ಬೆಂಗಳೂರು (ಜೂ, 20): ಕರ್ನಾಟಕ ರಾಜ್ಯ ಸರ್ಕಾರವು ಮಳೆಗಾಲ ಸಂದರ್ಭದಲ್ಲಿನ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಇತ್ತೀಚೆಗೆ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ 300 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ, ಹಾಗೆಯೇ ಭಾಗಶಃ ಹಾನಿಯಾಗಿರುವ ಮನೆಗೆ 1ಲಕ್ಷ ರೂ. ಮತ್ತು ನೀರು ನುಗ್ಗಿ ಮನೆಗೆ ಹಾನಿಯಾಗಿದ್ದರೆ 10 […]
Category: ರಾಜ್ಯ ಸುದ್ದಿ
ಸುದ್ದಿ ಸಮಾಚಾರ — > ರಾಜ್ಯ ಸುದ್ದಿ
ವಿಶ್ವ ವಿಖ್ಯಾತ ಮುರ್ಡೇಶ್ವರದ ಶಿವನ ಮೂರ್ತಿಯ ಸೊಬಗಿಗೆ ಅಂತರಾಷ್ಟ್ರೀಯ ಪ್ರಶಸ್ತಿ
ಭಟ್ಕಳ (ಜೂ, 18) : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ವಿಶ್ವ ವಿಖ್ಯಾತ ಮುರ್ಡೇಶ್ವರದ ಶಿವನ ಮೂರ್ತಿಯ ಎಲ್ ಇ ಡಿ ವಿದ್ಯುತ್ ಅಲಂಕಾರಕ್ಕೆ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತಿದೆ. ಅಮೆರಿಕಾದ ಇ- ಗ್ಲೋಬಲ್ ಫಿಲಿಪ್ಸ್ ಆಯೋಜಿಸಿದ್ದ ಸರ್ಟಿಫೈಡ್ ಸಿಸ್ಟಮ್ ಇಂಟಿಗ್ರೇಟರ್ ಸಮಿಟ್ನಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಜಗತ್ತಿನ 24 ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಮುರ್ಡೇಶ್ವರದ ಶಿವನ ಮೂರ್ತಿಗೆ ಮಾಡಲಾದ ವಿದ್ಯುತ್ ಅಲಂಕಾರ […]
ಯುವ ಸಾಹಿತಿ ಕೊಡಗಿನ ಕಿಗ್ಗಾಲು ಜಿ. ಹರೀಶ್ ಕುಂದವಾಹಿನಿಯಲ್ಲಿ ತಮ್ಮ ಸಾಹಿತ್ಯ ಅನುಭವವನ್ನು ಹಂಚಿಕೊಳ್ಳಲಿದ್ದಾರೆ
ಯುವ ಸಾಹಿತಿ ಕಿಗ್ಗಾಲು ಜಿ. ಹರೀಶ್ ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದವರು. ಮೂರ್ನಾಡುವಿನ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಈಗಾಗಲೇ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇವರ ರಾಯರ ತೋಟ ಎಂಬ ಲಲಿತ ಪ್ರಬಂಧಗಳ ಸಂಕಲನ 2011 ರಲ್ಲಿ ಬಿಡುಗಡೆಯಾಗಿದೆ. ಕಥೆ,ಕವನ ,ಲೇಖನ ರಚನೆಯ ಜೊತೆಗೆ ವರದಿಗಾರಿಕೆಯನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯ ಶಕ್ತಿ ದಿನಪತ್ರಿಕೆಯಲ್ಲಿ, ಸುಧಾ, […]
ದಾನದಲ್ಲಿ ಕರ್ಣ, ಆದರ್ಶದಲ್ಲಿ ರಾಮ, ಕಾರ್ಮಿಕರ ಅನ್ನದಾತ ಶ್ರೀ ಗೋವಿಂದ ಬಾಬು ಪೂಜಾರಿ
ಅವರ ಒಂದು ಹಿತನುಡಿಯೇ ಸಾಕು ನಿಮ್ಮ ಸಂಕಷ್ಟಗಳ ಸಾಂತ್ವನಕ್ಕೆ . ಅದರಲ್ಲೂ ಅವರ ಶ್ರೀರಕ್ಷೆ, ಸಹಾಯ ಹಾಗೂ ಸಹಕಾರ ಸಿಕ್ಕರಂತೂ ನೀವು ನಿಜವಾಗಿಯೂ ಜೀವನದಲ್ಲಿ ಸಾಧನೆಯ ಜೊತೆಗೆ ಯಶಸ್ಸನ್ನು ಕಾಣುತ್ತೀರಿ. ಜೀವನದಲ್ಲಿ ಎಂದಿಗೂ ಸೋತೆ ಎನ್ನುವ ಭಾವನೆಯೊಂದಿಗೆ ಜೀವನ ನೆಡೆಸಬೇಡಿ ,ಒಂದಲ್ಲ ಒಂದು ದಿನ ಗೆದ್ದೆ ಗೆಲ್ಲುವೆ ಎನ್ನುವ ಛಲದೊಂದಿಗೆ ಜೀವನ ನೆಡೆಸಿ ಎನ್ನುವ ಅವರ ಆದರ್ಶ ಪಾಲನೆಯ ಬದುಕು ಅನುಕರಣೀಯ. ಧೈರ್ಯದಿಂದ ಮುಂದೆ ಹೋಗಿ ,ಜಗತ್ತಿನ ಎಲ್ಲಾ ಕೆಲಸವನ್ನು […]
ಕರೋನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ
ಬೆಂಗಳೂರು (ಜೂ, 14): ಕೋವಿಡ್ 19 ಗೆ ತುತ್ತಾಗಿ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಯ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಧನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದರು.ಇದು ಕೋವಿಡ್-19 ಕ್ಕೆ ತುತ್ತಾಗಿ ಮೃತಪಟ್ಟಿರುವ ಕುಟುಂಬದ ಓರ್ವ ಸದಸ್ಯನಿಗೆ ಮಾತ್ರ ಅನ್ವಯಿಸುತ್ತದೆ.
ಚಿತ್ರದುರ್ಗ ರೆಡ್ ಕ್ರಾಸ್ : ಕೋವಿಡ್ ಸಂಧರ್ಬದಲ್ಲಿನ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ
ಚಿತ್ರದುರ್ಗ (ಜೂನ್ , 13) : ಕೋವಿಡ್ ಸಂಧರ್ಬದಲ್ಲಿನ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ಅಂಗವಾಗಿ ಚಿತ್ರದುರ್ಗ ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಶಾಂತ ರಾಮತೀರ್ಥ ಆಶ್ರಮದ ಶ್ರೀ ಶ್ರೀ ಶ್ರೀ ಪ್ರಹಲ್ಲಾದ್ ಗುರೂಜಿ ರವರನ್ನು ಜೂನ್ 13 ರಂದು ಭೇಟಿ ಮಾಡಿ ಪಲ್ಸ ಓಕ್ಸಿಮೀಟರನ್ನು ರೆಡ್ ಕ್ರಾಸ್ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ಮಜಹರ್ ಉಲ್ಲಾ ಮತ್ತು ನಿರ್ದೇಶಕರಾದ ಗಿರೀಶ್ ರವರು ಉಪಸ್ಥಿತರಿದ್ದರು.
ಕುಮಟಾದ ದಿಶಾ ಭಾಗವತ್ ಅಮೆರಿಕದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ
ಕುಮಟಾ (ಜೂ,13): ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೋಡಿಯ ಕು. ದಿಶಾ ಭಾಗವತ ಅಮೇರಿಕಾದ ಕ್ಯಾಲಿಫೋರ್ನಿಯ ಬಾರ್ ಕೌನ್ಸಿಲ್ ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಉತ್ತರಕನ್ನಡ ಜಿಲ್ಲೆ, ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆರಿಸಿದ್ದಾರೆ.ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿ ನಂತರ ಅಮೆರಿಕದಲ್ಲಿ ಯುಎಸ್ಸಿ ಮಾಸ್ಟರ್ ಡಿಗ್ರಿ ಪಡೆದಿರುತ್ತಾರೆ. ಇವರು ಬಹುಮುಖ ಪ್ರತಿಭೆಯಾಗಿದ್ದು, ಉದ್ಯಮಿ ಮಂಜುನಾಥ ಭಾಗವತ್ ಹಾಗೂ ಲಲಿತಾ ಭಾಗವತ್ […]
ಚಿತ್ರದುರ್ಗ ರೆಡ್ ಕ್ರಾಸ್ : ಕೋವಿಡ್ ಲಸಿಕಾ ಅಭಿಯಾನ
ಚಿತ್ರದುರ್ಗ (ಜೂ, 11) : ಕರೋನ ಮಹಾಮಾರಿ ಎರಡನೇ ಅಲೆ ತಡೆಗಟ್ಟುವ ಸಲುವಾಗಿ ಚಿತ್ರದುರ್ಗ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಜಿಲ್ಲೆ ಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತಿದ್ದು, ನಗರದಲ್ಲಿ ವ್ಯಾಕ್ಸಿನ್ ಸಹಾಯವಾಣಿ Vaccine Helpline 24*7 ನ್ನು ನಿರ್ದೇಶಕರಾದ ಶ್ರೀ ಯು ಸಿ ಗಿರೀಶ್ ನೇತೃತ್ವದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸಾರ್ವಜನಿಕರಿಗೆ ಕೋವಿಡ್ -19 ಲಸಿಕಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಾ, ಲಸಿಕಾ […]
ಐಐಐಟಿ ಧಾರವಾಡ : ಬಿ.ಟೆಕ್. ಹಾಗೂ ಬಿ.ಇ. ಮುಗಿಸಿದ ಮಹಿಳಾ ಪದವೀಧರರಿಗೆ ಸೈಬರ್ ಸೆಕ್ಯೂರಿಟಿ ಉಚಿತ ತರಬೇತಿ ಕಾರ್ಯಕ್ರಮ
ಉಡುಪಿ (ಜೂನ್, 06) : CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಸೈಬರ್ ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಅವಿಷ್ಕಾರ ತಂತ್ರ, ಸೃಜನಶೀಲತೆ, ತಂತ್ರಜ್ಞಾನದ ಸದ್ಬಳಕೆ, ಸೈಬರ್ ಸೆಕ್ಯೂರಿಟಿ ಕುರಿತಾದ ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಸೈಬರ್ ಶಿಕ್ಷಾ ,ಇದು ಮೈಕ್ರೋಸಾಫ್ಟ್ ಹಾಗೂ ಡಿ.ಎಸ್.ಐ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಐಐಐಟಿ ಧಾರವಾಡ ಹಾಗೂ CySek ಕರ್ನಾಟಕದ ಜಂಟಿ ಆಶ್ರಯದಲ್ಲಿ […]
ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, SSLC ಪರೀಕ್ಷೆ ಇರುತ್ತೆ : ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು (ಜೂ. 04): ಕರೋನಾ ಕಾರಣದಿಂದಾಗಿ ಈಗಾಗಲೇ ಕೇಂದ್ರ ಸರ್ಕಾರ ಸಿಬಿಎಸ್ ಇ ಮತ್ತು ಐಸಿಎಸ್ಇಯ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳು ರದ್ದು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರ ರಾಜ್ಯದಲ್ಲಿನ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ, ಪರೀಕ್ಷೆಗಳ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಈ ವರ್ಷ […]