ಗಂಗೊಳ್ಳಿ(ಆ,26): ಇಲ್ಲಿನ ಸರಸ್ವತಿ ವಿದ್ಯಾಲಯದ ಲೈಬ್ರರಿ ಹಾಲ್ ನಲ್ಲಿ ಇತ್ತೀಚಿಗೆ ಗಂಗೊಳ್ಳಿಯ ರೋಟರಾಕ್ಟ್ ಕ್ಲಬ್ ನ ಪದಪ್ರಧಾನ ಸಮಾರಂಭ ಜರುಗಿತು . 2022 -23ನೇ ಸಾಲಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶ್ರೇಯಾ. ಜಿ ಹಾಗೂ ಕಾರ್ಯದರ್ಶಿಯಾಗಿ ಕಿರಣ್ ಆಯ್ಕೆಯಾದರು. ರೋಟರಾಕ್ಟ್ ಡಿಸ್ಟ್ರಿಕ್ಟ್ ಚೇರ್ಮನ್ ಜೈ ವಿಠ್ಠಲ್, ಪದಪ್ರಧಾನ ನೆರವೇರಿಸಿದರು. ರೊಟ್ರಾಕ್ಟ್ ವೈಸ್ ಚೇರ್ಮನ್ ಚಂದ್ರ ಪೂಜಾರಿ, ರೊಟ್ರ್ಯಾಕ್ ಜೋನಲ್ ಕೋ ಆರ್ಡಿನೇಟರ್ ಜಾನ್ಸನ್ ಡಿ ಅಲ್ಮೇಡ ಪದ ಪ್ರಧಾನ ಸಮಾರಂಭವನ್ನು […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಗೀತಗಾಯನ :ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ (ಆ,26): ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರ ಸಂಯುಕ್ತಾಶ್ರಯದಲ್ಲಿ ಕುಂದಾಪುರದ ರೋಟರಿ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ದೇಶಭಕ್ತಿಗೀತಗಾಯನ ಸ್ಪರ್ಧೆಯಲ್ಲಿ […]
ಡಾ.ಬಿ.ಬಿ.ಹೆಗ್ಡೆ ಕಾಲೇಜಿಗೆ ನ್ಯಾಕ್ “B++’’ಗ್ರೇಡ್ ಮಾನ್ಯತೆ
ಕುಂದಾಪುರ (ಆ,24):ಕುಂದಾಪುರ ಎಜುಕೇಶನ್ ಸೊಸೈಟಿ(ರಿ.), ಪ್ರವರ್ತಿತ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ.ಬಿ.ಬಿ.ಹೆಗ್ಡೆ ಕಾಲೇಜಿಗೆ ಯುಜಿಸಿ “ನ್ಯಾಕ್’ ಸಂಸ್ಥೆಯು “B++’ ಗ್ರೇಡ್ ಮಾನ್ಯತೆ ನೀಡಿದೆ. ಹೊಸ ಮಾನ್ಯತಾ ಕ್ರಮದಲ್ಲಿ ಸಿಜಿಪಿಎ 2.92/4. ಸಂಸ್ಥೆ ಪಡೆದಿದ್ದು ಮಂಗಳೂರು ವಿ ವಿ ವ್ಯಾಪ್ತಿಗೆ ಒಳಪಟ್ಟಿರುವ ಅನುದಾನ ರಹಿತ ಶಿಕ್ಷಣ ಸಂಸ್ಥೆಯೊಂದು ಕೇವಲ 11 ವರ್ಷಗಳಲ್ಲಿ ಮಾಡಿದ ಸಾಧನೆಗೆ ಮೊಟ್ಟ ಮೊದಲ ಬಾರಿಗೆ B++ Grade ಬಂದಿರುವುದು ಬಹಳ ವಿಶೇಷವಾಗಿದೆ ಎಂಬುದಾಗಿ ಕಾಲೇಜು ಪ್ರಕಟಣೆಯಲ್ಲಿ […]
ಚದುರಂಗ ಸ್ಪರ್ಧೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಕುಂದಾಪುರ(ಆ,22): ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರು ಆಯೋಜಿಸಿರುವ ಜಿಲ್ಲಾ ಮಟ್ಟದ ಬಾಲಕ – ಬಾಲಕಿಯರ ಚದುರಂಗ ಸ್ಪರ್ಧೆ ಶ್ರೀ ಮೂಕಾಂಬಿಕ ದೇವಳದ ಸ್ವತಂತ್ರ ಪ.ಪೂ. ಕಾಲೇಜು ಕೊಲ್ಲೂರು ಆ,22 ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳಾದ ಮಾನಸ ಪ್ರಥಮ ಸ್ಥಾನ ಹಾಗೂ ನಿಹಾಲ್ ಎನ್ ಶೆಟ್ಟಿ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು […]
ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ: ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಛಾಯಾ ಸಿ ಪೂಜಾರಿ ರಾಜ್ಯಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ( ಆ,22): ಪದವಿಪೂರ್ವ ಶಿಕ್ಷಣ ಇಲಾಖೆವತಿಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆ,19ರಂದು ಆಯೋಜಿಸಿದ ಉಡುಪಿ ಜಿಲ್ಲಾ ಪದವಿಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಛಾಯಾ ಸಿ.ಪೂಜಾರಿ ಜಿಲ್ಲೆಗೆ ಚತುರ್ಥ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಹಾಗೆಯೇ ಬಾಲಕಿಯರ ವಿಭಾಗದ ಜಿಲ್ಲಾ ಮಟ್ಟದ ಸಮಗ್ರ ಪ್ರಶಸ್ತಿಯನ್ನು ಜನತಾ ಸ್ವತಂತ್ರ […]
ಹಾವೇರಿ: ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಜನ್ಮ ದಿನಾಚರಣೆ
ಹಾವೇರಿ(ಆ,15): ಇಲ್ಲಿನ ನರಸೀಪುರದ ಸುಕ್ಷೇತ್ರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪರಮ ಪೂಜ್ಯ ಜಗದ್ಗುರಗಳಾದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಜನ್ಮದಿನಾಚರಣೆಯನ್ನು ಆ,15 ರಂದು ಆಚರಿಸಲಾಯಿತು. ಶ್ರೀಗಳಿಗೆ ಹಿಂದುಳಿದ ಶಾಶ್ವತ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ ಅವರು ಶುಭಾಶಯಗಳು ಕೋರಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಭಾಕರ್ ಕುಂದರ್ ರಾಘವೇಂದ್ರ ಹಾರ್ಮಣ್ ಜೊತೆಯಲ್ಲಿದ್ದರು.
ಬೆಂಗಳೂರಿನ ದೇವರಾಜ ಅರಸು ಭವನದಲ್ಲಿ ಇಂದು ನಡೆದ 75 ನೇ ಸ್ವಾತಂತ್ರ್ಯ ದಿನಾಚರಣೆ
ಬೆಂಗಳೂರು (ಆ,15): ಇಲ್ಲಿನ ದೇವರಾಜ ಅರಸು ಭವನದಲ್ಲಿ ಇಂದು ನಡೆದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಶ್ರೀ ಜಯಪ್ರಕಾಶ ಹೆಗ್ಡೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ,ಅರುಣ್ ಕುಮಾರ್ ಕಲ್ಗದ್ದೆ,ಕಲ್ಯಣ್ ಕುಮಾರ್, HSBS ರಾಜ್ ಶೇಖರ ಹಾಗೂ ಶಾರದಾ ನಾಯಕ್ ಉಪಸ್ಥಿತರಿದ್ದರು. ವರದಿ : ರಾಘವೇಂದ್ರ ಹಾರ್ಮಣ್
ಯುವಶಕ್ತಿ : ನೂತನ ಕಚೇರಿ ಉದ್ಘಾಟನೆ ಯುವಶಕ್ತಿಯಂತಹ ಸಂಸ್ಥೆ ಊರಿನ ಶಕ್ತಿ ಮಾತ್ರವಲ್ಲ, ದೇಶದ ಶಕ್ತಿ : ಆಶಾಲತಾ ಶೆಟ್ಟಿ
ಕುಂದಾಪುರ (ಆ,15) : ಯುವಶಕ್ತಿ ಮಿತ್ರ ಮಂಡಲ (ರಿ.) ಹೆಗ್ಗಾರ್ ಬೈಲು, ವಕ್ವಾಡಿ ಈ ಊರಿನ ಸಾಕ್ಷಿ ಪ್ರಜ್ಞೆ. ಊರಿನ ಸಮಗ್ರ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಂಸ್ಥೆ ಸೂರ್ಯ ಚಂದ್ರರಿರುವ ಕಾಲದವರೆಗೂ ಉಳಿಯಲಿ, ಬೆಳೆಯಲಿ ಎಂದು ಕಾಳಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಆಶಾಲತಾ ಶೆಟ್ಟಿ ಹೇಳಿದರು. ಯುವಶಕ್ತಿಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಶಕ್ತಿಯಂತಹ ಸಂಸ್ಥೆ ಪ್ರತಿ ಊರಿಗೂ ಅಗತ್ಯ. ವಕ್ವಾಡಿ ಈ ಮಟ್ಟಿಗೆ ಅಭಿವೃದ್ಧಿ […]
ಲಯನ್ಸ್ ಕ್ಲಬ್ ಕುಂದಾಪುರ ವತಿಯಿಂದ ರಾಷ್ಟ್ರ ಧ್ವಜ ವಿತರಣೆ
ಕುಂದಾಪುರದ (ಆ.12)ಇಲ್ಲಿನಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ಆಝಾದಿ ಕಾ ಅಮೃತ್ ಮಹೋತ್ಸವ್ ‘ ಆಚರಣೆಯ ಪ್ರಯುಕ್ತ ಲಯನ್ಸ್ ಕ್ಲಬ್, ಕುಂದಾಪುರ ಇದರ ವತಿಯಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳಿಗೆ ರಾಷ್ಟ್ರ ಧ್ವಜ ವಿತರಣೆ ಮಾಡಲಾಯಿತು. ಲಯನ್ಸ್ ಕ್ಲಬ್, ಕುಂದಾಪುರ ಇದರ ಅಧ್ಯಕ್ಷರೂ, ಕಾಲೇಜಿನ ಪ್ರಾಂಶುಪಾಲರೂ ಆದ ಶ್ರೀ ನವೀನ್ ಕುಮಾರ ಶೆಟ್ಟಿಯವರು ರಾಷ್ಟ್ರ ಧ್ವಜಕ್ಕೆ ನೀಡಬೇಕಾದ ಗೌರವಸೂಚಕ ನಡಾವಳಿಗಳನ್ನು ವಿವರಿಸಿ ಕಾಲೇಜಿನ ಎಲ್ಲ ಪ್ರಾಧ್ಯಾಪಕರಿಗೆ ಮತ್ತು ಕಛೇರಿ ಸಿಬ್ಬಂಧಿಯವರಿಗೆ ರಾಷ್ಟ್ರಧ್ವಜವನ್ನು ವಿತರಿಸಿದರು.
ಸಿ.ಎ ಫೌಂಡೇಶನ್ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ 3 ವಿದ್ಯಾರ್ಥಿಗಳು ತೇರ್ಗಡೆ
ಉಡುಪಿ(ಆ,12): ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ನಡೆಸುವ ಸಿ.ಎ (C.A) ಫೌಂಡೇಶನ್ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್ ಎ ಎಂ ಹಾಗೂ ಅಭಿಷೇಕ್ ಲಕ್ಷ್ಮಣ್ ನಾಯ್ಕ್ ಇವರು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ಪ್ರಥಮ ವರ್ಷದ ಸಿ. ಎ ಫೌಂಡೇಶನ್ ಫಲಿತಾಂಶದಲ್ಲಿಯೇ ಅರ್ಹತೆ ಪಡೆದಿರುವುದು ಪ್ರಶಂಸನೀಯ. ಮುಂದಿನ ಸಿ.ಎ ಮತ್ತು ಸಿ.ಎಸ್.ಇ.ಇ.ಟಿ ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಅರ್ಹತಾ ಪರೀಕ್ಷೆಯಲ್ಲಿ […]










