ಕುಂದಾಪುರ(ನ,29): ಇಲ್ಲಿನ ಕೊಗಿ೯ ಹೊಸಮಠ ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲ ಶೆಟ್ಟಿ ಮನೆಗೆ “ಸ್ವರಾಜ್ಯ 75 ” ಸಂಘಟನೆಯ ಆಯೋಜನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ನ,27 ರಂದು ನಡೆಯಿತು. ಕುಂದಾಪುರ ತಾಲೂಕು ಕೊಗಿ೯ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಮಠ ಕಂಬಳ ಗದ್ದೆ ಮನೆ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಸಿ.ರಾಜಗೊಪಾಲ ಶೆಟ್ಟಿ ಇವರ ಮನೆಗೆ ಸಾಮಾಜಿಕ ಕಾಯ೯ಕತೆ೯ಯಾಗಿ ಗುರುತಿಸಿಕೊಂಡಿರುವ ಶಾರದಾ ಡೈಮಂಡ್ ಇವರು ನಾಮ ಫಲಕ ಅನಾವರಣ ನೆರವೇರಿಸಿ ಮಾತನಾಡಿದರು. […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಗಂಗೊಳ್ಳಿ: ಸರಸ್ವತಿ ವಿದ್ಯಾಲಯದಲ್ಲಿ ಸ್ವಯಂ ಅರಿವಿನ ಕಾರ್ಯಗಾರ
ಗಂಗೊಳ್ಳಿ( ನ,21): ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೊದಲು ಆ ಬಗೆಗೆ ನಿರ್ದಿಷ್ಟವಾದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಗುರಿಯ ದಿಕ್ಕಿನಲ್ಲಿ ಶ್ರಮವಹಿಸಿದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದು ಯುವ ಉದ್ಯಮಿ ಶಾರ್ಲೆಟ್ ಲೋಬೊ ಹೇಳಿದರು. ಅವರು ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಇಂಟರಾಕ್ಟ್ ಕ್ಲಬ್ ಇವರ ಸಹಯೋಗದಲ್ಲಿ ಇಲ್ಲಿನ ಪ್ರೌಢಶಾಲಾ ವಿಭಾಗದ ಮಕ್ಕಳಿಗಾಗಿ ನಡೆದ ಸ್ವಯಂ ಅರಿವಿನ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಸಂಪನ್ಮೂಲ […]
ಬಂಟರ ಕ್ರೀಡಾ ಮೇಳದ ಸಂಚಾಲಕರಾಗಿ ಶ್ರೀ ಅರುಣ್ ಕುಮಾರ್ ಶೆಟ್ಟಿ ಆಯ್ಕೆ
ಕುಂದಾಪುರ( ನ,19 ): ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ) ಕುಂದಾಪುರ ದಶಮ ಸಂಭ್ರಮ – 2022 ರ ಪ್ರಯುಕ್ತ ಡಿಸೆಂಬರ್ ತಿಂಗಳ ಕೊನೆಯಲ್ಲಿ ಹಮ್ಮಿಕೊಂಡಿರುವ ಅವಿಭಜಿತ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕದ ಬೇರೆ ಬೇರೆ ಅಹ್ವಾನಿತ ತಂಡಗಳ ಬೃಹತ್ ಕ್ರೀಡಾ ಮೇಳದ ಸಂಚಾಲಕರಾಗಿ ಶ್ರೀ ಎಂ. ಭಾಸ್ಕರ್ ಪೈ ಸರ್ಕಾರಿ ಪ್ರೌಢಶಾಲೆ ಗುಜ್ಜಾಡಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಯವರು […]
ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ
ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಮತ್ತು ಸಾಹಿತ್ಯ ತಂಗುದಾಣ ಗಂಗೊಳ್ಳಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ”ಮಹಿಳಾ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ನಮ್ಮ ಅರಿವು” ವಿಷಯದ ಕುರಿತಂತೆ ವಿದ್ಯಾರ್ಥಿಗಳು ಎ 4 ಅಳತೆಯ ಕಾಗದದಲ್ಲಿ ನಾಲ್ಕು ಪುಟ ಗಳಿಗೆ ಮೀರದಂತೆ ಕಾಗದದ ಒಂದೇ ಮಗ್ಗುಲಿನಲ್ಲಿ ಕನ್ನಡದ ಹಸ್ತಾಕ್ಷರದಲ್ಲಿ ಬರೆದು ಕಾಲೇಜಿನ ಮುಖ್ಯಸ್ಥರ ದೃಢೀಕರಣದೊಂದಿಗೆ 05-12- 2022 ರ […]
ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ: ನವೆಂಬರ್ 18 ರಂದು ಉಚಿತ ಕನ್ನಡಕ ವಿತರಣೆ
ಹೆಮ್ಮಾಡಿ (ನ17): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ), ಅಂಬಲಪಾಡಿ ಉಡುಪಿ ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇವರ ಸಹಯೋಗದೊಂದಿಗೆ ನವೆಂಬರ್ 06 ರಂದು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, […]
ಸೇವಾ ಚೇತನ ಟ್ರಸ್ಟ್ ಮೂಡುಬಗೆ: ಮನೆ ಹಸ್ತಾಂತರ ಕಾರ್ಯಕ್ರಮ
ಅoಪಾರು( ನ,15): ಬಡ ಕುಟುಂಬದ ವನಜ ಪೂಜಾರಿ ಇವರು ಮನೆಯನ್ನು ಕಟ್ಟಬೇಕು ಎಂದು ನಿರ್ಧರಿಸಿದ ಆ ಸಮಯದಲ್ಲಿ ತನ್ನ ಗಂಡನನ್ನು ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಕಳೆದುಕೊಂಡಾಗ ಅವರೊಂದಿಗೆ ಇದ್ದಿದ್ದು ಎಂಡೋಸಲ್ಫನ್ ಪೀಡಿತ ಬುದ್ಧಿಮಾಂದ್ಯ ಮಗ. ಮಗನನ್ನು ಬಿಟ್ಟು ಕೂಲಿಗೂ ಹೋಗಲಾಗದ ಪರಿಸ್ಥಿತಿ. ಇವರ ಮನೆ ನಿರ್ಮಾಣ ಕಾರ್ಯ ಪೂರ್ಣ ಗೊಳಿಸಬೇಕೆಂದು ಅನೇಕರು ಪ್ರಯತ್ನ ಪಟ್ಟರೂ ಕೂಡ ಸಾಧ್ಯವಾಗದಿದ್ದಾಗ ಇವರು ಸಂಪರ್ಕಿಸಿದ್ದು ಸೇವಾ ಚೇತನ ಟ್ರಸ್ಟ್ . ಅವರ ಕಷ್ಟವನ್ನು […]
ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಮಾಲೀಕ ಶ್ರೀ ರಾಮ ದೇವಾಡಿಗ ನಿಧನ
ಕುಂದಾಪುರ( ನ,7): ಇಲ್ಲಿನ ಭಗವಾನ್ ಬಿಲ್ಡಿಂಗ್ ರಸ್ತೆಯಲ್ಲಿ 1987 ರಿಂದ ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಎನ್ನುವ ಲೈಬ್ರರಿ ನಡೆಸುತ್ತಾ , ನೂರಾರು ಜನರಿಗೆ ಪುಸ್ತಕದ ರುಚಿ ಹತ್ತಿಸಿದ, ಅದರ ಮಾಲೀಕರಾದ ಶ್ರೀ ರಾಮ ದೇವಾಡಿಗರು (58) ನ.07 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮಾಸ್ತಿಕಟ್ಟೆ ಹತ್ತಿರ “ರಾಧಿಕಾ ಡ್ರೆಸ್ ಸೆಂಟರ್” ಅನ್ನುವ ಬಟ್ಟೆ ಅಂಗಡಿ ನಡೆಸಿ ಪ್ರಸಿದ್ಧರಾಗಿದ್ದ ಇವರು ಇತ್ತೀಚೆಗೆ ಹೊಸ ಅಂಗಡಿಗೆ ಸ್ಥಳಾಂತರಗೊಂಡಿದ್ದರು. ಕ್ರೀಡಾಪಟುವೂ ಆಗಿದ್ದ ರಾಮ ದೇವಾಡಿಗರು […]
ವ್ಯಕ್ತಿಯ ಸಂಸ್ಕಾರದಿಂದ ವ್ಯವಹಾರದ ಉನ್ನತೀಕರಣ – ನರೇಂದ್ರ ಎಸ್ .ಗಂಗೊಳ್ಳಿ
ಗಂಗೊಳ್ಳಿ(ನ,8): ಸಮಾಜದ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುವುದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿಯ ಸಂಸ್ಕಾರ ಎನ್ನುವುದು ಅವನ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಯುವ ಬರಹಗಾರ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ವೆಂಕಟೇಶ ಕೃಪಾ ಟ್ರೇಡರ್ಸ್ ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಧಮಾಕ ವಿಶೇಷ ಕೊಡುಗೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. […]
ಕಾಕ೯ಳ: ಮುಳ್ಕಾಡಿನ ಸ್ವಾತಂತ್ರ್ಯ ಹೋರಾಟಗಾರ ಮುಳ್ಕಾಡು ಗಾಂಧಿ ಕಾಂತಪ್ಪ ಪೂಜಾರಿ ಮನೆಗೆ ನಾಮಫಲಕ ಅನಾವರಣ
ಕಾಕ೯ಳ(ನ,07): ಕಾಕ೯ಳ ತಾಲೂಕು ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಕಾಡಿನ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕಾಂತಪ್ಪ ಪೂಜಾರಿ ಇವರ ಮನೆಗೆ ನ.07 ರಂದು ಸ್ವಾತಂತ್ರ್ಯ ಹೋರಾಟಗಾರರ ಮನೆ ಎನ್ನುವ ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ” ಸ್ವರಾಜ್ಯ 75 ” ರ 19ನೇ ಮನೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಗೌರವ ಕಾಯ೯ದಶಿ೯ಯವರಾಗಿರುವ ಶ್ರೀ ನರೇಂದ್ರ ಕುಮಾರ್ ಕೋಟ ಇವರು ನಾಮ ಫಲಕ ಅನಾವರಣ ನೆರವೇರಿಸಿ ಮಾತನಾಡಿದರು.ರಾಷ್ಟ್ರ […]
ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ: ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ
ಹೆಮ್ಮಾಡಿ(ನ,06): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ), ಅಂಬಲಪಾಡಿ ಉಡುಪಿ ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇವರ ಸಹಯೋಗದೊಂದಿಗೆ ನ.06 ರಂದು ನೆಡದ ಸಾರ್ವಜನಿಕ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ […]










