ಹೆಮ್ಮಾಡಿ (ಏ. 03): ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಮುಂಭಾಗದಲ್ಲಿರುವ ಶಿಲಾ ಧ್ವಜಸ್ತoಭಕ್ಕೆ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ಕುಂದಾಪುರ ಘಟಕದ ನೇತ್ರತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಅಂದಾಜು 5,50,000 ಒಟ್ಟು ವೆಚ್ಚದಲ್ಲಿ ನಿರ್ಮಿಸಲಾದ ತಾಮ್ರ ಮತ್ತು ಪೀಠಕ್ಕೆ ಹಿತ್ತಾಳೆ ಹೊದಿಕೆಯನ್ನು ಏಪ್ರಿಲ್ 1ರಿಂದ 4 – 2025 ರ ವರೆಗೆ ನಡೆದ ವರ್ಧಂತಿ ಉತ್ಸವದ ಸಂದರ್ಭದಲ್ಲಿ ಪುನರ್ ಪ್ರತಿಷ್ಠೆಯೊಂದಿಗೆ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಶುಭದಾ ಆಂಗ್ಲ ಮಾಧ್ಯಮ ಶಾಲೆ ಇನ್ನೂ ಮುಂದೆ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ
ಕುಂದಾಪುರ ( ಏ ,4): ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯನ್ನು ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ಎಂದು ಪುನರ್ ನಾಮಕರಣ ಮಾಡಲಾಗಿದೆ. ಶುಭದಾ ಎಜುಕೇಶನಲ್ ಟ್ರಸ್ಟ್ ನಡೆಸುತ್ತಿರುವ ಶುಭದಾ ಆಂಗ್ಲ ಮಾಧ್ಯಮ ಶಾಲೆಯು 2024-25ನೇ ಶೈಕ್ಷಣಿಕ ವರ್ಷದಿಂದ ನೂತನ ಆಡಳಿತ ಮಂಡಳಿಯವರು ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವುದರಿಂದ ಶಾಲಾ ಹೆಸರು ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ(JANATHA NEW ENGLISH MEDIUM SCHOOL) ಕಿರಿಮಂಜೇಶ್ವರ ಎಂದು ಬದಲಾಯಿಸಲಾಗಿದೆ ಎಂದು […]
ಎನ್.ಎಸ್.ಎಸ್. ಉತ್ಸವ ಕ್ಷಿತಿಜ: ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್. ಘಟಕಕ್ಕೆ ಸಮಗ್ರ ಪ್ರಶಸ್ತಿ
ಕುಂದಾಪುರ (ಏ, 01 ): ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್-ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಎನ್.ಎಸ್.ಎಸ್. ಉತ್ಸವ ಕ್ಷಿತಿಜದಲ್ಲಿ ಕುಂದಾಪುರದ ಡಾ|ಬಿ.ಬಿ. ಹೆಗ್ಡೆಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸ್ವಯಂಸೇವಕರು ಸಮಗ್ರ ಪ್ರಶಸ್ತಿ ಪಡೆದರು. ಸಮೂಹ ಗಾನ, ವೆರೈಟಿ ಡಾನ್ಸ್, ಪೇಸ್ ಪೇಂಟಿಂಗ್ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ಬೀದಿ ನಾಟಕ, ಬೆಸ್ಟ್ ಔಟ್ ಆಫ್ ವೇಸ್ಟ್ […]
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ: ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಫೆಸ್ಟ್
ಕುಂದಾಪುರ ( ಎ ,01): ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ವಿಭಾಗ ‘ಯುವ -2025’ ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ ಇತ್ತೀಚಿಗೆ ನಡೆಯಿತು. ಈ ಫೆಸ್ಟ್ ನ ಸಭಾಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ಟೇಲ್ತ್ ಪ್ರೊಡಕ್ಷನ್ ಸಂಸ್ಥಾಪಕರಾದ ಶ್ರೀ ನಿತಿನ್ ಹೆಗ್ಡೆರವರು ಆಗಮಿಸಿ ದೀಪ ಬೆಳಗಿಸಿ ಫೆಸ್ಟ್ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು […]
ಮಂಗಳೂರು ವಿ.ವಿ. ಸಾಫ್ಟ್ ಬಾಲ್ ಪಂದ್ಯಾಟ : ಬಿ .ಬಿ. ಹೆಗ್ಡೆ ಕಾಲೇಜು ಹ್ಯಾಟ್ರಿಕ್ ಸಾಧನೆ
ಕುಂದಾಪುರ(ಮಾ,28): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಮಂಗಳೂರು ವಿ. ವಿ. ಅಂತರ್ ಕಾಲೇಜು ಮಟ್ಟದ ಪುರುಷರ ಮತ್ತು ಮಹಿಳೆಯರ ಸಾಫ್ಟ್ ಬಾಲ್ ಪಂದ್ಯಾಟ ಸಂಪನ್ನಗೊಂಡಿತು. ಶ್ರೀ ಮಹಾವೀರ ಕಾಲೇಜು, ಮೂಡುಬಿದರೆ ರನ್ನರ್ ಅಪ್ ಪ್ರಶಸ್ತಿ, ವಿ.ವಿ. ಕ್ಯಾಂಪಸ್ ತೃತೀಯ, ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು ಚತುರ್ಥ […]
ಗಂಗೊಳ್ಳಿ: ಬೈಲುಮನೆ ಶಿರಸಿ ಶ್ರೀ ಅಮ್ಮನವರಿಗೆ ರಜತ ಕಿರೀಟ ಮತ್ತು ರಜತ ಪ್ರಭಾವಳಿ ಸಮರ್ಪಣೆ
ಗಂಗೊಳ್ಳಿ(ಮಾ .25): ಬೈಲುಮನೆಯಲ್ಲಿರುವ ಶಿರಸಿ ಶ್ರೀ ಅಮ್ಮನವರಿಗೆ ರಜತ ಕಿರೀಟ ಮತ್ತು ರಜತ ಪ್ರಭಾವಳಿ ಸಮರ್ಪಣೆಯ ಕಾರ್ಯಕ್ರಮವು ಮಾರ್ಚ್ 30 ರಂದು ನಡೆಯಲಿದೆ. ಆ ಪ್ರಯುಕ್ತ ಬೆಳಗ್ಗೆ ಗಂಟೆ ಒಂಬತ್ತರಿಂದ ಸಾಮೂಹಿಕ ಪ್ರಾರ್ಥನೆ,ಶ್ರೀ ಗುರು ಗಣಪತಿ ಪೂಜೆ, ಪುಣ್ಯಾಹವಾಚನ, ಕಲಾಭಿವೃದ್ಧಿ ಹೋಮ, ತತ್ವ ಹೋಮ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಅನ್ನಸಂತರ್ಪಣೆ ಕೂಡ ನಡೆಯಲಿರುವುದು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಬಿ.ಬಿ. ಹೆಗ್ಡೆ ಕಾಲೇಜು: ಗಣಕ ವಿಜ್ಞಾನ ವಿಭಾಗದ ವತಿಯಿಂದ ಕೆ.ಪಿ.ಎಸ್. ವಂಡ್ಸೆ, ನೆಂಪುವಿನಲ್ಲಿ ವಿಸ್ತರಣಾ ಚಟುವಟಿಕೆ
ಕುಂದಾಪುರ (ಮಾ.19): ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ ಇಲ್ಲಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಮಾರ್ಚ್ 19 ರಂದು ಕೆ.ಪಿ.ಎಸ್. ವಿದ್ಯಾರ್ಥಿಗಳಿಗಾಗಿ ವಿಸ್ತರಣಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು. ಗಣಕಯಂತ್ರದಲ್ಲಿನ ಇತ್ತೀಚಿಗಿನ ಹೊಸ ಆವಿಷ್ಕಾರಗಳು, ಅವುಗಳ ಬೆಳವಣಿಗೆ, ಅದರ ಉಪಯೋಗ ಮುಂತಾದವುಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಕಾಲೇಜಿನ ಬಿ.ಸಿ.ಎ. ವಿಭಾಗದ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಅಲ್ಲಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ, ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. […]
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ: ಇದರ 250ನೇ ರಕ್ತದಾನ ಶಿಬಿರ- “ಅಭಯಹಸ್ತ ಹೆಗ್ಗುರುತು-250” ಲಾಂಭನ ಬಿಡುಗಡೆ
ಉಡುಪಿ (ಮಾ.19): ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಇದರ 250ನೇ ರಕ್ತದಾನ ಶಿಬಿರ ಹೆಗ್ಗುರುತು – 250ಏಪ್ರಿಲ್ 06 ರ ಆದಿತ್ಯವಾರದಂದು ಬೆಂಗಳೂರಿನಲ್ಲಿ ನಡೆಯಲಿದ್ದು ಇದರ ಪ್ರಯುಕ್ತ 250ನೇ ರಕ್ತದಾನ ಶಿಬಿರದ ಲಾಂಭನ ಬಿಡುಗಡೆ ಕಾರ್ಯಕ್ರಮ ಇದೇ ಮಾರ್ಚ್ 21ರಂದು ಶುಕ್ರವಾರ ಸಂಜೆ 5.00 ಗಂಟೆಗೆ ಮಣಿಪಾಲದ ಹೋಟೆಲ್ ಕೃಷ್ಣ ಕುಟೀರದಲ್ಲಿ ಜರುಗಲಿದೆ. ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಶ್ರೀ ಅಬೀದ್ ಗದ್ಯಾಳ ಇವರು ಉದ್ಘಾಟಿಸಲಿದ್ದು ಡಾ. ಬಾಲಕೃಷ್ಣ […]
ಶ್ರೀ ಕ್ಷೇತ್ರ ಬಗ್ವಾಡಿ: ಬ್ರಹ್ಮರಥೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ಬಗ್ವಾಡಿ ಉತ್ಸವದ ಪೋಸ್ಟರ್ ಬಿಡುಗಡೆ
ಹೆಮ್ಮಾಡಿ (ಮಾ. 18): ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರವಾದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಿಯ ವಾರ್ಷಿಕ ಬ್ರಹ್ಮರಥೋತ್ಸವ ಏಪ್ರಿಲ್ 12ರಂದು ಜರುಗಲಿದ್ದು, ಆ ನಿಟ್ಟಿನಲ್ಲಿ ರಥೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ರಥೋತ್ಸವದ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆಯುವ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ವೈಭವವಾದ “ಬಗ್ವಾಡಿ ಉತ್ಸವ” ದ ಪೋಸ್ಟರ್ ನ್ನು ಶ್ರೀದೇವರ ಸನ್ನಿಧಿಯಲ್ಲಿ ಮೊಗವೀರ ಮಹಾಜನ ಸೇವಾ ಸಂಘ (ರಿ),ಬಗ್ವಾಡಿ ಹೋಬಳಿ […]
ಸಣ್ಣ ಪುಟ್ಟ ಯಶಸ್ಸುಗಳನ್ನೇ ಸಾಧನೆ ಎಂದುಕೊಳ್ಳಬಾರದು : ನರೇಂದ್ರ ಎಸ್ ಗಂಗೊಳ್ಳಿ
ವಕ್ವಾಡಿ(ಮಾ,15): ನಾವು ಸಣ್ಣ ಪುಟ್ಟ ಯಶಸ್ಸುಗಳನ್ನೇ ಸಾಧನೆ ಎಂದುಕೊಳ್ಳಬಾರದು. ಭೂತಕಾಲದಲ್ಲಿ ಏನು ಮಾಡಿದೆ ಎನ್ನುವುದಕ್ಕಿಂತ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಏನು ಮಾಡುತ್ತಿರುವೆ ಮತ್ತು ಮಾಡ ಹೊರಟಿದ್ದೇವೆ ಎನ್ನುವುದು ಮುಖ್ಯ ಎಂದು ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಅಭಿಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಸಾಮರ್ಥ್ಯಗಳ ಜೊತೆ ನಾವೇ ಸ್ಪರ್ಧಿಸುತ್ತ ಸತತವಾಗಿ ನಮ್ಮ ಕೌಶಲ್ಯವನ್ನು ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಈ ಸ್ಪರ್ಧಾತ್ಮಕ […]










