ತಲ್ಲೂರು(ಅ.04): ಸ್ವರಾಜ್ಯ 75 ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಅಭಿಯಾನದ ಅಂಗವಾಗಿ ಅಕ್ಟೋಬರ್ 2 ರಂದು ಕುಂದಾಪುರ ತಾಲೂಕು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಸ್.ಎನ್. ಸುಬ್ಬಣ್ಣ ಗುಪ್ತ ಇವರ ಮನೆಗೆ ನಾಮ ಫಲಕ ಅಳವಡಿಸಲಾಯಿತು. ” ಸ್ವರಾಜ್ಯ 75 ರ ” 18 ನೇ ಮನೆ ಯಲ್ಲಿ ವಿಶ್ವ ದಾಖಲೆಯ ಯೋಗ ಪಟು ಶ್ರೀ ನಿರಂಜನ್ ಶೆಟ್ಟಿ ತಲ್ಲೂರು ಇವರಿಂದ ನಾಮ ಫಲಕ ಅನಾವರಣ ನೆರವೇರಿಸಿದರು. […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಕುಂದಾಪುರ ತಾಲೂಕಿನ ವಿಶೇಷ ಚೇತನರ ಸಂಪನ್ಮೂಲ ಕೇಂದ್ರಕ್ಕೆ ಕೆ.ಎಸ್.ಲತಾ ಕುಮಾರಿ ಭೇಟಿ
ಕುಂದಾಪುರ( ಅ,4): ತಾಲೂಕಿನ ವಿಶೇಷ ಚೇತನರ ಸಂಪನ್ಮೂಲ ಕೇಂದ್ರಕ್ಕೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಾನ್ಯ ರಾಜ್ಯ ಆಯುಕ್ತರು ಹಾಗೂ ನಿರ್ದೇಶಕರಾದ ಕೆ.ಎಸ್.ಲತಾ ಕುಮಾರಿ ಇತ್ತೀಚೆಗೆ ಭೇಟಿ ನೀಡಿದರು . ಈ ಸಂದರ್ಭದಲ್ಲಿ ಅವರನ್ನು ತಾಲೂಕು MRW VRW,URW ನೌಕರರ ಸಂಘದಿಂದ ಸ್ವಾಗತಿಸಿ ,ಅಭಿನಂದಿಸಿದರು. ಈ ಸಂದರ್ಭದಲ್ಲಿ ತಾಲೂಕು ವಿಶೇಷ ಚೇತನ ಸಂಪನ್ಮೂಲ ವ್ಯಕ್ತಿ ಹಾಗೂ ಯೂನಿಯನ್ ಗೌರವಾಧ್ಯಕ್ಷರಾದ ಶ್ರೀ ಮಂಜುನಾಥ ಹೆಬ್ಬಾರ್, ತಾಲೂಕು ನೌಕರರ ಸಂಘದ […]
ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಬಗ್ವಾಡಿ ಶರನ್ನವರಾತ್ರಿ ಮಹೋತ್ಸವ
ಹೆಮ್ಮಾಡಿ(ಸೆ,23): ಕುಂದಾಪುರ ತಾಲ್ಲೂಕಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಬಗ್ವಾಡಿಯಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಸೆ.26 ರಿಂದ ಆ .05 ರ ತನಕ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಪ್ರತಿ ದಿನ ಚಂಡಿಕಾ ಪಾರಾಯಣ, ಕಲ್ಪೋಕ್ತ ಪೂಜೆ, ಚಂಡಿಕಾ ಹೋಮ ನಡೆಯಲಿದೆ. ಅ.04 ರ ಸಂಜೆ 6 ಗಂಟೆಗೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಚಕ್ರ ಚಂಡಿಕಾ ಯಕ್ಷಗಾನ ಬಯಲಾಟ ನಡೆಯಲಿದ್ದು, ಅ. 05 ರ ವಿಜಯ ದಶಮಿಯ ದಿನದಂದು ನವ ಚಂಡಿಕಾಯಾಗ […]
ಉಚ್ಚಿಲ: ವೈಭವದ ದಸರಾ ಉತ್ಸವಕ್ಕೆ ಭರದ ಸಿದ್ದತೆ
ಉಚ್ಚಿಲ(ಸೆ,21): ಕನ್ನಡ ಕರಾವಳಿಯ ಪ್ರಸಿದ್ಧ ಮಹಾಲಕ್ಷ್ಮೀ ದೇವಿಯ ಕ್ಷೇತ್ರವಾದ ಉಚ್ಚಿಲ ಮಹಾ ಲಕ್ಷ್ಮೀ ದೇವಸ್ಥಾನವು ಇತ್ತೀಚೆಗೆ ಪುನರ್ ಪ್ರತಿಷ್ಠೆ ,ಬ್ರಹ್ಮಕಲಶೋತ್ಸವ ಹಾಗೂ ಪುಣ್ಯೋತ್ಸವ ವನ್ನು ಕೈಗೊಂಡು ಕರಾವಳಿಯ ಧಾರ್ಮಿಕ ಇತಿಹಾಸದಲ್ಲಿ ತನ್ನದೇ ಛಾಪನ್ನು ಮೂಡಿಸಿ ಸಹಸ್ರಾರು ಭಕ್ತರನ್ನು ತನ್ನಡೆಗೆ ಆಕರ್ಷಿಸಿಕೊಂಡು ಕರ್ನಾಟಕದ ಪ್ರಸಿದ್ಧ ಹಾಗೂ ಪುಣ್ಯಕ್ಷೇತ್ರವಾಗಿ ಗುರುತಿಸಿಕೊಂಡಿದೆ.ದೇವಿಯ ಸನ್ನಿದಿಯಲ್ಲಿ ದಿನಂಪ್ರತಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದು ನಂಬಿ ಬಂದ ಭಕ್ತರಿಗೆ ತಾಯಿ ಆಭಯ ನೀಡುತ್ತಿದ್ದಾಳೆ. ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ […]
ಪ್ರೊ. ಕೆ. ಉಮೇಶ್ ಶೆಟ್ಟಿಯವರಿಗೆ ಉತ್ತಮ ಆಡಳಿತಗಾರ ಪ್ರಶಸ್ತಿ
ಕುಂದಾಪುರ (ಸೆ. 14) : ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ 26 ವರ್ಷಗಳ ಅನುಭವ ಹೊಂದಿರುವ ಪ್ರೊ. ಕೆ. ಉಮೇಶ್ ಶೆಟ್ಟಿಯವರಿಗೆ ಅಭಿಜ್ಞಾ ವಿಸ್ಡಮ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ ಫಾರ್ ಬೆಸ್ಟ್ ಅಡ್ಮಿನಿಸ್ಟ್ರೇಟರ್ ಪ್ರಶಸ್ತಿ ಲಭಿಸಿದೆ. ಮಂಗಳೂರಿನ ಅಭಿಜ್ಞಾ ಎಜುಕೇಷನ್ ಸಂಸ್ಥೆ ಈ ಪ್ರಶಸ್ತಿಯನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ. 05, 2022ರಂದು ಮಂಗಳೂರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಹಾವೇರಿ: ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಜನ್ಮ ದಿನಾಚರಣೆ
ಹಾವೇರಿ(ಆ,15): ಇಲ್ಲಿನ ನರಸೀಪುರದ ಸುಕ್ಷೇತ್ರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪರಮ ಪೂಜ್ಯ ಜಗದ್ಗುರಗಳಾದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಜನ್ಮದಿನಾಚರಣೆಯನ್ನು ಆ,15 ರಂದು ಆಚರಿಸಲಾಯಿತು. ಶ್ರೀಗಳಿಗೆ ಹಿಂದುಳಿದ ಶಾಶ್ವತ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ ಅವರು ಶುಭಾಶಯಗಳು ಕೋರಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಭಾಕರ್ ಕುಂದರ್ ರಾಘವೇಂದ್ರ ಹಾರ್ಮಣ್ ಜೊತೆಯಲ್ಲಿದ್ದರು.
ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದಿಂದ ಸಮುದ್ರ ಪೂಜೆ
ಕೋಟೇಶ್ವರ( ಆ,12): ಬೀಜಾಡಿ ಕಡಲತೀರದಲ್ಲಿ ಮೊಗವೀರ ಯುವ ಸಂಘಟನೆ(ರಿ),ಉಡುಪಿ ಇದರ ಕೋಟೇಶ್ವರ ಘಟಕ ನೇತ್ರತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಸಮುದ್ರ ಪೂಜೆ ನಡೆಯಿತು. ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಶ್ರೀ ಚಿಕ್ಕುಅಮ್ಮ ದೇವರಿಗೆ ಪೂಜೆ ಸಲ್ಲಿಸಿ ಸುಮಾರು 250 ಜನ ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಸಮುದ್ರ ತೀರಕ್ಕೆ ತೆರಳಿ ಸಮುದ್ರ ದೇವನಿಗೆ ಪೂಜೆಸಲ್ಲಿಸಿ ಬಾಗೀನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಗುರಿಕಾರರುಗಳು, ಭಾಗದ ಮೀನುಗಾರರು ಉಪಸ್ತಿತರಿದ್ದರು. […]
ಗಂಗೊಳ್ಳಿ: ಉಚಿತ ಹೊಲಿಗೆ ತರಬೇತಿ
ಗಂಗೊಳ್ಳಿ(ಜು,23): ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ರೋಟರಿ ಜಿಲ್ಲೆ 31 82ರ ಜಿಲ್ಲಾ ಗವರ್ನರ್ ರೊಟೇರಿಯನ್ ಡಾ. ಜಯಗೌರಿ ಹಾದಿಗಲ್ ರವರ ಮಹತ್ವಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ ಮಹಿಳಾ ಸಬಲೀಕರಣದ ಭಾಗವಾಗಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಆಯ್ದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡುವಲ್ಲಿ ತರಬೇತುಗೊಳಿಸಲು ಆಯೋಜಿತವಾದ ಮೂರು ತಿಂಗಳ ಕಾಲಾವಧಿಯ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಗಂಗೊಳ್ಳಿಯಲ್ಲಿ ನೆರವೇರಿತು. ವಲಯ ಒಂದರ […]
ಗಂಗೊಳ್ಳಿ : ಸಿ.ಎ ಪರೀಕ್ಷೆಯಲ್ಲಿ ಸ್ವಸ್ತಿಕ್ ಶೆಣೈ ಉತ್ತೀರ್ಣ
ಗಂಗೊಳ್ಳಿ(ಜು,15): ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಮೇ 2022ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸ್ವಸ್ತಿಕ್ ಶೆಣೈ ಉತ್ತೀರ್ಣರಾಗಿದ್ದಾರೆ. ಇವರು ಕುಂದಾಪುರದ ಶಾನುಭಾಗ್ ಹೆಗಡೆ ಅಂಡ್ ಅಸೋಸಿಯೇಟ್ಸ್ ನಲ್ಲಿ ತರಬೇತಿ ಪಡೆದಿರುತ್ತಾರೆ. ಗಂಗೊಳ್ಳಿಯ ಉದ್ಯಮಿ ಟಿ. ವೆಂಕಟೇಶ್ ದೇವಣ್ಣ ಶೆಣೈ ಮತ್ತು ವಿಜಯಲಕ್ಷ್ಮಿ ಶೆಣೈ ದಂಪತಿಯ ಪುತ್ರನಾಗಿರುವ ಇವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ.
ಆರ್. ಎನ್. ಶೆಟ್ಟಿ ಪಿ ಯು ಕಾಲೇಜು ಕುಂದಾಪುರ: ಪ್ರಾಂಶುಪಾಲರಿಗೆ ಅಭಿನಂದನೆ
ಕುಂದಾಪುರ(ಜು,15): ಹಲವು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆಸಲ್ಲಿಸುತಿರುವ ಕುಂದಾಪುರದ ಆರ್. ಎನ್. ಶೆಟ್ಟಿ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಕುಂದಾಪುರದ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ . ಈ ಹಿನ್ನೆಲೆಯಲ್ಲಿ ಕಾಲೇಜಿನ ಭೋದಕ -ಭೋಧಕೇತರ ಸಿಬ್ಬಂದಿಗಳು ಶುಭಕೋರಿದರು .










