ಕುಂದಾಪುರ (ಅಕ್ಟೋಬರ್ 11): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಡಾಕ್ಟರೇಟ್ ಪದವಿ ಪಡೆದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಅವರಿಗೆ ‘ವಿಧಿಕ್ತ-2025’ ಅಂತರ್-ತರಗತಿ ಮೂಟ್ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು ನೈತಿಕತೆ ಮತ್ತು ಶ್ರಮದ ಮೂಲಕ ಯಶಸ್ಸು ಸಾಧಿಸಬೇಕು ಎಂದು ಪ್ರೇರಣದಾಯಕ ಮಾತುಗಳನ್ನಾಡಿದರು. ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಶ್ರೀ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಡಾ. ಬಿ. ಬಿ . ಹೆಗ್ಡೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕುಂದಾಪುರ( ಆ ,15): ಇಲ್ಲಿನ ಸುವರ್ಣ ಸಂಭ್ರಮದಲ್ಲಿರುವ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯೋಗೀಶ್ ಶ್ಯಾನುಭೋಗ್ ಕಾವ್ರಾಡಿ, ಕಾರ್ಯದರ್ಶಿಯಾಗಿ ದೀಪಾ ಪೂಜಾರಿ, ಕೋಶಾಧಿಕಾರಿಯಾಗಿ ಸಚಿನ್ ಕುಮಾರ್, ಉಪಾಧ್ಯಕ್ಷರಾಗಿ ಜೋಸ್ಲಿನ್ ಆರ್. ಅಲ್ಮೇಡಾ, ಜೊತೆ ಕಾರ್ಯದರ್ಶಿಯಾಗಿ ವಿದ್ಯಾವತಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂಗೀತಾ, ಕ್ರೀಡಾ ಕಾರ್ಯದರ್ಶಿಯಾಗಿ ದರ್ಶನ್ ಹಾಗೂ ಕಾರ್ಯಕಾರಿ […]
ಅಕ್ಟೋಬರ್ 19 ರಂದು ದೇವಲ್ಕುಂದ ಯಕ್ಷ ಹಬ್ಬ
ಹೆಮ್ಮಾಡಿ ( ಆ ,15): ಕಲೆ ಶ್ರೀಮಂತವಾದುದ್ದು ಆದರೆ ಬಹುತೇಕ ಕಲಾವಿದರ ಜೀವನ ಶ್ರೀಮಂತವಾಗಿರುವುದಿಲ್ಲ. ಹಲವಾರು ಕಷ್ಟ ಕಾರ್ಪಣ್ಯಗಳಿಂದ ತುಂಬಿದರು ರಂಗದಲ್ಲಿ ಪ್ರೇಕ್ಷಕರನ್ನು ರಂಜಿಸುವುದನ್ನು ಕಡಿಮೆ ಮಾಡುವುದಿಲ್ಲ. ಇಂತಹ ಒಬ್ಬ ಯುವ ಯಕ್ಷಗಾನ ಕಲಾವಿದ ನಾಗರಾಜ ಪೂಜಾರಿ ದೇವಲ್ಕುಂದ. ಇವರು ಕಳೆದ ಹತ್ತು ವರ್ಷಗಳಿಂದ ಹಟ್ಟಿಯಂಗಡಿ,ಪೇರ್ಡೂರು,ಕಳೆದ ನಾಲ್ಕು ವರ್ಷಗಳಿಂದ ಶ್ರೀ ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಗರಾಜ ಪೂಜಾರಿಯವರು ತಮ್ಮ ವಾಸದ ಮನೆಯು ಶಿಥಿಲವಾಗಿರುವುದರಿಂದ ಹೊಸ ಗೃಹ ನಿರ್ಮಾಣ ಸಹಾಯಾರ್ಥ […]
ಸಿ.ಎ.ನಿತ್ಯಾನಂದ ಪ್ರಭುವರವರಿಗೆ ಮಾತೃವಿಯೋಗ -ಕಾರ್ಕಳ ಜ್ಞಾನಸುಧಾದಲ್ಲಿ ಶ್ರದ್ಧಾಂಜಲಿ ಸಭೆ
ಕಾರ್ಕಳ ( ಆ ,14): ಕಾರ್ಕಳದ ಪ್ರಸಿದ್ಧ ಲೆಕ್ಕಪರಿಶೋಧಕ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿಯಾಗಿರುವ ಸಿ.ಎ ನಿತ್ಯಾನಂದ ಪ್ರಭುರವರ ತಾಯಿ ಸುಮಿತ್ರಾ ಪ್ರಭು (87) ಅವರು ಆದಿತ್ಯವಾರದಂದು ದೈವಾಧೀನರಾದರು. ಕೆರ್ವಾಶೆಯಲ್ಲಿ ಜನಿಸಿದ ಇವರು ಅಜೆಕಾರ್ ಗುಂಡುರಾಯ ಪ್ರಭುರವನ್ನು ವರಿಸಿ ಅಂಗಡಿ ವ್ಯಾಪಾರದಲ್ಲಿ 40ವರ್ಷಗಳಿಂದ ತೊಡಗಿಸಿಕೊಂಡ ಇವರಿಗೆ ಓರ್ವ ಪುತ್ರನನ್ನು ಹಾಗೂ ಮೂವರು ಪುತ್ರಿಯರನ್ನು, 9 ಮೊಮ್ಮಕ್ಕಳನ್ನು ಹಾಗೂ ಒಂದು ಮರಿಮೊಮ್ಮಗುವನ್ನು ಅಗಲಿದ್ದಾರೆ. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿ ಅಧ್ಯಕ್ಷರಾದ […]
ಸ್ವಲ್ಪ ನಿಧಾನಿಸಿ ಯೋಚಿಸಿ ಬದುಕಿನ ಆಯಾಮ ತಿಳಿಯಿರಿ – ಡಾ. ವಿರೂಪಾಕ್ಷ ದೇವರಮನೆ
ಕುಂದಾಪುರ (ಅ.11) : ಇಂದಿನ ಸಮಾಜದಲ್ಲಿ ನಾವೆಲ್ಲರೂ ಕೆಲಸಕ್ಕಾಗಿ ಬದುಕೋ, ಬದುಕಿಗಾಗಿ ಕೆಲಸವೋ, ಯಾವುದನ್ನು ತಿಳಿಯದ ಸಂದಿಗ್ಧ ಪರಿಸ್ಥಿತಿಯ ಜಂಜಾಟದ ಬದುಕನ್ನು ನಡೆಸುತ್ತಿದ್ದೇವೆ. ಇದರ ನಡುವೆ ನಾವು ನಮ್ಮ ಬಗ್ಗೆ ಯೋಚಿಸುವುದೇ ಇಲ್ಲ ಹೀಗಾಗಿ ನಾವು ಸ್ವಲ್ಪ ನಿಧಾನಿಸಿ ಯೋಚಿಸಿದರೆ ನಮ್ಮ ಬದುಕಿನ ಆಯಾಮ ತಿಳಿಯಲು ಸಾಧ್ಯ ಎಂದು ಉಡುಪಿಯ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ, ಬರಹಗಾರರಾದ ಡಾ. ವಿರೂಪಾಕ್ಷ ದೇವರಮನೆಯವರು ಹೇಳಿದರು. ಅವರು ಕುಂದಾಪುರ ಎಜುಕೇಶನ್ […]
ಬಿ. ಬಿ. ಹೆಗ್ಡೆ ಕಾಲೇಜು: ರೋವರ್ಸ್ ರೆಂಜರ್ಸ್ ಘಟಕ ಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಕುಂದಾಪುರ (ಸೆ. 12):ಇಲ್ಲಿನ ಡಾ. ಬಿ ಬಿ. ಹೆಗ್ಡೆ ಕಾಲೇಜು, ಕುಂದಾಪುರ ಇದರ ರೋವರ್ಸ್ & ರೇಂಜರ್ಸ್ ಘಟಕದ 2025-26 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್, 12 ರಂದು ಕಾಲೇಜಿನ ಎ. ವಿ. ಹಾಲ್ ನಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ, ಉಡುಪಿ ಇದರ […]
ಸರಸ್ವತಿ ವಿದ್ಯಾಲಯದಲ್ಲಿ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮ
ಗಂಗೊಳ್ಳಿ(ಆ,10): ವಿದ್ಯಾರ್ಥಿಗಳು ಪಿಯುಸಿ ನಂತರದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕೋರ್ಸ್ ಗಳನ್ನು ಸೇರುವ ಮುನ್ನ ಅದರ ಸಾಧಕ ಬಾದಕಗಳನ್ನು ತಿಳಿದುಕೊಂಡು ಸ್ವಯಂ ಆಸಕ್ತಿಯಿಂದ ಸೇರಿದಾಗಲೇ ಯಶಸ್ಸು ಸಾಧ್ಯವಾಗುತ್ತದೆ ಎಂದು ತ್ರಿಷಾ ವಿದ್ಯಾ ಕಾಲೇಜಿನ ಕನ್ನಡ ಉಪನ್ಯಾಸಕ ಧೀರಜ್ ಬೆಳ್ಳಾರೆ ಅಭಿಪ್ರಾಯ ಪಟ್ಟರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ, ಎಸ್ ವಿ ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ರಾಷ್ಟ್ರೀಯ ಸೇವಾ […]
ಶಿಕ್ಷಕರಿಗೆ ಪ್ರತಿಯೊಂದು ಮಗು ಬಹು ಮುಖ್ಯ – ಮ್ಯಾಥ್ಯು ಸಿ ನೈನಾನ್
ಕುಂದಾಪುರ (ಅ.11) : ಶಿಕ್ಷಕರಿಗೆ ಪ್ರತಿಯೊಂದು ಮಗು ಬಹುಮುಖ್ಯ. ಮಕ್ಕಳಿಲ್ಲದೆ ಶಾಲೆಯನ್ನು ಊಹಿಸಲು ಸಾಧ್ಯವಿಲ್ಲ. ಶಿಕ್ಷಕರು ಪ್ರತಿಯೊಂದು ಮಗುವಿನ ಬಗ್ಗೆ ತಿಳಿದುಕೊಳ್ಳದಿದ್ದರೆ ತಾವು ಬೋಧಿಸುವ ವಿಷಯವನ್ನು ಮಗು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಂದು ಮಗುವಿನೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ಆದರ್ಶ ಶಿಕ್ಷಕನಾಗಲು ಸಾಧ್ಯ ಎಂದು ಲಿಟಲ್ ರಾಕ್ ಇಂಡಿಯನ್ ಶಾಲೆಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಮ್ಯಾಥ್ಯು ಸಿ ನೈನಾನ್ ಅವರು ಸುವರ್ಣ ಸಂಭ್ರಮದ ಆಚರಣೆಯಲ್ಲಿರುವ ಕುಂದಾಪುರ ಎಜುಕೇಶನ್ ಸೊಸೈಟಿ(ರಿ.) ಪ್ರವರ್ತಿತ […]
ಬಗ್ವಾಡಿ ಹೋಬಳಿ ಸ್ತ್ರೀ ಶಕ್ತಿ ಸಂಘದ ನೂತನ ಅಧ್ಯಕ್ಷರಾಗಿ ಬೇಬಿ.ಜಿ.ನಾಯ್ಕ, ಕಾರ್ಯದರ್ಶಿಯಾಗಿ ಸುಮಾ.ಡಿ. ಮೊಗವೀರ ಆಯ್ಕೆ
ಹೆಮ್ಮಾಡಿ (ಆ. 10): ಇಲ್ಲಿನ ಬಗ್ವಾಡಿ ಹೋಬಳಿ ಸ್ತ್ರೀ ಶಕ್ತಿ ಸಂಘದ ನೂತನ ಅಧ್ಯಕ್ಷರಾಗಿ ಬೇಬಿ.ಜಿ.ನಾಯ್ಕ ಕಟ್ಟು ಹೆಮ್ಮಾಡಿ ಹಾಗೂ ಕಾರ್ಯದರ್ಶಿಯಾಗಿ . ಸುಮಾ.ಡಿ. ಮೊಗವೀರ ಬಗ್ವಾಡಿ ಆಯ್ಕೆ ಯಾಗಿದ್ದಾರೆ. ಇವರಿಗೆ ಬಗ್ವಾಡಿ ಹೋಬಳಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ಯಾಮಲಾ ಜಿ. ಚಂದನ್ ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ (ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಹಟ್ಟಿಯಂಗಡಿ, […]
ಹೆಮ್ಮಾಡಿ : ಮಹಾಲಕ್ಷ್ಮೀ ಡಿಜಿಟಲ್ ಬ್ಯಾನರ್ ಪ್ರಿಂಟ್ ಹೌಸ್ ಶುಭಾರಂಭ
ಹೆಮ್ಮಾಡಿ(ಸೆ.26): ಮಾಸ್ತಿ ಡಿಜಿಟಲ್ಸ್ ರವರ ನೂತನ ಶಾಖೆಯಾದ ಮಹಾಲಕ್ಷ್ಮೀ ಡಿಜಿಟಲ್ ಬ್ಯಾನರ್ ‘ಪ್ರಿಂಟ್ ಹೌಸ್ ಹೆಮ್ಮಾಡಿಯ ಕೊಲ್ಲೂರು ರಸ್ತೆಯ ಎಂ. ಡಿ ರೆಸಿಡೆನ್ಸಿಯಲ್ಲಿ ಸೆಪ್ಟೆಂಬರ್ 26 ರಂದು ಶುಭಾರಂಭ ಗೊಂಡಿದೆ. ಬ್ಯಾನರ್, 3D LED ಬೋರ್ಡ್ ,2D LED ಬೋರ್ಡ್ಸ್, ಹೌಸ್ ನೇಮ್ ಬೋರ್ಡ್, ವಿಸಿಟಿಂಗ್ ಕಾರ್ಡ್ಸ್ ,ಡಿಜಿಟಲ್ ಇನ್ವಿಟೇಶನ್,ಆಪ್ಸೆಟ್ ಪ್ರಿಂಟಿಂಗ್, ಕಟೌಟರ್ ಫಿಕ್ಸಿಂಗ್ ಡಾಟ್ ಪ್ರಿಂಟ್, ಐ.ಡಿ ಕಾರ್ಡ್ಸ್, ವಿನೈಲ್ ಪ್ರಿಂಟ್ ,ವೆಡ್ಡಿಂಗ್ ಕಾರ್ ಬೋರ್ಡ್ ,ಫ್ರಂಟ್ ಲೈಟ್ […]










