ನಾವುಂದ( ಜೂ, 15) : ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಪ್ರವರ್ತಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋವಿಂದ ಬಾಬು ಪೂಜಾರಿಯವರು ನಾವುಂದ ಗ್ರಾಮದ ಮಸ್ಕಿ ಯ ಶ್ರೀ ಗೋಪಾಲಕ್ರಷ್ಣ ದೇವಸ್ಥಾನದ ವಠಾರದಲ್ಲಿ ಕಡು ಬಡವರಿಗೆ ಕರೋನಾ ಲಾಕ್ಡೌನ್ ಸಮಯದಲ್ಲಿ ದೈನಂದಿನ ನಿರ್ವಹಣಿಗೆ ಬೇಕಾಗುವ ದಿನಸಿ ಸಾಮಾನುಗಳ ಕಿಟ್ ವಿತರಿಣೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಗೋಪಾಲ ಕ್ರಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಈಶ್ವರ ಸಿ ನಾವುಂದ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
“ಸೋಲದಿರು ಎಂದೆಂದೂ”
“ಸೋಲದಿರು ಎಂದೆಂದೂ” ಓ ಮನಸೇ, ನೀ ವಿಶ್ವಬಂಧುಸಾಧನೆಯ ಪಣವ ಸ್ವೀಕರಿಸು ಇಂದು.ಬಾನೇ ಬೀಳಲಿ, ಭುವಿಯೇ ಸೀಳಲಿಸೋಲನ್ನು ಕಂಡು ಕುಸಿಯದಿರು ಎಂದು.ಧೈರ್ಯವ ಬಿತ್ತಿ, ಸಹನೆಯ ಹೊತ್ತಿಸಾಗುತಿರು ಮುಂದೆಂದು, ಸಾಗುತಿರು ಮುಂದೆಂದು.ನೋವಿದ್ದರೆ ಇಂದು, ನಲಿವಿರುವುದು ಮುಂದುನುಗ್ಗುತಿರು ನುಗ್ಗುತಿರು, ಸೋಲದಿರು ಎಂದೆಂದೂ. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಹಳ್ಳಿಹೊಳೆ : ವಿಶೇಷ ಚೇತನರಿಗೆ ಎಪಿಡಿ (ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ) ಸಂಸ್ಥೆಯಿಂದ ಫುಡ್ ಕಿಟ್ ವಿತರಣೆ
ಕುಂದಾಪುರ (ಜೂ, 14): ಹಳ್ಳಿಹೊಳೆಗ್ರಾಮ ಪಂಚಾಯತ್ವ್ಯಾಪ್ತಿಯಲ್ಲಿರುವ ವಿಶೇಷ ಚೇತನರಿಗೆ ಎಪಿಡಿ( ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ) ಸಂಸ್ಥೆಯಿಂದ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ಜೂನ್ , 14 ರಂದು ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ನೋಡಲ್ ಅಧಿಕಾರಿಗಳಾದ ಶ್ರೀ ಹರೀಶ ಶೆಟ್ಟಿಯವರು ಪುಡ್ ಕಿಟ್ ವಿತರಣೆ ಮಾಡಿ ಎಪಿಡಿ ಸಂಸ್ಥೆಯ ಬಗ್ಗೆ ಮತ್ತು ಜೀವನೋಪಾಯ ಕಾರ್ಯಕ್ರಮದ ತರಬೇತಿ ಬಗ್ಗೆ ಮಾಹಿತಿಯನ್ನು ನೀಡಿದರು. ಪಂಚಾಯತ್ […]
ದಾನದಲ್ಲಿ ಕರ್ಣ, ಆದರ್ಶದಲ್ಲಿ ರಾಮ, ಕಾರ್ಮಿಕರ ಅನ್ನದಾತ ಶ್ರೀ ಗೋವಿಂದ ಬಾಬು ಪೂಜಾರಿ
ಅವರ ಒಂದು ಹಿತನುಡಿಯೇ ಸಾಕು ನಿಮ್ಮ ಸಂಕಷ್ಟಗಳ ಸಾಂತ್ವನಕ್ಕೆ . ಅದರಲ್ಲೂ ಅವರ ಶ್ರೀರಕ್ಷೆ, ಸಹಾಯ ಹಾಗೂ ಸಹಕಾರ ಸಿಕ್ಕರಂತೂ ನೀವು ನಿಜವಾಗಿಯೂ ಜೀವನದಲ್ಲಿ ಸಾಧನೆಯ ಜೊತೆಗೆ ಯಶಸ್ಸನ್ನು ಕಾಣುತ್ತೀರಿ. ಜೀವನದಲ್ಲಿ ಎಂದಿಗೂ ಸೋತೆ ಎನ್ನುವ ಭಾವನೆಯೊಂದಿಗೆ ಜೀವನ ನೆಡೆಸಬೇಡಿ ,ಒಂದಲ್ಲ ಒಂದು ದಿನ ಗೆದ್ದೆ ಗೆಲ್ಲುವೆ ಎನ್ನುವ ಛಲದೊಂದಿಗೆ ಜೀವನ ನೆಡೆಸಿ ಎನ್ನುವ ಅವರ ಆದರ್ಶ ಪಾಲನೆಯ ಬದುಕು ಅನುಕರಣೀಯ. ಧೈರ್ಯದಿಂದ ಮುಂದೆ ಹೋಗಿ ,ಜಗತ್ತಿನ ಎಲ್ಲಾ ಕೆಲಸವನ್ನು […]
ಜೆಸಿಐ ಕುಂದಾಪುರ ಸಿಟಿ : ವಿಶ್ವ ರಕ್ತದಾನ ದಿನಾಚರಣೆ
ಕುಂದಾಪುರ (ಜೂ,14): ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಜೆಸಿಐ ಕುಂದಾಪುರ ಸಿಟಿ ಯ ಸದ್ಯಸ್ಯರುಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಯಲ್ಲಿ ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶ್ರೇಷ್ಠದಾನ ಎನ್ನುವ ಸಂದೇಶವನ್ನು ಸಾರಿದರು. ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ವಿಜಯ ಭಂಡಾರಿ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಾಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ಪ್ರಶಾಂತ್ ಹವಾಲ್ದಾರ್ , ಜಯಚಂದ್ರ ಶೆಟ್ಟಿ ಜೇಸಿರೇಟ್ ಅಧ್ಯಕ್ಷೆ ಡಾ|ಸೋನಿ ಹಾಗೂ ಇಂಡಿಯನ್ ರೆಡ್ […]
ಕರೋನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ
ಬೆಂಗಳೂರು (ಜೂ, 14): ಕೋವಿಡ್ 19 ಗೆ ತುತ್ತಾಗಿ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಯ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಧನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದರು.ಇದು ಕೋವಿಡ್-19 ಕ್ಕೆ ತುತ್ತಾಗಿ ಮೃತಪಟ್ಟಿರುವ ಕುಟುಂಬದ ಓರ್ವ ಸದಸ್ಯನಿಗೆ ಮಾತ್ರ ಅನ್ವಯಿಸುತ್ತದೆ.
ಚಿತ್ರದುರ್ಗ ರೆಡ್ ಕ್ರಾಸ್ : ಕೋವಿಡ್ ಸಂಧರ್ಬದಲ್ಲಿನ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ
ಚಿತ್ರದುರ್ಗ (ಜೂನ್ , 13) : ಕೋವಿಡ್ ಸಂಧರ್ಬದಲ್ಲಿನ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ಅಂಗವಾಗಿ ಚಿತ್ರದುರ್ಗ ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಶಾಂತ ರಾಮತೀರ್ಥ ಆಶ್ರಮದ ಶ್ರೀ ಶ್ರೀ ಶ್ರೀ ಪ್ರಹಲ್ಲಾದ್ ಗುರೂಜಿ ರವರನ್ನು ಜೂನ್ 13 ರಂದು ಭೇಟಿ ಮಾಡಿ ಪಲ್ಸ ಓಕ್ಸಿಮೀಟರನ್ನು ರೆಡ್ ಕ್ರಾಸ್ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ಮಜಹರ್ ಉಲ್ಲಾ ಮತ್ತು ನಿರ್ದೇಶಕರಾದ ಗಿರೀಶ್ ರವರು ಉಪಸ್ಥಿತರಿದ್ದರು.
ನರೇಂದ್ರ ಎಸ್ ಗಂಗೊಳ್ಳಿಗೆ ಶಿಕ್ಷಕ ರತ್ನ ಗೌರವ
ಗಂಗೊಳ್ಳಿ ( ಜೂ, 13): ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಯುವ ಸಾಹಿತಿ ಹಾಗೂ ಅಂಕಣಕಾರರೂ ಆಗಿರುವ ಶ್ರೀ ನರೇಂದ್ರ ಎಸ್ ಗಂಗೊಳ್ಳಿ ಅವರ ವಿವಿಧ ಕ್ಷೇತ್ರಗಳಲ್ಲಿನ ಬಹುಮುಖ ಪ್ರತಿಭೆಯನ್ನು ಪರಿಗಣಿಸಿ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಮಂಗಳೂರು ವಿಭಾಗದ ವತಿಯಿಂದ ಶಿಕ್ಷಕ ರತ್ನ ಗೌರವವನ್ನು ನೀಡಿ ಪುರಸ್ಕರಿಸಲಾಗಿದೆ.
ಎಲ್ಲಿರುವೆ ಮನವ ಕಾಡುವ ರೂಪಸಿಯೇ
ದೂರ ಇದ್ದರೂ, ಹತ್ತಿರವೇ ಇದ್ದಂತೆಅನಿಸುತಿದೆ ಮನದೊಳಗೆ…ನೀ ಮನದೊಳಗೆ…. ನೀ ಮರೆಯಲಿ…ಎಲ್ಲೋ ನಿಂತು ನೋಡುತ್ತಿರುವಂತೆಎಲ್ಲಿರುವೆ ನೀನು …..? ಮನದ ಮೂಲೆಯಲಿಎಲ್ಲೋ ಸುಪ್ತವಾಗಿ ಕುಳಿತ ಸವಿ ನೆನಪುಗಳುಗೂಡು ಕಟ್ಟಿ ಹಾರಲು ಕಾಯುತಿದೆಎಲ್ಲಿರುವೆ ನೀನು …..? ಬಯಕೆಗಳ ಭಾಗ್ಯವಿಧಾತೆಬಾಳಿನ ಪ್ರೇಮದೇವತೆಯೇನನ್ನ ಕನಸುಗಳ ಕನಸುಗಾರ್ತಿಯೇಎಲ್ಲಿರುವೆ ನೀನು……..? ನೆನಪಾಗಿ ಕಾಡುವ ಭಾವನಾಮನಸಿನ ಕದ ತಟ್ಟುವ ಕವನಮನದೊಳಗೆ ನೆನಪುಗಳ ಕದನಎಲ್ಲಿರುವೆ ನೀನು, ….? ರೂಪಸಿಯೇ …ಕನಸುಗಾರ್ತಿಯೇಕವನದ ಒಡತಿಯೇಕಾಮನೆಯು ಹೆಪ್ಪುಗಟ್ಟಿಲು ಕಾಯುತಿದೆ ನಿನಗಾಗಿಎಲ್ಲಿರುವೆ ನೀನು….? ಮನವ ಕಾಡುವ ರೂಪಸಿಯೇ……ಎಲ್ಲಿರುವೆ ನೀನು….? […]
ಕುಮಟಾದ ದಿಶಾ ಭಾಗವತ್ ಅಮೆರಿಕದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ
ಕುಮಟಾ (ಜೂ,13): ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೋಡಿಯ ಕು. ದಿಶಾ ಭಾಗವತ ಅಮೇರಿಕಾದ ಕ್ಯಾಲಿಫೋರ್ನಿಯ ಬಾರ್ ಕೌನ್ಸಿಲ್ ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಉತ್ತರಕನ್ನಡ ಜಿಲ್ಲೆ, ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆರಿಸಿದ್ದಾರೆ.ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿ ನಂತರ ಅಮೆರಿಕದಲ್ಲಿ ಯುಎಸ್ಸಿ ಮಾಸ್ಟರ್ ಡಿಗ್ರಿ ಪಡೆದಿರುತ್ತಾರೆ. ಇವರು ಬಹುಮುಖ ಪ್ರತಿಭೆಯಾಗಿದ್ದು, ಉದ್ಯಮಿ ಮಂಜುನಾಥ ಭಾಗವತ್ ಹಾಗೂ ಲಲಿತಾ ಭಾಗವತ್ […]










