ವಂಡ್ಸೆ( ಮೇ,10): ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನ ಪಡೂರು, ಭಟ್ರಮಕ್ಕಿ ಇದರ ಅಷ್ಟಬಂಧ ಪುನ:ಪ್ರತಿಷ್ಠೆ ಮೇ7 ಹಾಗೂ 8 ರಂದು ನಡೆಯಿತು. ಅರ್ಚಕರಾದ ಪ್ರಶಾಂತ್ ಭಟ್ ರವರ ನೇತೃತ್ವದಲ್ಲಿ ಅಷ್ಟಬಂಧ ಪುನ:ಪ್ರತಿಷ್ಠೆಯ ಧಾರ್ಮಿಕ ವಿಧಿ -ವಿಧಾನಗಳು ನೇರವೇರಿತು. ಧಾರ್ಮಿಕ ಸಭಾ ಕಾರ್ಯಕ್ರಮ ನೆಂಪು ಸೀತಾರಾಮ ಶೆಟ್ಟಿ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಬ್ರಹ್ಮ ಮತ್ತು ಯಕ್ಷಿ ಸಹಪರಿವಾರ ದೇವಸ್ಥಾನದ ಗೌರವಾಧ್ಯಕ್ಷರಾದ ಶೀನ ಗಾಣಿಗ ಚೂಡಿಕಟ್ಟೆ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಕುಂದಾಪುರ ತಾಲೂಕು ಯುವ ಬಂಟರ ಸಂಘ: ದಶಮಾನೋತ್ಸವ ವರ್ಷದ ನೂತನ ಅಧ್ಯಕ್ಷರಾಗಿ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆ
ಕುಂದಾಪುರ(ಮೇ 05):ಕುಂದಾಪುರ ತಾಲೂಕು ಯುವ ಬಂಟರ ಸಂಘ(ರಿ) ಇದರ ದಶಮಾನೋತ್ಸವ ವರ್ಷದ ನೂತನ ಅಧ್ಯಕ್ಷರಾಗಿ ಉಡುಪಿಯ ಮಿಲಾಗ್ರಿಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲಯನ್ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇವರು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ, ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಕುಂದಾಪುರ ತಾಲೂಕು ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ, ವಿಶ್ವ […]
ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು: ಸಾಧಕರಿಗೆ ಸನ್ಮಾನ
ಕೋಟೇಶ್ವರ(ಏ.29): ಕೋಟೇಶ್ವರದ ಮಾರ್ಕೊಡಿನ ನಾಗಯಕ್ಷಿ ದೇವಸ್ಥಾನ ದ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ನಾಗಯಕ್ಷಿ ಯಕ್ಷಕೂಟ ಇದರ 2ನೇ ವರ್ಷದ ಯಕ್ಷಪರ್ವ ಕಾರ್ಯಕ್ರಮ ಏ.23ರಂದು ಜರುಗಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಹಾಗೂ ಬಡಗು ತಿಟ್ಟಿನ ಪ್ರಸಿದ್ದ ಭಾಗವತರಾದ ಶ್ರೀ ಪ್ರಸಾದ ಕುಮಾರ್ ಮೊಗೆಬೆಟ್ಟು ಕಾರ್ಯವನ್ನು ಉದ್ಘಾಟಿಸಿದರು. ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ಇದರ ಅಧ್ಯಕ್ಷ ಕೆ.ಸುರೇಶ ವಿಠಲವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ […]
ಆಮೆ ಹಬ್ಬ: ಏ.30 ಕ್ಕೆ ಮೈಸೂರು ಒಡೆಯರ್ ಕುಂದಾಪುರಕ್ಕೆ
ಕೋಡಿ(ಏ,25): ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹಾಗೂ ಎಫ್.ಎಸ್.ಎಲ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಏ.30 ರಂದು ಕುಂದಾಪುರದ ಕೋಡಿ ಕಡಲ ತೀರದಲ್ಲಿ ಆಯೋಜಿಸಿರುವ ಆಮೆ ಹಬ್ಬಕ್ಕೆ ಮೈಸೂರು ಒಡೆಯರ್ ಯದುವೀರ್ ಕ್ರಷ್ಣದತ್ತ ಒಡೆಯರ್ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆಮೆ ಹಬ್ಬದಲ್ಲಿ ಬೀಚ್ ಸ್ವಚ್ಚತೆ, ಕಡಲಾಮೆಯ ರಕ್ಷಣೆಯ ಕುರಿತು ಅರಿವು, ತ್ಯಾಜ್ಯ ನಿರ್ವಹಣೆ, ಮರಳು ಕಲಾಕ್ರತಿ ರಚನೆ ಹಾಗೂ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು,ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು […]
ಡಾ.ಗೋವಿಂದ ಬಾಬು ಪೂಜಾರಿ ಯವರಿಗೆ ಕೆ.ಸಿ ಕುಂದರ್ ಸ್ಮರಣಾರ್ಥ ದತ್ತಿ ಪ್ರಶಸ್ತಿ ಪ್ರದಾನ
ಕೋಟ(ಏ,24): ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ,ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟ, ಕೋಟತಟ್ಟು ಗ್ರಾಮಪಂಚಾಯತ್ ಮತ್ತು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ವತಿಯಿಂದ ಕೆ .ಸಿ ಕುಂದರ್ ಸ್ಮರಣಾರ್ಥ ನಡೆದ ಗಮನ-2022 ರ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಕೆ .ಸಿ ಕುಂದರ್ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಉದ್ಯಮಿ& ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿಯವರಿಗೆ ಪ್ರದಾನ […]
ಕಟ್ಟೆ ಫ್ರೆಂಡ್ಸ್ ಕಾಳಾವರ ಮಡಿಲಿಗೆ ಕಾಳಾವರ ವನದುರ್ಗಾ ಟ್ರೋಪಿ- 2022
ಕೋಟೇಶ್ವರ (ಏ,23): ವನದುರ್ಗಾ ಯುವಕ ಮಂಡಲ (ರಿ.) ಕಾಳಾವರ ಇವರ ಆಶ್ರಯದಲ್ಲಿ ನಡೆದ 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ವನದುರ್ಗಾ ಟ್ರೋಫಿ- 2022 ಯನ್ನು ಪಡೆದು ಜಯಭೇರಿ ಭಾರಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವನದುರ್ಗಾದೇವಿ ದೇವಸ್ಥಾನ ಕಾಳಾವರ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಕಾಳಾವರ ವಹಿಸಿದ್ದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆರಾಧ್ಯ ಎಸ್.ಶೆಟ್ಟಿ ಕಾಳಾವರ ಇವರ ಅನುಪಸ್ಥಿತಿಯಲ್ಲಿ ಅವರ […]
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ & ಮೊಗವೀರ ಯುವ ಸಂಘಟನೆ: ಸಾಮೂಹಿಕ ವಿವಾಹದ ಪೂರ್ವಭಾವಿ ಸಭೆ
ಬ್ರಹ್ಮಾವರ( ಏ,23): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ,ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ.) ,ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆಯುವ ಮೊಗವೀರ ಸಮುದಾಯದ 13 ನೇ ವರ್ಷದ ಸಾಮೂಹಿಕ ವಿವಾಹದ ಪೂರ್ವಭಾವಿ ಸಭೆ ಏ.23ರಂದು ಬ್ರಹ್ಮಾವರದ ಶಾಮಿಲಿ ಶನಾಯ ಸಭಾಭವನದಲ್ಲಿ ನಡೆಯಿತು. ನಾಡೋಜ ಡಾ.ಜಿ.ಶಂಕರ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಸಭೆಯಲ್ಲಿ ಮೊಗವೀರ ಯುವ ಸಂಘಟನೆ(ರಿ.),ಉಡುಪಿ ಇದರ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸುವರ್ಣ ಹಿರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾಮೂಹ ವಿವಾಹ ಕಾರ್ಯಕ್ರಮದ […]
ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ, ಕೋಟೇಶ್ವರ ಘಟಕ: ಬಡ ಕುಟುಂಬಕ್ಕೆ ಮನೆ ಹಸ್ತಾಂತರ
ಕೋಟೇಶ್ವರ:( ಏ,17): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಕೋಟೇಶ್ವರ ಘಟಕದ ವತಿಯಿಂದ ಮೂವರು ಮಕ್ಕಳನ್ನು ಕಳೆದುಕೊಂಡು , ದುಡಿಮೆಯ ವಯಸ್ಸು ಮೀರಿದ ಅಸಹಾಯಕ ಕುಟುಂಬಕ್ಕೆ ಸಂಘಟನೆಯ ವತಿಯಿಂದ ನಿರ್ಮಿಸಿ ಕೊಟ್ಟ ಮನೆ “ಶ್ರೀ ಕೃಷ್ಣ” ಇದರ ಗ್ರಹ ಪ್ರವೇಶ ಏ.16 ರಂದು ಜರುಗಿತು. ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ಗೌರವಾಧ್ಯಕ್ಷ ಜಗದೀಶ್ ಮಾರ್ಕೋಡು ರವರು ಉದ್ಘಾಟನೆಗೊಳಿಸಿ, ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು. ಕೋಟೇಶ್ವರ ಘಟಕದ ಅಧ್ಯಕ್ಷ […]
ಡಾ.ಗೋವಿಂದ ಬಾಬು ಪೂಜಾರಿ ಯವರಿಗೆ ದಿ. ಕೆ.ಸಿ ಕುಂದರ್ ಸ್ಮಾರಕ ದತ್ತಿ ಪ್ರಶಸ್ತಿ
ಕುಂದಾಪುರ(ಏ.13): ಯಶಸ್ವಿ ಉದ್ಯಮಿ,ಸಮಾಜ ಸೇವಕ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಇದರ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಯವರು ಡಾ.ಕಾರಂತ ಪ್ರತಿಷ್ಠಾನ ಕೋಟ, ಡಾ. ಕಾರಂತ ಟ್ರಸ್ಟ್ ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ನೀಡುವ ಕರಾವಳಿಯ ಮೀನುಗಾರ ಮುಖಂಡರಾಗಿದ್ದ ದಿ.ಕೆ.ಸಿ ಕುಂದರ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಯಾವುದೇ ಜಾತಿ, ಮತ,ಧರ್ಮ ತಾರತಮ್ಯ ಇಲ್ಲದೆ ನೋಂದವರಿಗೆ ಸಹಾಯ ಹಸ್ತ ಚಾಚುವ ಡಾ.ಗೋವಿಂದ […]
ಮೇಲ್ ಗಂಗೊಳ್ಳಿ: ಏ.20 ರಂದು ವಿಶೇಷ ಕಾರ್ಯಕ್ರಮ
ಗಂಗೊಳ್ಳಿ (ಏ .11): ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್ ಗಂಗೊಳ್ಳಿ ಇದರ 35 ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿಯ 29 ನೇ ವಾರ್ಷಿಕೋತ್ಸವ ಹಾಗೂ ಡಾ. ಬಿ ಆರ್. ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯ ಕಾರ್ಯಕ್ರಮವು ಮೇಲ್ ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ಏ.20 ರ ಬುಧವಾರದಂದು ಜರಗಲಿರುವುದು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ […]










