ಕುಂದಾಪುರ (ಜೂ, 8) : ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ತಂಡದ ವತಿಯಿಂದ ಜೂನ್ 6 ರಂದು ಸಂತೆಕಟ್ಟೆಯ ಕೃಷ್ಣಾನುಗ್ರಹ ಆಶ್ರಮ ಹಾಗೂ ಉಪ್ಪೂರಿನ ಸ್ಪಂದನ ಆಶ್ರಮದ ಮಕ್ಕಳಿಗೆ ದಾನಿಗಳಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ಇದರ ಗೌರವ ಸಲಹೆಗಾರ ದಿನೇಶ್ ಗಾಣಿಗ ಕೋಟ ಹಾಗೂ ಕೋಟೇಶ್ವರದ ಬ್ರಹ್ಮಶ್ರೀ ಡಿಸ್ಟ್ರಿಬ್ಯೂಟರ್ ನ ಮಾಲಿಕರಾದ ಸಂತೋಷ್ ಶೆಟ್ಟಿನೀಡಿದ ಸಹಾಯಹಸ್ತದಿಂದ ದಿನಬಳಕೆಯ ಸಾಮಾಗ್ರಿ ಹಾಗೂ ತಿಂಡಿ ತಿನಿಸುಗಳನ್ನು […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಪ್ರಾಸ – ತ್ರಾಸಗಳ ಮಧ್ಯೆ
ಎಳೆಯೊಂದು ಸಿಕ್ಕಿತುಬರೆಯುವ ತವಕದಲಿದ್ದೆಮಳೆ ಹೊರಗೆ ಸುರಿಯುತಲಿತ್ತು ಶಬ್ದಗಳ ಕದನದಲ್ಲಿ ಎಳೆ ಕಳೆದು ಹೋಗುವುದರಲ್ಲಿತ್ತುಮತ್ತೆ ಎಳೆಯನ್ನು ಒಳಗೆ ಕರೆ ತಂದೆ ಯಾಕೆಂದರೆ ಹೊರಗೆ ಮಳೆ ತುಂಬಾ ಇತ್ತು ಪ್ರಾಸ -ತ್ರಾಸಗಳ ನಡುವೆ ಗೊಂದಲ ಇತ್ತು ! ಕವನಕೆ ವಸ್ತುವಾಗುವ ಎಳೆ ಮಾಯವಾಗಿತ್ತುನನ್ನ ಒಳಗೆ ಒಂದು ಚಂಚಲತೆ ಇತ್ತು ಅದಕ್ಕೊಂದು ರೂಪ ಕೊಡಲಾಗದ ನೋವಿತ್ತು ಕವನ ಹುಟ್ಟದಿರುವ ಆಕ್ರೋಶ ಇತ್ತು . ಅ ಎಳೆಗೂ ನನ್ನ ಮೇಲೆ ಅಸಹನೆ ಇತ್ತು ಏಕೆಂದರೆ ರಸಿಕತೆ […]
ಮೂಡ್ಲಕಟ್ಟೆ ಎಂ ಐ ಟಿ : ವಿಶ್ವ ಪರಿಸರ ದಿನಾಚರಣೆ
ಕುಂದಾಪುರ (ಜೂ, 06): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಪರಿಸರದ ದಿನದ ಪ್ರಯುಕ್ತ ಆನ್ಲೈನ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪರಿಸರ ಸಂರಕ್ಷಣೆ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೋ. ದೀಪಕ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಪರಿಸರವನ್ನು ಸ್ವಚ್ಚ ವಾಗಿಡುವುದರ ಕುರಿತು ಮಾಹಿತಿ ನೀಡಿದರು. ಗಿಡ- ಮರಗಳನ್ನು ಬೆಳೆಸುವುದು ನಾವು ಸಮಾಜಕ್ಕೆ ನೀಡುವ ಮಹತ್ತರವಾದ ಕೊಡುಗೆಯಾಗಿದ್ದು […]
ಗೋಪಾಡಿ : ಒಂದೇ ಬಾರಿಗೆ ಅರಳಿದ 80 ಬ್ರಹ್ಮಕಮಲ ಹೂವುಗಳು
ಗೋಪಾಡಿ (ಜೂ, 08): ಗೋಪಾಡಿ ಗ್ರಾಮದ ಗಣೇಶ್ ಕಾಂಚನ್ ಪಡುಚಾವಡಿ ಬೆಟ್ಟು ಇವರ ಮನೆಯಲ್ಲಿ ಒಂದೇ ಬಾರಿಗೆ 80 ಬ್ರಹ್ಮಕಮಲ ಹೂವುಗಳು ಅರಳಿದೆ. ವರ್ಷಕ್ಕೊಮ್ಮೆ ಅರಳುವ ಈ ಸುಂದರ ಹೂವುಗಳು ರಾತ್ರಿ ಸುಮಾರು 9 ಗಂಟೆಗೆ ಅರಳಲು ಶುರುವಾಗಿ 12 ಗಂಟೆವರಗೆ ಸಂಪೂರ್ಣವಾಗಿ ಅರಳುತ್ತದೆ. ಹಾಗೆಯೇ ಬೆಳಗ್ಗಿನ ಜಾವದಲ್ಲಿ ಮುದುಡಿಹೋಗುತ್ತದೆ. ಹೂ ಅರಳುವಾಗ ಸುತ್ತಲೂ ಸುವಾಸನೆ ಬೀರುವುದು ಇದರ ವಿಶೇಷ .
ಮಾರಣಕಟ್ಟೆ : ಕೊರೊನಾ ವಾರಿಯರ್ಸ್ಗಳಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
ಹೆಮ್ಮಾಡಿ (ಜೂ, 07): ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಎಜುಕೇಶನಲ್ ಟ್ರಸ್ಟ್ (ರಿ) ಶಿವಮೊಗ್ಗ ಹಾಗೂ ಕುಂದಾಪುರ ಎಜುಕೇಶನಲ್ ಸೊಸೈಟಿ (ರಿ) ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜೂನ್ 07 ರಂದು ಮಾರಣಕಟ್ಟೆಯಲ್ಲಿ ಚಾಲನೆ ನೀಡಲಾಯಿತು. ಧಾರ್ಮಿಕ ದತ್ತಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಸದರಾದ ಬಿ. ವೈ. ರಾಘವೇಂದ್ರ, ಬೈಂದೂರು ಶಾಸಕ ಶ್ರೀ ಬಿ. ಎಂ. […]
ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಪತ್ತೆ – ಸಮಾಜ ಸೇವಕ ಸುರೇಂದ್ರ ಸಂಗಮ್ ನೇತ್ರತ್ವದ ತಂಡದಿಂದ ರಕ್ಷಣೆ
ಕುಂದಾಪುರ (ಜೂ, 7):ಕುಂದಾಪುರದ ಪುರಸಭೆಯ ಬಳಿ ವಯೋವೃದ್ಧನೊಬ್ಬ ಅನಾರೋಗ್ಯ ಪೀಡಿತನಾಗಿ, ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಮಾಜ ಸೇವಕ ಸುರೇಂದ್ರ ಕಾಂಚನ್ ಸಂಗಮ್, ಕುಂದಾಪುರ ಪುರಸಭೆಯ ಉಪಾಧ್ಯಕ್ಷ ಸಂದೀಪ ಖಾರ್ವಿ, ಪತ್ರಕರ್ತ ಕಿರಣ್ ಪೂಜಾರಿ ಮದ್ದುಗುಡ್ಡೆಯವರು 108 ಸಿಬ್ಬಂದಿಯ ಸಹಕಾರದಿಂದ ಸಮೀಪದ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು. ಇವರ ಮಾನವೀಯ ನೆಲೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ : ವಿಶ್ವ ಪರಿಸರ ದಿನಾಚರಣೆ
ಗೋಪಾಡಿ (ಜೂ, 07): ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಂದ್ರ ಕಾಂಚನ್ ಸಂಗಮ್ ಹಾಗೂ ಅಂಗನವಾಡಿ ಶಿಕ್ಷಕಿ ಶ್ರೀಮತಿ ಜಯಂತಿ ರವರು ಸರಿ ಸುಮಾರು 15 ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.ಕೋವಿಡ್ ನಿಯಮದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗೌರವ – ಧನ
ಮೌನ ಮನೆ ಮಾಡಿದೆ. ಹೊರಗೆ ಮೊದಲ ಮುಂಗಾರು ಮಳೆ. ಸಿಡಿಲು, ಗುಡುಗಿನ ಜೊತೆಗೆ ಅ ನಿಮಿತ್ತ ಕೆ.ಇ.ಬಿ. ಯವ ಕರೆಂಟ್ ಬೇರೆ ತೆಗೆದಿದ್ದ. ಮಾತಿಲ್ಲ ಕತೆಯಿಲ್ಲ, ಮಳೆ ಆರ್ಭಟ ಬಿಟ್ಟು ಮಳೆಯನ್ನೇ ನೋಡುತ್ತಾ ಕುಳಿತ ನನಗೆ ಮಧ್ಯಾಹ್ನ ವಿಕಾಸ್ ಹೇಳಿದ ಮಾತು ತಲೆಯಲ್ಲಿ ಕೊರೆಯುತ್ತಾ ಇತ್ತು. ವಿಕಾಸ್ ಯಾರು ಅಂತ ನಿಮಗೆ ಹೇಳಲಿಲ್ಲ! ವಿಕಾಸ್ ಬೆಂಗಳೂರನಲ್ಲಿ ಪರಿಚಯವಾದ ನಟನೆಯಲ್ಲಿ ಆಸಕ್ತಿ ಇರುವ ಹುಡುಗ. ಸಮಾನ ಅಭಿರುಚಿ ಇರುವುದರಿಂದ ಬೇಗನೆ ಗೆಳೆತನವಾಯಿತು. […]
ಭವಿಷ್ಯದ ನಿರೀಕ್ಷೆಯಲ್ಲಿರುವ ಕಂದಮ್ಮಳಿಗೆ ಆಸರೆಯಾಗಿ ನಿಂತ ಸಾಮಾಜಿಕ ಕಳಕಳಿಯ ಸಮಾನ ಮನಸ್ಕರ ಸೇವಾ ತಂಡ
ಉಡುಪಿ (ಜೂ, 06) : ಕಾಡೂರು ಗ್ರಾಮದ ಮುಂಡಾಡಿ ಬಡಾಬೆಟ್ಟು ನಿವಾಸಿ ಚಂದ್ರಾವತಿ ಶೆಟ್ಟಿ ಯವರ ಮಗಳು 10 ವರ್ಷ ಪ್ರಾಯದ ಬಾಲಕಿ ಯುಕ್ತಿ ಶೆಟ್ಟಿ ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದು, ಖಾಯಿಲೆಯ ಅರಿವೂ ಇಲ್ಲದ ಈ ಮಗುವಿನ ನೆರವಿಗಾಗಿ ಕೊಕ್ಕರ್ಣೆ – ಕಾಡೂರು ಸ್ಥಳೀಯ ಪರಿಸರದ ಸಂತೋಷ್ ಶೆಟ್ಟಿ ಮುಂಡಾಡಿ ಅವರ ನೇತೃತ್ವದಲ್ಲಿ ಹಾಗೂ ಅವರ ಆಪ್ತ ಸ್ನೇಹಿತ ವರ್ಗದವರಾದ ಅಶೋಕ್ ಕುಂದರ್ ಮಂದಾರ್ತಿ, ವಸಂತ್ ಕುಮಾರ್ ನುಕ್ಕೂರು, […]
ಕರೋನಾದ ಕಾರ್ಮೋಡದಲ್ಲಿ ಕಾಲೇಜಿನ ಆ ದಿನಗಳು
ಸುಂದರ ಪ್ರಪಂಚದಲ್ಲಿ ರೆಕ್ಕೆ ಬಲಿತ ಹಕ್ಕಿಯಂತೆ ಹಾರಾಡುತ್ತಿದ್ದ ನಾವುಗಳು ಕರೋನ ಮಹಾಮಾರಿಗೆ ಸಿಲುಕಿ ನೆಲೆ ಇಲ್ಲದ ನಡುಗಾಟದ ಜೀವನಕ್ಕೆ ವಿಲವಿಲ ಒದ್ದಾಡುವಂತಹ ಪರಿಸ್ಥಿತಿ. ಅತ್ತ ಕಾಲೇಜಿನ ಸವಿ-ಸಡಗರ ಇಲ್ಲ, ಇತ್ತ ಮುಂದಿನ ಜೀವನದ ಸ್ಪಷ್ಟತೆ ಕಣ್ಣೆದುರಿಗಿಲ್ಲ. ಎಲ್ಲವೂ ಸರಿ ಇದ್ದಿದ್ದರೆ ಅಂತಿಮ ವರ್ಷದ ಪದವಿ ಮುಗಿಸಿ ಎಲ್ಲೋ ಒಂದು ಕಡೆ ನೆಲೆ ಕಂಡುಕೊಳ್ಳುತ್ತಾ ಇದ್ದೇವು. ಆದರೆ ಈ ಕಾಣದ ಕರೋನ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿ ಬಿಟ್ಟಿದೆ. ತರಗತಿ ಗೋಡೆಗಳ […]










