ಬೆಂಗಳೂರು (ಸೆ,28):ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದ ರೈತ ಸಂಗಣ್ಣ ಶಿವಪ್ಪ ಚಳ್ಳಗಿ ಯವರಿಗೆ ಕರ್ನಾಟಕ ಭೂ ನ್ಯಾಯ ಮಂಡಳಿಯಿಂದ ನೋಟಿಸ ನೀಡಲಾಗಿತ್ತು. ಆತ ಅಮರೇಶ ಕಾಮನಕೇರಿ ಯವರ ಮುಖಾಂತರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ ಕುಮಾರ ಕಲ್ಗದೆ ರವರನು ಭೇಟಿಯಾಗಿ ತಮಗಾದ ಸಮಸ್ಯೆ ತಿಳಿಸಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿದ ಅರುಣ ಕುಮಾರ ಕಲ್ಗದೆರವರು ರೈತನ ಪರ ವಾದ ಮಾಡಲು ವಕೀಲರನ್ನು ನೇಮಿಸಿ ಕೊಟ್ಟು […]
Category: ರಾಜ್ಯ ಸುದ್ದಿ
ಸುದ್ದಿ ಸಮಾಚಾರ — > ರಾಜ್ಯ ಸುದ್ದಿ
ಕಾಮನವೆಲ್ತ್ ಕ್ರೀಡಾಕೂಟ : ಕುಂದಾಪುರದ ಗುರುರಾಜ್ ಪೂಜಾರಿಗೆ ಕಂಚಿನ ಪದಕ
ಕುಂದಾಪುರ (ಜು, 30) : ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಕ್ರೀಡಾಕೂಟದ 61 ಕೆ.ಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆ ಮೂಲದ ಗುರುರಾಜ್ ಪೂಜಾರಿ ಜೆಡ್ಡು ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ.ಒಟ್ಟು 269 ಕೆಜಿ ಎತ್ತಿರುವ ಗುರುರಾಜ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆಗೈದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಕೆ.ಪಿ.ಸಿ.ಸಿ ಮೀನುಗಾರರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಯೋಗೇಶ್ ಶಿರೂರು ನೇಮಕ
ಕುಂದಾಪುರ (ಮೇ ,31): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುಸ್ಕ್ರತರು, ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಉಪಾದ್ಯಕ್ಷರಾದ ಯೋಗೇಶ್ ಶಿರೂರು ನೇಮಕಗೊಂಡಿದ್ದಾರೆ . ಇವರನ್ನು ಕೆ.ಪಿ.ಸಿ.ಸಿ ಅದ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಕೆ.ಪಿ.ಸಿ.ಸಿ ಮೀನುಗಾರರ ಘಟಕದ ಅದ್ಯಕ್ಷರಾದ ಮಂಜುನಾಥ್ ಬಿ ಯವರು ಆಯ್ಕೆಮಾಡಿದ್ದಾರೆ .
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಲ್ಲೂರು ದೇಗುಲಕ್ಕೆ ಭೇಟಿ
ಕೊಲ್ಲೂರು(ಮೇ,15): ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಕೇಂದ್ರ ಶ್ರೀ ಕ್ಷೇತ್ರ ಕೊಲ್ಲೂರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಮೇ14 ರ ಬೆಳಿಗ್ಗೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ದೇಗುಲದ ಹಿರಿಯ ಅರ್ಚಕ ಡಾ. ಕೆ.ಎನ್ .ನರಸಿಂಹ ಅಡಿಗ ಹಾಗೂ ಶ್ರೀ ಎನ್.ಪರಮೇಶ್ವರ ಅಡಿಗರವರ ನೇತ್ರತ್ವದಲ್ಲಿ ಸಚಿವರಿಗೆ ಗೌರವಪೂರ್ವಕವಾಗಿ ದೇವಳಕ್ಕೆ ಸ್ವಾಗತಿಸಲಾಯಿತು.ಈ ಸಂಧರ್ಭದಲ್ಲಿ ಹಿಂದಿನ ದಿನಗಳಲ್ಲಿ ತಾವು ದೇವಾಲಯಕ್ಕೆ ಆಗಮಿಸಿದ ಸಂದರ್ಭಗಳನ್ನು ಹಾಗೂ ದೇವಿಯ […]
ಎಸ್.ಆರ್ .ಕ್ಯಾಟರರ್ಸ್ ಬೆಂಗಳೂರು: ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶ್ರೀ ವೈ.ಎಸ್.ವಿ ದತ್ತಾ
ಬೆಂಗಳೂರು (ಜ.9): ಬೆಂಗಳೂರಿನ ಪ್ರಸಿದ್ದ ಕ್ಯಾಟರಿಂಗ್ ಸಂಸ್ಥೆಯಾದ ಕುಂದಾಪುರ ಮೂಲದ ಶ್ರೀ ರಾಘವೇಂದ್ರ ಹಾರ್ಮಣ್ ಮಾಲಕತ್ವದ ಎಸ್.ಆರ್.ಕ್ಯಾಟರರ್ಸ ನ ಹೊಸ ವರ್ಷದ ಕ್ಯಾಲೆಂಡರ್ ನ್ನು ರಾಜ್ಯದ ಹಿರಿಯ ರಾಜಕಾರಣಿ ,ರಾಜಕೀಯ ಮುತ್ಸದ್ದಿ, ಮಾಜಿ ಶಾಸಕ ಶ್ರೀ ವೈ.ಎಸ್.ವಿ.ದತ್ತಾರವರು ಇತ್ತೀಚೆಗೆ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್.ಆರ್.ಕ್ಯಾಟರರ್ಸ ನ ಮಾಲಕ ಶ್ರೀ ರಾಘವೇಂದ್ರ ಹಾರ್ಮಣ್ ಉಪಸ್ಥಿತರಿದ್ದರು.
ಕೋಟತಟ್ಟು:ಪೊಲೀಸ್ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗೆ ಪರಿಹಾರಧನ ವಿತರಿಸಿದ ಗ್ರಹ ಸಚಿವ
ಕೋಟ(ಜ.2): ಕೋಟತಟ್ಟು ಗ್ರಾಮದಲ್ಲಿ ಪೊಲೀಸ್ ಲಾಠಿಚಾರ್ಜ್ ಗೊಳಗಾದ ಕೊರಗ ಸಮುದಾಯವರನ್ನು ರಾಜ್ಯ ಗ್ರಹ ಸಚಿವ ಅರಗ ಜ್ಙಾನೇಂದ್ರರವರು ಜ.01 ರಂದು ಭೇಟಿ ಮಾಡಿ ಸಾಂತ್ವನ ಹೇಳಿದರು. ಗಾಯಗೊಂಡವರಿಗೆ ₹2 ಲಕ್ಷ ಪರಿಹಾರ ಘೋಷಿಸಿ, ಪ್ರತಿ ಕುಟುಂಬಕ್ಕೆ ₹50,000 ಪರಿಹಾರ ನೀಡಿದರು. ಪೊಲೀಸ್ ದೌರ್ಜನ್ಯ ಪ್ರಕರಣ ಕುರಿತು ಸಿ.ಓ.ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸುತ್ತಾ, ಕೊರಗ ಕುಟುಂಬದವರ ವಿವಾಹ ಸಮಾರಂಭದಲ್ಲಿ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಕೊರಗ […]
ದಾಸಶ್ರೇಷ್ಟ ಕನಕದಾಸರು
ಕರ್ನಾಟಕದ ಹರಿದಾಸಭಕ್ತ ಶ್ರೇಷ್ಟರಲ್ಲಿ ಒಬ್ಬರಾಗಿದ್ದ ಕನಕದಾಸರು ರಣರಂಗದಕಲಿ, ಜನಪ್ರಿಯದೊರೆ, ಸಮರ್ಥ ಆಡಳಿತಗಾರ, ಕವಿ, ಸಂತ, ಕೀರ್ತನಾಕಾರ, ಸಂಗೀತಗಾರ, ವಿಚಾರವಂತ ಮತ್ತು ಸಮಾಜ ಸುಧಾರಕರಾಗಿದ್ದರು. ದಾಸ ಪರಂಪರೆಯಲ್ಲಿ ಬರುವ 250 ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರೆಂಬುದು ನಿಜಕ್ಕೂ ಹೆಗ್ಗಳಿಕೆಯೇ. ಇವರು ಪುರಂದರದಾಸರ ಸಮಕಾಲೀನರು. ಧಾರವಾಡ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಕಾಗಿನೆಲೆಯ ಸಮೀಪದ ‘ಬಾಡ’ ಎಂಬ ಗ್ರಾಮದಲ್ಲಿ (ಈಗ ಹಾವೇರಿ ಜಿಲ್ಲೆಸಿಗ್ಗಾವಿ ತಾಲ್ಲೂಕಿನ ಬಾಡ) ಬೀರಪ್ಪನಾಯಕ ಮತ್ತು ಬಚ್ಚಮ್ಮ ಕುರುಬ ದಂಪತಿಗಳ […]
ಬೆಂಗಳೂರು: ನರಕಾಸುರ ವಧೆ ಯಕ್ಷಗಾನ ಪ್ರದರ್ಶನ
ಬೆಂಗಳೂರು (ನ,20): ಟೀಮ್ ಉತ್ಸಹಿ ಬೆಂಗಳೂರು ತಂಡ ಮತ್ತು ಬಡಗುತಿಟ್ಟಿನ ಸುಪ್ರಸಿದ್ಧ ಅತಿಥಿ ಕಲಾವಿದರ ಸಂಗಮದಲ್ಲಿ ” ನರಕಾಸುರ ವಧೆ” ಎನ್ನುವ ಪೌರಾಣಿಕ ಯಕ್ಷಗಾನ ಪ್ರಸಂಗವು ಬೆಂಗಳೂರಿನ ಕತ್ರಿಗುಪ್ಪೆ ಹೋಟೆಲ್ ಅನ್ನಕುಟೀರದ ಸಭಾಂಗಣದಲ್ಲಿ ವೈಭವದಿಂದ ಪ್ರದರ್ಶನಗೊಂಡಿತು. ಬಡಗು ತಿಟ್ಟಿನ ಹಿರಿಯ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗ ರವರ ಹಿಮ್ಮೇಳ , ಕಲಾವಿದರಾದ ನಾಗ ಶ್ರಿ ಜಿ.ಎಸ್ , ಅರ್ಪಿತ ಹೆಗ್ಡೆ ಮತ್ತು ಸಹ ಕಲಾವಿದರು ರಂಗವನ್ನು ವೈಭಿಕರಿಸಿದರು. ವರದಿ: ರಾಘವೇಂದ್ರ […]
ಜೀವ ರಕ್ಷಕ, ಮುಳುಗು ತಜ್ಞ ಸುರೇಶ ಖಾರ್ವಿ ಭಟ್ಕಳ್ (ಕಡಲಾಳದ ಅಂತರಂಗ- ಬದುಕಿನ ಕಥೆ ವ್ಯಥೆ )
ಜೀವ ರಕ್ಷಣೆ ಮತ್ತು ಸಾವು ಅದು ಎಷ್ಟು ಕಠೋರವೆಂದರೆ ಆ ಚಕ್ರವ್ಯೂಹಕ್ಕೆ ಸಿಲುಕಿ ಬದುಕು ಬಂದವರರಿಗೆ ಮಾತ್ರ ಗೊತ್ತು .ಸಾವಿನಂಚಿನ ಕದ ತಟ್ಟಿ ಬದುಕಿ ಬರುವುದೆಂದರೆ ಅದೇನು ಆಟವಲ್ಲಾ.ಅದರ ಪರಿಕಲ್ಪನೆ ಮಾಡುವುದು ಕೂಡ ಕಷ್ಟ, ಅಂತಹ ಪರಿಸ್ಥಿತಿಯಲ್ಲಿ ಇರುವವರನ್ನು ಬದುಕಿಸುವವರೇ ಜೀವ ರಕ್ಷಕರು. ಜೀವರಕ್ಷಕರು ಅಕ್ಷರಶಃ ದೇವರಿಗೆ ಸಮನಾದವರು. ಆದರೆ ಇಂಥ ದೇವರುಗಳು ಮಾತ್ರ ಕಣ್ಣೀರಲ್ಲಿ ಕೈತೊಳೆತ್ತಾ ಇರುವುದು ಮಾತ್ರ ಶೋಚನೀಯ…!ಇವರ ನಿಸ್ವಾರ್ಥ ಸೇವಾ ಕಾರ್ಯವನ್ನು ಗುರುತಿಸಿ ಇವರಿಗೆ ಗೌರವದ […]
ಅ,28 ರಂದು ಪ್ರಜ್ಞಾ ಸಾಗರ್ ರೆಸ್ಟೋರೆಂಟ್ ಶುಭಾರಂಭ
ಬೆಂಗಳೂರು(ಅ 27): ಪ್ರಜ್ಞಾ ಸಾಗರ್ ಹೋಟೇಲ್ಸ್ ಆಂಡ್ ರೆಸೋರ್ಟ್ ಇದರ ಮೂರನೇ ಶಾಖೆ ಪ್ರಜ್ಞಾ ಸಾಗರ್ ರೆಸ್ಟೋರೆಂಟ್ ಅ,28 ರಂದು ಬೆಂಗಳೂರಿನ ಅಂಬೇಡ್ಕರ್ ನಗರದ ಕೆ.ಆರ್ .ಟವರ್ ನಲ್ಲಿ ಶುಭಾರಂಭಗೊಳ್ಳಲಿದೆ. ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿಯವರು ಪ್ರಜ್ಞಾ ಸಾಗರ್ ರೆಸ್ಟೋರೆಂಟ್ ನ್ನು ಉದ್ಘಾಟಿಸಲಿದ್ದು, ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಸೇವಕ ಶ್ರೀ ಕಾವೇರಪ್ಪ, ಶ್ರೀ ಮನೋಹರ್ ರೆಡ್ಡಿ ,ಶ್ರೀ ರಾಜ ರೆಡ್ಡಿ, ಶ್ರೀ ಜಯಚಂದ್ರ ರೆಡ್ಡಿ, […]










