಿಕ್ಕನಕೊಡಿಯ ಕುಮಾರಿ ಪವಿತ್ರ ರೂಪಕದ ಮೂಲಕ ವಿದ್ಯಾರ್ಥಿಗಳಿಗೆ ಅಭಿನಯ ಮಾಡಿ ತೋರಿಸಿದರು. […]
ಹೆಮ್ಮಾಡಿಯಲ್ಲಿ ಎ.09 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹೆಮ್ಮಾಡಿ(ಎ,06): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಹೆಮ್ಮಾಡಿ, ರಕ್ತನಿಧಿ ಕೆಎಂಸಿ ಆಸ್ಪತ್ರೆ ಮಣಿಪಾಲ ಇವರ ನೇತೃತ್ವದಲ್ಲಿ ಏಪ್ರಿಲ್, 09 ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮತ್ಸಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕರು […]
ಜೆಸಿಐ ಬ್ರಹ್ಮಾವರ ಸೇವಾಮೇ : ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಸನ್ಮಾನ ಕಾರ್ಯಕ್ರಮ
ಬ್ರಹ್ಮಾವರ (ಎ.,06): ಇಲ್ಲಿನ ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಸಂಸ್ಥೆಯ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಅಡಿಯಲ್ಲಿ ಇತ್ತೀಚೆಗೆ ಬ್ರಹ್ಮಾವರದ ಘನ ಮತ್ತು ದ್ರವ ಸಂಪನ್ಮೂಲ ಘಟಕ ದಲ್ಲಿ ಸೇವೆ ಮಾಡುತ್ತಿರುವ 6 ಜನ ಸ್ವಚ್ಚತಾ ಕಾರ್ಯಕರ್ತೆಯರಿಗೆ ಅವರ ಸೇವೆಯನ್ನು ಗುರುತಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ನಾಗವೇಣಿ ಪಂಡರಿನಾಥ್, ಉಪಾದ್ಯಕ್ಷರಾದ ದೇವಾನಂದ್ ನಾಯಕ್ ಹಂದಾಡಿ ಪಂಚಾಯತ್ ಉಪಾದ್ಯಕ್ಷರಾದ ಶ್ರೀಮತಿ ಶೋಭಾ ಪೂಜಾರಿ , […]
ಬದುಕಿನ ಸ್ವಯಂ ವಿಶ್ಲೇಷಣೆ ಮುಖ್ಯ : ನರೇಂದ್ರ ಎಸ್ ಗಂಗೊಳ್ಳಿ
ಗಂಗೊಳ್ಳಿ(ಏ .01): ನಮ್ಮ ಬದುಕಿನ ಸ್ವಯಂ ವಿಶ್ಲೇಷಣೆ ಮಾಡಿಕೊಂಡಾಗ ಆತ್ಮತೃಪ್ತಿ ಸಂತೋಷ ಕಾಣಸಿಗುವಂತಾಗಬೇಕು ಅದು ನಿಜವಾದ ಬದುಕಿನ ಸಾರ್ಥಕತೆ ಎಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಶ್ರೀ ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಇದರ 39ನೇ ವಾರ್ಷಿಕೋತ್ಸವ ಮತ್ತು ಗುರು ಜ್ಯೋತಿ ಶಿಕ್ಷಣ ನಿಧಿ ಯೋಜನೆಯ 22ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ […]










