ಮಡಿಕೇರಿ ( ಏ, 18) : ಕಳೆದ ಒಂದು ವಾರದಿಂದ ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ದೇಶದ ಮೊದಲ ಮಹಿಳಾ ಅಂತರಾಷ್ಟ್ರೀಯ ಹಾಕಿ ಅಂಪೈರ್ ಅನುಪಮಾ ಪುಚ್ಚಿಮಂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರಿನ ಶಾಂತಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅನುಪಮಾ ಕೊನೆಯುಸಿರೆಳೆದಿದ್ದರೆ. ಕೊಡಗು ಜಿಲ್ಲೆ ನಾಪೋಕ್ಲು ಬೇತು ಗ್ರಾಮದ ನಿವಾಸಿಯಾಗಿದ್ದ 41 ವರ್ಷದ ಅನುಪಮಾ ನೂರಕ್ಕೂ ಮಿಕ್ಕಿ ಅಂತಾರಾಷ್ಟ್ರೀಯ ಹಾಕಿ ಪಂದ್ಯದ ತೀರ್ಪುಗಾರಿಕೆ ಮಾಡಿದ್ದ ಹೆಮ್ಮಯ […]
Category: ರಾಜ್ಯ ಸುದ್ದಿ
ಸುದ್ದಿ ಸಮಾಚಾರ — > ರಾಜ್ಯ ಸುದ್ದಿ
ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಅಶೋಕ್ ಜಿ. ವಿ. ಯವರಿಗೆ ಚಿನ್ನದ ಪದಕ
ದಾವಣಗೆರೆ (ಏ, 11) : ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ದಾವಣಗೆರೆಯಲ್ಲಿ ನಡೆದ ಮಾಸ್ಟರ್-1 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಿರಿಯ ಪವರ್ ಲಿಫ್ಟ್ ರ್ ಅಶೋಕ್ ಜಿ.ವಿ. ಯವರು 84 ಕೆ.ಜಿ ವಿಭಾಗದಲ್ಲಿ 100 ಕೆ.ಜಿ .ಭಾರ ಎತ್ತುವುದರ ಮೂಲಕ ಮೊದಲ ಸ್ಥಾನ ದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆಯ ಬ್ಯಾಂಕ್ ಮ್ಯಾನೇಜರ್ ರಾಗಿ ಸೇವೆ ಸಲ್ಲಿಸಿ ನಿವ್ರತ್ತಿ ಹೊಂದಿರುವ ಅಶೋಕ್ […]
ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಸತೀಶ್ ಖಾರ್ವಿ ಯವರಿಗೆ ಚಿನ್ನದ ಪದಕ
ದಾವಣಗೆರೆ (ಏ, 11): ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ದಾವಣಗೆರೆಯಲ್ಲಿ ನಡೆದ ಮಾಸ್ಟರ್-1 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕುಂದಾಪುರದ ನ್ಯೂ ಹರ್ಕ್ಯೂಲಸ್ ಜಿಮ್ ನ ಸತೀಶ್ ಖಾರ್ವಿ ಯವರು 66 ಕೆ.ಜಿ. ವಿಭಾಗದಲ್ಲಿ ಮೊದಲ ಸ್ಥಾನ ದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ದೇಹದಾರ್ಡ್ಯ ಹಾಗೂ ಪವರ್ ಲಿಫ್ಟಿನಲ್ಲಿ ಲಿಫ್ಟಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ಈ ಸ್ಪರ್ಧೆಯಲ್ಲಿ 115 ಕೆಜಿ ಭಾರ ಲಿಫ್ಟ್ ಮಾಡುವುದರ ಮುಖಾಂತರ […]
ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಹಾ ರಥೋತ್ಸವ
ಬಂಟ್ವಾಳ (ಏ, 11): ಬಂಟ್ವಾಳ ತಾಲೂಕಿನ ಕರಿಯಂಗಳದ ಪುರಾಣ ಪ್ರಸಿದ್ದ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮಹಾ ರಥೋತ್ಸವವು ಏಪ್ರಿಲ್ 11 ರಂದು ನಡೆಯಿತು. ಭಕ್ತರ ಆರಾಧ್ಯ ದೇವತೆ ಪೊಳಲಿ ಶ್ರೀರಾಜರಾಜೇಶ್ವರಿ ದೇವರ ದರ್ಶನ ಪಡೆಯುವುದರೊಂದಿಗೆ ರಥೋತ್ಸವದಲ್ಲಿ ಭಕ್ತಿ ಪೂರ್ವಕವಾಗಿ ಪಾಲ್ಗೊಂಡರು.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET) ಮೂಂದೂಡಿಕೆ
ಮೈಸೂರು (ಏ, 10): ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.) ಯನ್ನು ಎಪ್ರಿಲ್ 11 ರ ಭಾನುವಾರದಂದು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಕಾರಣಾಂತರಗಳಿಂದ ಕೆ.ಎಸ್.ಇ.ಟಿ. (KSET) ಪರೀಕ್ಷೆಯನ್ನು ಮುಂದೂಡಲು ನಿರ್ಧರಸಿದೆ. ಕೆ.ಎಸ್.ಇ.ಟಿ. ನ ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಎಲ್ಲಾ ನೊಂದಾಯಿತ ಅಭ್ಯರ್ಥಿಗಳು ಕೆಸೆಟ್ 2021 ಪರೀಕ್ಷೆಗೆ ಸಂಬಂಧಿಸಿದಂತೆ ಕೆಸೆಟ್ ವೆಬ್ಸೈಟ್ನಲ್ಲಿ http://kset.uni-mysore.ac.in/ ಆಗಿಂದಾಗ್ಗೆ ಹೊರಡಿಸುವ ವಿಷಯಗಳನ್ನು ಗಮನಿಸಬೇಕೆಂದು ಎಂದು […]
ಡಾ. ಸತ್ಯಮೂರ್ತಿ ವಿ. ಪರ್ವತಕರ್ ರವರಿಗೆ ಪಿಹೆಚ್.ಡಿ ಪದವಿ ಪ್ರದಾನ
ಹುಬ್ಬಳ್ಳಿ (ಎ, 5): ಬೆಳಗಾವಿ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ರಿಸರ್ಚ್ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹ್ಯಾದ್ರಿ ಕಾಲೊನಿ ನಿವಾಸಿಯಾದ ಡಾ.ಸತ್ಯಮೂರ್ತಿವಿ.ಪರ್ವತಕರ್ ರವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಡಾ. ಸದಾನಂದ ಎಂ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಡಾ.ಸತ್ಯಮೂರ್ತಿವಿ.ಪರ್ವತಕರ್ ರವರು ಮಂಡಿಸಿದ THE STUDY OF SOME GENERALIZATION […]
ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್
ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಶನ್ ಸೈನ್ಸ್ ವಿಭಾಗಗಳು ಆಯೋಜಿಸಿದ್ದ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್ ನ ಉದ್ಘಾಟನೆ ಮಾ. 29 ರಂದು ನಡೆಯಿತು.
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಮಂಗಳೂರು ವಿ.ವಿ. ಅಂತರ್ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ ಸಂಪನ್ನ
ಕುಂದಾಪುರ (ಮಾ. 30) : ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಪುರುಷ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭ ಮಾರ್ಚ್ 30ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಿತು. ಕುಂದಾಪುರ ಎಜುಕೇಶನ್ ಸೊಸೈಟಿ(ರಿ) ಕುಂದಾಪುರ ಇದರ ಕಾರ್ಯದರ್ಶಿಗಳಾದ ಶ್ರೀ ಸೀತಾರಾಮ ನಕ್ಕತ್ತಾಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂದಾಪುರದ ಪ್ರತಿಷ್ಠಿತ ಚಕ್ರವರ್ತಿ ಸ್ಫೋರ್ಟ್ಸ್ ಕ್ಲಬ್ ನ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಮಂಗಳೂರು ವಿ. ವಿ. ಅಂತರ್ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ ಉದ್ಘಾಟನೆ
ಕುಂದಾಪುರ (ಮಾ. 30): ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರಕಾಲೇಜು ಪುರುಷ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಕೂಟ ಮಾರ್ಚ್ 30ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಉದ್ಘಾಟನೆಗೊಂಡಿತು. ಕುಂದಾಪುರದ ಪ್ರಸಿದ್ಧ ಟೋರ್ಪಡೋಸ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಪಂದ್ಯ ಕೂಟವನ್ನು ಉದ್ಘಾಟಿಸಿ ಶುಭಹಾರೈಸಿದರು.ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಹುಂತ್ರಿಕೆ ಸುಧಾಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. […]
ಬಾಲಪ್ರತಿಭೆಗಳಾದ ಪ್ರಜ್ಞಾನ್ ಪಿ. ಶೆಟ್ಟಿ ಹಾಗೂ ಅನಿಕೇತ್ ಆರ್. ರಾಜ್ಯಮಟ್ಟದಲ್ಲಿ ಪ್ರಥಮ
ಕುಂದಾಪುರ (ಮಾ. 31): ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ದೂರದರ್ಶನ ಕೇಂದ್ರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 2019- 20 ನೇ ಸಾಲಿನ ರಾಜ್ಯಮಟ್ಟದ ಸರ್. ಸಿ. ವಿ. ರಾಮನ್ ವಿಜ್ಞಾನ ರಸಪ್ರಶ್ನೆ “ಥಟ್ ಅಂತ ಹೇಳಿ” ಸ್ಪರ್ಧೆಯಲ್ಲಿ ಪ್ರಜ್ಞಾನ್. ಪಿ. ಶೆಟ್ಟಿ ಮತ್ತು ಅನಿಕೇತ್ […]










